ಸುದ್ದಿ
ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ: ರಫೀಕ್ ಅಹ್ಮದ್
ಬಾಗೇಪಲ್ಲಿ: ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಸರ್ಕಾರದಿಂದ ಸಿಗುವ ಉಚಿತ ಪಠ್ಯ ಪುಸ್ತಕಗಳು, ಸಮವಸ್ತ್ರ, ವಿದ್ಯಾರ್ಥಿ ವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳು ಸಿಗುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಶ್ಚೇರುವು ಗ್ರಾಪಂ. ಸಿಆರ್ ಪಿ ಎನ್.ರಫೀಕ್ ಅಹ್ಮದ್ ತಿಳಿಸಿದರು.
ತಾಲ್ಲೂಕಿನ ಬಿಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಸರ್ಕಾರಿ ಉರ್ದು ಶಾಲೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಎಸ್ಡಿಎಂಸಿ ಒಂದು ದಿನದ ತರಬೇತಿ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಮಕ್ಕಳಿಗೊಸ್ಕರ ಅನೇಕ ಯೋಜನೆಗಳು ಅನುಷ್ಟಾನಕ್ಕೆ ತರಲಾಗಿದೆ.ಮಧ್ಯಾಹ್ನ ನೀಡುತ್ತಿದ್ದ ಬಿಸಿಯೂಟ ಯೋಜನೆಯು ಕೊರೊನಾ ಎಂಬ ಮಹಾಮಾರಿಯಿಂದ ಸ್ಥಗಿತಗೊಂಡಿದ್ದರೂ ಸಹ ಪ್ರತಿ ವಿದ್ಯಾರ್ಥಿಗೂ ಆಹಾರ ಪದಾರ್ಥಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು.
ಶಾಲೆಗೆ ಹಾಜರಾಗದ ವಿಕಲಚೇತನ ವಿದ್ಯಾರ್ಥಿಗಳಿಗೂ ಸಂಬಂಧಪಟ್ಟ ವೈದ್ಯರಿದ್ದು, ವಿಕಲಚೇತನ ವಿದ್ಯಾರ್ಥಿ ಇರುವ ಪೋಷಕರು ವೈದ್ಯರ ಬಳಿ ಪಿಜಿಯೋಥರಫಿ ಮಾಡಿಸಬೇಕು. ಹಾಗೂ ನಡೆಯಲಾಗದ ವಿಕಲಚೇತನರಿಗೆ ಗೃಹಾಧಾರಿತ ಶಿಕ್ಷಣ ನೀಡಲಾಗುತ್ತದೆ.ಅಂತಹ ವಿದ್ಯಾರ್ಥಿಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಹಮತ್ತುಲ್ಲಾ, ಉಪಾಧ್ಯಕ್ಷೆ ರಾಧ ಮತ್ತು ಸದಸ್ಯರು ಹಾಗೂ ಪ್ರಭಾರ ಮುಖ್ಯ ಶಿಕ್ಷಕ ಡಿ.ಸುಭಾನ್, ಶಿಕ್ಷಕರಾದ ಪಿ.ಕೃಷ್ಣಪ್ಪ, ಬಿ.ಎನ್.ನಾರಾಯಣ, ಆರ್.ಸವಿತಾ, ತೋಳಸಮ್ಮ,
ಮಂಜುಳಾ, ಎಂ.ಎಸ್.ರಾಮಚಂದ್ರರಾವ್ ಮತ್ತಿತರರು ಭಾಗವಹಿಸಿದ್ದರು.
ಸುದ್ದಿ
ಮಸ್ಕಿ ತಾಲೂಕಿನ ಮೆದಿಕಿನಾಳ ಜಿಲ್ಲಾ ಪಂಚಾಯತ್ ಮತ್ತು ಸಂತೆಕೆಲ್ಲೂರು ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮಸ್ಕಿ .ಫೆ.24 :- ತಾಲೂಕಿನ ಮೆದಿಕಿನಾಳ ಜಿಲ್ಲಾ ಪಂಚಾಯತ್ ಮತ್ತು ಸಂತೆಕೆಲ್ಲೂರು ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕುಷ್ಟಗಿ ಕ್ಷೇತ್ರದ ಶಾಸಕರು ಅಮರೇಗೌಡ ಬಯ್ಯಾಪುರ ಮಾತನಾಡಿದರು
ನಮ್ಮ ಸಿದ್ದರಾಮಯ್ಯ ಮುಖ್ಯಮಂತ್ರಿ ಸರ್ಕಾರ ಇದ್ದಾಗ 2500 ಸಾವಿರ ಕೋಟಿ ಅನುದಾನ ಒದಗಿಸಿದ್ದಾರೆ.
ಕೇಂದ್ರದಲ್ಲಿ ಮೋದಿ ಬಿಜೆಪಿ ಸರ್ಕಾರ ಬಂದಿದೆ ಎಲ್ಲ ವಸ್ತುಗಳ ಮತ್ತು ಸಾಮಗ್ರಿಗಳು ಮತ್ತು ತೈಲಗಳ ಬೆಲೆ ಏರಿಕೆ ಆಗುತ್ತಿದೆ ಸಾಮಾಜಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದ್ದು ಗಗನಕ್ಕೇರಿದ ಡೀಸೆಲ್ , ಪೆಟ್ರೋಲ್ , ಗ್ಯಾಸ್ , ಇತ್ಯಾದಿ ದೈನಂದಿನ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ, ಇದರಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ.
ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಬಿಜೆಪಿಯವರು ಕಾರ್ಯಕರ್ತರಿಗೆ ಹಣಕೊಟ್ಟು ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಲ್ಲರೂ ಒಂದಾಗಿ ಚುನಾವಣೆಯನ್ನು ಎದುರಿಸಬೇಕು ಮತ್ತು ಪ್ರತಾಪಗೌಡ ಪಾಟೀಲ್ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗ ಬೇಕು. ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆಶಯ ಯಾವುದೇ ಆಮಿಷಕ್ಕೆ ಒಳಗಾಗದೆ ಮುಂದಿನ ದಿನಗಳಲ್ಲಿ ಆರ್ ಬಸವನಗೌಡ ತುರುವಿಹಾಳ ಅವರನ್ನು ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಆರಿಸಿ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಂಧನೂರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ಪಕ್ಷಾಂತರ ವ್ಯಕ್ತಿಗೆ ಬುದ್ದಿಕಲಿಸಿ ಎಂದು ಜನರಿಗೆ ಹೇಳಿದರು.
ಬಿಜೆಪಿ ಪಕ್ಷದವರು ಏನು ಕೊಡುತ್ತಾರೋ ಅದನ್ನು ತೆಗೆದುಕೊಂಡು ಆರ್ . ಬಸವನಗೌಡ ತುರುವಿಹಾಳ ಅವರಿಗೆ ಮತ ನೀಡಿ. ಬಿಜೆಪಿಯೂ ಅಧಿಕಾರಕ್ಕೆ ಬಂದಾಗಿನಿಂದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ( 95 ಶೇಕಡಾ) ಅನುದಾನ ಬಿಡುಗಡೆ ಮಾಡಿತ್ತು ಪ್ರತಿಯೊಂದು ಊರಿನಲ್ಲಿ ಸಿ.ಸಿ ರಸ್ತೆ ಕಾಮಗಾರಿಗಳು ನಡೆದಿವೆ. ಮತ್ತು ನಂದವಾಡಗಿ ಏತ ನೀರಾವರಿ ಯೋಜನೆಗೆ ( 765 ಕೋಟಿ ) ಅನುದಾನ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಅನುದಾನ ಒದಗಿಸಿದ್ದಾರೆ. ರೈತರ ಬಾಳು ಹಸಿರು ಆಗಿರಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಅನುದಾನ ನೀಡಿದೆ ಪ್ರತಿಯೊಂದಕ್ಕೆ ಕಾಂಗ್ರೆಸ್ ಪಕ್ಷವು ಮಹಿಳೆಯರ ಪರವಾಗಿ ಮೂಲಭೂತ ಸೌಲಭ್ಯ ಕೊಟ್ಟಿರುವುದು ಕಾಂಗ್ರೆಸ್ ಪಕ್ಷ ಎಂದರು.
ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು , ಮಾಜಿ ಸಂಸದ ಕೆ.ವೀರುಪಾಕ್ಷಪ್ಪ , ಮಾಜಿ ಶಾಸಕರಾದ ಎನ್.ಎಸ್.ಭೋಸರಾಜ್ , ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ್ , ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸವನಗೌಡ ತುರುವಿಹಾಳ , ರಾಜ್ಯ ಕಾಂಗ್ರೆಸ್ ಯುವ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ , ಹನುಮಂತಪ್ಪ ಮುದ್ದಾಪೂರು , ಕಾಂಗ್ರೆಸ್ ಮುಖಂಡರಾದ ಕೆ.ಕರಿಯಪ್ಪ , ಶ್ರೀ ಶೈಲಪ್ಪ ಬ್ಯಾಳಿ , ಸಿದ್ದಣ್ಣ ಹೂವಿನಭಾವಿ , ಶರಣಪ್ಪ ಮೇಟಿ , ಎಚ್.ಬಿ.ಮುರಾರಿ , ಪಂಪನಗೌಡ ಗುಡದೂರು , ಬಸನಗೌಡ ಮುದವಾಳ , ಮಲ್ಲನಗೌಡ ಗೋನಾಳ , ಮಲ್ಲನಗೌಡ ದೇವರಮನಿ , ಪಾರಕಸಾಬ , ಗುಂಡಾ ಮಲ್ಲನಗೌಡ್ರು , ವೆಂಕಟರೆಡ್ಡಿ , ಮಾಟೂರು ಸಿದ್ದನಗೌಡ , ಶಿವಣ್ಣ ನಾಯಕ್ , ವಂಕನಗೌಡ ಕೋಳಬಾಳ , ಕೃಷ್ಣ ಡಿ.ಚಿಗರಿ , ಬಸವಂತಪ್ಪ ಮಟ್ಟೂರು. , ಮಲ್ಲಯ್ಯ ಮುರಾರಿ , ಮೈಬುಸಾಬ , ಮಲ್ಲನಗೌಡ ಸುಂಕನೂರು , ಪಂಪನಗೌಡ ಹಾಲಾಪುರ , ನಾಗರೆಡ್ಡಪ್ಪ ಹತ್ತಿಗುಡ್ಡ , ಬಸವರಾಜ ಪೂ.ಪಾ , ಜಾಲಿ ಶೇಖರಗೌಡ , ಸುರೇಶ್ ಬ್ಯಾಳಿ , ಶರಣಪ್ಪ ಎಲಿಗಾರ , ವಿಜಯ ಹಳೇಕೋಟೆ , ಬಸನಗೌಡ ಮಾರಲದಿನ್ನಿ , ಹಾಗೂ ಊರಿನ ಗ್ರಾಮಸ್ಥರು.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಕರ್ತವ್ಯ ಲೋಪವೆಸಗಿದ ಎಸ್ ಐ ಹಾಗೂ ಪಿಎಸ್ಐ ಅಮಾನತು
ಚಿಕ್ಕಬಳ್ಳಾಪುರ: ಫೆ.೨೩ ರಂದು ಚಿಕ್ಕಬಳ್ಳಾಪುರ ಸಮೀಪ ಹಿರೇನಾಗವಲ್ಲಿ ಬಳಿ ಜಿಲೆಟಿನ್ ಸ್ಪೋಟ ಪ್ರಕರಣ ಇಡೀ ರಾಜ್ಯವನ್ನೆ ತಲ್ಲಣಗೊಳಿಸಿತ್ತು.
ಈ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಫೆ.7 ರಂದು ಕ್ರಷರ್ ಹಾಗೂ ಕ್ವಾರಿ ಮಾಲೀಕರ ವಿರುದ್ದ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲು ಮಾಡಿದ್ರು ಆರೋಪಿಗಳನ್ನ ಬಂಧಿಸುವಲ್ಲಿ ಕರ್ತವ್ಯ ಲೋಪವೆಸಿಗದ ಗುಡಿಬಂಡೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಸಬ್ ಇನ್ಸ್ಪೆಕ್ಟರ್ ಗೋಪಾಲರೆಡ್ಡಿಯವರನ್ನು ಅಮಾನತ್ತು ಮಾಡಲಾಗಿದೆ.
ಸುದ್ದಿ
ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಮುಖ್ಯಮಂತ್ರಿಗಳಿಗೆ ಮನವಿ
ಒಕ್ಕಲಿಗರಿಗೆ ಪ್ರವರ್ಗ 3ಎನಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.10ಕ್ಕೆ ಹೆಚ್ಚಿಸಬೇಕು ಹಾಗೂ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಮುಖ್ಯಮಂತ್ರಿಗಳಿಗೆ ಬರೆದಿರುವ ಎರಡು ಪ್ರತ್ಯೇಕ ಮನವಿಗಳನ್ನು ಉಪಮುಖ್ಯಮಂತ್ರಿಗಳಾದ ಡಾ.ಶ್ರೀ ಸಿ.ಎನ್.ಅಶ್ವತ್ಥ ನಾರಾಯಣ, ಕಂದಾಯ ಸಚಿವರಾದ ಆರ್ ಅಶೋಕ್, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯಿಂದ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಕ್ರೀಡಾ ಸಚಿವರಾದ ಶ್ರೀ ನಾರಾಯಣಗೌಡ, ಬಿಡಿಎ ಅಧ್ಯಕ್ಷರಾದ ಶ್ರೀ ಎಸ್.ಆರ್.ವಿಶ್ವನಾಥ್, ಹೋರಾಟ ಸಮಿತಿಯ ಅಧ್ಯಕ್ಷರಾದ ಡಾ. ವೈ.ಕೆ.ಪುಟ್ಟಸೋಮೇಗೌಡ, ಸದಸ್ಯರು ಹಾಗೂ ಆದಿಚುಂಚನಗಿರಿ ಶಾಖಾಮಠ ಸ್ವಾಮೀಜಿಯವರು ಉಪಸ್ಥಿತರಿದ್ದರು.