ಸುದ್ದಿ
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ
ತಾಳಿಕೋಟೆ : ಪದವಿ ಪೂರ್ವ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಎಸ್.ಕೆ.ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಉದ್ಘಾಟನೆ ಸಮಾರಂಭಕ್ಕೆ ಪರಮ ಪೂಜ್ಯ ಶ್ರೀ ಸಿದ್ದಲಿಂಗ ದೇವರು ರೀಬನ್ ಕಟ್ ಮಾಡುವುದರ ಮೂಲಕ ಚಾಲನೆ ನೀಡಿದರು ಹಾಗೂ ವಿ.ವಿ.ಸಂಘದ ಚ್ಯಾರ್ ಮೆನ್ ಎಲ್ಲಾ ಭಾಗಿಯಾಗಿದ್ದರು
ತಾಳಿಕೋಟೆ ತಾಲೂಕು ಮಟ್ಟದ ಕ್ರೀಡಾ ನೇತೃತ್ವನ್ನು ವಹಿಕೊಂಡಿರುವ ಡಿ.ಬಿ.ಮೂಗಡ್ಲಿಮಠ ದಹಿಕ ಶಿಕ್ಷಕರು ತಾಳಿಕೋಟೆ , ಮತ್ತು ಕ್ರೀಡಾ ಅಭಿಮಾನಿ ಭಾಗಿಯಾಗಿದ್ದರು.
ಮತ್ತು ಈ ಸಂದರ್ಭದಲ್ಲಿ ಮಾತನಾಡಿದ ಆರ್.ಎಲ್.ಕೊಪ್ಪದ ಹಾಗೂ ಎ.ಜೀ.ದಖನಿ, ವಿ.ಎಮ್.ಪಾಟೀಲ, ದಹಿಕ ವಿಭಾಗದ ಶಿಕ್ಷಕರು ಕ್ರೀಡಾ ಪಟುಗಳಿಗೆ ಕ್ರೀಡೆಯ ಕುರಿತು ಮತ್ತು ಆಟದಲ್ಲಿ ಯಾವುದೇ ಜಗಳ ಮಾಡಿದರೆ ಅಂತ ಗುಂಪನ್ನು ಹೊರಹಾಕಲಾಗುವುದು ಎಂದು ಸೂಚನೆ ನೀಡಿದರು.
ವರದಿ : ದೇವು ಕೂಚಬಾಳ
ಸುದ್ದಿ
ಬಿಸಿಲ ಧಗೆಯಿಂದ ತಾಲೂಕಿನಲ್ಲಿ ಕಲ್ಲಂಗಡಿ ಕರ್ಬೂಜ ವ್ಯಾಪಾರ ಜೋರು
ಮಸ್ಕಿ : ಪಟ್ಟಣದಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದು 30 ಡಿಗ್ರಿ ತಾಪಮಾನ ಈಗ 40 ಡಿಗ್ರಿ ಅಧಿಕವಾಗಿದೆ ಇದರಿಂದಾಗಿ ಪಟ್ಟಣದ ಜನತೆ ತಂಪು ಪಾನೀಯ, ಹಣ್ಣುಗಳ ಮೊರೆಹೋಗುತ್ತಿದ್ದಾರೆ .
ಎಲ್ಲೆಲ್ಲೂ ಬಿಸಿಲು ಜಳ್ಳ ಬಿಸಿಲು ಧಗೆಯಿಂದ ದೇಹವನ್ನು ತಂಪು ಮಾಡಿಕೊಳ್ಳಲು ಜನತೆ ವಿಶೇಷವಾಗಿ ಕಲ್ಲಂಗಡಿ, ಕರ್ಬುಜ , ಕಿತ್ತಳೆ, ಮತ್ತಿತರ ಹಣ್ಣುಗಳ ಮೊರೆಹೋಗುತ್ತಿದ್ದಾರೆ . ಇದರಿಂದಾಗಿ ಮಾರುಕಟ್ಟೆಯಲ್ಲಿ ಈ ಹಣ್ಣುಗಳು ಬೆಲೆಯು ದುಪಟ್ಟ ವಾಗಿದೆ .
ಪಟ್ಟಣದಲ್ಲಿ ಕಲ್ಲಂಗಡಿ ಮತ್ತು ಕರ್ಬುಜ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ, ಆಂಧ್ರ ಪ್ರದೇಶದ ಅತ್ಯಂತ ಹೆಚ್ಚು ಇಳುವರಿ ಬರುವ, ರುಚಿ ಹಾಗೂ ಅಪಾರ ಬೇಡಿಕೆ ಇರುವ ಕಿರಣ ತಳಿಯು ಮತ್ತು ಪಾವಗಡ ಕಲ್ಲಂಗಡಿ, ತಮಿಳುನಾಡಿನಿಂದ ಬರುವ ನಾಮಧಾರಿಯ ತಳಿಯ ಕಲ್ಲಂಗಡಿ ಹಾಗೂ ಆಂಧ್ರ ಕಡಪ ಜಿಲ್ಲೆಯಿಂದ ತಂದಿರುವ ಕರ್ಬುಜ ದಿನಕ್ಕೆ ಒಂದುವರೆ ಟನ್ ಖಾಲಿಯಾಗುತ್ತದೆ.
ಎಂದು ಹಣ್ಣಿನ ವ್ಯಾಪಾರಿಗಳಾದ ತಿಪ್ಪಯ್ಯ ಸ್ವಾಮಿ, ರವಿ ಮಲ್ಲಯ್ಯ, ತಿಳಿಸಿದರು,
ಪುರಸಭೆ ಕಛೇರಿ ಮತ್ತು
ಬಸ್ ನಿಲ್ದಾಣದ ಮುಂಭಾಗದಲ್ಲಿ ಕಲ್ಲಂಗಡಿ ಮತ್ತು ಕರ್ಬುಜ ಹಣ್ಣು ಗಳು ಮಾರಾಟ ಸಿದ್ಧವಾಗಿದ್ದು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ,
1 ಎಕರೆ ದೇಶದಲ್ಲಿ ಕನಿಷ್ಠ ಗಾತ್ರದ 20 – 25 ಟನ್ ಇಳುವರಿ ಬರುತ್ತದೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚು.
ಕಳೆದ ಫೆಬ್ರುವರಿಯಿಂದ ಇಲ್ಲಿವರೆಗೆ 8 ಟನ್ ಕಲ್ಲಂಗಡಿ ಮಾರಾಟವಾಗಿದೆ, ಹಾಗೂ ಕಲ್ಲಂಗಡಿ ಹಣ್ಣುಗಳನ್ನು ನಾವು ಕತ್ತರಿಸಿ ಚಿಲ್ಲರೆಯಾಗಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಸಿಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ .
ವರದಿ : ದುರ್ಗೇಶ್ ಭೋವಿ ಮಸ್ಕಿ
ಸುದ್ದಿ
ರಾಜಕಾಲುವೆ, ಸಾರ್ವಜನಿಕ ಆಸ್ತಿಗಳನ್ನು ‘ಒತ್ತುವರಿ ಮುಕ್ತ’ ಮಾಡಲು ಕರವೇ ಒತ್ತಾಯ
ಬಾಗೇಪಲ್ಲಿ: ತಾಲ್ಲೂಕಿನ ಕೆರೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ವಿಶೇಷ ತಂಡ ರಚಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣ ವೇಧಿಕೆಯ, ಚಳುವಳಿ ಚಲಪತಿ ಗೌಡ ಬಣದ ತಾಲ್ಲೂಕು ಅಧ್ಯಕ್ಷ ಬಿ.ವಿ.ಬಾಬಾಜಾನ್ ನೇತೃತ್ವದಲ್ಲಿ ಮಂಗಳವಾರ ತಾಲ್ಲೂಕು ಕಛೇರಿಯ ಎದುರು ಧರಣಿ ನಡೆಸಿ ತಹಶಿಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಕರವೇ ತಾಲ್ಲೂಕು ಅಧ್ಯಕ್ಷ ಬಿ.ವಿ.ಬಾಬಾಜಾನ್ ಮಾತನಾಡಿ
‘ರಿಯಲ್ ಎಸ್ಟೇಟ್ ಮಾಫಿಯಾ ತಾಲ್ಲೂಕು ಬಹುಪಾಲು ಕೆರೆಗಳು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿದೆ. ಕೆರೆಯಂಗಳ ಹಾಗೂ ರಾಜಕಾಲುವೆಗಳ ಜಾಗದಲ್ಲಿ ಅನಧಿಕೃತ ಲೇಔಟ್‌ಗಳು ತಲೆ ಎತ್ತಿವೆ. ಭ್ರಷ್ಟಾಚಾರದಿಂದಾಗಿ ಅಧಿಕಾರಿಗಳೇ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.
ಈ ಹಿಂದೆ ಮಳೆಗಾಲದಲ್ಲಿ ಎಲ್ಲಾ ಕೆರೆಗಳು ತುಂಬುತ್ತಿದ್ದವು. ಆದರೆ, ಭೂಗಳ್ಳರ ಹಾವಳಿಯಿಂದ ಕೆರೆ, ರಾಜಕಾಲುವೆಗಳು ಕಣ್ಮರೆಯಾಗಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ನಕಲಿ ದಾಖಲೆಪತ್ರ ಸೃಷ್ಟಿಸಿ ತಾಲ್ಲೂಕಿನಾದ್ಯಂತ ಸರ್ಕಾರಿ ಗೋಮಾಳ, ಗುಂಡು ತೋಪು, ಸ್ಮಶಾನ, ಕೆರೆ ಅಂಗಳ ಒತ್ತುವರಿ ಮಾಡಲಾಗಿದೆ. ಆದರೆ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸರ್ಕಾರಿ ಜಮೀನು ರಕ್ಷಿಸಬೇಕಾದ ಅಧಿಕಾರಿಗಳೇ ಭೂಗಳ್ಳರ ಜತೆ ಶಾಮೀಲಾಗಿದ್ದಾರೆ’ ಎಂದು ಕಿಡಿಕಾರಿದರು.
‘ಪೂರ್ವಿಕರು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ರಾಜಕಾಲುವೆಗಳ ಮೂಲಕ ನೀರಿನ ಸಂಪರ್ಕ ಕಲ್ಪಿಸಿದ್ದರು. ಈಗ ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆ ನೀರು ಕೆರೆಗಳಿಗೆ ಹರಿಯುತ್ತಿಲ್ಲ. ಮತ್ತೊಂದೆಡೆ ಒತ್ತುವರಿಯಿಂದ ಕೆರೆ ಹಾಗೂ ರಾಜಕಾಲುವೆಗಳ ಮೂಲ ಸ್ವರೂಪವೇ ಬದಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಣ್ಣಪುಟ್ಟ ಜಮೀನು ಒತ್ತುವರಿ ಮಾಡುವ ರೈತರ ಮೇಲೆ ಶಿಸ್ತುಕ್ರಮ ಜರುಗಿಸುವ ತಾಲ್ಲೂಕು ಆಡಳಿತ ಕೆರೆ, ರಾಜಕಾಲುವೆಗಳ ಒತ್ತುವರಿ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ. ಅಧಿಕಾರಿಗಳು ನೆಪ ಮಾತ್ರಕ್ಕೆ ಕೆಲ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿ ತೆರೆಮರೆಯಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರ ಜತೆ ವ್ಯವಹಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕಂದಾಯ ಇಲಾಖೆ ಅಧಿಕಾರಿಗಳು ಕೆರೆ, ರಾಜಕಾಲುವೆಗಳು ಹಾಗೂ ಸರ್ಕಾರಿ ಜಮೀನುಗಳ ರಕ್ಷಣೆ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಒತ್ತುವರಿ ತೆರವು ಮಾಡಿಸಬೇಕು. ಒತ್ತುವರಿದಾದರಿಗೆ ನೆರವು ನೀಡಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ (ಚಳುವಳಿ ಚಲಪತಿ ಗೌಡ) ಬಣ ತಾಲ್ಲೂಕು ಘಟಕದ ಉಪಾಧ್ಯಕ್ಷ ಶೇಕ್ ಹಿದಾಯತುಲ್ಲ, ವೆಂಕಟ ಶಿವಪ್ಪ ,ಸಲೀಂ, ಶಾಂತಿ ರಂಗನಾಥ್ ,ಸುಧಾಕರ್ ಮಂಜುನಾಥ ಹಾಗೂ ಇನ್ನೂ ಮುಂತಾದವರು ಹಾಜರಿದ್ದರು.
ಸುದ್ದಿ
ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ದೇಗುಲಕ್ಕೆ ನುಗ್ಗಿದ ಕ್ಯಾಂಟರ್
ಶಿಡ್ಲಘಟ್ಟ : ಅತೀ ವೇಗದಿಂದ ಬಂದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ದೇಗುಲಕ್ಕೆ ಕ್ಯಾಂಟರ್ ನುಗ್ಗಿದ ಪರಿಣಾಮವಾಗಿ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ದೇವಸ್ಥಾನ ದ್ವಂಸ್ವವಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸಮೀಪದ ಬದಾನಿ ಕೆರೆಯ ಕಟ್ಟೆ ಮೇಲೆ ನಡೆದಿದೆ.
ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೊಟೊ ಲೋಡ್ ಇಳಿಸಿ ವಾಪಸ್ಸು ತೆರಳುವ ವೇಳೆಯಲ್ಲಿ ಅತೀವೇಗದಿಂದ ಬಂದ ಕ್ಯಾಂಟರ್ ರಸ್ತೆ ಬದಿಯಲ್ಲಿದ್ದ ಶ್ರೀ ದುಗ್ಗಲಮ್ಮ ದೇವಾಲಯಕ್ಕೆ ನುಗ್ಗಿದೆ. ಪರಿಣಾಮ ಕ್ಯಾಂಟರ್ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು ಕ್ಲೀನರ್ ದೇಹವನ್ನು ಜೆಸಿಬಿ ಮೂಲಕ ಹೊರತೆಗೆದಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಅನಿಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು ಚಾಲಕ ಯಲ್ಲಪ್ಪ ಪ್ರಾಣಾಪಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ನಡೆಸಿದ್ದಾರೆ.
ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ