ಮನರಂಜನೆ
ಪ್ರೇಮ್ ಹುಟ್ಟುಹಬ್ಬಕ್ಕೆ ಪತ್ನಿ ರಕ್ಷಿತಾ ಸ್ಪೆಷಲ್ ಮೆಸೇಜ್
ಪ್ರೇಮ್ ಜನ್ಮದಿನಕ್ಕೆ ಪತ್ನಿ, ನಟಿ ರಕ್ಷಿತಾ ಪ್ರೇಮ್ ಸ್ಪೆಷಲ್ ಮೆಸೇಜ್ ಮೂಲಕ ವಿಶ್ ಮಾಡಿರುವ ಇವರು, ಪ್ರೇಮ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದಿರುವ ರಕ್ಷಿತಾ ‘ನೀವು ನಂಗೆ ಎಷ್ಟು ಸ್ಪೆಷಲ್ ಎಂದು ಹೇಳಲೂ ಸಾಧ್ಯವಿಲ್ಲ. ನೀವು ನನ್ನ ಜತೆಗೆ ಜೀವನ ಪಯಣದಲ್ಲಿ ಜತೆಯಾಗಿದ್ದಕ್ಕೆ ಧನ್ಯವಾದಗಳು. ನಾನು ಭೇಟಿ ಮಾಡಿದ ಅತ್ಯಂತ ಸುಂದರ, ಒಳ್ಳೆಯ ವ್ಯಕ್ತಿ ನೀವು. ನೀವು ನನ್ನ ಗಂಡ ಎನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಹ್ಯಾಪೀ ಬರ್ತ್ ಡೇ ಪಪ್ಪಿ.. ಲವ್ ಯೂ’ ಎಂದು ಪ್ರೀತಿಯಿಂದ ಬರೆದಿದ್ದಾರೆ.
ಮನರಂಜನೆ
ರಾತ್ರಿ ಹೊತ್ತಿನಲ್ಲಿ ಸಫಾರಿ ನಡೆಸಿ ಆರೋಪಕ್ಕೆ ಗುರಿಯಾದ ನಟ
ಮೈಸೂರು : ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ಮಾಡಿದ್ದಾರೆ. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗುವ ಮೂಲಕ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾರಣ, ರಾತ್ರಿ ಸಫಾರಿಯನ್ನು ನಿಷೇಧಿಸಲಾಗಿದೆ. ನಟ ಧನ್ವೀರ್ ಗೌಡ ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ ಸಫಾರಿ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ಎಲ್ಲರ ಗಮನಸೆಳೆಯುತ್ತಿದ್ದಂತೆ ಈ ಫೋಟೊವನ್ನು ಅಳಿಸಿ ಹಾಕಿದ್ದಾರೆ. ಅಲ್ಲದೇ, ನಟನಿಗೆ ರಾತ್ರಿ ಸಮಯದಲ್ಲಿ ಅರಣ್ಯ ಪ್ರವೇಶಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳು ಸಿನಿಮಾ ನಟರಿಗೆ ಒಂದು ಸಾಮಾನ್ಯರಿಗೆ ಒಂದು ನಿಯಮ ರೂಪಿಸಿದ್ದಾರಾ ಎಂಬ ವಾದಗಳು ಕೇಳಿಬರುತ್ತಿದೆ.
ಅಭಯಾರಣ್ಯದಲ್ಲಿ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಉತ್ತರಿಸಿರುವ ನಿರ್ದೇಶಕರರಾದ ಬಾಲಚಂದರ್, ಈ ಬಗ್ಗೆ ನಾನು ಸಹ ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾತ್ರಿ ವೇಳೆ ಬಂಡೀಪುರದಲ್ಲಿ ಸಫಾರಿ ನಡೆಸಲು ಅವಕಾಶವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ವರದಿ ನೀಡುವಂತೆ ತಿಳಿಸಿದ್ದೇನೆ. ನಿಯಮಗಳು ಉಲ್ಲಂಘನೆಯಾಗಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಮನರಂಜನೆ
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್
ಇಂದು ಬೆಳಗ್ಗೆ ಕೆ ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಯಲ್ಲಿ ಮೇಘನಾ ರಾಜ್ ರವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತೋಷ ವ್ಯಕ್ತಪಡಿಸಿ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಒಂದು ದಿನಕ್ಕಾಗಿ ಮೇಘನಾ ಮತ್ತು ಸರ್ಜಾ ಕುಟುಂಬ ಕಾಯುತ್ತಿತ್ತು.
ಕೊನೆಗೂ ಸರ್ಜಾ ಕುಟುಂಬಕ್ಕೆ ಈ ಸಂತಸದ ದಿನ ಬಂದಿದೆ. ಮರಿ ಚಿರು ಆಗಮಿಸುತ್ತಾನೆ ಎಂದು ಕುಟುಂಬದವರು ಸದಾ ಹೇಳುತ್ತಿದ್ದರು. ಚಿರು ಕಳೆದುಕೊಂಡು ದುಃಖದಲ್ಲಿದ್ದ ಮೇಘನಾ ಮತ್ತು ಕುಟಂಬದವರಿಗೆ ಈ ಮುದ್ದಾದ ಮಗು ಸಂತೋಷವನ್ನು ಹೊತ್ತು ಬಂದಿದೆ. ಇನ್ಮುಂದೆಯಾದರೂ ಸರ್ಜಾ ಕುಟುಂಬದಲ್ಲಿ ನಲಿವು ತುಂಬಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಮನರಂಜನೆ
ಅಣ್ಣನ ಮಗುವಿಗೆ ‘ಬೆಳ್ಳಿ ತೊಟ್ಟಿಲು’ ಉಡುಗೊರೆ ಸರ್ಜಾ
ಕುಟುಂಬ ಚಿರಂಜೀವಿ ಸರ್ಜಾ ಮತ್ತು ಮೇಘನಾ ಮಗುವಿನ ಆಗಮನಕ್ಕೆ ಕಾಯುತ್ತಿದೆ. ನಟಿ ಮೇಘನಾ ರಾಜ್ ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಬೆನ್ನಲೇ ಇಡೀ ಕುಟುಂಬ ಆಸ್ಪತ್ರೆಗೆ ತೆರಳಿದೆ. ಇದೇ ಸಮಯದಲ್ಲಿ ನಟ ಧ್ರುವ ಸರ್ಜಾ ಕಡೆಯಿಂದ ಅಣ್ಣನ ಮಗುವಿಗಾಗಿ ಸಿದ್ಧವಾಗಿರುವ ಅದ್ಭುತ ಉಡುಗೊರೆ ರಿವೀಲ್ ಆಗಿದೆ. ಹೌದು, ಚಿರಂಜೀವಿ ಸರ್ಜಾ ಮಗುಗಾಗಿ ಧ್ರುವ ಸರ್ಜಾ ದುಬಾರಿ ತೊಟ್ಟಿಲನ್ನು ಖರೀದಿ ಮಾಡಿದ್ದಾರೆ. ತೊಟ್ಟಿಲಿಗೆ ಬೆಳ್ಳಿಯ ಫ್ರೇಮ್ ಹಾಕಿಸಿದ್ದಾರೆ. ಸುಮಾರು 10 ಲಕ್ಷ ಬೆಲೆಬಾಳುವ ತೊಟ್ಟಿಲು ಇದಾಗಿದೆ. ತೊಟ್ಟಿಲಿನ ಜೊತೆ ನಿಂತು ಧ್ರುವ ಸರ್ಜಾ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.