ಕ್ರೀಡೆ
ಸಹನೆ ಕಳೆದುಕೊಳ್ಳುತ್ತಿರುವ ಕೂಲ್ ಕ್ಯಾಪ್ಟನ್
ಕೂಲ್ ಕ್ಯಾಪ್ಟನ್ ಎಂದೆ ಖ್ಯಾತಿ ಪಡೆದಿರುವ ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ಸಹನೆ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗುತ್ತಿದೆ. ಮಂಗಳವಾರದಂದು ನಡೆದ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆಯಲ್ಲಿ ಧೋನಿ ಅಂಪೈರ್ ವಿರುದ್ಧ ಸಿಟ್ಟಾದ ಪ್ರಸಂಗ ಕಂಡುಬಂದಿದೆ. ಕೂಲ್ ಕ್ಯಾಪ್ಟನ್ ಸಿಟ್ಟಿಗೆ ವಿಚಲಿತರಾದ ಅಂಪೈರ್ ಪೌಲ್ ರೈಫೆಲ್ ನೀಡಬೇಕಿದ್ದ ವೈಟ್ ಕೂಡ ನೀಡದೆ ಸುಮ್ಮನಾಗಿದ್ದಾರೆ. ಇದರಿಂದಾಗಿ ಮೊದಲ ಬಾಲ್ ನಲ್ಲೆ ಔಟ್ ಆದ ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅಸಮಾಧಾನ ಹೊರಹಾಕಿದರು.
ಕ್ರೀಡೆ
ಹೃದಯಾಘಾತದಿಂದ ಆಸ್ಪತ್ರೆಗೆ ಸೇರಿದ ದಾದಾ
ಕೊಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಹೃದಯಾಘಾತ ಉಂಟಾಗಿರುವ ಹಿನ್ನೆಲೆಯಲ್ಲಿ ಅವರನ್ನ ಕೊಲ್ಕತ್ತಾದ ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಗೂಲಿ ಅವರಿಗೆ ಲಘು ಹೃದಯಾಘಾತವಾಗಿದೆ ಎಂದು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಸಂಜೆ ವೇಳೆಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇಂದು ಜಿಮ್ನಲ್ಲಿದ್ದಾಗ ಗಂಗೂಲಿಗೆ ತಲೆಸುತ್ತು ಬಂದಿದೆ. ಕೂಡಲೇ ಅವರು ವುಡ್ಲ್ಯಾಂಡ್ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ಅವರಿಗೆ ಹೃದಯ ಸಮಸ್ಯೆ ಇರೋದು ಗೊತ್ತಾಗಿದೆ. ಸದ್ಯ ಆಸ್ಪತ್ರೆ ಡಾ.ಸರೋಜ್ ಮೊಂಡಲ್ ಅವರ ಜೊತೆ ಮೂವರು ಸದಸ್ಯರ ಬೋರ್ಡ್ ರಚಿಸಿದ್ದು, ಅವರು ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಯನ್ನ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಕ್ರೀಡೆ
ತಾಳಿಕೋಟಿ ಪ್ರೀಮಿಯರ್ ಲೀಗ್ ಗೆ ಶಾಂತಗೌಡ ಪಾಟೀಲ್ (ನಡಹಳ್ಳಿ ) ಚಾಲನೆ
ತಾಳಿಕೋಟಿ : ಪಟ್ಟಣದ ಎಸ್ ಕೆ ಮೈದಾನದಲ್ಲಿ ಶ್ರೀ ಖಾಸ್ಗತೇಶ್ವರ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ ತಾಳಿಕೋಟಿ ಪ್ರೀಮಿಯರ್ ಲೀಗ್ ಗೆ ಸಸ್ಯಗಳಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು .ಈ ಸಂದರ್ಭದಲ್ಲಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಸಹೋದರ ಶಾಂತಗೌಡ ಪಾಟೀಲ್ ಮಾತನಾಡಿದರು ಕ್ರೀಡೆ ಆಡುವುದರಿಂದ ಬಹಳಷ್ಟು ಲಾಭವಿದೆ ಮಾನಸಿಕ ಮತ್ತು ದೈಹಿಕ ಆರೋಗ್ಯಕರವಾಗುತ್ತದೆ ಇನ್ನೂ ನಮ್ಮಲ್ಲಿ ಕ್ರೀಡೆಗಳು ಬಹಳಷ್ಟು ಬೆಳೆಯಬೇಕು ಕೇವಲ ಕ್ರಿಕೆಟ್ ಆಡಿದರೆ ಅಷ್ಟೇ ಅಲ್ಲ ನಮ್ಮ ಆಟಗಳು ಅದು ಕಬ್ಬಡ್ಡಿ ಆಗಿರಬಹುದು ಕೋಕೋ ವಾಲಿಬಾಲ್ ಇಂಥ ಆಟಗಳಿಗೆ ಪ್ರೋತ್ಸಾಹ ನೀಡಬೇಕು ತಾಳಿಕೋಟಿ ಪ್ರೀಮಿಯರ್ ಲೀಗ್ ಒಳ್ಳೆಯ ಕೆಲಸ ಮಾಡುತ್ತಿದೆ ಹಳ್ಳಿಗಳಲ್ಲಿ ಅಡಗಿದ ಪ್ರತಿಭೆಗಳನ್ನು ಹೊರಗಡೆ ತರುವಂತ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಡಿವೈಎಸ್ಪಿ ಈ ಶಾಂತವೀರ ಹೇಳಿದರು ನಿಮ್ಮಲ್ಲಿ ಸಮಯವಿದ್ದರೆ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಒಂದೆರಡು ಗಂಟೆ ಅವರ ಜೊತೆ ಆಟ ಆಡಿ ಅವರಿಗೆ ಕಲಿಸಿದರೆ ಬಹಳ ಒಳ್ಳೆಯದಾಗುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯ ಶ್ರೀ ಸಿದ್ದಲಿಂಗದೇವರು ಖಾಸ್ಗತೇಶ್ವರ ಮಠ ತಾಳಿಕೋಟಿ ಮುಖ್ಯ ಅತಿಥಿಗಳು ಶ್ರೀ ಎಸ್ ಎ ಸರೂರ್ ಜರ್ಮನರು ವಿವಿಧ ಸಂಘ ಅಧ್ಯಕ್ಷತೆ ಶ್ರೀ ಚಿದಂಬರ ದೀಕ್ಷಿತ್ ಖಾಸ್ಗತೇಶ್ವರ ಸ್ಪೋರ್ಟ್ಸ್ ಅಸೋಸಿಯೇಷನ್ ವಿಶೇಷ ಆಮಂತ್ರಿತರಾಗಿ ಆಗಮಿಸಿದ ಶಂಕರ್ ಸಜ್ಜನ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಮತ್ತು ಶ್ರೀ ಸಂಜೀವ ಹಜೇರಿ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರರು ಮತ್ತು ಶ್ರೀ ಗಂಗೂ ಜಿ ಬಿರಾದರ್ ಅಂತಾರಾಷ್ಟ್ರೀಯ ಸೈಕ್ಲಿಸ್ಟ್ ಮತ್ತು ತಾಳಿಕೋಟೆ ಠಾಣೆಯ ಪಿಎಸ್ಸೈ ಮತ್ತು ಈ ಶಾಂತವೀರ್ ಡಿವೈಎಸ್ಪಿ ಕ್ರಿಕೆಟ್ ಆಟಗಾರರು ತಾಳಿಕೋಟೆ ಠಾಣೆ ಪಿಎಸ್ಸೈ ಶಿವಾಜಿ ಪವಾರ್ ಬಸನಗೌಡ ವಣಕಿಹಾಳ ಜಿಲ್ಲಾ ಪಂಚಾಯಿತಿ ಸದಸ್ಯರು ಸಂಗಮೇಶ್ ಇಂಗಳಗೇರಿ ಪುರಸಭೆ ಅಧ್ಯಕ್ಷರು ಮುಸ್ತಫಾ ಚೌದ್ರಿ ಪುರಸಭೆ ಉಪಾಧ್ಯಕ್ಷರು ತಾಳಿಕೋಟಿ ಜೈಸಿಂಗ್ ಮೂಲಿಮನಿ ಪುರಸಭೆ ಸದಸ್ಯರು ಮತ್ತು ಕ್ರೀಡಾ ಪುಟಗಳು ಮತ್ತು ಕ್ರೀಡಾಭಿಮಾನಿಗಳು ಹಾಜರಿದ್ದರು.
ವರದಿ : ದೇವು ಕುಚಬಾಳ
ಕ್ರೀಡೆ
ಮೂರನೇ ಸ್ಥಾನವನ್ನು ಪಡೆದುಕೊಂಡ ಕನ್ನಡಿಗ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಐಸಿಸಿ t20 ರಂಕಿಂಗ್ ನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಕನ್ನಡಿಗ ರಾಹುಲ್ ಮೂರನೇ ಸ್ಥಾನಕ್ಕೇರಿದ್ದು, ನಾಯಕ ವಿರಾಟ್ ಕೊಹ್ಲಿ 8 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
-
ಸುದ್ದಿ2 weeks ago
ಡಿಜಿಟಲ್ ಸ್ಮಾಟ್೯ ಕ್ಲಾಸ್ ನಲ್ಲಿ ಸಾವಿತ್ರಿ ಭಾಯಿ ಫುಲೆಯವರ ಜನ್ಮ ದಿನ ಆಚರಣೆ
-
ಮನರಂಜನೆ2 weeks ago
ಅಪ್ಪಿಕೊಂಡು ಪಪ್ಪಿಕೊಟ್ಟು ಮುದ್ದಾಡುವಾಗ ಸಿಕ್ಕಿ ಬಿದ್ದ ಅನುಶ್ರೀ
-
ಸುದ್ದಿ3 days ago
ಶ್ರೀಶ್ರೀಶ್ರೀ ಗುರು ಆದಿ ಜಾಂಬವಂತ ಸ್ವಾಮಿ ಜಯಂತಿ ಆಚರಣೆ
-
Politics1 week ago
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?