ಸುದ್ದಿ
ಬೇಸಿಗೆಯ ಮುನ್ನ ಅರಣ್ಯ ರಕ್ಷಣೆ ಅಗತ್ಯ ಕ್ರಮ
ಬಾಗೇಪಲ್ಲಿ: ಪ್ರಕೃತಿಯಲ್ಲಿನ ಬೆಟ್ಟಗುಡ್ಡಗಳಲ್ಲಿ ಸಸ್ಯ ಸಂಪತ್ತು ಫೆಬ್ರವರಿ ತಿಂಗಳಲ್ಲಿ ಸಾಮಾನ್ಯವಾಗಿ ಎಲೆಗಳುದುರಿಸುತ್ತವೆ. ಇವು ಒಣಗಿ ಆಕಸ್ಮಿಕವಾಗಿ ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚಿದರೆ ಇಡೀ ಬೆಟ್ಟ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗುತ್ತದೆ. ಇಂತಹ ಕೃತ್ಯಗಳನ್ನು ತಡೆಯಬೇಕಾಗಿರುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವೆಂದು ಭಾವಿಸಬೇಕು.
ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಗಳು ಜನತೆಯಲ್ಲಿ ಅರಿವು ಮೂಡಿಸಿ ಸಸ್ಯ ಸಂಪತ್ತಿನ ನಾಶವನ್ನು ತಪ್ಪಿಸಬೇಕಿದೆ. ಇದರಿಂದಾಗಿ ಜೀವ ವೈವಿಧ್ಯತೆಯನ್ನು ಸಂರಕ್ಷಿಸಬಹುದು ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿ
ಹೊಸಕೆರೆಹಳ್ಳಿ ವಾರ್ಡ್ ನಲ್ಲಿರುವ ವಿವಿಧ ಅಪಾರ್ಟ್ಮೆಂಟ್ ಗಳ ನಿವಾಸಿಗಳೊಂದಿಗೆ ಸಭೆ
ಬೆಂಗಳೂರು : ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಪದ್ಮನಾಭನಗರ ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡ್ ನಲ್ಲಿರುವ ವಿವಿಧ ಅಪಾರ್ಟ್ಮೆಂಟ್ ಗಳ ನಿವಾಸಿಗಳೊಂದಿಗೆ ಶಾಸಕ ಆರ್ ಅಶೋಕ್ ರವರು ಸಭೆ ನಡೆಸಿದರು.
ಸಭೆಯಲ್ಲಿ ಜನರು ಬೀದಿ ದೀಪಗಳು, ಸಿಸಿಟಿವಿ ಕ್ಯಾಮೆರಾಗಳ, ಉದ್ಯಾನವನ ಹಾಗೂ ಖಾಲಿ ನಿವೇಷನಗಳ ಜಾಗದಲ್ಲಿ ಅಶುಚಿತ್ವದ ಬಗ್ಗೆ ಗಮನ ಸೆಳೆದರು. ಈ ವೇಳೆ ನಾನು ಪ್ರತಿಕ್ರಿಯಿಸಿ, ಜನರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದೆಂದು ಭರವಸೆ ನೀಡಿದರು.
ಕ್ಷೇತ್ರದ ಜನರ ಕಷ್ಟಗಳಲ್ಲಿ ಭಾಗಿಯಾಗಿ, ಅವುಗಳನ್ನು ಪರಿಹರಿಸುವುದು ನನ್ನ ಕರ್ತವ್ಯವಾಗಿದೆ ಎಂದರು.
ಸುದ್ದಿ
ಬಾಗೇಪಲ್ಲಿಯಲ್ಲಿ ಅದ್ದೂರಿ ಗಿರಿಜನೋತ್ಸವ
ಬಾಗೇಪಲ್ಲಿ: ಮಾನವ ಎಷ್ಟೇ ಆಧುನಿಕತೆಯನ್ನು ಸಾಧಿಸಿದ್ದರು ನಮ್ಮ ಪೂರ್ವಜರು ಕಲಿಸಿಕೊಟ್ಟ ಸಂಸ್ಕೃತಿ, ಸಂಪ್ರದಾಯ, ಜಾನಪದಗಳು ಇಂದಿಗೂ ಕೂಡ ಜನಪ್ರಿಯವೇ ಆಗಿವೆ. ಕನ್ನಡ ನಾಡಿನ ವೈವಿಧ್ಯಮಯ ಕಲೆ, ಜಾನಪದದ ಶ್ರೀಮಂತಿಕೆ ನಿಜಕ್ಕೂ ಅಭಿಮಾನ, ಹೆಮ್ಮೆ ಮೂಡಿಸುವಂತದ್ದಾಗಿದೆ.
ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಆಯೋಜಿಸಲಾಗಿದ್ದ ‘ನಮ್ಮ ಜನ-ನಮ್ಮ ಸಂಸ್ಕೃತಿ’ ಗಿರಿಜನೋತ್ಸವಕ್ಕೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಸಾವಿರಾರು ಜನರು ಸಾಕ್ಷಿಯಾದರು.
ಇದೊಂದು ಅಪರೂಪದ ಜಾನಪದ ಹಬ್ಬವಾಗಿದ್ದು, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜಾನಪದ ಕಲಾತಂಡಗಳು ತಮ್ಮ ಕಲಾ ಪ್ರದರ್ಶನಗಳನ್ನು ನೀಡುತ್ತಿದ್ದಂತೆಯೇ ಹರ್ಷೋದ್ಗಾರ ಕೇಳಿ ಬರುತ್ತಿತ್ತು.
ಗಿರಿಜನೋತ್ಸವ ಕಾರ್ಯಕ್ರಮವನ್ನು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ತಾಲ್ಲೂಕಿನಲ್ಲಿ ಕೋವಿಡ್ 19 ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಮನರಂಜನೆ ಕಾರ್ಯಕ್ರಮಗಳು ಮರೀಚಿಕೆ ಯಾಗಿದ್ದವು. ಇಂದು ಕನ್ನಡ ಸಂಸ್ಕೃತಿ ಇಲಾಖೆ ಗಿರಿಜನೋತ್ಸವ ಆಯೋಜನೆ ಮಾಡಿರುವುದು ಬಹಳ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ
ಮಗುವಿನಲ್ಲೂ ಕಲೆ ಇರುತ್ತದೆ. ಆದರೆ ಇಂತಹ ವೇದಿಕೆಗಳಲ್ಲಿ ತಮ್ಮ ಮಕ್ಕಳ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಒಳ್ಳೆಯ ಪ್ರತಿಭೆಯನ್ನು ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.
ನಾಡಿನ ಜಾನಪದ ಕಲಾ ಪ್ರಕಾರದ ಬೆಳವಣಿಗೆಗೆ ಹಗಲಿರುಳೂ ಶ್ರಮಿಸುತ್ತಿರುವ ನಾಡಿನ ಶೋಷಿತರ ಧ್ವನಿಯಾಗಿ, ಅವರ ಕಲೆಯ ರಾಯಭಾರಿಯಾಗಿರುವ ಮಂಜಮ್ಮ ಜೋಗತಿ ಅವರು ಜಾನಪದ ಅಕಾಡೆಮಿ ಅಧ್ಯಕ್ಷರಾದರೂ ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.
ಮಂಜಮ್ಮ ಜೋಗತಿ ಅವರು ತನ್ನಂತೆ ಸಂಕಷ್ಟದಲ್ಲಿರುವ ಜೋಗತಿಗೆ ಪುಟ್ಟಗೂಡಿನಲ್ಲಿಯೇ ಆಸರೆ ನೀಡಿ ತಾಯಿಪ್ರೀತಿ ಮೆರೆದಿದ್ದಾರೆ. ಅವರ ಕಲಾಸೇವೆ ಪರಿಗಣಿಸಿ ರಾಜ್ಯೋತ್ಸವ, ಜಾನಪದಶ್ರೀ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಮಂಜಮ್ಮ ಜೋಗತಿ ಅವರನ್ನು ಹುಡುಕಿಕೊಂಡು ಬಂದಿವೆ ಎಂದು ಹೇಳಿದರು.
ಮಂಜಮ್ಮ ಜೋಗತಿಯಾಗಿ ಬದಲಾದ ಕಥೆ ಈ ಸಮಾಜದಲ್ಲಿನ ಮೌಢ್ಯ, ಅಂಧವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಜೀವನವಿಡೀ ಕಷ್ಟ, ಕಾರ್ಪಣ್ಯದಲ್ಲೇ ಕೈತೊಳೆಯುತ್ತ ಜೋಗತಿಯಾಗಿ ಬದುಕುತ್ತ ಭಿಕ್ಷೆ ಬೇಡಿ ಜೀವನ ಸಾಗಿಸಿದ್ದು, ಕಣ್ಣೀರು ಸುರಿಸುವ ಕಥೆಯಾಗಿದೆ. ತದನಂತರ ಜನಪದ ಕಲೆಯಿಂದ ಕಷ್ಟಪಟ್ಟು ಮೇಲೆ ಬಂದ ನಂತರ
ಕೇಂದ್ರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿರುವ ಮಂಜಮ್ಮ ಜೋಗತಿ ರವರಿಗೆ ಸಂತಸವಾಗಿದೆ ಈ ಪ್ರಶಸ್ತಿ ಎಲ್ಲಾ ಕಲಾವಿದರ ಪ್ರಶಸ್ತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಆರ್.ನರೇಂದ್ರ ಬಾಬು, ಪೌರಸಭಾಧ್ಯಕ್ಷೆ ಗುಲ್ನಾಜ್ ಬೇಗಂ, ಜಿ.ಪಂ ಸದಸ್ಯ ಬೂರಗಮಡುಗು ಲಕ್ಷ್ಮೀ ನರಸಿಂಹಪ್ಪ, ಸರಸ್ವತಮ್ಮ ಶಿವರಾಮಿರೆಡ್ಡಿ,ಎ.ಶ್ರೀನಿವಾಸ್, ಬಿ.ವಿ.ಮಂಜುನಾಥ, ತಹಶೀಲ್ದಾರರಾದ ಡಿ.ವಿ.ದಿವಾಕರ್, ತಾ.ಪಂ.ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎನ್.ಮಂಜುನಾಥ ಸ್ವಾಮಿ, ಎಸ್. ಸಿದ್ದಪ್ಪ, ಡಿ.ಎಂ.ರವಿಕುಮಾರ್ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ಸುದ್ದಿ
ಕನ್ನಡ ಕಲಾಲಯದಲ್ಲಿ ಉಚಿತ ಥಿಯೇಟರ್ ಅಭಿನಯ ಕಾರ್ಯಗಾರ ಪ್ರಾರಂಭ
ಪೀಣ್ಯ ದಾಸರಹಳ್ಳಿ : ಮಲ್ಲಸಂದ್ರದ ಕನ್ನಡ ಕಲಾಲಯದಲ್ಲಿ ತರುಣ್ ಕನ್ನಡಿಗ ನೇತೃತ್ವದಲ್ಲಿ ಥಿಯೇಟರ್ ಅಭಿನಯ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
ಬಳಿಕ ಮಾತನಾಡಿದ ತರುಣ್ ಕನ್ನಡಿಗ ‘ ಈ ಕಾರ್ಯಗಾರದಲ್ಲಿ ಮಕ್ಕಳಿಗೆ ದೇಹ-ಮನಸ್ಸು ಧ್ವನಿ ಬೆಳವಣಿಗೆಗೆ ಮತ್ತು ಅಭಿನಯ ಕಲಿಯಲು ಪೂರಕವಾಗಿದೆ. ನುರಿತ ನಿರ್ದೇಶಕರಿಂದ ಕಲಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯಗಾರವನ್ನು ಏರ್ಪಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಂಗನಟಿ ಸುನೀಲ ಚೇತನ್, ನಟ ನಿರ್ದೇಶಕರಾದ ಚೇತನ್ ನೀನಾಸಂ, ನವೀನ್ ನೀನಾಸಂ, ಪ್ರಿಯಾಂಕ ತರುಣ್ ಮುಂತಾದವರಿದ್ದರು.