ಬೆಂಗಳೂರು
ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ; ಆಂಬುಲೆನ್ಸ್ ಡಾಕ್ಟರ್ ಇಲ್ಲದೆ ಪರದಾಟ
ತಾಲೂಕು ಕ್ಯಾಸಂಬಳ್ಳಿ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾಸಂಬಳ್ಳಿ ಯು ಅವ್ಯವಸ್ಥೆಯ ಆಗರವಾಗಿದೆ. ಸರಿಯಾದ ಸಮಯಕ್ಕೆ ಡಾಕ್ಟರ್ ಸಿಗದೇ ಮತ್ತು ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಬಡವರಿಗೆ ಸೂಕ್ತವಾದ ಆರೋಗ್ಯವನ್ನು ದೊರಕಿಸಿ ಕೊಡುವುದರ ಸಲುವಾಗಿ ಸರ್ಕಾರ ಉಚಿತ ಆಂಬುಲೆನ್ಸ್ ಸೇವೆಯನ್ನು ಜಾರಿಗೆ ತಂದಿದ್ದು ಸಾರ್ವಜನಿಕರಿಗೆ ಇದರ ಪ್ರಯೋಜನ ಸಿಗದಂತಾಗಿದೆ.ಗ್ರಾಮೀಣ ಪ್ರದೇಶದ ಜನರು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ ಆದರೆ ಅಲ್ಲಿ ಸಮಯಕ್ಕೆ ಸರಿಯಾಗಿ ಡಾಕ್ಟರ್ ಲಭ್ಯವಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಬೃಹತ್ ಮಟ್ಟದ ಉಗ್ರವಾದ ಹೋರಾಟವನ್ನು ಮಾಡುವುದಾಗಿ ಕರ್ನಾಟಕ ದಲಿತ ಜನ ಸೇನೆಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಬೆಂಗಳೂರು
ರಾಷ್ಟ್ರದ ರಾಜಧಾನಿಯಲ್ಲಿನ ಕೊಳೆಗೆರೆ ಪ್ರದೇಶದಲ್ಲಿ ಕೊಚ್ಚಿ ಹೋಗುತ್ತಿವೆ
ನವದೆಹಲಿ: ರಾಷ್ಟ್ರ ರಾಜಧಾನಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಐಟಿಒ ಬಳಿಯ ಅಣ್ಣಾ ನಗರದ ಕೊಳೆಗೇರಿ ಪ್ರದೇಶದಲ್ಲಿ ಇಂದು ಮನೆ ಕುಸಿದಿದೆ. ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಕೇಂದ್ರೀಕೃತ ಅಪಘಾತ ಮತ್ತು ಆಘಾತ ಸೇವೆಗಳು (ಸಿಎಟಿಎಸ್) ಮತ್ತು ಅಗ್ನಿಶಾಮಕ ಯಂತ್ರಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ರಾಜಕಾಲುವೆಗಳ ದಡದಲ್ಲಿದ್ದ ಮನೆಗಳ ಅಡಿಪಾಯಗಳು ತೇವಗೊಂಡಿದ್ದು, ಭಾರಿ ಮಳೆಗೆ ಅಡಿಪಾಯಗಳ ಸಹಿತ ಕುಸಿದು ಬೀಳುತ್ತಿವೆ. ಸರ್ಕಾರಗಳು ಇಂತಹ ಅಪಾಯದಲ್ಲಿನ ಮನೆಗಳನ್ನು ಈ ಮೊದಲೇ ತೆರವುಗೊಳಿಸಿ ಅಲ್ಲಿನ ನಿವಾಸಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಕೊಡಬೇಕಿತ್ತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಬೆಂಗಳೂರು
ದ್ವಿತೀಯ ಪಿಯು ಫಲಿತಾಂಶ ಪ್ರಕಟ; ಕಲಾ ವಿಭಾಗದಲ್ಲಿ ಟಾಪರ್ ಆದ ಗ್ರಾಮೀಣ ಪ್ರತಿಭೆ
ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಇಂದು ಪಿಯು ಕಾಲೇಜ್ ವಿದ್ಯಾರ್ಥಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗ್ರಾಮೀಣ ಪ್ರತಿಭಾವಂತ ಕರೆಗೌಡ್ ದಾಸನಗೌಡರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ.
600 ಕ್ಕೆ 596 ಅಂಕ ಪಡೆದ ವಿದ್ಯಾರ್ಥಿ ಗ್ರಾಮೀಣ ವಿದ್ಯಾರ್ಥಿ…
ಇತಿಹಾಸ – 100 ಕನ್ನಡ- 97 ಸಂಸ್ಕೃತ -100 ಪಾಲಿಟಿಕಲ್ – 98 ಐಚ್ಛಿಕ ಕನ್ನಡ- 99 ಶಿಕ್ಷಣ -100 ಅಂಕಗಳನ್ನು ಪಡೆದು ಕಲಾವಿಭಾಗದಲ್ಲಿ ಟಾಪರ್ ಆಗಿದ್ದಾನೆ.
ಬೆಂಗಳೂರು
ದ್ವಿತೀಯ PUC ಫಲಿತಾಂಶ ಪ್ರಕಟ :ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಥಮ ಮತ್ತು ವಿಜಯಪುರ ಕೊನೆ
ಬೆಂಗಳೂರು : ಬಹುನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.61.80 ಫಲಿತಾಂಶ ಬಂದಿದೆ. ಇಂದು ಬೆಳಗ್ಗೆ 11.30 ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಇಲಾಖೆಯ ವೆಬ್ ಸೈಟ್ ನಲ್ಲಿ ಅಧಿಕೃತ ಫಲಿತಾಂಶ ಪ್ರಕಟವಾಗಿದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿಯಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.karresults.nic.in ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.
1016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸುಮಾರು 70 ಮೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿದೆ. ಒಟ್ಟು 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ಹೊಸಬರು 5,56267 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಇದರಲ್ಲಿ 3,84,947 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನಾರಾವರ್ತಿತ 91,025 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 25,602 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ. 76.02 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ,65.52 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ ಶೇ. 41.27 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಈ ಎರಡು ಜಿಲ್ಲೆಗಳಲ್ಲಿ ಶೇ. 90.71 ರಷ್ಟು ಫಲಿತಾಂಶ ಬಂದಿದೆ. ವಿಜಯಪುರ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ?
1.ಉಡುಪಿ – ಶೇ. 90.71
2.ದಕ್ಷಿಣ ಕನ್ನಡ- ಶೇ.90.71
3.ಕೊಡಗು- ಶೇ.81.53
4.ಉತ್ತರ ಕನ್ನಡ- ಶೇ.80.97
5.ಚಿಕ್ಕಮಗಳೂರು- ಶೇ.79.11
6.ಬೆಂಗಳೂರು ದಕ್ಷಿಣ- ಶೇ. 77.56
7.ಬೆಂಗಳೂರು ಉತ್ತರ – ಶೇ.75.54
8.ಬಾಗಲಕೋಟೆ- ಶೇ.74.59
9.ಚಿಕ್ಕಬಳ್ಳಾಪುರ- ಶೇ.73.74
10.ಶಿವಮೊಗ್ಗ- ಶೇ.72.19
11.ಹಾಸನ – ಶೇ.70.18
12.ಚಾಮರಾಜನಗರ- ಶೇ.69.29
13.ಬೆಂಗಳೂರು ಗ್ರಾಮಾಂತರ- ಶೇ.69.02
14.ಹಾವೇರಿ- ಶೇ.68.01
15.ಮೈಸೂರು- ಶೇ.67.98
16.ಕೋಲಾರ ಶೇ.67.42
17.ಧಾರವಾಡ- ಶೇ.67.31
18.ಬೀದರ್ – ಶೇ.64.61
19.ದಾವಣಗೆರೆ- ಶೇ.64.09
20.ಚಿಕ್ಕೋಡಿ- ಶೇ.63.88
21.ಮಂಡ್ಯ -ಶೇ.63.82
22.ಗದಗ – ಶೇ.63
23.ತುಮಕೂರು- ಶೇ.62.26
24.ಬಳ್ಳಾರಿ- ಶೇ.62.02
25.ರಾಮನಗರ- ಶೇ.60.96
26.ಕೊಪ್ಪಳ- ಶೇ.60.09
27.ಬೆಳಗಾವಿ- ಶೇ.59.07
28.ಯಾದಗಿರಿ- ಶೇ.58.38
29.ಕಲಬುರಗಿ- ಶೇ. 58.27
30.ಚಿತ್ರದುರ್ಗ- ಶೇ.56.08
31.ರಾಯಚೂರು- ಶೇ.56.22
32.ವಿಜಯಪುರ- ಶೇ.54.22.
ವರದಿ: ನರಸಿಂಹಮೂರ್ತಿ ಎಂ.ಎಲ್. ಮಾಡಪ್ಪಲ್ಲಿ