ರಾಜ್ಯ
ನೂತನವಾಗಿ ಪಿಎಸೈ ಹುದ್ದೆಗೆ ಆಯ್ಕೆಯಾದವರಿಗೆ ಸನ್ಮಾನ
ಬನ್ನಹಟ್ಟಿ: ನಗರದ ನಿವಾಸಿಯಾದ ಶ್ರೀಮತಿ ಸುಜಾತಾ ಕಾಡಪ್ಪ ಪಾಟೀಲ ನೂತನವಾಗಿ ಪಿಎಸೈ ಹುದ್ದೆಗೆ ಆಯ್ಕೆಯಾಗಿದಕ್ಕೆ ಊರಿನ ಗಣ್ಯರ ವತಿಯಿಂದ ಸನ್ಮಾನಿಸಲಾಗಿದೆ.
ಮೂಲತಃ ರೈತ ಕುಟುಂಬ ವರ್ಗಕ್ಕೆ ಸೇರಿದವರಾಗಿದ್ದು. ಇವರ ಪತಿ ರವಿ ಅಥಣಿಯವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಧನೆ ಕಂಡು ಇಡಿ ನಗರವೇ ಹೆಮ್ಮೆ ಪಡೆಯುತ್ತಿದ್ದು. ಈ ಸಂದರ್ಭದಲ್ಲಿ ನಗರದ ಮುಖಂಡರಾದ ಆರ್.ಕೆ.ಪಾಟೀಲ, ಜೆ.ಆರ್.ಹಂದಿಗುಂದ, ಡಿ.ಆರ್.ಪಾಟೀಲ, ಬಿ.ಎನ್.ಪಾಟೀಲ, ಬಿ.ಕೆ.ಪಾಟೀಲ್ ಹ, ಬಿ.ಡಿ. ಪಾಟೀಲ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ವರದಿ : ದೇವು ಕೂಚಬಾಳ
ರಾಜ್ಯ
ಜನಪ್ರಿಯ ಪ್ರವಾಸಿ ತಾಣವಾದ ನಂದಿ ಗಿರಿಧಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ
ಚಿಕ್ಕಬಳ್ಳಾಪುರ : ಜನಪ್ರಿಯ ಪ್ರವಾಸಿ ತಾಣವಾದ ನಂದಿ ಗಿರಿಧಾಮಕ್ಕೆ ಅಧಿಕಾರಿಗಳೊಂದಿಗೆ ಮಾನ್ಯ ಸ್ಥಳೀಯ ಶಾಸಕರು ಹಾಗೂ ಆರೋಗ್ಯ ಸಚಿವರಾದ ಕೆ. ಸುಧಾಕರ್ ರವರು ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೊಳಿಸುವ ಕುರಿತಂತೆ ಚರ್ಚಿಸಿದರು. ಇತಿಹಾಸ ಪ್ರಿಯರಿಗೆ ಕೌತುಕವಾದ, ನಿಸರ್ಗ ಪ್ರಿಯರಿಗೆ ರಮಣೀಯವಾದ ಹಾಗೂ ಚಾರಣಿರಿಗೆ ರೋಮಾಂಚನಕಾರಿಯಾದ ನಂದಿ ಬೆಟ್ಟ ವರ್ಷದುದ್ದಕ್ಕೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಯೋಜನೆ ರೂಪಿಸಿದ್ದು ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ. ಇದರ ಜೊತೆಗೆ ಎಕೋ-ಟೂರಿಸಂ, ಸುತ್ತಮುತ್ತಲಿನ 5 ಬೆಟ್ಟಗಳಿಗೆ ಚಾರಣ ದಾರಿಗಳು, ಪುರಾತತ್ವ ಸ್ಮಾರಕಗಳು, ನೆಲ್ಲಿಕಾಯಿ ಬಸವಣ್ಣ ಮತ್ತು ಮಂಟಪಗಳು ಸಂರಕ್ಷಣೆ, ಸುಂದರೀಕರಣ ಸೇರಿದಂತೆ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ರಾಜ್ಯ
ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ
ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಎಬಿವಿಪಿ ಆಗ್ರಹ
ತಾಳಿಕೋಟಿ : ಶಿಕ್ಷಣ ಕ್ಷೇತ್ರದಲ್ಲಿ ಇಡಿ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ ಎಂದು ಹೆಗ್ಗಳಿಕೆಯನ್ನು ಹೊಂದಿದೆ..
ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ನ್ಯಾಯವಾಗಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳು ದೊರೆಯಲಿ ಎಂಬ ಉದ್ದೇಶದಿಂದ ಸಿಇಟಿ ಪರೀಕ್ಷೆಗಳನ್ನು ಜಾರಿ ಮಾಡುವಂತೆ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಿ ರಾಜ್ಯದಲ್ಲಿ ಸಿಇಟಿ ಪರೀಕ್ಷೆಗಳನ್ನು ಜಾರಿ ಮಾಡಿಸಿತ್ತು.
ಕರ್ನಾಟಕ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳ ಮೆಡಿಕಲ್ ಶಿಟ್ ಬ್ಲಾಕಿಂಗ ದಂಧೆಯನ್ನು ಸಾಕ್ಷಿ ಸಮೇತವಾಗಿ ಐಟಿ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ.
ಸೀಟುಗಳ ಮಾರಾಟದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವ ಜೊತೆಗೆ ಆದಾಯ ತೆರಿಗೆಯ ಕಾಯ್ದೆಯು ಕೂಡಾ ಇಲ್ಲಿ ಉಲ್ಲಂಘನೆ ಆಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವೈದ್ಯಕೀಯ ಸೀಟುಗಳ ಬ್ಲಾಕಿಂಗ ದಂಧೆಯಲ್ಲಿ ತೊಡಗಿದವರ ವಿರುದ್ಧ ಸರ್ಕಾರ ಯಾವುದೆ ಒತ್ತಡಗಳಿಗೆ ಮಣಿಯದೆ ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸುತ್ತದೆ.. ಎಂದು ಪತ್ರಿಕಾ ಗೋಷ್ಠಿಯಲ್ಲಿ ABVP ಕಾರ್ಯಕರ್ತರು ತಿಳಿಸಿದರು.
ವರದಿ :- ದೇವು ಕೂಚಬಾಳ ತಾಳಿಕೋಟೆ
ರಾಜ್ಯ
6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಸಿದ್ಧತೆ
ಸಿಂದಗಿ : ರಾಜ್ಯದ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶ ಪರೀಕ್ಷೆ ಸಿದ್ಧತೆಯನ್ನು ತಾಲೂಕಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೋಣೆಗಳನ್ನು ಸ್ಯಾನಿಟೈಸರ್ ಮಾಡುವ ಮೂಲಕ ಕೋವಿಡ್-19 ರ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳಲಾಯಿತು. ಪರೀಕ್ಷೆಯ ಅಧೀಕ್ಷರಾದ ಶ್ರೀ ಎನ್ ಆರ್ ಗಂಗನಹಳ್ಳಿ ಪ್ರಾಂಶುಪಾಲರು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸಿಂದಗಿ ಅವರ ನೇತೃತ್ವದಲ್ಲಿ ಪರೀಕ್ಷೆ ಸಿದ್ಧತೆ ನಡೆಯಿತು. ಈ ಕಾಯ೯ದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಪಾಲ್ಗೊಂಡಿದ್ದರು.
ದಿನಾಂಕ 24-02-2021ರ ಮಧ್ಯಾಹ್ನ 2:30 ರಿಂದ 4:30 ರವರೆಗೆ ನಡೆಯುವ ವಸತಿ ಶಾಲೆಗಳ ಪ್ರವೇಶ ಪೂವ೯ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಕೊಂಡು ಸರಿಯಾದ ಸಮಯಕ್ಕೆ ಹಾಜರಿರಬೇಕು ಹಾಗೂ ಯಾವುದೇ ಇಲೆಕ್ಟ್ರಿಕಲ್ ಸಾಧನಗಳಾದ ಮೊಬೈಲ್, ಕ್ಯಾಲ್ಕುಲೇಟರ್, ಕೈ ಗಡಿಯಾರ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪರೀಕ್ಷಾ ಅಧೀಕ್ಷರು ತಿಳಿಸಿದರು.
ವರದಿ :- ರಾಘವೇಂದ್ರ ಭಜಂತ್ರಿ