ಸುದ್ದಿ
ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಶನಿವಾರ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ
ಸುದ್ದಿ
ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಗೆ ಜನ ಜೀವನ ಅಸ್ತವ್ಯಸ್ತ
ರಾಯಚೂರು ಫೆ.21- ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಈಗ ರೈತ ವಿರೋಧಿ ಕಾಯ್ದೆಗಳ ಮೂಲಕ ದೇಶದ ಅನ್ನದಾತನ ವಿನಾಶಕ್ಕೆ ನಿಂತಿದ್ದರೇ, ಮತ್ತೊಂದೆಡೆ ಇಂಧನ ಬೆಲೆ ಏರಿಕೆ ಮೂಲಕ ಜನ ಸಾಮಾನ್ಯರನ್ನು ಭಾರೀ ಕಷ್ಟ ಅನುಭವಿಸಿದಂತೆ ಆಗಿದೆ ಎಂದು ಕಲ್ಯಾಣ ಕರ್ನಾಟಕ ಭೋವಿ ವಡ್ಡರ್ ಯುವಕರ ಸಂಘ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ವಂದಾಲ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ಜನ ವಿರೋಧಿ ಧೋರಣೆಗಳಿಂದ ದೇಶದ ಆರ್ಥಿಕ ವ್ಯವಸ್ಥೆಯೇ ಕುಸಿಯುವಂತೆ ಮಾಡಿದೆ. ರೈತರೊಂದಿಗೆ ಯಾವುದೇ ಸಮಾಲೋಚನೆ ಮಾಡದೇ ಮತ್ತು ಕೃಷಿಯಾಧರಿತ ದೇಶದ ಆರ್ಥಿಕತೆಯ ಭವಿಷ್ಯತ್ತನ್ನೇ ಅಪಾಯಕ್ಕೆ ತಳ್ಳುವ ರೀತಿಯಲ್ಲಿ ಈ ಕಾಯ್ದೆ ಜಾರಿಗೊಳಿಸಿದೆ.
ಕಾರ್ಪೋರೆಟ್ ಕಂಪನಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೃಷಿ ಕಾಯ್ದೆ ರೂಪಿಸಲಾಗಿದೆ.
ರೈತರು ಕಳೆದ ಮೂರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು,
ರೈತರೊಂದಿಗೆ ಸಮಾಲೋಚನೆ ನಡೆಸಲು ಕೇಂದ್ರ ಸರ್ಕಾರ ಮುಂದಾಗದೇ, ಹಠಮಾರಿ ಧೋರಣೆಯಿಂದ ರೈತರು ಬೀದಿಗಳಲ್ಲಿ ಉಳಿಯುವಂತಾಗಿದೆ ಎಂದರು. ಕಾರ್ಪೋರೆಟ್ ಸಂಸ್ಥೆಗಳಾಗಿ ದೇಶದ ಸಂಪತ್ತನ್ನೇ ಅಡವಿಟ್ಟಿದೆ. ಸರ್ಕಾರದ ಜನ ವಿರೋಧಿ ನೀತಿಯಿಂದಾಗಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೇರಿವೆ. ಒಳ್ಳೆಯ ಎಣ್ಣೆ ಇನ್ನಿತರ ಎಲ್ಲಾ ದಿನಬಳಿಕೆಯ ವಸ್ತುಗಳು ಬೆಲೆ ಹೆಚ್ಚಳವಾಗಿ ಜನರ ಬದುಕೇ, ಕಷ್ಟ ಎನ್ನುವಂತಹ ದುಸ್ಥಿತಿ ತಂದೊಡ್ಡಿದೆ.
ಅನ್ಯ ದೇಶಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿದ್ದರೇ, ಭಾರತದಲ್ಲಿ ಮಾತ್ರ ಪೆಟ್ರೋಲ್ ದರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಿಂದ ಇತರೆ ವಸ್ತುಗಳ ಮೇಲೂ ಪರಿಣಾಮ ಬೀರುವಂತಾಗಿದೆ. ಇಂತಹ ಸರ್ಕಾರಗಳಿಂದಾಗಿ ಜನ ಸಾಮಾನ್ಯರ ಬದುಕು ದಿನೇ ದಿನೇ ಕಷ್ಟಕ್ಕೆ ಗುರಿಯಾಗುವಂತೆ ಮಾಡಿದೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಅಮರೇಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರ, ಜಿಲ್ಲಾ ಖಜಾಂಚಿ ಶಂಕರ್, ಮಹಿಳಾ ಪ್ರತಿನಿಧಿಗಳಾದ ಕುಮಾರಿ ಅಶ್ವಿನಿ, ಕುಮಾರಿ ಬಸಲಿಂಗಮ್ಮ, ಹೇಮಾವತಿ, ಜಿಲ್ಲಾ ಸಂಚಾಲಕರು ಕುಮಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಅಂಬಾ ಭವಾನಿ ದೇವಿಯ ಜಾತ್ರಾ ಮಹೋತ್ಸವ
ಸಾವಳಗಿ: ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಅಂಬಾ ಭವಾನಿ ದೇವಿಯ ಜಾತ್ರಾ ಮಹೋತ್ಸವ ಬಹು ಅದ್ದೂರಿಯಾಗಿ ನಡೆಯಿತು. ಕಳೆದ ಮೂರು ದಿನಗಳಿಂದ ನಸುಕಿನ ಜಾವಾದಲ್ಲಿ ನಾನಾ ರೀತಿಯಲ್ಲಿ ಅಭಿಷೇಕ್ ಬೆಣ್ಣೆಯ ಅಲಂಕಾರ, ಹೋಮ ಹವನದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭವಾಗಿದೆ. ಪ್ರತಿ ದಿನ ಬೆಳಿಗ್ಗೆ ಹಾಗೂ ಸಾಯಂಕಾಲ ಮಹಾ ಮಂಗಳಾರತಿ ಮಾಡುತ್ತಿರುತ್ತಾರೆ, ಪ್ರತಿದಿನ ರಾತ್ರಿ ೮ ಗಂಟೆಗೆ ಗೋಂದಳಿ ಹಾಗೂ ಶಿವ ಭಜನಾ ಕಾರ್ಯಕ್ರಮಗಳನ್ನು ಜರುಗಿದವು.
ಮೂರನೇ ದಿನವಾದ ಇಂದು ಪಲ್ಲಕಿ ಉತ್ಸವ ಕಾರ್ಯಕ್ರಮವನ್ನು ಉತ್ತರಪ್ರದೇಶದ ರಾಷ್ಟ್ರೀಯ ಅಖಿಲ ಭಾರತೀಯ ಮರಾಠಿ ಮಹಾಮಂಡಲ ಅಧ್ಯಕ್ಷರಾದ ಶ್ರೀ ಅನೀಲ ಪಾಟೀಲ ಶೇಠ ಹಾಗೂ ಸಾವಳಗಿ ಪೋಲಿಸ್ ಠಾಣೆಯ ಪಿಎಸೈ ಕುಮಾರಿ ಬಿ.ಸಿ.ಮಗದುಮರವರು ಚಾಲನೆ ರಿಬ್ಬನ್ ಕಟ್ಟ ಮಾಡುವ ಮೂಲಕ ಚಾಲನೆ ನೀಡಿದರು.
ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ದೇವಿಯ ಪಲ್ಲಕಿಯೊಂದಿಗೆ ಕುಂಭಮೇಳ, ಡೊಳ್ಳು ಕುಣಿತ, ಕರಡಿ ಮಜಲು, ಜಾಂಜ್ ಪತಂಗ ಹಾಗೂ ಜನಪದ ವಾದ್ಯ ಮೇಳಗಳೂಂದಿಗೆ ದೇವಿಯ ಪಲ್ಲಕಿ ಉತ್ಸವ ನೇರೆವೆರಿತು.
ಪ್ರತಿ ವರ್ಷದಂತೆ ಈ ವರ್ಷವೂ ಭಾವೈಕ್ಯತೆಯ ಸಂಕೇತವಾಗಿ ಜಾತ್ರಾ ಮಹೋತ್ಸವದಲ್ಲಿ ನೇರೆದಿದ್ದ ಭಕ್ತಾದಿಗಳಿಗೆ ಮುಸ್ಲಿಂ ಸಮುದಾಯದ ಬಾಂಧವರಿಂದ ಕುಡಿಯುವ ನೀರಿನ ಬಾಟಲ್ ಮತ್ತು ಬಾಳೆ ಹೆಣ್ಣಿನ ಸೇವೆ ಸಲ್ಲಿಸಿದರು ಹಾಗೂ ಗ್ರಾಮದ ಎಲ್ಲಾ ಸಮುದಾಯದ ಯುವತಿಯರು ಹಾಗೂ ಮಹಿಳೆಯರು ಸಾವಿರಾರು ಕುಂಭಗಳನ್ನು ಹೊತ್ತು ಉತ್ಸವಕ್ಕೆ ಶೋಭೆ ತಂದರು.
ವರದಿ : ದೇವು ಕೂಚಬಾಳ
ಸುದ್ದಿ
ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ -ಶ್ರೀಮತಿ ಸುಕನ್ಯಾ ಕಳವಳ
ಬಾಗೇಪಲ್ಲಿ: ಅತಿಯಾಗಿ ಪ್ಲಾಸ್ಟಿಕ್ ಬಳಕೆಯಿಂದ ಮನುಕುಲದ ಭೂಮಿ ಮೇಲಿನ ಸಕಲ ಜೀವರಾಶಿಗೂ ಅಪಾಯವಾಗುತ್ತಿದೆ’ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಅರ್.ಎಂ.ಎಸ್.ಎ. ಡಿ ವೈ ಪಿ ಸಿ ಅಧಿಕಾರಿಗಳಾದ ಶ್ರೀಮತಿ ಸುಕನ್ಯಾ ರವರು ಆತಂಕ ವ್ಯಕ್ತಪಡಿಸಿದರು.
ಇಂದು ಕಸಬಾ ಹೋಬಳಿ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯ ಸುಂದರ ಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನದಡಿಲ್ಲಿ ಸುಂದರ ಕೈ ತೋಟ ನಿರ್ಮಿಸಿದ್ದು, ವೀಕ್ಷಣೆ ಮಾಡಿ ಉತ್ತಮವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿ, ‘ಮನುಷ್ಯನ ಜೀವನ ಶೈಲಿಯಿಂದ ಭೂಮಿ ಮೇಲಿನ ಎಲ್ಲಾ ಜೀವರಾಶಿಗಳಿಗೂ ಅಪಾಯವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಶಾಲಾ ಕಾಲೇಜು ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರೆ ಸಮಾಜವನ್ನು ಬದಲಾವಣೆ ತರಲು ಸಹಕಾರಿಯಾಗುತ್ತದೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರೆ ಶೇ 50ರಷ್ಟು ಪರಿಸರ ಮಾಲಿನ್ಯ ನಿಯಂತ್ರಿಸಬಹುದು’ ಎಂದು ಸಲಹೆ ನೀಡಿದರು.
ಕಾಡಿಗೆ ಬೆಂಕಿ ಹಚ್ಚುವುದು, ಮೋಜ ಮಸ್ತಿ ನೆಪದಲ್ಲಿ ಕಾಡು ನಾಶ ಮಾಡಿ ರೆಸಾರ್ಟ್ ನಿರ್ಮಾಣದಿಂದಾಗಿ ನೆಮ್ಮದಿಯಿಂದ ಜೀವಿಸುತ್ತಿದ್ದ ವನ್ಯಜೀವಿಗಳು ಆಹಾರ ಹುಡುಕುತ್ತಾ ನಾಡಿಗೆ ಬಂದು ಮನಷ್ಯನ ಕೈಯಲ್ಲಿ ಬಲಿಯಾಗುತ್ತಿವೆ’ ಎಂದು ವಿಷಾದಿಸಿದರು.
‘ಪರಿಸರ ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಸರ್ವನಾಶವಾಗಲಿದೆ. ಪರಿಸರ ರಕ್ಷಣೆ ಎಂದರೆ ನಮ್ಮ ರಕ್ಷಣೆ ಎಂದು ಅರ್ಥ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪರಿಸರ ರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿ’ಎಂದು ಹೇಳಿದರು.
‘ಎಲ್ಲರೂ ಪ್ಲಾಸ್ಟಿಕ್ ಮಿತ ಬಳಕೆ ಅಭ್ಯಾಸ ಮಾಡಬೇಕು.ಶಾಲೆಯ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕಾದರೆ ಮೊದಲು ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಬೇಕು. ವಿಧ್ಯಾರ್ಥಿಗಳು ಮಾರುಕಟ್ಟೆಗೆ ಹೋಗುವಾಗ ಮರೆಯದೆ ಬಟ್ಟೆಯ ಅಥವಾ ಸೆಣಬಿನ ಕೈಚೀಲ ಕೊಂಡೊಯ್ಯಬೇಕು’ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ಮಾತನಾಡಿ
‘ಪ್ಲಾಸ್ಟಿಕ್ ಬಳಕೆ ನಿರ್ಬಂಧದ ಬಗ್ಗೆ ಭಾಷಣೆ ಮಾಡಿದರೆ ಸಾಲದು. ಮೊದಲು ನಾವು ಬದಲಾಗಿ ಇತರರಿಗೆ ಮಾದರಿಯಾಗಬೇಕು. ನಮ್ಮ ಶಾಲೆಯ ಸುಂದರ್ ಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಶಾಲೆ ಆವರಣದಲ್ಲಿ ವಿಜ್ಞಾನ ಶಿಕ್ಷಕ ಎಲ್.ರವಿ ರವರ ಮಾರ್ಗದರ್ಶನದಲ್ಲಿ ಕೈತೋಟ ನಿರ್ಮಿಸಲಾಗಿದೆ.
ಪರಿಸರದಲ್ಲಿ ನೀರು ಕುಡಿದು ಬಿಸಾಕಿರುವ ಬಾಟಲ್ ತಂದು ಕೈತೋಟಕ್ಕೆ ರಕ್ಷಣೆ ಗೋಡೆಯನ್ನು ನಿರ್ಮಿಸಿ ಬಹಳ ಸುಂದರವಾಗಿ ಕಾಣಿಸುತ್ತದೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಶಾಲೆ ಆವರಣದಲ್ಲಿ ಎಳೆ ಮತ್ತು ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಕೈತೋಟಕ್ಕೆ ಬಳಸಿದರೆ ಪರಿಸರ ಸಂರಕ್ಷಣೆಯ ಜತೆಗೆ ಆರ್ಥೀಕವಾಗಿ ಸಹಕಾರಿಯಾಗುತ್ತದೆ’ ಎಂದು ಹೇಳಿದರು.
ತಾಲ್ಲೂಕು ಕಸಬಾ ಇಸಿಓ ಆರ್.ಹನುಮಂತ ರೆಡ್ಡಿ ಮಾತನಾಡಿ ವೈಯಕ್ತಿಕ ಸ್ವಚ್ಚತೆಯೊಂದಿಗೆ ಪರಿಸರ ಸ್ವಚ್ಚತೆ,ಸಾತ್ವಿಕ ಆಹಾರ ಪದ್ದತಿ, ನೀರಿನ ಮಿತ ಬಳಿಕೆ, ಪರಿಸರ ಬಗ್ಗೆ ಪ್ರೀತಿ ಕಾಳಜಿಯೊಂದಿಗೆ ಪರಿಸರ ಸಂರಕ್ಷಣೆ ವಿವಿಧ ರೀತಿಯ ಮಾಲಿನ್ಯಗಳು ಅವುಗಳಿಂದ ಉಂಟಾಗುವ ದುಷ್ಪರಿಣಾಮಗಳು ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಮುಂದೆ ಹತ್ತು ನೇ ತರಗತಿಯಲ್ಲಿ ಓದಿ ಅತ್ಯುತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್. ಎನ್.ಸಂದ್ಯಾ,ಬಿರಾದಾರ ವಿಠ್ಠಲ ಚಂದ್ರ ಶಾ,ಶ್ರೀನಿವಾಸ್ ಎನ್.ಸಿ.ನಾರಾಯಣ ಸ್ವಾಮಿ, ಎಲ್. ರವಿ,ರಾಮಚಂದ್ರಪ್ಪ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.