Politics
ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಮಾಜಿ ಶಾಸಕರಾದ ವೆಂಕಟೇಶ್, ಮಾಜಿ ಸಚಿವರಾದ ಡಾ. ಎಚ್.ಸಿ ಮಹಾದೇವಪ್ಪ, ಜಮೀರ್ ಅಹಮದ್ ಖಾನ್, ಶಾಸಕರಾದ ಧರ್ಮಸೇನ, ಡಾ. ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Politics
ಕಾಂಗ್ರೆಸ್ ಪಕ್ಷ ಮಸ್ಕಿ ವಿಧಾನಸಭಾ ಕ್ಷೇತ್ರದ ಗೌಡನಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆ
ಮಸ್ಕಿ .ಫೆ.21 :-ತಾಲೂಕಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ವಿಧಾನಸಭಾ ಕ್ಷೇತ್ರದ ಗೌಡನಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಸ್ಕಿ ವಿಧಾನಸಭಾ ಚುನಾವಣೆ ಅಭ್ಯರ್ಥಿ ಆರ್ ಬಸವನಗೌಡ ತುರುವಿಹಾಳ ರವರು ಮಾತನಾಡಿದರು ಯಡಿಯೂರಪ್ಪನವರ ಆಶೀರ್ವಾದದಿಂದ ಗೆದ್ದರು ಹೊರತು ಸ್ವತಂತ್ರವಾಗಿ ಪ್ರತಾಪಗೌಡ ಪಾಟೀಲ್ ಜನರ ಆಶೀರ್ವಾದದಿಂದ ಗೆಲ್ಲಲಿಲ್ಲ ಎರಡು ಭೂತ್ ನಲ್ಲಿ ಕಳ್ಳ ವೋಟು ಹಾಕಿಸಿ ಗೆದ್ದರು ಹೊರತು ನಿಷ್ಟವಂತರಾಗಿ ಗೆಲ್ಲಲಿಲ್ಲ ಗೆದ್ದ ನಂತರ ಕ್ಷೇತ್ರವನ್ನು ಮರೆತು ಅಧಿಕಾರಕ್ಕಾಗಿ ಕುದುರೆ ವ್ಯಾಪಾರ ಪ್ರಾರಂಭವಾಯಿತು ಹಾಗೂ ಸ್ವಾರ್ಥಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಪರವಾಗಿ ರೈತರ ಪರವಾಗಿ ಯೋಚನೆ ಮಾಡಲಿಲ್ಲ.
ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ ಅನೇಕ ಪಕ್ಷದ ಹಿರಿಯ ಮುಖಂಡರು ಮತ್ತು ಸದಸ್ಯರಿಗೆ ನೋವುಂಟು ಮಾಡುವ ಕೆಲಸವನ್ನು ಪಕ್ಷದಲ್ಲಿ ಮಾಡಿದರು.
ಇದರಿಂದಾಗಿ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಶ್ರಮಿಸಬೇಕೆಂದು ಮಸ್ಕಿ ಚುನಾವಣೆ ಅಭ್ಯರ್ಥಿ ಆರ್ ಬಸವನಗೌಡ ತುರುವಿಹಾಳ ರವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಸ್ಕಿ ಚುನಾವಣೆ ಅಭ್ಯರ್ಥಿ ಆರ್ ಬಸವನಗೌಡ ತುರುವಿಹಾಳ , ಶಿವಣ್ಣ ನಾಯಕ ತಾಲೂಕ ಪಂಚಾಯತ್ ಅಧ್ಯಕ್ಷ ಮಸ್ಕಿ , ಹನುಮಂತಪ್ಪ ಮುದ್ದಾಪುರ್ ಗ್ರಾಮೀಣ ಘಟಕ ಅಧ್ಯಕ್ಷರು , ಬಸವನಗೌಡ ಮುದೇಗೌಡರ ತಾಲೂಕು ಪಂಚಾಯತ್ ಸದಸ್ಯರು ಬಳಗಾನೂರು , ಯಂಕರೆಡ್ಡಿ ಹಾಲಾಪುರ , ಮೆಹಬೂಬ್ ಸಾಬ್ ಮುದ್ದಾಪುರ್ , ಮರಿಸ್ವಾಮಿ ಹೊಸಳ್ಳಿ , ಬಸವನಗೌಡ ಮರಲದೀನ್ನಿ , ದುರ್ಗೇಶ ವಕೀಲರು , ಸಿದ್ದನಗೌಡ ಮಾಟೂರು , ಹನುಮೇಶ್ ಬಾಗೇವಾಡಿ , ಮಾಂತೇಶ್ ನಾಯಕ್ ಜಾಲವಾಡಗಿ , ಟಿ ಬಸಪ್ಪ ಗೌಡನಬಾವಿ , ಅಮರೇಗೌಡ ಕಡಬೂರು , ಮಂಜುನಾಥ ಪಾಟೀಲ್ ಗುಡದೂರು, ಪಂಪನಗೌಡ ಗುಡದೂರು, ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
Politics
‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ – 2022’
ಬೆಂಗಳೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿರುವ ‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ – 2022’ ಕಾರ್ಯಕ್ರಮದ ಕುರಿತು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಕಿರಣ್ ರಿಜಿಜು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉಪಮುಖ್ಯಮಂತ್ರಿ ಡಾ ಸಿ.ಎನ್.ಅಶ್ವತ್ಥ್ ನಾರಾಯಣ್, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ನಾರಾಯಣ ಗೌಡ, ಅಪರ ಮುಖ್ಯಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಚೆನ್ನರಾಜ ರೊಯ್ಚಂದ್ ಹಾಗೂ ಇತರೇ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
Politics
ಡಾ. ಬಿ.ಆರ್ ಅಂಬೇಡ್ಕರ್ ಗೌರವ ಸಲ್ಲಿಸಲು ವರ್ಚ್ಯುವಲ್ ಸಭೆಯಲ್ಲಿ ಭಾಗವಹಿಸಿದ ಅರವಿಂದ ಲಿಂಬಾವಳಿ
ಬೆಂಗಳೂರು : ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಹಾಗೂ ಯುನೈಟೆಡ್ ಕಿಂಗ್ಡಮ್‌ನ ಬಸವ ಸಮಿತಿ ವತಿಯಿಂದ ಜಗದ್ಗುರು ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಝೂಮ್ ಮುಖಾಂತರ ಆಯೋಜಿಸಿದ್ದ ವರ್ಚ್ಯುವಲ್ ಸಭೆಯಲ್ಲಿ ಭಾಗವಹಿಸಿದ ಅರವಿಂದ ಲಿಂಬಾವಳಿ ರವರು, ಶ್ರೀ ಬಸವೇಶ್ವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು.
ಶ್ರೀ ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, 12 ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಜನ ಸಾಮಾನ್ಯರಿಗೆ ಪ್ರಜಾಪ್ರಭುತ್ವದ ದಾರಿ ತೋರಿಸಿದ ಶ್ರೀ ಬಸವಣ್ಣನವರಿಗೆ ಹಾಗೂ ದೇಶದ ಭವಿಷ್ಯಕ್ಕಾಗಿ ಸಂವಿಧಾನ ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿ, ಕನ್ನಡಿಗರು ವಿಶ್ವದಾದ್ಯಂತ ಕೆಲಸ ನಿರ್ವಹಿಸುತ್ತಿರುವುದರಿಂದ ಕನ್ನಡದ ಧ್ವಜವು ಪ್ರಪಂಚದಾದ್ಯಂತ ಸುತ್ತುತ್ತಿದೆ ಎಂದು ಹೆಮ್ಮೆ ಪಡಲಾಯಿತು ಎಂದರು.
ಮುಂದಿನ ಪೀಳಿಗೆಗೆ ಅನುಕೂಲವಾಗುವ ದೃಷ್ಠಿಯಿಂದ ಶ್ರೀ ಬಸವೇಶ್ವರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರವರ ತಾತ್ವಿಕ ಚಿಂತನೆ ಮತ್ತು ಮೌಲ್ಯಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಹೆಚ್ಚು ಪ್ರಚಾರಕ್ಕೆ ತರಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಬಳಿಕ ನಡೆದ ಸಂವಾದದಲ್ಲಿ ನೂರಾರು ಗಣ್ಯರು ತಮ್ಮ ಸಲಹೆ, ಸೂಚನೆಗಳನ್ನು ಹಂಚಿಕೊಂಡಿದ್ದು ಸಂತಸ ನೀಡಿತು.
ಲ್ಯಾಂಬೆಂತ್ ಬಸವೇಶ್ವರ ಫೌಂಡೇಶನ್‌ನ ಅಧ್ಯಕ್ಷರೂ ಹಾಗೂ ಲ್ಯಾಂಬೆಂತ್ ನಗರದ ಮಾಜಿ ಮೇಯರ್ ಕೂಡ ಆಗಿರುವ ಡಾ. ನೀರಜ್ ಪಾಟೀಲ್ ಹಾಗೂ ವಿವಿಧ ರಾಷ್ಟ್ರಗಳಲ್ಲಿರುವ ಕನ್ನಡ ಸಂಘಟನೆಗಳ ಪ್ರಮುಖರು ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ್ದರು.