ರಾಜ್ಯ
6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಸಿದ್ಧತೆ
ಸಿಂದಗಿ : ರಾಜ್ಯದ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶ ಪರೀಕ್ಷೆ ಸಿದ್ಧತೆಯನ್ನು ತಾಲೂಕಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೋಣೆಗಳನ್ನು ಸ್ಯಾನಿಟೈಸರ್ ಮಾಡುವ ಮೂಲಕ ಕೋವಿಡ್-19 ರ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳಲಾಯಿತು. ಪರೀಕ್ಷೆಯ ಅಧೀಕ್ಷರಾದ ಶ್ರೀ ಎನ್ ಆರ್ ಗಂಗನಹಳ್ಳಿ ಪ್ರಾಂಶುಪಾಲರು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸಿಂದಗಿ ಅವರ ನೇತೃತ್ವದಲ್ಲಿ ಪರೀಕ್ಷೆ ಸಿದ್ಧತೆ ನಡೆಯಿತು. ಈ ಕಾಯ೯ದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಪಾಲ್ಗೊಂಡಿದ್ದರು.
ದಿನಾಂಕ 24-02-2021ರ ಮಧ್ಯಾಹ್ನ 2:30 ರಿಂದ 4:30 ರವರೆಗೆ ನಡೆಯುವ ವಸತಿ ಶಾಲೆಗಳ ಪ್ರವೇಶ ಪೂವ೯ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಕೊಂಡು ಸರಿಯಾದ ಸಮಯಕ್ಕೆ ಹಾಜರಿರಬೇಕು ಹಾಗೂ ಯಾವುದೇ ಇಲೆಕ್ಟ್ರಿಕಲ್ ಸಾಧನಗಳಾದ ಮೊಬೈಲ್, ಕ್ಯಾಲ್ಕುಲೇಟರ್, ಕೈ ಗಡಿಯಾರ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪರೀಕ್ಷಾ ಅಧೀಕ್ಷರು ತಿಳಿಸಿದರು.
ವರದಿ :- ರಾಘವೇಂದ್ರ ಭಜಂತ್ರಿ
ರಾಜ್ಯ
“ಸಾವಯವ ಕೃಷಿ ಪ್ರಗತಿ ಪರಿಶೀಲನಾ ಸಭೆ” : ಬಿ.ಸಿ ಪಾಟೀಲ್
ಬೆಂಗಳೂರು : ವಿಕಾಸಸೌಧದ ಬಿ.ಸಿ ಪಾಟೀಲ್ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ “ಸಾವಯವ ಕೃಷಿ ಪ್ರಗತಿ ಪರಿಶೀಲನಾ ಸಭೆ” ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಜಕುಮಾರ್ ಖತ್ರಿ, ಸಾವಯವ ಕೃಷಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿ ಅಧ್ಯಕ್ಷರಾದ ಶ್ರೀ ಆನಂದ್ ಉಪ್ಪಳ್ಳಿ, ಕೃಷಿ ನಿರ್ದೇಶಕರಾದ ಶ್ರೀ ಶ್ರೀನಿವಾಸ್, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವರಾಜ್, ಸಮಿತಿ ಪದಾಧಿಕಾರಿಗಳು ಹಾಗೂ ಇತರೆ ಸದಸ್ಯರು ಪಾಲ್ಗೊಂಡಿದ್ದರು.
ರಾಜ್ಯ
ಮಸ್ಕಿ | 5 ಎ ಹೋರಾಟದ ರೈತರಿಗೆ ಬಲ ತುಂಬಿದ ಮಾಜಿ ಸಚಿವ ಹನುಮಂತಪ್ಪ ಆಲ್ಕೊಡ್
ಮಸ್ಕಿ.ಜ.19. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ೫ಎ ರೈತರ ಹೋರಾಟಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಭೇಟಿ ನೀಡಿದ ಮಾಜಿ ಸಚಿವ ಹನುಮಂತಪ್ಪ ಆಲ್ಕೊಡ, ರೈತರಿಗೆ ಆತ್ಮ ವಿಶ್ವಾಸ ತುಂಬಿ ನಿಮ್ಮ ಹೋರಾಟ ನಿರಂತರವಾಗಿ ಇರಲಿ ,ನೀರು ಬರುವವರೆಗೂ ಧರಣಿ ಸ್ಥಳ ದಿಂದ ಕಾಲ್ಕಿತ್ತ ದಂತೆ, ಯಾರ್ ಏನೆ ಆಸೆ ಆಮಿಷ ತೋರಿಸಿದರು ಅದಕ್ಕೆ ಜಗ್ಗದೆ ಕುಗ್ಗದೆ ಎಲ್ಲಾ ರೈತರು ಒಗ್ಗಟ್ಟಾಗಿ ಹೋರಾಟ ಮುಂದುವರಿಸಿ ನಾವು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ವಿಶ್ವಾಸ ಮಾತುಗಳನ್ನು ಆಡಿ ರೈತರನ್ನು ಹುರಿದುಂಬಿಸಿದರು.
ನಿರಂತರವಾಗಿ ಕಳೆದ ಎರಡು ತಿಂಗಳಿನಿಂದ ಧರಣಿ ನಡೆಯುತ್ತಿದ್ದರೂ ನಮ್ಮ ಭಾಗದ ಜನಪ್ರತಿನಿಧಿಗಳು ಇಚ್ಛಶಕ್ತಿ ಕೊರತೆ ಇದೆ. ಅದಕ್ಕಾಗಿ ನಮ್ಮ ಜಿಲ್ಲಾ ಆಡಳಿತ ಅಂಗವೈಯ್ಕ ಅನುಭವಿಸುತ್ತಿದೆ, ಅದಕ್ಕಾಗಿ ನಮ್ಮ ಭಾಗದ ಪ್ರಗತಿ ಕುಂಠಿತ ಆಗಿದೆ. ಅದಕ್ಕಾಗಿ ಶುರಣ ಕೈಯಲ್ಲಿನ ಖತ್ತಿ ಹರಿತವಾದಷ್ಟು ನಿಮ್ಮ ಮತಗಳಿಗೆ ಆಶಕ್ತಿ ಹೊಂದಿದೆ. ಅದಕ್ಕಾಗಿ ರೈತರು ನೀವು ಮತ ಹಾಕುವ ಮುನ್ನ ಯೋಚಿಸಿ ನಿರ್ಧರಿಸಿ ಮತ ಹಾಕುವ ಕೆಲಸ ನಿಮ್ಮಿಂದಾಗಬೇಕು ಎಂದು ಹೇಳಿದರು.
ಇಂದಿನ ದಿನಮಾನಗಳಲ್ಲಿ ರಾಜಕೀಯ ತುಂಬಾ ದುಸ್ಥಿತಿಗೆ ಬಂದು ತಲುಪಿದೆ. ಅದಕ್ಕೆ ಕಾರಣ ಒಂದು ಆಯಾಮದಲ್ಲಿ ನೋಡಿದರೆ ಮತದಾರರೇ ಕಾರಣೀಭೂತರು, ನೀವು ಹಣ ಪಡೆದು ಮತ ಹಾಕುವ ಚಾಳಿ ಬಿಡುವವರೆಗು ನಿಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹಣ ಲೂಟಿ ಮಾಡುವದನ್ನು ಬಿಡುವುದಿಲ್ಲ ಕಾರಣ ಅವರು ನಿಮಾಕೆ ನಾಲ್ಕಾಣೆ ಕೊಟ್ಟು ಎರಡು ಸಾವಿರದಷ್ಟು ಹೊಡೆಯುತ್ತಾರೆ ಅದಕ್ಕಾಗಿ ನೀವು ಮತಬಾಂದವರು ಎಚ್ಚರವಹಿಸಿ ಹಣ ಮುಕ್ತ ಚುನಾವಣೆ ಮಾಡಿ ಆಗ ಸಂವಿಧಾನ ಕ್ಕೇ ಒಂದು ಅರ್ಥ ಇರುತ್ತದೆ ಎಂದು ಹೇಳಿದರು.
ಅವರ ಪ್ರತಿ ಮಾತುಗಳು ರೈತರಿಗೆ ಸ್ಪೂರ್ತಿ ದಾಯಕವಾಗಿದ್ದು, ಇನ್ನಷ್ಟು ಬಲವಾಗಿ ಹೋರಾಟ ಮಾಡಲು ಅನುವು ಮಾಡುವಂತೆ ಇದ್ದು ಇದರಿಂದ ರೈತ ಹೋರಾಟಗಾರರ ವಿಶ್ವಾಸ ಇಮ್ಮಡಿಗೊಳಿಸಿದೆ. ಸಾವಿರಾರು ಸಂಖ್ಯೆಯ ರೈತರು ಜಯಘೋಷ ಹಾಕಿ ಪಕ್ಕಾ ಹಳ್ಳಿ ಸೊಗಡಿನ ಶೈಲಿಯಲ್ಲಿ ಭಾಷಣ ಮಾಡಿ ರೈತರ ಮನಗೆದ್ದರು.
ಈ ಸಂದರ್ಭದಲ್ಲಿ ಶ್ರೀ ಬಸವ ಪ್ರಸಾದ ಸ್ವಾಮಿಗಳು ಶಿವಶಕ್ತಿ ಪೀಠ ಇರಕಲ್ ಮಠ, ಆನಂದಗಲ್‌ನ ಶ್ರೀ ಗುಂಡಪ್ಪ ಅಜ್ಜ, ಹೋರಾಟ ಸಮಿತಿಯ ಗೌರವ ಅಧ್ಯಕ್ಷ ತಿಮ್ಮನ ಗೌಡ ಚಿಲ್ಕ್ ರಾಗಿ, ಅಧ್ಯಕ್ಷ ಬಸವರಾಜಪ್ಪ ಗೌಡ ಹಾರ್ವಾಪುರ, ಹಾಗೂ ಅನೇಕ ಹೋರಾಟಗಾರರು ಭಾಗವಹಿಸಿದರು.
ವರದಿ: ದುರ್ಗೇಶ್ ಬೋವಿ ಮಸ್ಕಿ
ರಾಜ್ಯ
ಜನವರಿ ಒಂದರಿಂದ ಶಾಲೆ ಆರಂಭ : ವೇಳಾಪಟ್ಟಿ ಪ್ರಕಟ
ಬೆಂಗಳೂರು: ಜನವರಿ 1 ರಿಂದ ಶಾಲೆ ಆರಂಭದ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಾಲೆ ಆರಂಭಕ್ಕೆ ಮೂರು ದಿನ ಮೊದಲು ಸಿಬ್ಬಂದಿ, ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನೆಗೆಟಿವ್ ಕಡ್ಡಾಯವಾಗಿರುತ್ತದೆ. 10 ನೇ ತರಗತಿಗೆ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ವಾರದಲ್ಲಿ 6 ದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 30 ರವರೆಗೆ ತಲಾ 45 ನಿಮಿಷಗಳ ಮೂರು ಪಿರಿಯಡ್ ಗಳಲ್ಲಿ ಬೋಧನೆ ಮಾಡಲಾಗುತ್ತದೆ. ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿ ಪಾಠ ಮಾಡಲಾಗುವುದು.