ಸುದ್ದಿ
ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅರವಿಂದ ಲಿಂಬಾವಳಿ
ಬೆಂಗಳೂರು : ಇಂದು ಮಾರತ್ತಹಳ್ಳಿಯ ಸಚಿವರ ಕ್ಷೇತ್ರ ಕಛೇರಿಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್, ಕೆ.ಆರ್.ಡಿ.ಸಿ.ಎಲ್ , ಸರ್ಜಾಪುರ ರಸ್ತೆ , ವರ್ತೂರು ಲೇಕ್ ಬಂಡ್ ಮತ್ತು ಸ್ಕೈವಾಕ್ ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ ಅರವಿಂದ ಲಿಂಬಾವಳಿಯವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆಯಲ್ಲಿ ಬರುವ ಜಂಕ್ಷನ್ ಗಳಾದ ಕುಂದಲಹಳ್ಳಿ ಜಂಕ್ಷನ್, ಹೋಪ್ ಫಾರಂ ಜಂಕ್ಷನ್, ಬಿಗ್ ಬಜಾರ್ ಜಂಕ್ಷನ್, ಹೂಡಿ ಜಂಕ್ಷನ್ ಗಳ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಜಾಪುರ ರಸ್ತೆ ಅಗಲೀಕರಣ, ಕೆ.ಆರ್.ಡಿ. ಸಿ.ಎಲ್ ವತಿಯಿಂದ ನಿರ್ಮಿಸುತ್ತಿರುವ ಈಸ್ಟ್ರನ್ ಏರ್ ಪೋರ್ಟ್ ಸಂಪರ್ಕಿಸುವ ರಸ್ತೆ, ಹೊರ ವರ್ತುಲ ರಸ್ತೆಯಲ್ಲಿ ಸ್ಕೈವಾಕ್ ಕಾಮಗಾರಿ ಸ್ಥಳಗಳಾದ ಕಲಾಮಂದಿರ, ಸೆಂಟ್ರಲ್ ಮಾಲ್, ಜೆ.ಪಿ ಮಾರ್ಗನ್, ನ್ಯೂ ಹಾರಿಜಾನ್ ಕಾಲೇಜ್, ಕಾರ್ತಿಕ ನಗರ, ಆಕಾಶ ವಿಹಾರ್, ಜೆ.ಬಿ.ಜೆ ಕ್ವಾರ್ಟಸ್ ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಶ್ರೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿ, ದಿನನಿತ್ಯ ಕಾಮಗಾರಿಗಳ ವರದಿ ನೀಡಲು ಸೂಚಿಸಿದರು.
ಸುದ್ದಿ
ಕನ್ನಡ ಕಲಾಲಯದಲ್ಲಿ ಉಚಿತ ಥಿಯೇಟರ್ ಅಭಿನಯ ಕಾರ್ಯಗಾರ ಪ್ರಾರಂಭ
ಪೀಣ್ಯ ದಾಸರಹಳ್ಳಿ : ಮಲ್ಲಸಂದ್ರದ ಕನ್ನಡ ಕಲಾಲಯದಲ್ಲಿ ತರುಣ್ ಕನ್ನಡಿಗ ನೇತೃತ್ವದಲ್ಲಿ ಥಿಯೇಟರ್ ಅಭಿನಯ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
ಬಳಿಕ ಮಾತನಾಡಿದ ತರುಣ್ ಕನ್ನಡಿಗ ‘ ಈ ಕಾರ್ಯಗಾರದಲ್ಲಿ ಮಕ್ಕಳಿಗೆ ದೇಹ-ಮನಸ್ಸು ಧ್ವನಿ ಬೆಳವಣಿಗೆಗೆ ಮತ್ತು ಅಭಿನಯ ಕಲಿಯಲು ಪೂರಕವಾಗಿದೆ. ನುರಿತ ನಿರ್ದೇಶಕರಿಂದ ಕಲಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯಗಾರವನ್ನು ಏರ್ಪಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಂಗನಟಿ ಸುನೀಲ ಚೇತನ್, ನಟ ನಿರ್ದೇಶಕರಾದ ಚೇತನ್ ನೀನಾಸಂ, ನವೀನ್ ನೀನಾಸಂ, ಪ್ರಿಯಾಂಕ ತರುಣ್ ಮುಂತಾದವರಿದ್ದರು.
ಸುದ್ದಿ
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಬಾಗೇಪಲ್ಲಿ: ಪೆಟ್ರೋಲ್ ಡೀಸೆಲ್,ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ನೇತೃತ್ವದಲ್ಲಿ ಬಾಗೇಪಲ್ಲಿ ಡಾ.ಎಚ್.ಎನ್ ವೃತದಿಂದ ಮೆರವಣಿಗೆ ಹೊರಟು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಿವಿಧ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಸಾಮಾನ್ಯರ ಜೀವನ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಭಾರತದಲ್ಲಿ ಜೀವನ ಮಾಡೋದೇ ಕಷ್ಟವಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇಲ್ಲ ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ಸಿಪಿಐಎಂ ಪಕ್ಷದ ಮುಖಂಡ ಹಾಗೂ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ಪಿ.ಎಂ.ಮುನಿವೆಂಕಟಪ್ಪ ಮಾತನಾಡಿ ಕೋವಿಡ್ ಲಾಕ್‌ಡೌನ್ ನಂತರ ಚಾಲಕರ ಜೀವನ ಮತ್ತಷ್ಟು ಹದಗೆಟ್ಟಿದೆ. ಸರ್ಕಾರವು ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುತ್ತಲೇ ಇದೆ. ಕೇವಲ ಚಾಲಕರಷ್ಟೇ ಅಲ್ಲ, ಅಡುಗೆ ಸಿಲಿಂಡರ್ ದರ ಕೂಡ ಏರಿಸುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದರು.
ಇಂತಹ ಸಂಕಷ್ಟದ ನಡುವೆ ರಾಜ್ಯ ಸರ್ಕಾರವು ಟಿ.ವಿ, ಬೈಕ್ ಇರುವವರ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂದು ನೀಡಿರುವ ಹೇಳಿಕೆಯಿಂದ ಬಡವರು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಅಗತ್ಯ ವಸ್ತುಗಳು, ತೈಲ ಬೆಲೆ ಇಳಿಸಬೇಕು. ಮಾರ್ಚ್ 4ರ ಗಡುವಿನೊಳಗೆ ಸರ್ಕಾರ ಚಾಲಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಧಾನಸೌಧ ಚಲೋ ನಡೆಸಲಾಗುವುದು’ ಎಂದು ತಿಳಿಸಿದರು.
ಎಡಪಂಥೀಯ ಚಿಂತಕ ಹಾಗೂ ಪ್ರಜಾ ವೈದ್ಯ ಡಾ.ಅನಿಲ್ ಕುಮಾರ್ ಅವುಲಪ್ಪ ಮಾತನಾಡಿ
ಕೊರೊನಾ ಬಳಿಕ ಪುನಶ್ಚೇತನದ ಹಾದಿ ತುಳಿದಿರುವ ಸಾಮಾನ್ಯರ ಜೀವನ ಹಾಗೂ ಆರ್ಥಿಕ ಸ್ಥಿತಿಗತಿಯ ಮೇಲೆ ಪೆಟ್ರೋಲ್ ಬೆಲೆ ಏರಿಕೆಯು ಬರೆ ಎಳೆದಂತಾಗಿದೆ. ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಜನರು ತತ್ತರಿಸಿ ಹೋಗಿದ್ದಾರೆ. ಜೊತೆಗೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಹೆಚ್ಚಾಗಿರುವುದು ಜೀವನ ನಿರ್ವಹಣೆಗೆ ಕಠಿಣ ಸವಾಲು ಹಾಕಿದಂತಾಗಿದೆ ಎಂದು ಹೇಳಿದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ.ಅನಿಲ್ ಕುಮಾರ್ ಅವುಲಪ್ಪ, ಮಂಜುನಾಥ ರೆಡ್ಡಿ, ಸಾವಿತ್ರಮ್ಮ, ಮುನಿವೆಂಕಟಪ್ಪ, ಅಶ್ವಥಪ್ಪ, ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ಸುದ್ದಿ
ಕೃಷಿ ವಿಶ್ವವಿದ್ಯಾಲಯ ಆಯೋಜಿಸಲಾಗಿದ್ದ ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭ
ಬೆಂಗಳೂರು : ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಇಲ್ಲಿ ಆಯೋಜಿಸಲಾಗಿದ್ದ ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ ಶ್ರೀ ತೇಜಸ್ವಿ ಸೂರ್ಯ ರವರು, ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಲವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಎಸ್ ರಾಜೇಂದ್ರ ಪ್ರಸಾದ್ (ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು) ಶ್ರೀ ಗುರುಮೂರ್ತಿ, ಡಾ. ವಿ ನಾಗೇಗೌಡ, ಶ್ರೀ ಎಸ್ ಎಂ ನಾರಾಯಣ ರೆಡ್ಡಿ, ಡಾ. ಬಿ ಕೆ ಕುಮಾರಸ್ವಾಮಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.