ರಾಜ್ಯ
ರಾಜ್ಯದ ಪ್ರಮುಖ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ SFI ಮನವಿ
ಕವಿತಾಳ : ಭಾರತ ವಿದ್ಯಾರ್ಥಿ ಫೆಡರೇಶನ್ ( SFI ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (DYFI) ಕವಿತಾಳ ಕವಿತಾಳ ಘಟಕವು ಪಟ್ಟಣದ ನಾಡ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ಮಾಡಿ ರಾಜ್ಯದಲ್ಲಿ ಕೊರೋನಾ ಮಾಹಾಮಾರಿ ಸಾಂಕ್ರಾಮಿಕ ವೈರಸ್ ಬಂದು ಲಾಕ್ ಡೌನ್ ಆಗಿ ಶಾಲಾ – ಕಾಲೇಜು ಮತ್ತು ಹಾಸ್ಟೆಲ್ ಗಳು ಬಂದ್ ಆದ ನಂತರ ರಾಜ್ಯದ ವಿದ್ಯಾರ್ಥಿ ಸಮುದಾಯ ದೊಡ್ಡ ಪ್ರಮಾಣದಲ್ಲಿ ಸಂಕಷ್ಟಕ್ಕೆ ಸಿಲುಕಿ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗ ಪೋಷಕ ಮತ್ತು ಪಾಲಕರು ಉದ್ಯೋಗ ವನ್ನು ಕಳೆದುಕೊಂಡು ಆದಾಯವಿಲ್ಲದೆ ಮಕ್ಕಳ ಶುಲ್ಕ ಕಟ್ಟಲು ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಈ ಕೆಳಗೆ ಗುರುತು ಮಾಡಿದ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕೆಂದ ಒತ್ತಾಯಿಸಿದರು.
ಶಿಕ್ಷಣ ಹಕ್ಕು ಕಾಯ್ದೆ (RTE) ಕಾಯ್ದೆಯನ್ನು 9 & 10 ನೇ ತರಗತಿ ವರೆಗೆ ವಿಸ್ತರಿಸಲು ಹಾಗೂ ಆರ್.ಟಿ.ಇ ಅಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದ ಡ್ರಾಪ್ ಔಟ್ ಆಗಿರುವ ಕುರಿತು ತನಿಖೆಗೆ ಆಗ್ರಹಿಸಿ ಸೂಕ್ತ ಗಮನ ಹರಿಸಬೇಕು. ಕೊರೋನಾ ದಿಂದ ಶಾಲೆಗಳನ್ನು ಮುಚ್ಚಿರುವ ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಆಹಾರ ಧಾನ್ಯಗಳನ್ನು ನೇರವಾಗಿ ವಿದ್ಯಾರ್ಥಿಗಳ ಮನೆಬಾಗಿಲಿಗೆ ತಲುಪಿಸಲು ಒತ್ತಾಯಿಸಿ. ಜೊತೆಗೆ 2015 ರಲ್ಲಿ ನೇಮಕಾತಿಯಾಗಿರುವ ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ಈ ಕೂಡಲೇ ಆದೇಶ ಪತ್ರ ನೀಡಲು ಆಗ್ರಹಿಸಿ, ಮತ್ತು ವೃತ್ತಿಪರ ಹಾಸ್ಟೆಲ್ ಗಳನ್ನು ತೆರೆಯಲು ಮತ್ತು ಕ್ವಾರಂಟೈನ್ ಕೇಂದ್ರಗಳಾಗಿದ್ದ ಎಲ್ಲಾ ವಸತಿ ಶಾಲೆ ಮತ್ತು ಹಾಸ್ಟೆಲ್ ಗಳನ್ನು ಶುಚಿಗೊಳಿಸಿ, ಸ್ಯಾನಿಟೈಸರ್ ಮಾಡಿ ವಿದ್ಯಾರ್ಥಿಗಳ ಉಪಯೋಗ ಕ್ಕೆ ಅನುಕೂಲ ಮಾಡಿಕೊಡಬೇಕು ಹಾಗೂ ಬಾಕಿ ಇರುವ ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡಬೇಕೆಂದು ಪ್ರತಿಭಟನೆ ಮಾಡಿ ಮನವಿ ಮುಖ್ಯ ಮಂತ್ರಿಗೆ ಬರೆದ ಮನವಿ ಪತ್ರವನ್ನು ಗ್ರಾಮ ಲೆಕ್ಕಿಗ ಸದಾಕಲಿಯ ಮುಖಾಂತರ ಕಳುಹಿಸಿ ಕೊಟ್ಟರು.
ಈ ಸಂಧರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ನಗರ ಘಟಕದ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ, ಉಪಾಧ್ಯಕ್ಷ ನಾಗಮೋಹನ್ ಸಿಂಗ್, ಮುಖಂಡರಾದ ಮೂಕಪ್ಪ, ಮಲ್ಲಿಕಾರ್ಜುನ, ದೇವರಾಜ್, ಪ್ರಭು ಸೇರಿ ಅನೇಕರಿದ್ದರು.
ರಾಜ್ಯ
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾರಿ ಹಾನಿ
ಕಳೆದ ೪-೫ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಹತ್ತಿ, ತೊಗರಿ, ಶೇಂಗಾ, ದಾಳಿಂಬೆ, ದ್ರಾಕ್ಷಿ, ಗೋಧಿ ಹಾಗೂ ಇನ್ನಿತರೆ ವಾಣಿಜ್ಯ ಬೆಳೆಗಳನ್ನು ಅತಿಯಾದ ಮಳೆಯಿಂದ ಹಾನಿ ಒಳಗಾಗಿದ್ದು ಸರ್ಕಾ ರೈತರ ಸೂಕ್ತವಾದ ಪರಿಹಾರ ನೀಡಬೇಕೆಂದು ಭೋವಿ(ವಡ್ಡರ) ಸಮುದಾಯದ ರಾಜ್ಯ ಉಪಾಧ್ಯಕ್ಷರಾದ ಮರೆಪ್ಪ ಗಿರಣಿವಡ್ಡರ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ.
ಈ ವರ್ಷ ಕರೋನಾ ಸಂದರ್ಭದಲ್ಲಿ ಸರಿಯಾದ ಔಷದಿ ಸಿಗದೆ ಅನೇಕ ಬೆಳೆಗಳು ಹಾಳಾಗಿದ್ದವು. ಅದು ಹೇಗೋ ರೈತ ಕಷ್ಟಪಟ್ಟು ಬೆಳೆ ಬೆಳೆದಾಗ ಸರಿಯಾಗಿ ವ್ಯಾಪಾರವಾಗದೆ ಮತ್ತು ಸರಿಯಾದ ಬೆಲೆ ಸಿಗದೆ ರೈತರು ನಷ್ಟ ಅನುಭವಿಸಿದರು ಈಗ ಮತ್ತೆ ಈ ಅತಿಯಾದ ಮಳೆಯಿಂದಾಗಿ ಬೆಳೆಗಳು ನೆಲ ಸಮಗೊಂಡಿರುವದನ್ನು ನೋಡಿ ಸಂಪೂರ್ಣ ತತ್ತರಿಸಿ ಹೋಗಿದ್ದಾರೆ.
ಈ ಧಾರಕಾರ ಮಳೆಗೆ ಹಾಗೂ
ಭೀಮಾ ನದಿ ಪ್ರವಾಹಕ್ಕೆ ಬೆಳೆಗಳು ಹಾನಿಗಿಡಾಗಿದ್ದಲ್ಲದೇ ಅನೇಕ ಬಡ ಕುಟುಂಬಗಳು ಮನೆಗಳನ್ನು ಕಳೆದುಕೊಂಡಿವೆ. ಪಡ್ನೂರ್, ಚಿಕ್ಕಮಣ್ಣೂರ, ಶಿರಗೂರ, ಬರಗುಡಿ, ಹಿಂಗಣಿ ಗ್ರಾಮದಲ್ಲಿನ ವಾಸ್ತವ ಸ್ಥಿತಿ ತಿಳಿದುಕೊಂಡು, ಮನೆ ಕಳೆದುಕೊಂಡ ನೊಂದ ಕುಟುಂಬಗಳಿಗೆ ಮತ್ತು ಬೆಳೆ ಕಳೆದುಕೊಂಡ ರೈತರ ಸ್ಪಷ್ಟ ಮಾಹಿತಿಯನ್ನು ಪಡೆದುಕೊಂಡು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮುಖ್ಯ ಮಂತ್ರಿಯರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಈ ಪತ್ರಿಕಾ ಗೋಷ್ಠಿಯ ಮೂಲಕ ಒತ್ತಾಯಿಸಿದರು.
ವರದಿ : ದೇವು ಕುಚಬಾಳ
ರಾಜ್ಯ
ಸಿಂಧನೂರು ಜಿಲ್ಲಾ ಕೇಂದ್ರ ಆಗಬೇಕೆಂದು ಪೂರ್ವ ಸಭೆ
ಸಿಂಧನೂರು ಜಿಲ್ಲಾ ಕೇಂದ್ರ ಸ್ಥಾಪನಾ ಸಮಿತಿ (ರಿ) ಸಿಂಧನೂರು: ಸಿಂಧನೂರಿನಲ್ಲಿ ಮೂರನೇ ಪೂರ್ವಭಾವಿ ಸಭೆಯನ್ನು ಸಿಂಧನೂರಿನ ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆಸಲಾಗಿತ್ತು
ಈ ಸಂದರ್ಭದಲ್ಲಿ ಸಿಂಧನೂರು ಜಿಲ್ಲೆಯನ್ನಾಗಿ ಮಾಡುವ ಸಮಗ್ರ ವಿಷಯಗಳನ್ನು ಮುಂದಿಟ್ಟುಕೊಂಡು ಸಿಂಧನೂರು ಮಸ್ಕಿ ಕಾರಟಗಿ ಲಿಂಗಸೂರು ಊರಿನ ಅನೇಕ ಯುವಕರು ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮುಖಾಂತರ ಮುಂದಿನ ನಿರ್ಣಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.
ವರದಿ: ದುರ್ಗೇಶ್ ಬೋವಿ ಮಸ್ಕಿ
ರಾಜ್ಯ
ವರುಣನ ಆರ್ಭಟದಿಂದ ಉಕ್ಕಿ ಹರಿದ ಹಳ್ಳಕೊಳ್ಳಗಳು
ದೇವರ ಹಿಪ್ಪರಗಿ : ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪಿ ಎಚ್ ಬೂದಿಹಾಳ ಮತ್ತು ಓತಿಹಾಳ ಗ್ರಾಮದ ನಡುವೆ ಹರಿಯುವ ಹಳ್ಳ ತುಂಬಿ ನಿಂತಿದೆ.
ಹಳ್ಳದಲ್ಲಿ ಕೊಚ್ಚಿ ಹೋದ ಕುರಿ ಎಮ್ಮೆಗಳು.
ಹಳ್ಳದ ನೀರಿನಲ್ಲಿ ಸಿಲುಕಿದ ಪಿ ಎಚ್ ಬೂದಿಹಾಳ ಗ್ರಾಮದ ಮುರಾಳ ಕುಟುಂಬ.
ಹಳ್ಳದಲ್ಲಿ ಸಿಲುಕಿದ ನಾಲ್ವರ ರಕ್ಷಣೆ ಮಾಡಿದ ಅಗ್ನಿ ಶಾಮಕ ಸಿಬ್ಬಂದಿ.
ಹೌದು ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ಹಳ್ಳ ಸತತ ಮಳೆಯಿಂದ ಉಕ್ಕಿ ಹರಿಯುವ ಸಂದರ್ಭದಲ್ಲಿ ದೈನಂದಿನ ಕೆಲಸ ಮಗಿಸಿ ಸಾಯಂಕಾಲ ಮನೆಗೆ ಬರುತ್ತಿರುವ ಮುರಾಳ ಕುಟುಂಬದ ಸದಸ್ಯರಾದ ಶಿವಶಂಕರಪ್ಪ ಮುರಾಳ(70) ಪರುತಪ್ಪ ಮುರಾಳ (50) ಪತ್ನಿ ಜಯಶ್ರೀ(45) ಮಗ ಪ್ರಸನ್(3) ಇವರು ಹಳ್ಳದಲ್ಲಿ ಸಿಲುಕಿ, ಹಳ್ಳ ದಾಟಲು ಸತತ ಪ್ರಯತ್ನ ನಡೆಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ ಸಂಜೀವ್ ಕುಮಾರ್ ಮತ್ತು ಅಗ್ನಿ ಶಾಮಕ ಸಿಬ್ಬಂದಿಯವರು ಜೀವ ರಕ್ಷಕ ಜಾಕೇಟ್ ಮತ್ತು ಹಗ್ಗದ ಸಹಾಯದಿಂದ ಆ ನಾಲ್ವರನ್ನು ರಕ್ಷಿಸಿದರು.ನಿಜವಾಗಿಯೂ ಇಲ್ಲಿ ಅಗ್ನಿ ಶಾಮಕ ಸಿಬ್ಬಂದಿಯ ಕಾರ್ಯ ಶ್ಲಾಘನೀಯ.
ವರದಿ: ರಮೇಶ ಕಲಕೇರಿ, ದೇವರ ಹಿಪ್ಪರಗಿ