ಸುದ್ದಿ
ರಸ್ತೆ ವಿಭಾಜಕ ಎಂಬ ಯಮರೂಪಿ
ಬಾಗೇಪಲ್ಲಿ: ಪಟ್ಟಣದ ಮುಖ್ಯ ರಸ್ತೆಯಲ್ಲಿನ ವಿಭಾಜಕವು ಯಮರೂಪಿಯಾಗಿ ಮಾರ್ಪಟ್ಟಿದೆ. ರಸ್ತೆ ಕಾಮಗಾರಿ ಸಂಧರ್ಭದಲ್ಲಿ ರಸ್ತೆಯ ವಿಭಾಜಕದ ಗೋಡೆಗಳಿಗೆ ಅಳವಡಿಸಲಾದ ಕಾಂಕ್ರೀಟ್ ನಲ್ಲಿನ ಕಬ್ಬಿಣದ ಕಂಬಿಗಳನ್ನು ಹಾಗೇ ಮೇಲೆ ಬಿಟ್ಟಿದ್ದು, ವಾಹನ ಸವಾರರು ಯಾಮಾರಿದರೆ ಯಮ ಲೋಕ ಪಯಣ ನಡೆಸಬೇಕಾಗುತ್ತದೆ ಎನ್ನಲಾಗುತ್ತಿದೆ.
ಪಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಸ್ತೆ ವಿಭಾಜಕದ ಮೇಲಿನ ಸಸ್ಯಗಳ ನಾಟಿಯೂ ಇಲ್ಲವಾಗಿತ್ತು. ಈ ಕುರಿತು ನಮ್ಮ ಕುಸುಮವಾಣಿಯಲ್ಲಿ ಸುದ್ದಿ ಈ ಹಿಂದೆ ಪ್ರಕಟವಾಗಿತ್ತು. ಇತ್ತೀಚೆಗೆ ಸುದ್ದಿಯಿಂದ ಎಚ್ಚೆತ್ತುಕೊಂಡ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು, ಪುರಸಭೆಯವರು ಗಿಡಗಳನ್ನು ನೆಟ್ಟಿದ್ದಾರೆ.
ಆದರೆ ರಸ್ತೆ ವಿಭಾಜಕದ ಮೇಲಿನ ಕಂಬಿಗಳು ಹಾಗೇಯೆ ಬಿಟ್ಟಿದ್ದಾರೆ. ಕಾಮಗಾರಿ ನಡೆಸಿದ ಗುತ್ತಿಗೆದಾರನ ನಿರ್ಲಕ್ಷ್ಯ ಹಾಗೂ ಪುರಸಭೆಯ ಅಧಿಕಾರಿಗಳ ಬೇಜಾಬ್ದಾರಿಯಿಂದಾಗಿ ಕಳೆದ ರಾತ್ರಿ ಎಸ್ ಎಫ್ ಐ ನ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೀಶ್ ರವರು ಆಕಸ್ಮಿಕವಾಗಿ ಅಪಘಾತಕ್ಕೀಡಾಗಿ ಆ ರಸ್ತೆ ವಿಭಾಜಕದ ಕಂಬಿಗಳು ಕಾಲಿಗೆ ಚುಚ್ಚಿಕೊಂಡು ತೀವ್ರ ಗಾಯವಾಗಿದೆ.
ಈ ಕುರಿತು ಮಾತನಾಡಿದ ಅವರು ರಸ್ತೆ ವಿಭಾಜಕದ ಮೇಲಿನ ಕಂಬಿಗಳು ಅಕಸ್ಮಾತ್ ಕಾಲಿಗೆ ಚುಚ್ಚುವ ಬದಲು ಎದೆಯೋ ಅಥವಾ ತಲೆಗೊ ಚುಚ್ಚಿದ್ರೆ ಪ್ರಾಣಕ್ಕೆ ಗಂಡಾಂತರವಾಗುತ್ತಿತ್ತು. ಸಂಬಂಧಪಟ್ಟ ಇಲಾಖೆ, ಗುತ್ತಿಗೆದಾರರು ವಾಹನ ಸವಾರರ ಪ್ರಾಣದೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಈ ಯಮರೂಪಿ ಕಂಬಿಗಳನ್ನು ತೆಗೆಯುವ ಕೆಲಸ ಪುರಸಭೆಯ ಅಧಿಕಾರಿಗಳು ಜರೂರಾಗಿ ಮಾಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿ
ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ -ಶ್ರೀಮತಿ ಸುಕನ್ಯಾ ಕಳವಳ
ಬಾಗೇಪಲ್ಲಿ: ಅತಿಯಾಗಿ ಪ್ಲಾಸ್ಟಿಕ್ ಬಳಕೆಯಿಂದ ಮನುಕುಲದ ಭೂಮಿ ಮೇಲಿನ ಸಕಲ ಜೀವರಾಶಿಗೂ ಅಪಾಯವಾಗುತ್ತಿದೆ’ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಅರ್.ಎಂ.ಎಸ್.ಎ. ಡಿ ವೈ ಪಿ ಸಿ ಅಧಿಕಾರಿಗಳಾದ ಶ್ರೀಮತಿ ಸುಕನ್ಯಾ ರವರು ಆತಂಕ ವ್ಯಕ್ತಪಡಿಸಿದರು.
ಇಂದು ಕಸಬಾ ಹೋಬಳಿ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯ ಸುಂದರ ಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನದಡಿಲ್ಲಿ ಸುಂದರ ಕೈ ತೋಟ ನಿರ್ಮಿಸಿದ್ದು, ವೀಕ್ಷಣೆ ಮಾಡಿ ಉತ್ತಮವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿ, ‘ಮನುಷ್ಯನ ಜೀವನ ಶೈಲಿಯಿಂದ ಭೂಮಿ ಮೇಲಿನ ಎಲ್ಲಾ ಜೀವರಾಶಿಗಳಿಗೂ ಅಪಾಯವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಶಾಲಾ ಕಾಲೇಜು ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರೆ ಸಮಾಜವನ್ನು ಬದಲಾವಣೆ ತರಲು ಸಹಕಾರಿಯಾಗುತ್ತದೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರೆ ಶೇ 50ರಷ್ಟು ಪರಿಸರ ಮಾಲಿನ್ಯ ನಿಯಂತ್ರಿಸಬಹುದು’ ಎಂದು ಸಲಹೆ ನೀಡಿದರು.
ಕಾಡಿಗೆ ಬೆಂಕಿ ಹಚ್ಚುವುದು, ಮೋಜ ಮಸ್ತಿ ನೆಪದಲ್ಲಿ ಕಾಡು ನಾಶ ಮಾಡಿ ರೆಸಾರ್ಟ್ ನಿರ್ಮಾಣದಿಂದಾಗಿ ನೆಮ್ಮದಿಯಿಂದ ಜೀವಿಸುತ್ತಿದ್ದ ವನ್ಯಜೀವಿಗಳು ಆಹಾರ ಹುಡುಕುತ್ತಾ ನಾಡಿಗೆ ಬಂದು ಮನಷ್ಯನ ಕೈಯಲ್ಲಿ ಬಲಿಯಾಗುತ್ತಿವೆ’ ಎಂದು ವಿಷಾದಿಸಿದರು.
‘ಪರಿಸರ ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಸರ್ವನಾಶವಾಗಲಿದೆ. ಪರಿಸರ ರಕ್ಷಣೆ ಎಂದರೆ ನಮ್ಮ ರಕ್ಷಣೆ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪರಿಸರ ರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿ’ಎಂದು ಹೇಳಿದರು.
‘ಎಲ್ಲರೂ ಪ್ಲಾಸ್ಟಿಕ್ ಮಿತ ಬಳಕೆ ಅಭ್ಯಾಸ ಮಾಡಬೇಕು.ಶಾಲೆಯ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕಾದರೆ ಮೊದಲು ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಬೇಕು. ವಿಧ್ಯಾರ್ಥಿಗಳು ಮಾರುಕಟ್ಟೆಗೆ ಹೋಗುವಾಗ ಮರೆಯದೆ ಬಟ್ಟೆಯ ಅಥವಾ ಸೆಣಬಿನ ಕೈಚೀಲ ಕೊಂಡೊಯ್ಯಬೇಕು’ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ಮಾತನಾಡಿ
‘ಪ್ಲಾಸ್ಟಿಕ್ ಬಳಕೆ ನಿರ್ಬಂಧದ ಬಗ್ಗೆ ಭಾಷಣೆ ಮಾಡಿದರೆ ಸಾಲದು. ಮೊದಲು ನಾವು ಬದಲಾಗಿ ಇತರರಿಗೆ ಮಾದರಿಯಾಗಬೇಕು. ನಮ್ಮ ಶಾಲೆಯ ಸುಂದರ್ ಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಶಾಲೆ ಆವರಣದಲ್ಲಿ ವಿಜ್ಞಾನ ಶಿಕ್ಷಕ ಎಲ್.ರವಿ ರವರ ಮಾರ್ಗದರ್ಶನದಲ್ಲಿ ಕೈತೋಟ ನಿರ್ಮಿಸಲಾಗಿದೆ.
ಪರಿಸರದಲ್ಲಿ ನೀರು ಕುಡಿದು ಬಿಸಾಕಿರುವ ಬಾಟಲ್ ತಂದು ಕೈತೋಟಕ್ಕೆ ರಕ್ಷಣೆ ಗೋಡೆಯನ್ನು ನಿರ್ಮಿಸಿ ಬಹಳ ಸುಂದರವಾಗಿ ಕಾಣಿಸುತ್ತದೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಶಾಲೆ ಆವರಣದಲ್ಲಿ ಎಳೆ ಮತ್ತು ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಕೈತೋಟಕ್ಕೆ ಬಳಸಿದರೆ ಪರಿಸರ ಸಂರಕ್ಷಣೆಯ ಜತೆಗೆ ಆರ್ಥೀಕವಾಗಿ ಸಹಕಾರಿಯಾಗುತ್ತದೆ’ ಎಂದು ಹೇಳಿದರು.
ತಾಲ್ಲೂಕು ಕಸಬಾ ಇಸಿಓ ಆರ್.ಹನುಮಂತ ರೆಡ್ಡಿ ಮಾತನಾಡಿ ವೈಯಕ್ತಿಕ ಸ್ವಚ್ಚತೆಯೊಂದಿಗೆ ಪರಿಸರ ಸ್ವಚ್ಚತೆ,ಸಾತ್ವಿಕ ಆಹಾರ ಪದ್ದತಿ, ನೀರಿನ ಮಿತ ಬಳಿಕೆ, ಪರಿಸರ ಬಗ್ಗೆ ಪ್ರೀತಿ ಕಾಳಜಿಯೊಂದಿಗೆ ಪರಿಸರ ಸಂರಕ್ಷಣೆ ವಿವಿಧ ರೀತಿಯ ಮಾಲಿನ್ಯಗಳು ಅವುಗಳಿಂದ ಉಂಟಾಗುವ ದುಷ್ಪರಿಣಾಮಗಳು ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಮುಂದೆ ಹತ್ತು ನೇ ತರಗತಿಯಲ್ಲಿ ಓದಿ ಅತ್ಯುತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್. ಎನ್.ಸಂದ್ಯಾ,ಬಿರಾದಾರ ವಿಠ್ಠಲ ಚಂದ್ರ ಶಾ,ಶ್ರೀನಿವಾಸ್ ಎನ್.ಸಿ.ನಾರಾಯಣ ಸ್ವಾಮಿ, ಎಲ್. ರವಿ,ರಾಮಚಂದ್ರಪ್ಪ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ಸುದ್ದಿ
ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಶನಿವಾರ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ
ಬೆಳಗಾವಿ : ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಶನಿವಾರ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಭಿಮಾನಿಯ ಹೊಸ ಕಾರಿಗೆ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.
ಮೂಢನಂಬಿಕೆಯ ವಿರುದ್ಧ ನಾವು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದೇವೆ. ಅದರ ಒಂದು ಭಾಗವಾಗಿ ಸ್ಮಶಾನದಲ್ಲಿ ನೂತನ ಕಾರಿಗೆ ಚಾಲನೆ ನೀಡಲಾಗಿದೆ.
Politics
ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಮಾಜಿ ಶಾಸಕರಾದ ವೆಂಕಟೇಶ್, ಮಾಜಿ ಸಚಿವರಾದ ಡಾ. ಎಚ್.ಸಿ ಮಹಾದೇವಪ್ಪ, ಜಮೀರ್ ಅಹಮದ್ ಖಾನ್, ಶಾಸಕರಾದ ಧರ್ಮಸೇನ, ಡಾ. ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
-
Politics2 days ago
ಬಾಗೇಪಲ್ಲಿ ತಾಲ್ಲೂಕು ಶಾಸಕರಿಂದ ಉಚಿತ ಡಿಜಿಟಲ್ ಸೇವಾ ಕೇಂದ್ರಕ್ಕೆ ಚಾಲನೆ
-
Politics1 week ago
ಪುರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
-
ಸುದ್ದಿ3 weeks ago
ಗುರುಗಳಾಗಿ ಶ್ರೀ ಭೀಮಣ್ಣ ಕರ್ತವ್ಯಕ್ಕೆ ಹಾಜರಾದ ಸುಮಧುರ ಕ್ಷಣ
-
ಸುದ್ದಿ4 weeks ago
32 ನೇ ರಾಷ್ಟ್ರೀಯ ರಸ್ತೆ ಸುರಕ್ಷೆ ಜೀವ ಸುರಕ್ಷೆ ಹಾಗೂ ಸಂಚಾರ ನಿಯಮಗಳ ಪಾಲಿಸಿ