ಕ್ರೀಡೆ
ಕನ್ನಡಿಗ ಜಾವಗಲ್ ಶ್ರೀನಾಥ್ ದಾಖಲೆಯನ್ನು ಮುರಿದ ಬೂಮ್ರಾ
ಚೆನ್ನೈ: ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶಿಷ್ಟ ದಾಖಲೆ ಬರೆದರು. ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 17 ಪಂದ್ಯಗಳ ಬಳಿಕ ತವರಿನಲ್ಲಿ ಆಡಿದರು. ಬುಮ್ರಾ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ 17 ಟೆಸ್ಟ್ ಪಂದ್ಯಗಳಿಂದ 79 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮೊದಲು ಕನ್ನಡಿಗ ಜಾವಗಲ್ ಶ್ರೀನಾಥ್ 12 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಆಡಿದ್ದರು. ಇದೀಗ ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಹೆಸರಿನಲ್ಲಿದ್ದ ದಾಖಲೆಯನ್ನು ಬುಮ್ರಾ ಹಿಂದಿಕ್ಕಿದರು.
ಕ್ರೀಡೆ
ಐಪಿಎಲ್ ಆಟಗಾರರ ಹರಾಜು
14ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯು ಇಂದು ನಡೆಯಲಿದೆ. ಈ ಹರಾಜು ಪ್ರಕ್ರಿಯೆಗೆ 292 ಆಟಗಾರರು ಹೆಸರು ಅಂತಿಮಗೊಳಿಸಿದ್ದು, ಈ ಪೈಕಿ 164 ಭಾರತೀಯ ಕ್ರಿಕೆಟಿಗರು ಹಾಗೂ 128 ಮಂದಿ ವಿದೇಶಿ ಆಟಗಾರರಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಮ್ಯಾಕ್ಸ್ವೆಲ್, ಇಂಗ್ಲೆಂಡ್ ನ ಆಲ್-ರೌಂಡರ್ ಮೋಹಿನ್ ಅಲಿ ಫ್ರಾಂಚೈಸಿಗಳ ಗಮನ ಸೆಳೆಯುವ ಸಾಧ್ಯತೆಗಳಿವೆ. ಕಳೆದ ಬಾರಿ ಕರೋನವೈರಸ್ ಭೀತಿಯಿಂದ 13ನೇ ಐಪಿಎಲ್ ಟೂರ್ನಿಯನ್ನು ವಿದೇಶದಲ್ಲಿ ನಡೆಸಲಾಗಿತ್ತು, ಆದರೆ ಇದೀಗ ಏಪ್ರಿಲ್ ಎರಡನೇ ವಾರದಿಂದ ಭಾರತದಲ್ಲಿ ಟೂರ್ನಿ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ.
ಕ್ರೀಡೆ
ಗ್ರಾಮೀಣ ಕ್ರೀಡಾ ಪಟು ಕರ್ನಾಟಕ ಕಬ್ಬಡಿ ಲೀಗ್ ಪಂದ್ಯಾವಳಿಗೆ ಆಯ್ಕೆ
ಬಾಗೇಪಲ್ಲಿ: ಒಂದು ಕಾಲದಲ್ಲಿ ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇವತ್ತು ಕ್ರಿಕೆಟ್‌ಗೆ ಸಮನಾಗಿ ಜನಪ್ರಿಯತೆ ಗಳಿಸಿದೆ. ಆದ್ದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳು ಹೆಚ್ಚೆಚ್ಚು ಕಬಡ್ಡಿಯಲ್ಲಿ ತೊಡಗಿಸಿಕೊಂಡು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳವಳ್ಳಿ ಬಾಗೇಪಲ್ಲಿ ಆಂದ್ರಪ್ರದೇಶದ ಗಡಿಭಾಗದ 6 ನೇ ವಾರ್ಡ್ ಬಾಲಾಜಿಯವರು ಯಶಸ್ವಿಯಾಗಿದ್ದಾರೆ. ಪಟ್ಟಣದ ಬ್ಲೂಮ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜುವತಿಯಿಂದ ಆಯ್ಕೆ ಯಾಗಿದ್ದಾನೆ.
ಬಾಗೇಪಲ್ಲಿ ತಾಲ್ಲೂಕು ಬರಗಾಲದ ಬಂಜರ ಭೂಮಿಯಾದರು ಆದರೆ ಇಲ್ಲಿ ತಾಲ್ಲೂಕಿನಲ್ಲಿ ಪ್ರತಿಭೆಗಳಿಗೆ ಕೊರತೆಯೇ ಇಲ್ಲ ಎನ್ನುವುದಕ್ಕೆ ನಿದರ್ಶನ.
ಆಲ್ ರೌಂಡರ್ ಕಬ್ಬಡಿ ಕ್ರೀಡಾ ಪಟು ಬಾಲಾಜಿ ಸುಮಾರು ಎಂಟು ವರ್ಷಗಳಿಂದ ಕಬ್ಬಡಿ ಅಭ್ಯಾಸದಲ್ಲಿ ತೊಡಗಿದ್ದು ತಾಲ್ಲೂಕು, ಜಿಲ್ಲಾ, ಅಂತರ್ ಜಿಲ್ಲೆಯಲ್ಲಿ ಕಬ್ಬಡಿ ಆಟವಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಡತನದಲ್ಲಿ ಕುಟುಂಬ ಇದ್ದು ಈ ಪ್ರತಿಭೆ ಪ್ರೋತ್ಸಾಹಿಸಲು ಹಾಗೂ ಪ್ರತಿಭೆಯನ್ನು ಗುರುತಿಸಿ ಮುನ್ನಡೆಸಲು ದಾನಿಗಳ ಅಗತ್ಯ ವಿದೆ. ಇಂತಹ ಕಬ್ಬಡಿ ಕ್ರೀಡಾ ಪಟು ರಾಜ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಬರಲು ಬಾಗೇಪಲ್ಲಿ ಜನತೆ ಹಾಗೂ ನರೇಶ್ ಮತ್ತು ಸ್ನೇಹಿತ ಬಳಗದಿಂದ ಶುಭ ಕೋರಿದ್ದಾರೆ.
ಕ್ರೀಡೆ
ಹೃದಯಾಘಾತದಿಂದ ಆಸ್ಪತ್ರೆಗೆ ಸೇರಿದ ದಾದಾ
ಕೊಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಹೃದಯಾಘಾತ ಉಂಟಾಗಿರುವ ಹಿನ್ನೆಲೆಯಲ್ಲಿ ಅವರನ್ನ ಕೊಲ್ಕತ್ತಾದ ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಗೂಲಿ ಅವರಿಗೆ ಲಘು ಹೃದಯಾಘಾತವಾಗಿದೆ ಎಂದು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಸಂಜೆ ವೇಳೆಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇಂದು ಜಿಮ್ನಲ್ಲಿದ್ದಾಗ ಗಂಗೂಲಿಗೆ ತಲೆಸುತ್ತು ಬಂದಿದೆ. ಕೂಡಲೇ ಅವರು ವುಡ್ಲ್ಯಾಂಡ್ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ಅವರಿಗೆ ಹೃದಯ ಸಮಸ್ಯೆ ಇರೋದು ಗೊತ್ತಾಗಿದೆ. ಸದ್ಯ ಆಸ್ಪತ್ರೆ ಡಾ.ಸರೋಜ್ ಮೊಂಡಲ್ ಅವರ ಜೊತೆ ಮೂವರು ಸದಸ್ಯರ ಬೋರ್ಡ್ ರಚಿಸಿದ್ದು, ಅವರು ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಯನ್ನ ನಡೆಸಲಿದ್ದಾರೆ ಎಂದು ವರದಿಯಾಗಿದೆ.