ಬೆಂಗಳೂರು : ಎಚ್ ಡಿ ಕುಮಾರ ಸ್ವಾಮಿ ಎರಡು ಬಾರಿ ಲಾಟರಿ ಸಿಎಂ ಆಗಿದ್ದರು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು ಇಂದು ವಿಕಾಸಸೌಧದಲ್ಲಿ ಹೇಳಿದರು.
ಎಚ್ ಡಿ ಕೆ ಸಂಘ ಹಾಗೂ ಬಿಜೆಪಿ ಬಗ್ಗೆ ಟೀಕೆ ಮಾಡದೇ ಹೋದರೆ ಊಟ ಸೇರಲ್ಲ. ಎಚ್ ಡಿ ಕೆ ಎರಡು ಬಾರಿ ಲಾಟರಿ ಸಿಎಂ ಆಗಿದ್ದರು ಎಂದರು.
ಯಡಿಯೂರಪ್ಪ ಆಪ್ತರ ಮೇಲಿನ ಐಟಿ ದಾಳಿ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಐಟಿ ಸ್ವತಂತ್ರ ಸಂಸ್ಥೆ. ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ. ಸಿಎಂ ಅವಧಿ ಎರಡು ಬಾರಿಯೂ ಪೂರ್ಣಗೊಳಿಸಲು ಆಗಿಲ್ಲ. ಈ ಕಾರಣದಿಂದ ಹತಾಶ ಮನೋಭಾವದಿಂದ ಆರೋಪ ಮಾಡಿದ್ದಾರೆ. ಐಟಿ ದಾಳಿಗೂ ಯಡಿಯೂರಪ್ಪಗೂ ಸಂಬಂಧ ಇಲ್ಲ. ಆದರೆ ತಳುಕು ಹಾಕುವ ಕೆಲಸವನ್ನು ಎಚ್ ಡಿಕೆ ಮಾಡುತ್ತಿದ್ದಾರೆ. ಐಟಿ ಯಾರ ಮಾತನ್ನುಕೇಳಲ್ಲ ಎಂದರು.