ಸುದ್ದಿ
ಬಾಗೇಪಲ್ಲಿ ತಾಲ್ಲೂಕು ಕಚೇರಿ ಕಟ್ಟಡ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಚಿಕ್ಕಬಳ್ಳಾಪುರ: ಇಂದು ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಎಸ್ಎಫ್ಐ ವತಿಯಿಂದ ತಾಲ್ಲೂಕಿನ ಪುಟ್ಟಪರ್ತಿ ಗ್ರಾಮದಲ್ಲಿರುವ ಸ್ಪೋಟಕ ಸಾಮಗ್ರಿಗಳ ಸಂಗ್ರಹಗಾರವನ್ನು ತೆರವುಗೊಳಿಸುವಂತೆ ಪ್ರತಿಭಟನೆ ನಡೆಸಲಾಯಿತು. ನಂತರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುವಾಗ ತಹಶಿಲ್ದಾರರ ಕಚೇರಿಯ ಕಟ್ಟಡದ ಮೇಲೇರಿದ ಯುವಕ ವೆಂಕಟೇಶ್, ತಮ್ಮ ಗ್ರಾಮದಲ್ಲಿನ ಸ್ಪೋಟಕ ಸಾಮಗ್ರಿಗಳ ಸಂಗ್ರಹಗಾರ ತೆರವು ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಘಟನೆಯಿಂದ ಕೊಂಚ ಕಾಲ ತಾಲ್ಲೂಕು ಕಚೇರಿ ಕಟ್ಟಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಯಿತು.
ತಾಲ್ಲೂಕಿನ ಪುಟ್ಟಪರ್ತಿ ಗ್ರಾಮ ಹೊರವಲಯದಲ್ಲಿರುವ ಸ್ಪೋಟಕ ಸಾಮಗ್ರಿಗಳ ಸಂಗ್ರಹಗಾರವನ್ನು ತುರ್ತಾಗಿ ಕೆಡವಿ, ಅನುಮತಿ ರದ್ದು ಪಡಿಸಬೇಕೆಂದು ಒತ್ತಾಯಿಸಿ ಯುವಕ ವೆಂಕಟೇಶ್ ಆತ್ಮಹತ್ಯ ಯತ್ನ ಮಾಡಿದ್ದಾನೆ.
ಹಿರೇನಾಗವಲ್ಲಿ ಬಳಿ ಅಕ್ರಮ ಸ್ಫೋಟ ದುರಂತದಿಂದ ಬೇಸತ್ತಿದ್ದ ಯುವಕ. ತಮ್ಮೂರಿನಲ್ಲೂ ಇಂತಹ ಘಟನೆ ಮರುಕಳುಹಿಸುವ ಆತಂಕದಲ್ಲಿ ಈ ರೀತಿ ಮಾಡಲಾಗಿದೆ ಎಂದು ವೆಂಕಟೇಶ್ ತಿಳಿಸಿದರು. ಸರ್ಕಾರ ಈ ಕೂಡಲೇ ಸ್ಪೋಟಕ ಸಾಮಾಗ್ರಿಗಳ ಸಂಗ್ರಹಗಾರದ ಅನುಮತಿ ರದ್ದು ಪಡಿಸಬೇಕೆಂದು ಒತ್ತಾಯಿಸಿದ್ದಾನೆ.
ಕೊನೆಗೆ ವೆಂಕಟೇಶ್ ರನ್ನು ಮನವೊಲಿಸುವ ಪ್ರಯತ್ನ ನಡೆಸುತ್ತಿರುವ ಸ್ಥಳೀಯರು, ತಾಲ್ಲೂಕು ಆಡಳಿತದವರು ಯಶಸ್ವಿಯಾಗಿದ್ದಾರೆ. ಆದಷ್ಟು ಬೇಗ ಸ್ಪೋಟಕ ಸಾಮಗ್ರಿಗಳ ಸಂಗ್ರಹಗಾರದ ರದ್ದತಿಗೆ ವರದಿ ಸಲ್ಲಿಸಲಾಗುವುದೆಂದ ತಾಲ್ಲೂಕು ಕಚೇರಿಯ ಮೂಲಗಳಿಂದ ಭರವಸೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ,
ಚೆನ್ನರಾಯಪ್ಪ, ಎಸ್ ಎಫ್ ಐ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೀಶ್, ಪವನ್ ಕುಮಾರ್, ಗಣೇಶ್,ಮದು ಮತ್ತಿತರರು ಹಾಜರಿದ್ದರು.
ರಾಜ್ಯ
ನೂತನವಾಗಿ ಪಿಎಸೈ ಹುದ್ದೆಗೆ ಆಯ್ಕೆಯಾದವರಿಗೆ ಸನ್ಮಾನ
ಬನ್ನಹಟ್ಟಿ: ನಗರದ ನಿವಾಸಿಯಾದ ಶ್ರೀಮತಿ ಸುಜಾತಾ ಕಾಡಪ್ಪ ಪಾಟೀಲ ನೂತನವಾಗಿ ಪಿಎಸೈ ಹುದ್ದೆಗೆ ಆಯ್ಕೆಯಾಗಿದಕ್ಕೆ ಊರಿನ ಗಣ್ಯರ ವತಿಯಿಂದ ಸನ್ಮಾನಿಸಲಾಗಿದೆ.
ಮೂಲತಃ ರೈತ ಕುಟುಂಬ ವರ್ಗಕ್ಕೆ ಸೇರಿದವರಾಗಿದ್ದು. ಇವರ ಪತಿ ರವಿ ಅಥಣಿಯವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಧನೆ ಕಂಡು ಇಡಿ ನಗರವೇ ಹೆಮ್ಮೆ ಪಡೆಯುತ್ತಿದ್ದು. ಈ ಸಂದರ್ಭದಲ್ಲಿ ನಗರದ ಮುಖಂಡರಾದ ಆರ್.ಕೆ.ಪಾಟೀಲ, ಜೆ.ಆರ್.ಹಂದಿಗುಂದ, ಡಿ.ಆರ್.ಪಾಟೀಲ, ಬಿ.ಎನ್.ಪಾಟೀಲ, ಬಿ.ಕೆ.ಪಾಟೀಲ್ ಹ, ಬಿ.ಡಿ. ಪಾಟೀಲ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ವರದಿ : ದೇವು ಕೂಚಬಾಳ
ರಾಜ್ಯ
ಜನಪ್ರಿಯ ಪ್ರವಾಸಿ ತಾಣವಾದ ನಂದಿ ಗಿರಿಧಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ
ಚಿಕ್ಕಬಳ್ಳಾಪುರ : ಜನಪ್ರಿಯ ಪ್ರವಾಸಿ ತಾಣವಾದ ನಂದಿ ಗಿರಿಧಾಮಕ್ಕೆ ಅಧಿಕಾರಿಗಳೊಂದಿಗೆ ಮಾನ್ಯ ಸ್ಥಳೀಯ ಶಾಸಕರು ಹಾಗೂ ಆರೋಗ್ಯ ಸಚಿವರಾದ ಕೆ. ಸುಧಾಕರ್ ರವರು ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೊಳಿಸುವ ಕುರಿತಂತೆ ಚರ್ಚಿಸಿದರು. ಇತಿಹಾಸ ಪ್ರಿಯರಿಗೆ ಕೌತುಕವಾದ, ನಿಸರ್ಗ ಪ್ರಿಯರಿಗೆ ರಮಣೀಯವಾದ ಹಾಗೂ ಚಾರಣಿರಿಗೆ ರೋಮಾಂಚನಕಾರಿಯಾದ ನಂದಿ ಬೆಟ್ಟ ವರ್ಷದುದ್ದಕ್ಕೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಯೋಜನೆ ರೂಪಿಸಿದ್ದು ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ. ಇದರ ಜೊತೆಗೆ ಎಕೋ-ಟೂರಿಸಂ, ಸುತ್ತಮುತ್ತಲಿನ 5 ಬೆಟ್ಟಗಳಿಗೆ ಚಾರಣ ದಾರಿಗಳು, ಪುರಾತತ್ವ ಸ್ಮಾರಕಗಳು, ನೆಲ್ಲಿಕಾಯಿ ಬಸವಣ್ಣ ಮತ್ತು ಮಂಟಪಗಳು ಸಂರಕ್ಷಣೆ, ಸುಂದರೀಕರಣ ಸೇರಿದಂತೆ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸುದ್ದಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ನಮ್ಮ ರಾಜ್ಯ ಮೊದಲ ಸ್ಥಾನ
ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನುಷ್ಠಾನದಲ್ಲಿ, ಯಶಸ್ವಿಯಾಗಿ ಶೇ.97.07 ರಷ್ಟು ಸಾಧನೆ ಮಾಡಿದ್ದಕ್ಕಾಗಿ, ದೇಶದಲ್ಲೇ ನಮ್ಮ ರಾಜ್ಯ ಮೊದಲ ಸ್ಥಾನ ಪಡೆದುಕೊಂಡಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದು ಮಾನ್ಯ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರವರು ತಿಳಿಸಿದರು.
ನವದೆಹಲಿಯ ‘ಪೂಸಾ’ದಲ್ಲಿ ನಡೆದ ಪಿ.ಎಂ.ಕಿಸಾನ್ ಯೋಜನೆಯ 2ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಕೇಂದ್ರ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿರುವುದು ಅತೀವ ಸಂತಸ ತಂದಿದೆ. ಇದರೊಂದಿಗೆ ರಾಜ್ಯದ ಅನ್ನದಾತರ ಸೇವೆ ಮಾಡಲು ಮತ್ತಷ್ಟು ನವಚೈತನ್ಯ ಮೂಡಿದೆ ಎಂದರು.
ಈ ಯೋಜನೆಯಡಿ ನಮ್ಮ ರಾಜ್ಯವು ಶೇ. 97 ರಷ್ಟು ‘ಆಧಾರ’ ದೃಢೀಕರಿಸಿದ ದತ್ತಾಂಶವನ್ನು ಹೊಂದಿದ್ದು, ರಾಜ್ಯದ ಶೇ. 90ಕ್ಕೂ ಹೆಚ್ಚು ಫಲಾನುಭವಿಗಳಿಗೆ ‘ಆಧಾರ’ ಆಧಾರಿತ ನೇರ ನಗದು ವರ್ಗಾವಣೆ ವಿಧಾನದ ಮೂಲಕ ಈ ಯೋಜನೆಯಡಿ ಪ್ರಯೋಜನಗಳನ್ನು ನೀಡಲಾಗುತ್ತಿದೆ.
ಈ ಸಂತೋಷದ ಕ್ಷಣದಲ್ಲಿ, ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ಮಾನ್ಯ ಕೇಂದ್ರ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಹಾಗೂ ಸದಾ ಮಾರ್ಗದರ್ಶನ ನೀಡುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸಲು ನನ್ನೊಂದಿಗೆ ಅವಿರತವಾಗಿ ಶ್ರಮಿಸಿದ ಅಧಿಕಾರಿಗಳಿಗೆ ಹೃದಯಾಂತರಾಳದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.