ಸುದ್ದಿ
ಬೊಮ್ಮನಹಳ್ಳಿ P K P S ಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ವಿಜಯಪುರ : ಜಿಲ್ಲೆಯ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಜರುಗಿತು ಅದ್ಯಕ್ಷರಾಗಿ ಶಿವಪ್ಪ ಈಶ್ವರಪ್ಪ ಕಲಬುರ್ಗಿ ಉಪಾಧ್ಯಕ್ಷರಾಗಿ ಮಹಾದೇವಿ ಈಶ್ವರಪ್ಪ ಅಮಲ್ಯಾಳ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ಬಸವರಾಜ ಬಿರಾದಾರ ,ಶಿವಣ್ಣ ಹಾರಿವಾಳ,ಶಾಂತವ್ವ ಮಸರಕಲ್,ಮಾಳಪ್ಪ ಮಾಗಣಗೇರಿ,ಗುರುಬಸಪ್ಪ ಕಂಗಳ,ನಿಂಗನಗೌಡ ಬಿರಾದಾರ, ಆಯ್ಕೆಯಾದರು ಚುನಾವಣಾ ಅಧಿಕಾರಿಗಳಾಗಿ ಸಂಗಮೇಶ ಪಾಲ್ಕಿ ಕಾರ್ಯನಿರ್ವಹಿಸಿದರು ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಶೇಖರಗೌಡ ಬಿರಾದಾರ, ಬಸನಗೌಡ ಮಾಡಗಿ, ಮಡುಸಾಹುಕಾರ ಬಿರಾದಾರ, ಯಂಕಣ್ಣ ಮಸರಕಲ್ , ಶಂಕರಗೌಡ ಈಶ್ವರಪ್ಪ ಅಮಲ್ಯಾಳ ಹಣಮಗೌಡ ಬಿರಾದಾರ,ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಸುದ್ದಿ
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿಜ್ಞಾನ ರಂಗೋಲಿ ಸ್ಪರ್ಧೆ
ಪೀಣ್ಯ ದಾಸರಹಳ್ಳಿ: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿಶಾಲ್ ಪಬ್ಲಿಕ್ ಸ್ಕೂಲ್ ಪೈಪ್ಲೈನ್ ರೋಡ್ ದಾಸರಹಳ್ಳಿಯಲ್ಲಿ ಏರ್ಪಡಿಸಿದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜ್ಞಾನಕ್ಕೆ ಸಂಬಂಧಪಟ್ಟ ಆಕೃತಿ ಗಳನ್ನು ಚಿತ್ರಿಸಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ತಿಳುವಳಿಕೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಪವಿತ್ರ .ಪಿ ಮಾತನಾಡಿ ‘ಸಿ .ವಿ. ರಾಮನ್ ಅವರು ಬಹುದೊಡ್ಡ ವಿಜ್ಞಾನಿಗಳಾಗಿ ದೇಶಕ್ಕೆ ಹಾಗೂ ಜಗತ್ತಿಗೆ ಅನೇಕ ವಿಜ್ಞಾನದ ಬಗ್ಗೆ ಅವಿಷ್ಕಾರಗಳನ್ನು ಮಾಡಿ ಜಾಗೃತಿ ಮೂಡಿಸಿ ನಮ್ಮೆಲ್ಲರಿಗೆ ಆದರ್ಶರಾಗಿದ್ದಾರೆ ಹಾಗಾಗಿ ಅವರ ನೆನಪಿನ ಪ್ರಯುಕ್ತ ರಾಷ್ಟ್ರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಣೆ ಮಾಡಲು ಸಂತೋಷವಾಗುತ್ತದೆ ಇಂದು ನಮ್ಮ ಶಾಲೆಯಲ್ಲಿ ವಿಜ್ಞಾನದ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಂದ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಮೆದುಳಿನ ಆಕೃತಿ ,ಹೃದಯದ ಆಕೃತಿ, ಪಚನಕ್ರಿಯೆ ಆಕೃತಿ, ಅಸ್ತಿಪಂಜರದ ಆಕೃತಿ ಗಳನ್ನು ಬಿಡಿಸಿ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಮುಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಂಡುಬಂದಿರುವುದು ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ಬರುತ್ತದೆ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನರಸೇಗೌಡ ಶಿಕ್ಷಕರಾದ ಮೀನಾಕ್ಷಿ, ಮಧು, ಲೀಲಾ, ಚೈತನ್ಯ ,ಚೈತ್ರ ,ವೆಂಕಟರತ್ನಮ್ಮ ,ಆನಂದಿ ಮತ್ತು ರಮ್ಯ ಪಾಲ್ಗೊಂಡಿದ್ದರು.
ಸುದ್ದಿ
ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅರವಿಂದ ಲಿಂಬಾವಳಿ
ಬೆಂಗಳೂರು : ಇಂದು ಮಾರತ್ತಹಳ್ಳಿಯ ಸಚಿವರ ಕ್ಷೇತ್ರ ಕಛೇರಿಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್, ಕೆ.ಆರ್.ಡಿ.ಸಿ.ಎಲ್ , ಸರ್ಜಾಪುರ ರಸ್ತೆ , ವರ್ತೂರು ಲೇಕ್ ಬಂಡ್ ಮತ್ತು ಸ್ಕೈವಾಕ್ ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ ಅರವಿಂದ ಲಿಂಬಾವಳಿಯವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆಯಲ್ಲಿ ಬರುವ ಜಂಕ್ಷನ್ ಗಳಾದ ಕುಂದಲಹಳ್ಳಿ ಜಂಕ್ಷನ್, ಹೋಪ್ ಫಾರಂ ಜಂಕ್ಷನ್, ಬಿಗ್ ಬಜಾರ್ ಜಂಕ್ಷನ್, ಹೂಡಿ ಜಂಕ್ಷನ್ ಗಳ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಜಾಪುರ ರಸ್ತೆ ಅಗಲೀಕರಣ, ಕೆ.ಆರ್.ಡಿ. ಸಿ.ಎಲ್ ವತಿಯಿಂದ ನಿರ್ಮಿಸುತ್ತಿರುವ ಈಸ್ಟ್ರನ್ ಏರ್ ಪೋರ್ಟ್ ಸಂಪರ್ಕಿಸುವ ರಸ್ತೆ, ಹೊರ ವರ್ತುಲ ರಸ್ತೆಯಲ್ಲಿ ಸ್ಕೈವಾಕ್ ಕಾಮಗಾರಿ ಸ್ಥಳಗಳಾದ ಕಲಾಮಂದಿರ, ಸೆಂಟ್ರಲ್ ಮಾಲ್, ಜೆ.ಪಿ ಮಾರ್ಗನ್, ನ್ಯೂ ಹಾರಿಜಾನ್ ಕಾಲೇಜ್, ಕಾರ್ತಿಕ ನಗರ, ಆಕಾಶ ವಿಹಾರ್, ಜೆ.ಬಿ.ಜೆ ಕ್ವಾರ್ಟಸ್ ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಶ್ರೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿ, ದಿನನಿತ್ಯ ಕಾಮಗಾರಿಗಳ ವರದಿ ನೀಡಲು ಸೂಚಿಸಿದರು.
ಸುದ್ದಿ
ಎರಡನೇ ಶ್ರೀಶೈಲ ಎಂದೇ ಪ್ರಖ್ಯಾತವಾಗಿರುವ ಮಸ್ಕಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ
ಮಸ್ಕಿ.ಫೆ.27 :- ಬೀದರ್ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಸ್ಕಿ ಪಟ್ಟಣ ಶಿಲಾಯುಗದ ನಂಟು ಹೆಣೆದುಕೊಂಡಿದೆ, ಅಲ್ಲದೆ ಅಶೋಕ ಚಕ್ರವರ್ತಿ ಧರ್ಮಪ್ರಚಾರದ ಸಂದರ್ಭದಲ್ಲಿ ಮಾಸಂಗಿ ಪುರಕ್ಕೆ ಬಂದು ನೆಲೆಸಿದ್ದರು, ಎಂಬುವುದಕ್ಕೆ ಅಶೋಕ ಶಾಸನ ಸಾಕ್ಷಿ ಇರುತ್ತದೆ ಅಷ್ಟೇ ಅಲ್ಲದೆ ಬೆಟ್ಟದ ತುತ್ತ ತುದಿಯಲ್ಲಿರುವ ಮಲ್ಲಿಕಾರ್ಜುನ ದೇವರ ಪವಾಡಗಳು ಮೂಲಕ ಮಸ್ಕಿ ತನ್ನದೇ ಆದ ಐತಿಹಾಸಿಕ ಹೊಂದಿದೆ.
ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಲ್ಲಯ್ಯ , ಮಲ್ಲಪ್ಪ , ಮಲ್ಲೇಶಪ್ಪ , ಮಲ್ಲಮ್ಮ ಎಂಬುವಂತೆ ಹೆಸರುಗಳು ಪ್ರತಿಯೊಂದು ಕುಟುಂಬದಲ್ಲಿ ಕೇಳಿಬರುತ್ತದೆ.
ಗ್ರಾಮದ ಪಶ್ಚಿಮ ಭಾಗದಲ್ಲಿ ಗುಡ್ಡಗಳು ಸಾಲು ಸಾಲಾಗಿ ಕಾಣಿಸುತ್ತವೆ ದಕ್ಷಿಣ ದಿಕ್ಕಿನ ಆಕಾಶದೆತ್ತರದ ಬೆಟ್ಟದ ತುತ್ತ ತುದಿಯಲ್ಲಿ ಕಲ್ಲಿನಲ್ಲಿ ಒಡ ಮೂಡಿರುವ ಮಲ್ಲಿಕಾರ್ಜುನ ದೇವರಿಗೆ ಶ್ರೀಶೈಲದ ಎರಡನೇ ಮಲ್ಲಿಕಾರ್ಜುನ ಎಂದು ಬಿಂಬಿಸಲಾಗುತ್ತದೆ.
ಶತಮಾನಗಳಷ್ಟು ಹಿಂದೆಯೇ ಬೆಟ್ಟದ ತುದಿಯಲ್ಲಿ ದೇವಾಲಯ ನಿರ್ಮಿಸಲಾಗಿದೆ ಶ್ರೀಶೈಲ ಮಾದರಿಯ ದೇವಸ್ಥಾನ ನಿರ್ಮಿಸುವ ಪ್ರಯತ್ನಗಳು ಕಾಣಿಸುತ್ತವೆ ಕೆತ್ತನೆ ಮಾಡಿರುವುದು ಕಾಣಿಸುತ್ತವೆ, ಕಲ್ಲು ಬಂಡೆಗಳ ಮಧ್ಯ ಲಕ್ಷಾಂತರ ಭಕ್ತರು ದರ್ಶನ ಆಶೀರ್ವಾದ ಪಡೆದು ಪುನೀತರಾಗಿದ್ದಾರೆ, ಪ್ರತಿವರ್ಷದ ಸಂಪ್ರದಾಯದಂತೆ ಭರತ ಹುಣ್ಣಿಮೆ ದಿನದಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರಗುತ್ತದೆ.
ಅದೇ ರೀತಿ ಈ ವರ್ಷಕೂಡ ಫೆಬ್ರುವರಿ 27, ರಂದು ಸಾವಿರಾರು ಸಂಖ್ಯೆಯಿಂದ ಕೂಡಿದ್ದು ಭಕ್ತಾಧಿಗಳ ಸಮ್ಮುಖ ದಲ್ಲಿ ಸಂಜೆ 5 :00 ರ ವೇಳೆಗೆ ಮಹಾರಥೋತ್ಸವ ಜರುಗಿತು.
ಅಲ್ಲದೆ ಶ್ರಾವಣ ಮಾಸದ ಕೊನೆಯ ಸೋಮವಾರ ಕೂಡ ಬೆಟ್ಟದ ಮಲ್ಲಿಕಾರ್ಜುನ ವಿಶೇಷ ಸೇವಾ ಕಾರ್ಯಗಳು ಸರಾಗವಾಗಿ ನಡೆಯುತ್ತಾ ಬಂದಿದೆ,
ಈ ಸಂದರ್ಭದಲ್ಲಿ ಶ್ರೀ ಷ, ಬ್ರ, ವರರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಗಚ್ಚಿನಮಠ ಮಸ್ಕಿ ಇವರು ಅಧ್ಯಕ್ಷತೆ, ರಾಜಕೀಯ ಮುಖಂಡರಾದ ಆರ್ ಬಸನಗೌಡ ತುರುವಿಹಾಳ, ಸಿದ್ದಣ್ಣ ಹೂವಿನಭಾವಿ, ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ್, ಶಿವಣ್ಣ ನಾಯಕ್, ಪ್ರತಾಪ್ ಗೌಡ ಪಾಟೀಲ್, ಪ್ರಸನ್ ಪಾಟೀಲ್, ಶ್ರೀ ಘನ ಮಠದಯ್ಯ ಸ್ವಾಮಿ, ಹಾಗೂ ಮಸ್ಕಿಯ ಗ್ರಾಮಸ್ಥರು, ಮತ್ತು ಸುತ್ತಮುತ್ತಲಿನ ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ