ಕ್ರೀಡೆ
ಬೆಂಗಳೂರಿಗೆ ಇಂದು ರಾಯಲ್ಸ್ ಸವಾಲು
ಕ್ರೀಡೆ
ಆರ್ಸಿಬಿ ಆರ್ಭಟ : ಕೆ ಕೆ ಆರ್ ಶಾಕ್ ನೀಡಿದ ಸಿರಾಜ್
ಹೈದರಾಬಾದ್ ತಂಡದ ವಿರುದ್ಧ ಸೂಪರ್ ಓವರ್ ಮೂಲಕ ಗೆದ್ದ ವಿಶ್ವಾಸದೊಂದಿಗೆ ಕಣಕ್ಕಿಳಿದ ಕೆಕೆಆರ್ ತಂಡಕ್ಕೆ ಆರ್ಸಿಬಿ ಬೌಲರ್ಗಳು ಆಘಾತ ನೀಡಿದರು.
ವೇಗಿ ಮೊಹಮ್ಮದ್ ಸಿರಾಜ್ ಮಾರಕ ದಾಳಿ ಹಾಗೂ ಇತರ ಬೌಲರ್ಗಳ ಸಂಘಟಿತ ಪ್ರಯತ್ನದಿಂದಾಗಿ ರಾಯಲ್ ಚಾಲೆಂಜರ್ಸ್ ತಂಡದ ತನ್ನ 10ನೇ ಪಂದ್ಯದಲ್ಲಿ ಎರಡನೇ ಬಾರಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎಂಟು ವಿಕೆಟ್ ಗಳಿಂದ ಮಣಿಸಿತು. ಈ ಗೆಲುವಿನಿಂದಾಗಿ ಎರಡನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ ಬಳಗ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಗಿದ್ದಾರೆ.
ಕ್ರೀಡೆ
ಇಂದು ಆರ್ ಸಿ ಬಿ ಗೆ ಕೆ ಕೆ ಆರ್ ಸವಾಲು
ಮೂರು ಆವೃತ್ತಿಗಳನ್ನು ಮುಗಿಸಿ ಪ್ಲೇ ಆಫ್ ನ ಅಂಚಿನಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ಇಂದು ಎರಡನೇ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಹೋರಾಡಲಿದೆ.
ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು 82 ರನ್ ಗಳಿಂದ ಸುಲಭ ಜಯವನ್ನು ದಾಖಲಿಸಿತ್ತು. ಇಂದು ಆರ್ಸಿಬಿ ತಂಡಕ್ಕೆ ಶಾಬಾದ್ ಅಹಮದ್ ಬದಲಿಗೆ ಶಿವಂ ದುಬೈ ವಾಪಸ್ಸಾಗಬಹುದು ಎಂಬ ನಿರೀಕ್ಷೆಯಿದೆ. ಹಾಗೆಯೇ ಬೌಲಿಂಗ್ ವಿಭಾಗಕ್ಕೆ ಗುರುಕೀರತ್ ಬದಲು ಸಿರಾಜ್ ವಾಪಸ್ಸಾಗಬಹುದು.
ಕ್ರೀಡೆ
ವಿಶೇಷ ದಾಖಲೆಗೆ ಹೆಸರಾದ ಆರ್ಸಿಬಿ ಸೂಪರ್ ಸ್ಟಾರ್ ಎಬಿಡಿ
ಬೆಂಗಳೂರು ತಂಡದ ಸೂಪರ್ಸ್ಟಾರ್ ಎ.ಬಿ ಡಿವಿಲಿಯರ್ಸ್ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಸ್ಪೋಟಕ ಆಟದ ಜೊತೆಗೆ ಸ್ಥಿರ ಪ್ರದರ್ಶನಕ್ಕೆ ಮತ್ತು 25 ಅಥವಾ ಅದಕ್ಕಿಂತ ಕಡಿಮೆ ಎಸೆತದಲ್ಲಿ ಅತಿ ಹೆಚ್ಚು ಅರ್ಥ ಶತಕ ಪೂರೈಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.
ಶನಿವಾರದಂದು ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಆಟವಾಡಿದ ಎಬಿಡಿ ಕೇವಲ 22 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ 55 ರನ್ ಸಿಡಿಸಿ ಆರ್ಸಿಬಿ ರೋಚಕ ಜಯ ತಂದುಕೊಟ್ಟರು.