Connect with us
Ad Widget

ಕ್ರೀಡೆ

ತಾಳಿಕೋಟಿ ಪ್ರೀಮಿಯರ್ ಲೀಗ್ ಗೆ ಶಾಂತಗೌಡ ಪಾಟೀಲ್ (ನಡಹಳ್ಳಿ ) ಚಾಲನೆ

Published

on

ತಾಳಿಕೋಟಿ : ಪಟ್ಟಣದ ಎಸ್ ಕೆ ಮೈದಾನದಲ್ಲಿ ಶ್ರೀ ಖಾಸ್ಗತೇಶ್ವರ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ ತಾಳಿಕೋಟಿ ಪ್ರೀಮಿಯರ್ ಲೀಗ್ ಗೆ ಸಸ್ಯಗಳಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು .ಈ ಸಂದರ್ಭದಲ್ಲಿ ಶಾಸಕ ಎ ಎಸ್ ಪಾಟೀಲ್  ನಡಹಳ್ಳಿ ಸಹೋದರ ಶಾಂತಗೌಡ ಪಾಟೀಲ್ ಮಾತನಾಡಿದರು ಕ್ರೀಡೆ ಆಡುವುದರಿಂದ ಬಹಳಷ್ಟು ಲಾಭವಿದೆ ಮಾನಸಿಕ ಮತ್ತು ದೈಹಿಕ     ಆರೋಗ್ಯಕರವಾಗುತ್ತದೆ ಇನ್ನೂ ನಮ್ಮಲ್ಲಿ ಕ್ರೀಡೆಗಳು ಬಹಳಷ್ಟು ಬೆಳೆಯಬೇಕು ಕೇವಲ ಕ್ರಿಕೆಟ್ ಆಡಿದರೆ ಅಷ್ಟೇ ಅಲ್ಲ ನಮ್ಮ ಆಟಗಳು ಅದು ಕಬ್ಬಡ್ಡಿ ಆಗಿರಬಹುದು ಕೋಕೋ  ವಾಲಿಬಾಲ್  ಇಂಥ ಆಟಗಳಿಗೆ ಪ್ರೋತ್ಸಾಹ ನೀಡಬೇಕು  ತಾಳಿಕೋಟಿ ಪ್ರೀಮಿಯರ್ ಲೀಗ್ ಒಳ್ಳೆಯ ಕೆಲಸ ಮಾಡುತ್ತಿದೆ ಹಳ್ಳಿಗಳಲ್ಲಿ ಅಡಗಿದ ಪ್ರತಿಭೆಗಳನ್ನು ಹೊರಗಡೆ ತರುವಂತ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಡಿವೈಎಸ್ಪಿ ಈ ಶಾಂತವೀರ  ಹೇಳಿದರು ನಿಮ್ಮಲ್ಲಿ ಸಮಯವಿದ್ದರೆ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಒಂದೆರಡು ಗಂಟೆ ಅವರ ಜೊತೆ ಆಟ ಆಡಿ ಅವರಿಗೆ ಕಲಿಸಿದರೆ ಬಹಳ ಒಳ್ಳೆಯದಾಗುತ್ತದೆ ಎಂದು ಹೇಳಿದರು 

 ಈ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯ ಶ್ರೀ ಸಿದ್ದಲಿಂಗದೇವರು  ಖಾಸ್ಗತೇಶ್ವರ ಮಠ ತಾಳಿಕೋಟಿ  ಮುಖ್ಯ ಅತಿಥಿಗಳು ಶ್ರೀ ಎಸ್ ಎ ಸರೂರ್ ಜರ್ಮನರು ವಿವಿಧ ಸಂಘ  ಅಧ್ಯಕ್ಷತೆ ಶ್ರೀ ಚಿದಂಬರ ದೀಕ್ಷಿತ್ ಖಾಸ್ಗತೇಶ್ವರ ಸ್ಪೋರ್ಟ್ಸ್ ಅಸೋಸಿಯೇಷನ್  ವಿಶೇಷ ಆಮಂತ್ರಿತರಾಗಿ ಆಗಮಿಸಿದ ಶಂಕರ್ ಸಜ್ಜನ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಮತ್ತು ಶ್ರೀ ಸಂಜೀವ ಹಜೇರಿ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರರು ಮತ್ತು ಶ್ರೀ ಗಂಗೂ ಜಿ ಬಿರಾದರ್ ಅಂತಾರಾಷ್ಟ್ರೀಯ ಸೈಕ್ಲಿಸ್ಟ್ ಮತ್ತು ತಾಳಿಕೋಟೆ ಠಾಣೆಯ ಪಿಎಸ್ಸೈ  ಮತ್ತು ಈ ಶಾಂತವೀರ್ ಡಿವೈಎಸ್ಪಿ ಕ್ರಿಕೆಟ್ ಆಟಗಾರರು ತಾಳಿಕೋಟೆ ಠಾಣೆ ಪಿಎಸ್ಸೈ ಶಿವಾಜಿ ಪವಾರ್ ಬಸನಗೌಡ ವಣಕಿಹಾಳ ಜಿಲ್ಲಾ ಪಂಚಾಯಿತಿ ಸದಸ್ಯರು ಸಂಗಮೇಶ್ ಇಂಗಳಗೇರಿ ಪುರಸಭೆ ಅಧ್ಯಕ್ಷರು ಮುಸ್ತಫಾ ಚೌದ್ರಿ ಪುರಸಭೆ ಉಪಾಧ್ಯಕ್ಷರು ತಾಳಿಕೋಟಿ ಜೈಸಿಂಗ್ ಮೂಲಿಮನಿ ಪುರಸಭೆ ಸದಸ್ಯರು  ಮತ್ತು ಕ್ರೀಡಾ ಪುಟಗಳು ಮತ್ತು ಕ್ರೀಡಾಭಿಮಾನಿಗಳು ಹಾಜರಿದ್ದರು.

ವರದಿ : ದೇವು ಕುಚಬಾಳ

Continue Reading
Advertisement
Click to comment

Leave a Reply

Your email address will not be published. Required fields are marked *

ಕ್ರೀಡೆ

ಐಪಿಎಲ್ ಆಟಗಾರರ ಹರಾಜು

Published

on

14ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯು ಇಂದು ನಡೆಯಲಿದೆ. ಈ ಹರಾಜು ಪ್ರಕ್ರಿಯೆಗೆ 292 ಆಟಗಾರರು ಹೆಸರು ಅಂತಿಮಗೊಳಿಸಿದ್ದು, ಈ ಪೈಕಿ 164 ಭಾರತೀಯ ಕ್ರಿಕೆಟಿಗರು ಹಾಗೂ 128 ಮಂದಿ ವಿದೇಶಿ ಆಟಗಾರರಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಮ್ಯಾಕ್ಸ್ವೆಲ್, ಇಂಗ್ಲೆಂಡ್ ನ ಆಲ್-ರೌಂಡರ್ ಮೋಹಿನ್ ಅಲಿ ಫ್ರಾಂಚೈಸಿಗಳ ಗಮನ ಸೆಳೆಯುವ ಸಾಧ್ಯತೆಗಳಿವೆ. ಕಳೆದ ಬಾರಿ ಕರೋನವೈರಸ್ ಭೀತಿಯಿಂದ 13ನೇ ಐಪಿಎಲ್ ಟೂರ್ನಿಯನ್ನು ವಿದೇಶದಲ್ಲಿ ನಡೆಸಲಾಗಿತ್ತು, ಆದರೆ ಇದೀಗ ಏಪ್ರಿಲ್ ಎರಡನೇ ವಾರದಿಂದ ಭಾರತದಲ್ಲಿ ಟೂರ್ನಿ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ.

Continue Reading

ಕ್ರೀಡೆ

ಕನ್ನಡಿಗ ಜಾವಗಲ್ ಶ್ರೀನಾಥ್ ದಾಖಲೆಯನ್ನು ಮುರಿದ ಬೂಮ್ರಾ

Published

on

ಚೆನ್ನೈ: ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶಿಷ್ಟ ದಾಖಲೆ ಬರೆದರು. ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 17 ಪಂದ್ಯಗಳ ಬಳಿಕ ತವರಿನಲ್ಲಿ ಆಡಿದರು. ಬುಮ್ರಾ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ 17 ಟೆಸ್ಟ್ ಪಂದ್ಯಗಳಿಂದ 79 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮೊದಲು ಕನ್ನಡಿಗ ಜಾವಗಲ್ ಶ್ರೀನಾಥ್ 12 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಆಡಿದ್ದರು. ಇದೀಗ ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಹೆಸರಿನಲ್ಲಿದ್ದ ದಾಖಲೆಯನ್ನು ಬುಮ್ರಾ ಹಿಂದಿಕ್ಕಿದರು.

Continue Reading

ಕ್ರೀಡೆ

ಗ್ರಾಮೀಣ ಕ್ರೀಡಾ ಪಟು ಕರ್ನಾಟಕ ಕಬ್ಬಡಿ ಲೀಗ್ ಪಂದ್ಯಾವಳಿಗೆ ಆಯ್ಕೆ

Published

on

ಬಾಗೇಪಲ್ಲಿ: ಒಂದು ಕಾಲದಲ್ಲಿ ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇವತ್ತು ಕ್ರಿಕೆಟ್‌ಗೆ ಸಮನಾಗಿ ಜನಪ್ರಿಯತೆ ಗಳಿಸಿದೆ. ಆದ್ದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳು ಹೆಚ್ಚೆಚ್ಚು ಕಬಡ್ಡಿಯಲ್ಲಿ ತೊಡಗಿಸಿಕೊಂಡು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳವಳ್ಳಿ ಬಾಗೇಪಲ್ಲಿ ಆಂದ್ರಪ್ರದೇಶದ ಗಡಿಭಾಗದ 6 ನೇ ವಾರ್ಡ್ ಬಾಲಾಜಿಯವರು ಯಶಸ್ವಿಯಾಗಿದ್ದಾರೆ. ಪಟ್ಟಣದ ಬ್ಲೂಮ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜುವತಿಯಿಂದ ಆಯ್ಕೆ ಯಾಗಿದ್ದಾನೆ.

ಬಾಗೇಪಲ್ಲಿ ತಾಲ್ಲೂಕು ಬರಗಾಲದ ಬಂಜರ ಭೂಮಿಯಾದರು ಆದರೆ ಇಲ್ಲಿ ತಾಲ್ಲೂಕಿನಲ್ಲಿ ಪ್ರತಿಭೆಗಳಿಗೆ ಕೊರತೆಯೇ ಇಲ್ಲ ಎನ್ನುವುದಕ್ಕೆ ನಿದರ್ಶನ.
ಆಲ್ ರೌಂಡರ್ ಕಬ್ಬಡಿ ಕ್ರೀಡಾ ಪಟು ಬಾಲಾಜಿ ಸುಮಾರು ಎಂಟು ವರ್ಷಗಳಿಂದ ಕಬ್ಬಡಿ ಅಭ್ಯಾಸದಲ್ಲಿ ತೊಡಗಿದ್ದು ತಾಲ್ಲೂಕು, ಜಿಲ್ಲಾ, ಅಂತರ್ ಜಿಲ್ಲೆಯಲ್ಲಿ ಕಬ್ಬಡಿ ಆಟವಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಡತನದಲ್ಲಿ ಕುಟುಂಬ ಇದ್ದು ಈ ಪ್ರತಿಭೆ ಪ್ರೋತ್ಸಾಹಿಸಲು ಹಾಗೂ ಪ್ರತಿಭೆಯನ್ನು ಗುರುತಿಸಿ ಮುನ್ನಡೆಸಲು ದಾನಿಗಳ ಅಗತ್ಯ ವಿದೆ. ಇಂತಹ ಕಬ್ಬಡಿ ಕ್ರೀಡಾ ಪಟು ರಾಜ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಬರಲು ಬಾಗೇಪಲ್ಲಿ ಜನತೆ ಹಾಗೂ ನರೇಶ್ ಮತ್ತು ಸ್ನೇಹಿತ ಬಳಗದಿಂದ ಶುಭ ಕೋರಿದ್ದಾರೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್