ಸುದ್ದಿ
ಸರ್ಕಾರಿ ನೌಕರರ ಶೇಖಡ 30ರಷ್ಟು ವೇತನ ಕಡಿತಕ್ಕೆ ಮುಂದಾದ ಸರ್ಕಾರ : ಸರ್ಕಾರಿ ನೌಕರರಿಂದ ತೀರ್ವ ವಿರೋಧ
ಸರ್ಕಾರ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಅದರ ಬೆನ್ನಿಗೆ ನಿಲ್ಲಬೇಕಾದ್ದು ಸರ್ಕಾರಿ ನೌಕರ ಕರ್ತವ್ಯ, ಸರ್ಕಾರಿ ನೌಕರರ ತಿಂಗಳ ಸಂಬಳ ಕೊಡಲು ಸರ್ಕಾರದ ಹತ್ತಿರ ಆದಾಯ ಇಲ್ಲ. ಹೀಗಿರುವಾಗ . ಈ ಶೇ.30ರಷ್ಟು ಸಂಬಳ ಕಡಿತಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದ್ರೆ ಸರ್ಕಾರಿ ನೌಕರರು ಸಂಬಳ ಕಡಿತಕ್ಕೆ ಅಪಸ್ವರ ತೆಗೆದಿದ್ದಾರೆ. ನೌಕರರು ಈ ರೀತಿಯ ವರ್ತನೆ ತೋರುತ್ತಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ. ಕೇರಳದ ಸಿಎಂ ಪಿಣಾರಯಿ ವಿಜಯನ್ ಕೈಗೊಂಡಂತೆ ಯಡಿಯೂರಪ್ಪ ಕೂಡ ಯಾವುದೆ ಮುಲಾಜಿಲ್ಲದೇ ಸರ್ಕಾರಿ ನೌಕರರ ಸಂಬಳ ಕಡಿತದ ನಿರ್ಧಾರ ತೆಗೆದುಕೊಳ್ಳಲಿ ಎಂಬ ಸಲಹೆಗಳು ಕೇಳಿಬರುತ್ತಿವೆ.
ಕೊರೊನಾ ವೈರಸ್ ಸೋಂಕು ಹರಡದಂತೆ ದೇಶ ವ್ಯಾಪಿ ಲಾಕ್ ಡೌನ್ ನಡೆಸಿರುವುದರಿಂದ ಹಣಕಾಸು ವಿಷಯದಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರದ ಖಜಾನೆ ಹೆಚ್ಚೂ ಕಡಿಮೆ ಬರಿದಾಗಿದೆ. ಕರ್ನಾಟಕ ರಾಜ್ಯದ ಹಣಕಾಸು ಪರಿಸ್ಥಿತಿಯೂ ಬಿಗಡಾಯಿಸಿದೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಜಿಎಸ್ಟಿ ತೆರಿಗೆ ಪಾಲು ಬಂದಿಲ್ಲ. ಅಬಕಾರಿ ಆದಾಯವೇ ಈಗ ಸರ್ಕಾರಕ್ಕೆ ಜೀವಾಳ ಎನ್ನುವಂಥ ಸ್ಥಿತಿ ಇದೆ.
ಇದರ ನಡುವೆ ತಿಂಗಳು ತಿಂಗಳು ಸರ್ಕಾರಿ ನೌಕರರಿಗೆ ಸಂಬಳ ಹೊಂದಿಸುವುದೇ ದುಸ್ತರವಾಗಿದೆ. ರಾಜ್ಯ ಸರ್ಕಾರ ತನ್ನ ನೌಕರರಿಗೆ ತಿಂಗಳಿಗೆ ನೀಡುವ ಸಂಬಳದ ಮೊತ್ತವೇ ಬರೋಬ್ಬರಿ 6 ಸಾವಿರ ಕೋಟಿ ರೂಪಾಯಿ. ಇದೀಗ ಈ ಸಂಬಳದಲ್ಲಿ ಶೇ. 30ರಷ್ಟು ಕಡಿತ ಮಾಡುವ ಬಗ್ಗೆ ಸರ್ಕಾರದೊಳಗೆ ಚರ್ಚೆ ನಡೆಯುತ್ತಿದೆ.
ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವ ಪ್ರಸ್ತಾವ ಈ ಮುಂಚೆಯೇ ರಾಜ್ಯ ಸರ್ಕಾರದ ಮುಂದಿತ್ತು. ಆದರೆ, ತುಟ್ಟಿಭತ್ಯೆ ಮತ್ತು ಇಎಲ್ ಲೀವ್ ಎನ್ಕ್ಯಾಷ್ ಹಣವನ್ನು ಮಾತ್ರ ಫ್ರೀಜ್ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದರು. ಅದೇ ವೇಳೆ, ಕೇರಳ ಸರ್ಕಾರ ತನ್ನ ನೌಕರರ ಶೇ. 30ರಷ್ಟು ಸಂಬಳ ಕಡಿತ ಮಾಡುವ ನಿರ್ಧಾರ ಬಹಳ ಬೇಗ ತೆಗೆದುಕೊಂಡಿತು. ಆದ್ರೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೌಕರರ ಸಂಬಳ ಕಟ್ ಮಾಡುವ ನಿರ್ಧಾರಕ್ಕೆ ಬಂದಿರಲಿಲ್ಲ.
ಈಗ ರಾಜ್ಯ ಸರ್ಕಾರಕ್ಕೆ ಹಣಕಾಸು ಪರಿಸ್ಥಿತಿ ತೀರಾ ವಿಷಮಿಸಿದೆ. ನೌಕರರಿಗೆ ಸಂಬಳ ಹಾಕುವುದರೊಳಗೆಯೇ ಸರ್ಕಾರದ ಖಜಾನೆ ಖಾಲಿಯಾಗುವಂಥ ಪರಿಸ್ಥಿತಿ ಇದೆ. ಸರ್ಕಾರದ ಎಲ್ಲಾ ಸ್ತರಗಳ ಅಧಿಕಾರಿಗಳು ಮತ್ತು ನೌಕರರ ಸಂಖ್ಯೆ 5.5 ಲಕ್ಷ ಇದೆ. ವಿಶ್ವವಿದ್ಯಾಲಯ ಮತ್ತು ಅನುದಾನಿತ ನೌಕರರನ್ನ ಒಳಗೊಂಡರೆ ಒಟ್ಟು ನೌಕರರ ಸಂಖ್ಯೆ 6.5 ಲಕ್ಷ ಆಗುತ್ತದೆ. ಇವರೆಲ್ಲರ ಸಂಬಳದ ಒಟ್ಟು ಮೊತ್ತ ವರ್ಷಕ್ಕೆ ಏನಿಲ್ಲವೆಂದರೂ 72-80 ಸಾವಿರಕೋಟಿ ಆಗುತ್ತದೆ ತುಟ್ಟಿಭತ್ಯೆ ಕಡಿತದಿಂದ ಸುಮಾರು 6,000 ಕೋಟಿಿ ಉಳಿತಾಯವಾಗುತ್ತದೆ. ಲೀವ್ ಎನ್ಕ್ಯಾಷ್ಮೆಂಟ್ನಿಂದ 1,700 ಕೋಟಿ ಉಳಿತಾಯವಾಗುತ್ತದೆ. ಇವೆರಡರಿಂದ ಸರ್ಕಾರಕ್ಕೆ ವರ್ಷಕ್ಕೆ ಸುಮಾರು 7-8 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಬಹುದು.
ಇನ್ನು, ಶೇ. 30ರಷ್ಟು ವೇತನ ಕಡಿತವಾದರೆ ಸರ್ಕಾರಕ್ಕೆ ಸುಮಾರು 21 ಸಾವಿರ ಕೋಟಿ ರೂಪಾಯಿ ಹೊರೆ ತಗ್ಗುತ್ತದೆ. ಸಂಬಳ ಕಡಿತ, ತುಟ್ಟಿಭತ್ಯೆ ರದ್ದು, ಲೀವ್ ಎನ್ಕ್ಯಾಷ್ಮೆಂಟ್ ರದ್ದು ಈ ಮೂರು ಕ್ರಮಗಳಿಂದ ಸರ್ಕಾರಕ್ಕೆ ಸುಮಾರು 29-30 ಸಾವಿರ ಕೋಟಿ ರೂಪಾಯಿ ಹೊರೆ ತಗ್ಗುತ್ತದೆ. ಆ ಹಣವನ್ನ ಹಣಕಾಸು ಪುನಶ್ಚೇತನಕ್ಕೆ ಮತ್ತು ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳಕೆ ಮಾಡಬಹುದು ಎಂಬ ಸಲಹೆ ಸರ್ಕಾರದ ವಲಯದಲ್ಲಿ ಹರಿದಾಡುತ್ತಿದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಸರ್ಕಾರಿ ಅಧಿಕಾರಿಗಳ ಲಾಬಿಗೆ ಅವರು ಮಣಿಯುತ್ತಿದ್ಧಾರೆಂಬ ಆರೋಪ ಕೇಳಿಬರುತ್ತಿದೆ.
ಸಂಬಳ ಕಡಿತ ಮಾಡುವ ಪ್ರಸ್ತಾವಕ್ಕೆ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಬಲವಾಗಿ ವಿರೋಧಿಸುತ್ತಾ ಬರುತ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಡಲು ಅಧಿಕಾರಿಗಳು ಮತ್ತು ನೌಕರರು ಒಂದು ದಿನದ ಸಂಬಳದ ಮೊತ್ತವಾದ 250 ಕೋಟಿ ರೂಪಾಯಿಯನ್ನು ಸರ್ಕಾರದ ಪರಿಹಾರ ನಿಧಿಗೆ ಕೊಡಲಾಗಿದೆ. ಅದಕ್ಕಿಂತ ಹೆಚ್ಚೇನು ಮಾಡಲು ಸಾಧ್ಯ ಎಂಬುದು ಸರ್ಕಾರಿ ಅಧಿಕಾರಿಗಳ ಪ್ರಶ್ನೆ.
ಸುದ್ದಿ
ಬಿಲ್ ಪಾವತಿಸದ ಕಾರಣ ತಾಲ್ಲೂಕು ಕಚೇರಿಗೆ ವಿದ್ಯುತ್ ಕಡಿತ : ಅಧಿಕಾರಿಗಳ ಬೇಜವಾಬ್ದಾರಿತನ ವಿರುದ್ದ ಆರೋಪ
ಗೌರಿಬಿದನೂರು : ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ತಾಲೂಕು ಕಚೇರಿಗೆ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಇಲಾಖೆ ಕಡಿತಗೊಳಿಸಿದ್ದು ಇದರಿಂದ ಸವಲತ್ತು ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ.
ನಗರದ ಹಳೆ ತಾಲ್ಲೂಕು ಕಚೇರಿಯನ್ನೂ 8 ತಿಂಗಳ ಹಿಂದೆ ಹೊಸದಾಗಿ ನಿರ್ಮಿಸಿರುವ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿತ್ತು. ಅಂದಿನಿಂದ 6.5ಲಕ್ಷಕ್ಕೂ ಅಧಿಕ ಮೊತ್ತದ ಬಾಕಿಯನ್ನು ಪಾವತಿಸಿರಲಿಲ್ಲ. ಈ ಬಗ್ಗೆ ಬೆಸ್ಕಾಂ ಇಲಾಖೆ ತಿಳುವಳಿಕೆ ನೋಟಿಸ್ ನೀಡಿ ಸಂರ್ಪಕ ಕಡಿತಗೊಳಿಸಲಾಗಿತ್ತಾದರೂ ಸಾರ್ವಜನಿಕ ಹಿತದೃಷ್ಠಿಯಿಂದ ಮರು ಸಂಪರ್ಕ ನೀಡಲಾಗಿತ್ತು. ಬಿಲ್ ಪಾವತಿಗೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಕೂಡ ಬಾಕಿ ಪಾವತಿಸದ ಕಾರಣ ಮಂಗಳವಾರ ಮತ್ತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಸಾರ್ವಜನಿಕರ ಪರದಾಟ;ಕಂದಾಯ ನೋಂದಣಿ. ಚುನಾವಣೆ ಶಾಖೆ ಅಬಕಾರಿ ಸೇರಿ ವಿವಿಧ ಇಲಾಖೆಗಳು ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿತ್ಯ ನಾನಾ ಕೆಲಸಗಳಿಗೆಂದು ತಾಲ್ಲೂಕು ಕಚೇರಿಗೆ ತಾಲ್ಲೂಕಿನ ಮೂಲೆ ಮೂಲೆಯಿಂದ ಜನ ಅಗಮಿಸುತ್ತಾರೆ.
ಈಗ ಬಹುತೇಕ ಎಲ್ಲ ಇಲಾಖೆಗಳು ಗಣಕೀರಣಗೊಂಡಿರುವುದರಿಂದ ವಿದ್ಯುತ್ ಸಂಪರ್ಕವಿಲ್ಲದೆ ಏನು ಕೆಲಸ ನಡೆಯುವುದಿಲ್ಲ. ಮಂಗಳವಾರ ವಿದ್ಯುತ್ ಕಡಿತಗೊಂಡಿದ್ದರಿಂದ ಕೆಲಸಗಳಿಗೆಂದು ತಾಲ್ಲೂಕು ಕಚೇರಿಗೆ ಅಗಮಿಸಿದ್ದ ಜನ ಪರದಾಡಬೇಕಾಯಿತು. ಕಾದು ಕಾದು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸ್ ಅಗಬೇಕಾಯಿತು. ತಹಸೀಲ್ದಾರ್ ಅವರನ್ನೂ ಪ್ರಶ್ನಿಸಿದರೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ.
ಹಣ ಬಿಡುಗಡೆಯಾದ ತಕ್ಷಣ ಬಾಕಿ ಹಣ ಪಾವತಿಗೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
“ಮಿನಿ ಸೌಧ ತಾಲ್ಲೂಕು ಕಚೇಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿ ಇದು. ಹಲವು ತಿಂಗಳಿಂದ ವಿದ್ಯುತ್ ಬಿಲ್ ಏಕೆ ಬಾಕಿ ಉಳಿಸಿಕೊಳ್ಳಲಾಗಿದೆ. ಸಾರ್ವಜನಿಕ ಕೆಲಸಗಳು ನಡೆಯದಿದ್ದರೂ ಪರವಾಗಿಲ್ಲ. ಎಂಬ ನಿರ್ಲಕ್ಷ್ಯ ಧೋರಣೆಯನ್ನು ಇದು ಸೂಚಿಸುತ್ತದೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಹೊಣೆ ಯಾರು ಎಂಬ ಪ್ರಶ್ನೆಯಾಗಿದೆ.
ಈ ಬಗ್ಗೆ ತಪ್ಥಿತಸ್ಥರ ಅಧಿಕಾರಿಗಳ ವಿರುದ್ಧ ಕೂಡಲೆ ಕ್ರಮ ಜರುಗಿಸಬೇಕು‘’ ಆರ್.ಎನ್.ರಾಜು, ರೈತ ಮುಖಂಡ, ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ
ಸುದ್ದಿ
ಚರ್ಚ್ ಸ್ಟ್ರೀಟ್ನಲ್ಲಿ ವಾಹನ ಸಂಚಾರ ಬಂದ್
ಬೆಂಗಳೂರು : ಕ್ಲೀನ್ ಏರ್ ಸ್ಟ್ರೀಟ್ ಯೋಜನೆಗೆ ಚರ್ಚ್ ಸ್ಟ್ರೀಟ್ ರಸ್ತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಆದುದರಿಂದಾಗಿ ಶನಿವಾರ ಮತ್ತು ಭಾನುವಾರ (ವಾರಾಂತ್ಯ) ಎರಡು ದಿನ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಕೇವಲ ಪಾದಚಾರಿಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ. ವಾಯು ಮಾಲಿನ್ಯ ತಡೆಗಟ್ಟುವ ಸಲುವಾಗಿ ಕ್ಲೀನ್ ಏರ್ ಸ್ಟ್ರೀಟ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಸುದ್ದಿ
ನಾಳೆಯಿಂದ ಹಾಸನಾಂಬಾ ದರ್ಶನ
ಹಾಸನ, ನ.4 : ಈ ಬಾರಿ ಸಾರ್ವಜನಿಕರಿಗೆ ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಆನ್ಲೈನ್ ಮುಖಾಂತರ ಹಾಸನಾಂಬಾ ದರ್ಶನ ಲಭ್ಯವಿದೆ. ನಾಳೆಯಿಂದ ದೇವಾಲಯ ತೆರೆಯಲು ತೀರ್ಮಾನಿಸಲಾಗಿದ್ದು, ಈ ಬಾರಿ ವಿವಿಐಪಿಗಳಿಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಸಾರ್ವಜನಿಕರು ದೇವಾಲಯಕ್ಕೆ ಆಗಮಿಸಿ ನಗರದ ವಿವಿಧೆಡೆ ಅಳವಡಿಸಿರುವ ಎಲ್ಇಡಿ ಪರದೆ ಮೇಲೆ ದೇವಿಯ ದರ್ಶನ ಪಡೆಯಬಹುದಾಗಿದೆ. ಇದರ ಜತೆಗೆ ಹಾಸನಾಂಬಾ ಲೈವ್ 20-20 ಆನ್ಲೈನ್ ಮುಖಾಂತರವೂ ದೇವಿಯ ದರ್ಶನ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದ್ದಾರೆ.