Connect with us
Ad Widget

ಸುದ್ದಿ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿ ಒದಗಿಸುವ ಮೂರನೇ ಹಂತದ ಅಭಿಯಾನ

Published

on

ಶಿಡ್ಲಘಟ್ಟ : ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿ ಒದಗಿಸುವ ಮೂರನೇ ಹಂತದ ಅಭಿಯಾನವನ್ನು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಪ್ರಾರಂಭಿಸಿದರು. ಸೋಮವಾರ 60 ವರ್ಷ ವಯಸ್ಸಿನ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡಲಾಯಿತು.

“60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಇತರೆ ಆನಾರೋಗ್ಯ (ಕೋಮಾರ್ಬಿಡಿಟಿ) ಸಮಸ್ಯೆಗಳನ್ನು ಹೊಂದಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಅರ್ಹ ವ್ಯಕ್ತಿಗಳು ಲಸಿಕೆ ಪಡೆಯುವುದಕ್ಕಾಗಿ ಕೋ–ವಿನ್ ಆ್ಯಪ್‌ ಅಥವಾ ಆರೋಗ್ಯ ಸೇತು ಆ್ಯಪ್‌ ಮೂಲಕ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಸಮಯ ಕಾಯ್ದಿರಿಸಬಹುದು” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.

“60 ವರ್ಷ ದಾಟಿದವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರು. ಬೇರೆ ರೋಗಗಳನ್ನು ಹೊಂದಿರುವ, ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. 20 ಅನಾರೋಗ್ಯಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ. ಒಂದು ಮೊಬೈಲ್‌ ಸಂಖ್ಯೆ ನೀಡಿ ಗರಿಷ್ಠ ನಾಲ್ಕು ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌, ಎನ್‌ಪಿಆರ್‌ ಸ್ಮಾರ್ಟ್‌ ಕಾರ್ಡ್‌, ಭಾವಚಿತ್ರ ಇರುವ ಪೆನ್ಶನ್‌ ಪತ್ರದಲ್ಲಿ ಯಾವುದಾದರೂ ಒಂದನ್ನು ಬಳಸಿ ನೋಂದಣಿ ಮಾಡಬಹುದು. ಪ್ರತಿ ದಿನ ಸಂಜೆ 3 ಗಂಟೆಯವರೆಗೆ ಈ ಆಸ್ಪತ್ರೆಗೆ ಭೇಟಿ ನೀಡಿಯೂ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದು” ಎಂದು ಅವರು ವಿವರಿಸಿದರು.

“ನಮ್ಮ ತಾಲ್ಲೂಕು ಆಸ್ಪತ್ರೆಯಲ್ಲಿ 60 ವರ್ಷ ಮೇಲ್ಪಟ್ಟ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುತ್ತಿದ್ದು, ಬರುವವರು ಆಧಾರ್, ಎಲೆಕ್ಷನ್ ಕಾರ್ಡ್ ಮತ್ತು ತಮ್ಮ ಮೊಬೈಲ್ ಅನ್ನು ತರಬೇಕು.ಹಿರಿಯ ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಅವರು ಮನವಿ ಮಾಡಿದರು.

ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ದೇಗುಲಕ್ಕೆ ನುಗ್ಗಿದ ಕ್ಯಾಂಟರ್

Published

on

ಶಿಡ್ಲಘಟ್ಟ : ಅತೀ ವೇಗದಿಂದ ಬಂದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ದೇಗುಲಕ್ಕೆ ಕ್ಯಾಂಟರ್ ನುಗ್ಗಿದ ಪರಿಣಾಮವಾಗಿ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ದೇವಸ್ಥಾನ ದ್ವಂಸ್ವವಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸಮೀಪದ ಬದಾನಿ ಕೆರೆಯ ಕಟ್ಟೆ ಮೇಲೆ ನಡೆದಿದೆ.

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೊಟೊ ಲೋಡ್ ಇಳಿಸಿ ವಾಪಸ್ಸು ತೆರಳುವ ವೇಳೆಯಲ್ಲಿ ಅತೀವೇಗದಿಂದ ಬಂದ ಕ್ಯಾಂಟರ್ ರಸ್ತೆ ಬದಿಯಲ್ಲಿದ್ದ ಶ್ರೀ ದುಗ್ಗಲಮ್ಮ ದೇವಾಲಯಕ್ಕೆ ನುಗ್ಗಿದೆ. ಪರಿಣಾಮ ಕ್ಯಾಂಟರ್ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು ಕ್ಲೀನರ್ ದೇಹವನ್ನು ಜೆಸಿಬಿ ಮೂಲಕ ಹೊರತೆಗೆದಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಅನಿಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು ಚಾಲಕ ಯಲ್ಲಪ್ಪ ಪ್ರಾಣಾಪಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ನಡೆಸಿದ್ದಾರೆ.

ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ಸುದ್ದಿ

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ

Published

on

ತಾಳಿಕೋಟೆ : ಪದವಿ ಪೂರ್ವ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಎಸ್.ಕೆ.ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಉದ್ಘಾಟನೆ ಸಮಾರಂಭಕ್ಕೆ ಪರಮ ಪೂಜ್ಯ ಶ್ರೀ ಸಿದ್ದಲಿಂಗ ದೇವರು ರೀಬನ್ ಕಟ್ ಮಾಡುವುದರ ಮೂಲಕ ಚಾಲನೆ ನೀಡಿದರು ಹಾಗೂ ವಿ.ವಿ.ಸಂಘದ ಚ್ಯಾರ್ ಮೆನ್ ಎಲ್ಲಾ ಭಾಗಿಯಾಗಿದ್ದರು

ತಾಳಿಕೋಟೆ ತಾಲೂಕು ಮಟ್ಟದ ಕ್ರೀಡಾ ನೇತೃತ್ವನ್ನು ವಹಿಕೊಂಡಿರುವ ಡಿ.ಬಿ.ಮೂಗಡ್ಲಿಮಠ ದಹಿಕ ಶಿಕ್ಷಕರು ತಾಳಿಕೋಟೆ , ಮತ್ತು ಕ್ರೀಡಾ ಅಭಿಮಾನಿ ಭಾಗಿಯಾಗಿದ್ದರು.

ಮತ್ತು ಈ ಸಂದರ್ಭದಲ್ಲಿ ಮಾತನಾಡಿದ ಆರ್.ಎಲ್.ಕೊಪ್ಪದ ಹಾಗೂ ಎ.ಜೀ.ದಖನಿ, ವಿ.ಎಮ್.ಪಾಟೀಲ, ದಹಿಕ ವಿಭಾಗದ ಶಿಕ್ಷಕರು ಕ್ರೀಡಾ ಪಟುಗಳಿಗೆ ಕ್ರೀಡೆಯ ಕುರಿತು ಮತ್ತು ಆಟದಲ್ಲಿ ಯಾವುದೇ ಜಗಳ ಮಾಡಿದರೆ ಅಂತ ಗುಂಪನ್ನು ಹೊರಹಾಕಲಾಗುವುದು ಎಂದು ಸೂಚನೆ ನೀಡಿದರು.
ವರದಿ : ದೇವು ಕೂಚಬಾಳ

Continue Reading

ಸುದ್ದಿ

ಎನ್ ಆರ್ ಬಿ ಸಿ 5 ಏ ಕಾಲುವೆ ಜಾರಿಗೆ ಒತ್ತಾಯಿಸಿ ರಸ್ತೆತಡೆ ಟಿ ಯು ಸಿ ಐ, ಕೆ ಆರ್ ಎಸ್ ನೇತೃತ್ವದಲ್ಲಿ ಪ್ರತಿಭಟನೆ

Published

on

ಮಸ್ಕಿ : – ಎನ್ ಆರ್ ಬಿ ಸಿ 5ಏ ಕಾಲುವೆ ಜಾರಿಗೊಳಿಸುವಂತೆ ಒತ್ತಾಯಿಸಿ ಟಿ ಯು ಸಿ ಐ, ಮತ್ತು ಕರ್ನಾಟಕ ರೈತ ಸಂಘಟನೆಗಳು ನೇತ್ರತ್ವದಲ್ಲಿ ಪಾಮನಕಲ್ಲೂರು ಹಟ್ಟಿ ರಸ್ತೆಯಲ್ಲಿ ರಸ್ತೆ ತಡೆ ಚಳವಳಿ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಆರ್ ಮಾನಸಯ್ಯ ಮಾತನಾಡಿ ಎನ್ ಆರ್ ಬಿ ಸಿ 5ಏ ಕಾಲುವೆ ಯೋಜನೆ ಜಾರಿಗೊಳಿಸಿ ಎಂಬುದು ಈ ಭಾಗದ ಜನತೆಯ ಒಂದುವರೆ ದಶಕದ ಬಹುಮುಖ್ಯ ಹಕ್ಕಾಗಿದೆ, ಇದುವರೆಗಿನ ಎಲ್ಲಾ ಸರ್ಕಾರಗಳು ಮತ್ತು ಭಾಗದ ಎಲ್ಲ ಜನಪ್ರತಿನಿಧಿಗಳು ಈ ನೆಲದ ರೈತರ ಈ ಬೇಡಿಕೆಗೆ ಯಾವ ಸ್ಪಂದನೆಯನ್ನು ನೀಡದೆ, ಬರಿ ನಿರ್ಲಕ್ಷವೇ ಉತ್ತರ ವಾಗಿದ್ದು ಇದು ಬೇಸರದ ಸಂಗತಿಯಾಗಿದೆ 5 ಎ ನಾಲಾ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಈ ಭಾಗದ ರೈತರು ಆರಂಭಿಸಿರುವ ಅನಿರ್ದಿಷ್ಟ ಅವಧಿ ಹೋರಾಟ 100ನೇ ದಿನ ಪೂರೈಸಿದೆ, ಆದರೂ ಸರ್ಕಾರದ ಸೂಕ್ತ ಸ್ಪಂದನೆ ದೊರೆಯದೆ ಹೋಗಿದೆ ಸರ್ಕಾರ ರೈತ ವಿರೋಧಿ ನಡೆ ತೀವ್ರ ಖಂಡನೀಯವಾಗಿದೆ ಎಂದರು.

ಮಸ್ಕಿ , ಮಾನ್ವಿ, ಲಿಂಗಸಗೂರು , ದೇವದುರ್ಗ ಎಲ್ಲ ತಾಲೂಕುಗಳ 107 ಗ್ರಾಮಗಳು 1, 77, 912. ಎಕ್ಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಮಹತ್ವದ ಯೋಜನೆ ಇದಾಗಿದೆ , ರಾಜಕೀಯ ಷಡ್ಯಂತರ ದಿಂದ ರೈತರ ಬದುಕನ್ನು ಮತ್ತಷ್ಟು ದುಸ್ತರ ಗೊಳಿಸಲು ಯಾರು ಮುಂದಾಗಬಾರದು ಆಗಿದೆ .

ನೀರಾವರಿ ವಂಚಿತ ಈ ಗ್ರಾಮಗಳು ಜನತೆ ಮಹಾನಗರಗಳಿಗೆ ಗುಳ್ಳೆ ಹೋಗುವ ಅನಿವಾರ್ಯ ಪರಿಸ್ಥಿತಿಗೆ ಅನುಗುಣವಾಗಿದೆ. ಈ ಪರಿಸ್ಥಿತಿಯನ್ನು ನೋಡಿ ಪರಿಗಣಿಸಿ ಯೋಜನೆ ಜಾರಿಗೆ ಮುಂದಾಗಬೇಕೆಂದು ಒತ್ತಾಯಿಸಿದರು, ಮಳೆಯಾಶ್ರಿತ ರಾಯಚೂರು ಕೊಪ್ಪಳ ಜಿಲ್ಲೆಯ ರೈತರು ಲಕ್ಷಾಂತರ ಎಕರೆ ಭೂಮಿ ನೀರು ಒದಗಿಸುವ ಮಹತ್ವದ ಯೋಜನೆ ಎನ್ ಆರ್ ಬಿ ಸಿ 5ಏ ಕಾಲುವೆ ಯಾಗಿದ್ದು ನೀರಾವರಿ ನಿರೀಕ್ಷೆಯಲ್ಲಿರುವ ರೈತರ ಬದುಕಿಗೆ ಪ್ರಥಮ ಆದ್ಯತೆಯನ್ನು 2021 – 22ರ ಬಜೆಟ್ ನಲ್ಲಿ, ಅನುದಾನ ನೀಡಬೇಕೆಂದು ಒತ್ತಾಯಿಸಿದರು .

ಈ ಸಂದರ್ಭದಲ್ಲಿ ಆರ್ ಮಾನಸಯ್ಯ ,
ಸಂತೋಷ್ ದಿನ್ನಿ, ಮೋನಿಶ್ ದೊಡ್ಡಮನಿ, ತಿಪ್ಪರಾಜು ಶಾಂತಕುಮಾರ್, ಚಾಂದ್ ಸಾಬ್, ಮರಿಯಪ್ಪ, ಬಸವರಾಜ್, ಸುತ್ತಮುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು.

ವರದಿ: ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್