Connect with us
Ad Widget

Politics

ಸರ್ಕಾರದ ಸೌಲಭ್ಯಗಳನ್ನು ಬಡವರಿಗೆ ತಲುಪಿಸುವ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ

Published

on

ಸರ್ಕಾರದ ಸೌಲಭ್ಯಗಳನ್ನು ಬಡವರಿಗೆ ತಲುಪಿಸುವ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ: ಡಿ.ವಿ. ಸದಾನಂದ ಗೌಡ

ಪೀಣ್ಯ ದಾಸರಹಳ್ಳಿ: ‘ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜನೌಷಧಿ ಮತ್ತು ಆಯುಷ್ಮಾನ್ ಯೋಜನೆ ಜಾರಿಗೆ ತಂದಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಚಿಕ್ಕಬಾಣಾವರದ ಆರ್.ಆರ್ . ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ 11ನೇ ವರ್ಷದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ಜನೌಷಧಿ ಮಳಿಗೆ ಉದ್ಘಾಟಿಸಿ ಮಾತನಾಡಿದರು.

‘ಬಡ ಜನರು ತಮ್ಮ ದುಡಿಮೆಯ ಶೇ.15-30% ಹಣವನ್ನು ಆರೋಗ್ಯದ ಚಿಕಿತ್ಸೆಗೆ ವೆಚ್ಚ ಮಾಡುತ್ತಿದ್ದಾರೆ. ಇದನ್ನರಿತ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಎಲ್ಲಾ ವೈದ್ಯಕೀಯ ಕಾಲೇಜು, ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ವೆಚ್ಚದ ಜನೌಷಧಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ. ತಜ್ಞರಿಂದ ಪರೀಕ್ಷಿಸಿದ ಉತ್ತಮ ಗುಣಮಟ್ಟದ ಔಷಧಿಯಾಗಿದ್ದು ಜನರು ಅತಿ ಕಡಿಮೆ ಬೆಲೆಯಲ್ಲಿ ಪಡೆಯಬಹುದು’ ಎಂದರು.

ಮಾಜಿ ಶಾಸಕ ಎಸ್ .ಮುನಿರಾಜು ‘ಸುಮಾರು ವರ್ಷಗಳಿಂದ ಈ ಸಂಸ್ಥೆ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದೆ ಮುಂದೆಯೂ ಕೂಡ ಇನ್ನು ಹೆಚ್ಚಿನ ಸೇವಾ ಕಾರ್ಯ ಕೈಗೊಳ್ಳಲಿ’ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ರಾಜಾರೆಡ್ಡಿ, ಕಾರ್ಯದರ್ಶಿ ಕಿರಣ್ , ಪ್ರಾಂಶುಪಾಲ ನಾರಾಯಣ ಸ್ವಾಮಿ, ಜಂಟಿ ಆಯುಕ್ತ ನರಸಿಂಹಮೂರ್ತಿ , ಲಯನ್ ಮನೋಜ್ , ಮೋಹನ್ ಕುಮಾರ್, ರವೀಂದ್ರ ಮುಂತಾದವರಿದ್ದರು.

ಚಿತ್ರ ಶೀರ್ಷಿಕೆ:1) ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಜನೌಷಧಿ ಮಳಿಗೆ ಉದ್ಘಾಟಿಸಿ, ಔಷಧಿ ಪರಿಶೀಲಿಸಿದರು. ಮಾಜಿ ಶಾಸಕ ಎಸ್.ಮುನಿರಾಜು ಕಿರಣ್ ಇದ್ದರು.

2) ಎನ್.ಆರ್.ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಬೃಹತ್ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಮಾಜಿ ಶಾಸಕ ಎಸ್. ಮುನಿರಾಜು, ರಾಜ ರೆಡ್ಡಿ, ನರಸಿಂಹಮೂರ್ತಿ ಮುಂತಾದವರಿದ್ದರು.

Continue Reading
Advertisement
Click to comment

Leave a Reply

Your email address will not be published. Required fields are marked *

Politics

ಎನ್.ಆರ್.ಬಿ.ಸಿ 5 ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ

Published

on

ಎನ್.ಆರ್.ಬಿ.ಸಿ 5 ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ.

ಮಸ್ಕಿ.ಫೆ.27:- ತಾಲೂಕಿನಲ್ಲಿರುವ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ, ಬಿ.ಎಸ್ ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಬಲರಾಮ್ ಕಟ್ಟಿಮನಿ ಅವರಿಗೆ ಸಲ್ಲಿಸಿದರು .

ನಂತರ ಹೆಚ್.ಬಿ.ಮುರಾರಿ , ನಾಗರೆಡ್ಡಪ್ಪ ದೇವರಮನೆ , ಮಾತನಾಡಿ ಎನ್.ಆರ್ .ಬಿ.ಸಿ 5ಎ ಕಾಲುವೆ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಕಳೆದ 12 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಯೋಜನೆ ಜಾರಿಗೆ ರಾಜ್ಯ ಸರಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ ವಹಿಸಿದ್ದರಿಂದ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಮನಕೆಲ್ಲೂರಿನ ಬಸವೇಶ್ವರ ದೇವಸ್ಥಾನದ ಬಳಿ ರೈತರು ಅನಿರ್ದಿಷ್ಟ ಅವಧಿ ಧರಣಿ ನಡೆಸಿದ್ದಾರೆ .

ಧರಣಿ ಸತ್ಯಾಗ್ರಹ 100 ದಿನಕ್ಕೆ ತಲುಪಿದೆ ಆದರೆ ಸರ್ಕಾರ ರೈತರ ಶಾಂತಿಯುತ ಹೋರಾಟವನ್ನು ಸಂಪೂರ್ಣ ನಿರ್ಲಕ್ಷಿಸುವ ಮೂಲಕ ಈ ಭಾಗದ ಲಕ್ಷಾಂತರ ರೈತ ಕುಟುಂಬಗಳ ಬದುಕನ್ನು ಕಡೆಗಣಿಸಿದೆ.

ಎನ್.ಆರ್. ಬಿ. ಸಿ, 5ಎ ಕಾಲುವೆ ಯೋಜನೆ ಜಾರಿಗಾಗಿ ಕಳೆದ 12 ವರ್ಷಗಳ ನಿರಂತರ ಹೋರಾಟ ಫಲವಾಗಿ ಜಲಸಂಪನ್ಮೂಲ ಇಲಾಖೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಮೂಲಕ ಎನ್. ಆರ್.ಬಿ.ಸಿ 5ಎ ಕಾಲುವೆ ಯೋಜನೆ ಸಂಕ್ಷಿಪ್ತ ಡಿ.ಪಿ.ಆರ್ ತಯಾರಿಸಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ.

ಈ ಯೋಜನೆ ಜಾರಿಯಾದರೆ ಬರಪೀಡಿತ ರಾಯಚೂರು , ಜಿಲ್ಲೆಯ 7 ತಾಲೂಕುಗಳು ನೂರಾರು ಗ್ರಾಮಗಳು 72000 ಎಕ್ಟರ್ ಪ್ರದೇಶ ನೀರಾವರಿ ವ್ಯಾಪ್ತಿ ಒಳಪಡಲಿದೆ.

ಯೋಜನೆಯ ಅಂದಾಜು ಮೊತ್ತವನ್ನು 2, 755 ಕೋಟಿ ರೂಪಾಯಿ ಎಂದು ಅಂದಾಜಿಸಿ, ತದನಂತರ ರಾಜಕೀಯ ಒತ್ತಡಗಳ ಕಾರಣ ಅನುಷ್ಠಾನಕ್ಕೆ ಮುಂದಾಗದೆ ನಿರ್ಲಕ್ಷ ಧೋರಣೆ ಅನುಸರಿಸುವುದರ ಮೂಲಕ ಈ ಭಾಗದ ರೈತರ ಬದುಕನ್ನು ಮತ್ತಷ್ಟು ಸಿಲುಕಿಸಲಾಗಿದೆ .

ಈ ಭಾಗದ ರೈತರು ಗುಳ್ಳೆ ಸಮಸ್ಯೆ , ಬಡತನ , ನಿರುದ್ಯೋಗ , ಆರ್ಥಿಕ ಅಸಮಾನತೆ , ಸೇರಿದಂತೆ ಅನಾರೋಗ್ಯ ಸಮಸ್ಯೆಗಳನ್ನು ಬೇಸತ್ತು ಹೋಗಿರುವ ಈ ಭಾಗದ ನೂರಾರು ಹಳ್ಳಿಗಳ ಜನರಿಗೆ ಎನ್.ಆರ್. ಬಿ.ಸಿ 5 ಎ ಕಾಲುವೆ ಯೋಜನೆ ಜಾರಿಯಾದರೆ ಶಾಶ್ವತ ಪರಿಹಾರ ಎಂದು ಮನವರಿಕೆ ಯಾಗಿದ್ದು ಜಾರಿಗೆ ಆಗುವವರೆಗೂ ಹೋರಾಟ ನಡೆಸಲು ಕಟ್ಟು ಬದ್ಧರಾಗಿದ್ದಾರೆ.

ನಾಡಿನ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ಜ್ಞಾನ ಮತ್ತು ತಿಳುವಳಿಕೆ ಹೊಂದಿರುವ ತಾವು ಬರಪೀಡಿತ ಪ್ರದೇಶದ ರೈತ ಕುಟುಂಬಗಳ ಸಂಕಷ್ಟವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡವ ಮೂಲಕ ಸಂವಿಧಾನ ಬದ್ದವಾಗಿ ನೀರಿನ ಹಕ್ಕನ್ನು ಕೇಳುತ್ತಿರುವುದು ಈ ಭಾಗದ ನೂರಾರು ಹಳ್ಳಿಗಳು ಜನರಿಗೆ ನ್ಯಾಯ ಒದಗಿಸಲು ಯೋಜನೆ ಜಾರಿಗೆ ಮಾಡಲು ಮುಂದಾಗಬೇಕು.

ಪ್ರಸ್ತುತ 2021-22, ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಮೊದಲ ಹಂತವಾಗಿ 500 ಕೋಟಿ ರೂಪಾಯಿ ತೆಗೆದಿಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ.

ಒಂದು ವೇಳೆ ರೈತರ ಶಾಂತಿಯುತ ಹೋರಾಟದ ಬಗ್ಗೆ ನಿರ್ಲಕ್ಷವಹಿಸಿದರೆ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ .

ಈ ಸಂದರ್ಭದಲ್ಲಿ ಎನ್. ಆರ್. ಬಿ.ಸಿ 5 ಎ ಕಾಲುವೆ ಹೋರಾಟ ಸಮಿತಿ ತಾಲೂಕು ಘಟಕ ಮಸ್ಕಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ:- ಅಧ್ಯಕ್ಷರಾದ ಬಸವರಾಜ ಗೌಡ , ಬಸವರಾಜಪ್ಪಗೌಡ ವಾಟಗಲ್ , ನಾಗ ರೆಡ್ಡಪ್ಪ ದೇವರಮನೆ , ಮಲ್ಲಿಕಾರ್ಜುನ ಆನಂದಗಲ್ , ಮಲ್ಲನಗೌಡ ಪಾಮನಕಲ್ಲೂರು , ಶಿವಕುಮಾರ್ ಜಾಗಿರ್ದಾರ್ , ಕರಿಯಪ್ಪ ಚಿಲ್ಕರಾಗಿ , ಶರಣಪ್ಪಗೌಡ , ನಾಗರಾಜ , ಹಾಗೂ ಮಸ್ಕಿ ತಾಲೂಕು ಸುತ್ತಮುತ್ತಲಿನ ಗ್ರಾಮದ ರೈತರು ಭಾಗಿಯಾಗಿದ್ದರು,

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading

Politics

ರಾಘವೇಂದ್ರ ಮಹಾಸ್ವಾಮಿಗಳವರ ಮಠಕ್ಕೆ ಮಾನ್ಯ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರವರ ಕುಟುಂಬ

Published

on

ಹಾವೇರಿ : ರಟ್ಟಿಹಳ್ಳಿಯ ಶ್ರೀ ರಾಘವೇಂದ್ರ ಮಹಾಸ್ವಾಮಿಗಳವರ ಮಠಕ್ಕೆ ಮಾನ್ಯ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರವರ ಕುಟುಂಬದ ವತಿಯಿಂದ ಬೆಳ್ಳಿಯ ನೀಲಾಂಜನ ಹಾಗೂ ಪಾದುಕೆಗಳನ್ನು ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ರಾಯರ ಮಠದ ಪಂಡಿತ ಶ್ರೀ ವಾದಿರಾಜಾಚಾರ್ಯರು, ಶ್ರೀ ಶಂಬಣ್ಣ ಗೂಳಪ್ಪನವರ, ಶ್ರೀ ಶಂಕರ ಚನ್ನಗೌಡ್ರ, ಶ್ರೀ ವಿಜಯೇಂದ್ರ ಶಿರೋಳ, ನಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಹಾಜರಿದ್ದರು.

Continue Reading

Politics

ಗ್ರಾಮ ವಾಸ್ತವ್ಯದ ಪರಿಕಲ್ಪನೆ ಉತ್ತಮ ಸ್ಪಂದನೆ: ಆರ್.ಅಶೋಕ್

Published

on

ಪೀಣ್ಯ ದಾಸರಹಳ್ಳಿ: ಎಂ.ಇ.ಐ. ಲೇಔಟ್ ನಲ್ಲಿ ಶ್ರೀ ಗುರುಹಿತ ಸೌಹಾರ್ದ ಕ್ರೇಡಿಟ್ ಕೋ ಅಪರೇಟಿವ್ ಸೊಸೈಟಿ ಉದ್ಘಾಟನೆ ಯನ್ನು ಇಂದು ಕಂದಾಯ ಸಚಿವ ಆರ್.ಅಶೋಕ್ ನೆರವೇರಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್ ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ನಡೆ ಹಳ್ಳಿಯಡೆಗೆ, ಗ್ರಾಮ ವಾಸ್ತವ್ಯದ ಪರಿಕಲ್ಪನೆ ಉತ್ತಮ ಸ್ಪಂದನೆ ಸಿಕ್ಕಿದೆ, ಮುಂದಿನ ದಿನಗಳಲ್ಲಿ ಹಲವಾರು ಜಿಲ್ಲೆಗಳು ಹಾಗೂ ತಾಲೂಕುಗಳಿಗೆ ವಿಸ್ತರಿಸವ ಜೊತೆ ಜೊತೆಗೆ, ಕಂದಾಯ ಗ್ರಾಮದ ವೃತ್ತಗಳಲ್ಲಿ ಸಹ ಕಂದಾಯ ಇಲಾಖೆ ನಡಿಗೆ ಮುಂದುವರೆಯಲಿದೆ’ ಎಂದರು.

ಮಾಜಿ ಶಾಸಕ ಎಸ್.ಮುನಿರಾಜು ಮಾತನಾಡಿ ‘ಈ ಸೊಸೈಟಿಯಿಂದ ಮೋದಿಯವರ ಸ್ವಚ್ಚತಾ ಅಭಿಯಾನ ಜಾರಿ ತಂದಿದ್ದಾರೆ. ಗುರುಹಿತ ಕೊಪರೇಟಿವ್ ಸೊಸೈಟಿ 500 ಮಂದಿ ಸದಸ್ಯರನ್ನು ಹೊಂದಿದ್ದು, ವಾಡ್೯ನ ಜನತೆಗೆ ಕಡಿಮೆ ಸಾಲ ಸೌಲಭ್ಯ ನೀಡುವುದು, ಸಮಾಜಮುಖಿ‌ ಕೆಲಸವಾಗಲಿ, ವಿಧ್ಯಾಭ್ಯಾಸ, ಆರೋಗ್ಯ, ಶಿಕ್ಷಣಕ್ಕೆ ಸೊಸೈಟಿ ಅನುಕೂಲ ನೀಡಲಿ’ ಎಂದರು.

ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ಗುರುಪ್ರಸಾದ್, ನಟರಾಜು, ಉಮಾದೇವಿ ನಾಗರಾಜು, ಕೃಷ್ಣ ಹಾಜರಿದ್ದರು.

ಚಿತ್ರದ ಶೀರ್ಷಿಕೆ : ಶ್ರೀ ಗುರುಹಿತ ಸೌಹಾರ್ದ ಕ್ರೇಡಿಟ್ ಕೋ ಅಪರೇಟಿವ್ ಸೊಸೈಟಿ ಉದ್ಘಾಟನೆಯನ್ನು ಕಂದಾಯ ಸಚಿವ ಆರ್.ಅಶೋಕ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಮುನಿರಾಜು ,ಅಧ್ಯಕ್ಷ ಗುರುಪ್ರಸಾದ್ ಮತ್ತಿತರಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್