ಸುದ್ದಿ
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಸಿಂದಗಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ತಾಲೂಕಾ ಗಾಣಿಗ ಸಮಾಜ ಸಂಘದವತಿಯಿಂದ ಹಮ್ಮಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.
ಸಿಂದಗಿ; ರೈತರು ದೇಶಕ್ಕೆ ಅನ್ನದಾತರು ಅಂತಹ ನಿಸ್ವಾರ್ಥ ಸೇವೆ ಸಲ್ಲಿಸಿ ದೇವರು ಕೊಟ್ಟಿದ್ದರಲ್ಲಿ ಸಂತೃಪ್ತಿಪಟ್ಟು ನಾಡಿನಲ್ಲಿ ಪ್ರೀತಿ ವಿಶ್ವಾಸ ಅರ್ಹವಾದ ಕುಲ ಹಾಗೂ ವಿಶ್ವಾಸಕ್ಕೆ ಇನ್ನೊಂದು ಹೆಸರೇ ಗಾಣಿಗ ಸಮಾಜ ಎಂದು ಅಥಣಿ ಬಿಜೆಪಿ ಮುಖಂಡ ಚಿದಾನಂದ ಸವದಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ತಾಲೂಕಾ ಗಾಣಿಗ ಸಮಾಜ ಸಂಘದವತಿಯಿಂದ ಹಮ್ಮಿಕೊಂಡ ಗಾಣದೇವತೆ ವೃತ್ತ ಭೂಮಿ ಪೂಜೆ, ಗ್ರಂಥ ಬಿಡುಗಡೆ ಮತ್ತು ಪ್ರತಿಭಾ ಪುರಷ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ತಾಲೂಕಿನಲ್ಲಿ ಸುಮಾರು 45 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದರು ಕೂಡಾ ಸಮಾಜದ ವ್ಯಕ್ತಿ ಸೋಲುತ್ತಾನೆ ಎಂದರೆ ಇಲ್ಲಿ ಸಮಾಜದ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದ್ದು ಮುಂದಿನ 2023ರ ಚುನಾವಣೆಯಲ್ಲಿ ಗಾಣಿಗ ಸಮೂದಾಯದ ಅಭ್ಯರ್ಥಿಯ ಆಯ್ಕೆಗೆ ಬಲ ಪ್ರದರ್ಶಿಸಬೇಕು ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಕು.ಮೇಘನಾ ಜಿ ಉಪನ್ಯಾಸ ನೀಡಿ, ಗಾಣಿಗ ವೃತ್ತಿಯ ಪರಿಶ್ರಮದಿಂದ ನಮ್ಮನ್ನು ಗುರುತಿಸುತ್ತವೆ. ಯಾವ ಸಮುದಾಯದಿಂದ ಗುರುತಿಸಿಕೊಂಡಿತ್ತೋ ಆ ಕುಲಕಸಬು ಇಂದು ಬರೀ ಪ್ರತಿಶತ 4 ರಷ್ಟು ಮಾತ್ರ ಉಳಿದಿದ್ದು ಅದರ ಅಳಿವು ಉಳಿವಿಗೆ ಇಂದಿನ ಪೀಳಿಗೆಗೆ ಸಮಾಜದ ಕಸಬನ್ನು ತುಚ್ಯವಾಗಿ ಕಾಣದೇ ಅದನ್ನು ಮುಂದುವರಿಸುವಂತೆ ಹೋಗಲು ಪ್ರೇರಿಸಬೇಕು. ಮತ್ತು ಗಾಣಿಗ ಸರ್ಟೀಫಿಕೇಟ್ ಕೊಡಬೇಕು ಎನ್ನುವ ಸರಕಾರದ ಸುತ್ತೋಲೆ ಇದ್ದರೂ ಇಲ್ಲಿನ ಅಧಿಕಾರಿಗಳು ನೀಡಲು ಮೀನ ಮೇಷ ಎಣಿಸುತ್ತಿದ್ದು, ಅದನ್ನು ಸರಕಾರ ಮಟ್ಟದಲ್ಲಿ ಚರ್ಚಿಸಬೇಕು ಎಂದು ಒತ್ತಾಯಸಿದರು.
ಗಾಣದೇವತೆಯ ವೃತ್ತ ಭೂಮಿಪೂಜೆ ನೆರವೇರಿಸಿದ ದಾರವಾಡ ಜಿ.ಆರ್.ಗ್ರುಪ್ಸ್‍ನ ಮುಖ್ಯಸ್ಥ ಶಿವಾನಂದ ಪಾಟೀಲ ಸೋಮಜ್ಯಾಳ, ಕಸಾಪ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಸಂಪಾದಕತ್ವದ ಗಾಣರತ್ನ ಗ್ರಂಥ ಬಿಡುಗಡೆ ಗೊಳಿಸಿದ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು. ದಿವ್ಯ ಸಾನಿಧ್ಯತೆಯನ್ನು ಕೊಲ್ಹಾರ ದಿಗಂಭರೇಶ್ವರ ಸಂಸ್ಥಾನ ಮಠದ ಶ್ರೀ ಕಲ್ಲಿನಾಥ ದೇವರು, ಸಾನಿಧ್ಯ ಸೋಮಜ್ಯಾಳ ಮಠದ ಶ್ರೀ ಅಮೃತಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಉನ್ನತ ಹುದ್ದೆಯ ಅಧಿಕಾರಿಗಳಿಗೆ ಸನ್ಮಾನ ಗೌರವಿಸಲಾಯಿತು.
ಬಾಗೆವಾಡಿಯ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಗಾಣಿಗ ಸಮಾಜದ ಸಂಸ್ಥಾಪಕ ಅಧ್ಯಕ್ಷ ಬಸವಂತ್ರಾಯ ಮಲಗಾಣ, ಸಮಾಜದ ಅಧ್ಯಕ್ಷ ಮಲ್ಲಣ್ಣ ಮನಗೂಳಿ, ಜಿಪಂ ಸದಸ್ಯ ಮಹಾಂತಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಗೋಲ್ಲಾಳಪ್ಪಗೌಡ ಗೌಡ ರೂಗಿ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಶರಣಬಸು ಅರಕೇರಿ, ಮುಂಬೈ ಹೈಕೋರ್ಟ್ ನ್ಯಾಯವಾದಿ ಶಂಬುಲಿಂಗ ಕಕ್ಕಳಮೇಲಿ, ಶಂಕರ ಬಗಲಿ, ಶರಣಗೌಡ ಪಾಟೀಲ, ಮಡಿವಾಳಪ್ಪ ಬೋನಾಳ, ಮಲ್ಲಿಕಾರ್ಜೂನ ಬಿರಾದಾರ, ಪುರಸಬೆ ಸದಸ್ಯೆ ಪ್ರತಿಭಾ ಪಾಟೀಲ, ಬಿ.ಎಚ್.ಬಿರಾದಾರ, ಯಶವಂತ್ರಾಯಗೌಡ ರೂಗಿ, ಬಸವರಾಜ ಶೀಲವಂತ, ಶಿವಕುಮಾರ ಕಲ್ಲೂರ, ರಮೇಎಶ ಗಂಗನಳ್ಲಿ, ಜಿ.ಆರ್.ಪಾಟೀಲ, ಸಿದ್ದನಗೌಡ ಬಿರಾದಾರ ಅಡಕಿ, ಕೆಡಿಪಿ ಸದಸ್ಯರಾದ ಶಿವಕುಮಾರ ಬಿರಾದಾರ, ಅನುಸೂಯಾ ಪರಗೊಂಡ, ಪ್ರಶಾಂತಗೌಡ ಪಾಟೀಲ, ಸುರೇಶ ಮಳಲಿ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಗರಂಜನಿ ಮೇಲೋಡಿಸ್‍ನ ಡಾ. ಪ್ರಕಾಶ ನಾಡಗೀತೆ ಹಾಡಿದರು. ಎಬಿಸಿಡಿ ಡ್ಯಾನ್ಸ್ ಕ್ಲಾಸ್‍ನ ವಿದ್ಯಾರ್ಥಿಗಳು ನೃತ್ಯದ ಮೂಲಕ ಪ್ರಾರ್ಥನಾ ಗೀತೆ ಹಾಡಿದರು. ಶ್ರೀಶೈಲ ಪರಗೊಂಡ ಸ್ವಾಗತಿಸಿದರು. ಮಾತಾಜಿ ಪಾಟೀಲ ಪಾಟೀಲ ಕೇರೂಟಗಿ, ಸಿದ್ದಲಿಂಗ ಚೌಧರಿ ನಿರೂಪಿಸಿದರು. ಸುಂಗಠಾಣ ಪ್ರೌಡಶಾಲೆಯ ಪ್ರಾಚಾರ್ಯ ಎಸ್.ವ್ಹಿ.ಬಿರಾದಾರ ವಂದಿಸಿದರು.
ವರದಿ : ರಾಘವೇಂದ್ರ ಭಜಂತ್ರಿ
ಸುದ್ದಿ
‘ತನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಬರಬೇಕು’, ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ
ಬೆಂಗಳೂರು: ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಆಟೋ ಚಾಲಕ ಜಯರಾಮು ಮೃತದೇಹದ ಅಂತಿಮ ದರ್ಶನವನ್ನು ಕುಮಾರಸ್ವಾಮಿಯವರು ಪಡೆದರು. ರಾಮನಗರ ಜಿಲ್ಲೆಯ ಬೊಮ್ಮಚ್ಚನ ಹಳ್ಳಿಗೆ ಇಂದು ಮಧ್ಯಾಹ್ನ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ.ಕೆ. ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಧ್ಯಾಕ್ಷ ನಿಖಿಲ್ ಕುಮಾರಸ್ವಾಮಿ.ಆಟೋ ಚಾಲಕ ಜಯರಾಮು ಮೃತದೇಹದ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ನಿನ್ನೆ ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ ಜಯರಾಮು ಮೃತಪಟ್ಟಿದ್ದರು. ರಾಮನಗರ ತಾಲೂಕಿನ ಬೊಮ್ಮಚನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ಸಾವಿಗೂ ಮುನ್ನವೇ ತನ್ನ ಅಂಗಿಯಲ್ಲಿ ಡೆತ್ ನೋಟ್ ಬರೆದಿಟ್ಟುಕೊಂಡಿದ್ದ ಜಯರಾಮು. ನನ್ನ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕೆ ಭಾಗಿಯಾಗಬೇಕು ಎಂದು ಬರೆದುಕೊಂಡಿದ್ದರು.
ನನಗೆ ಬುದ್ಧಿಮಾಂದ್ಯ ಮಗನಿದ್ದಾನೆ. ನನ್ನ ಮಗನಿಗೆ ಕುಮಾರಸ್ವಾಮಿ ಧನ ಸಹಾಯ ಮಾಡಬೇಕು. ನಿಮ್ಮ ಋಣವನ್ನು ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ.ನನ್ನ ಮಗನಿಗೆ ಒಂದು ದಾರಿ ಮಾಡಿಕೊಡಿ ಕುಮಾರಣ್ಣ ಅಂತಾ ಭಾವನಾತ್ಮಕವಾಗಿ ಡೆತ್ ನೋಟ್ ಬರೆದಿಟ್ಟಿದ್ದ ಜಯರಾಮು. ಮೃತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಹೆಚ್.ಡಿ.ಕೆ ಹಾಗೂ ನಿಖಿಲ್ ಅವರು, ಕುಟುಂಬಸ್ಥರಿಗೆ ಪರಿಹಾರದ ಹಣ ನೀಡಿದರು.
ದಾರಿ ಮಧ್ಯದಲ್ಲಿ ಹೂ ಮಾರುತ್ತಿದ್ದಂತ ಬಾಲಕಿಯನ್ನು ಸಿಎಂ ಆಗಿದ್ದಂತಹ ಕುಮಾರಸ್ವಾಮಿ ಮಾತನಾಡಿಸಿ, ಕಷ್ಟ ಕೇಳಿ, ಆಕೆಗೆ ಮನೆ ಇಲ್ಲದೇ ಇರೋದನ್ನು ಗಮನಿಸಿ ಮನೆ ಕಟ್ಟಿಸಿಕೊಟ್ಟ ಘಟನೆಯಿಂದ ಗಮನ ಸೆಳೆದಿದ್ದರು. ಇದೀಗ ನನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಆಗಮಿಸಬೇಕು. ಇದೇ ನನ್ನ ಕೊನೆಯ ಆಸೆ ಎಂದು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದಂತ ಆಟೋ ಚಾಲಕನ ಆಸೆಯನ್ನು ಈಡೇರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಷ್ಟ ಆಗೋದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಸುದ್ದಿ
ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮದ್ಯ : ದಾಳಿ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ
ಶಿಡ್ಲಘಟ್ಟ : ತಾಲ್ಲೂಕಿನ ತಾದೂರು ಗ್ರಾಮದ ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮದ್ಯ ತಯಾರಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಭಾನುವಾರ ಮುಂಜಾನೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಸಿಬ್ಬಂದಿ ಸುಮಾರು 10 ಲಕ್ಷ ಬೆಲೆ ಬಾಳುವ ನಕಲಿ ಮದ್ಯ, ಮಧ್ಯಸಾರ ಹಾಗು ಬಾಟಲಿ, ಮುಚ್ಚಳಗಳನ್ನು ವಶಪಡಿಸಿಕೊಂಡಿರುವ ಜೊತೆಗೆ ಆರೋಪಿ ಟಿ.ಎಂ.ಮಂಜುನಾಥ್ ನನ್ನು ಬಂಧಿಸಿದ್ದಾರೆ.
ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ್ ನೇತೃತ್ವದ ಅಬಕಾರಿ ಇಲಾಖೆ ಸಿಬ್ಬಂದಿ ಭಾನುವಾರ ಮುಂಜಾನೆ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ೧೨೯೦ ಲೀ ಸ್ಪಿರಿಟ್ ಸೇರಿದಂತೆ ೬೨ ಲೀ ಬ್ಲೆಂಡ್, ೩೨ ಕೆಜಿ ಯಷ್ಟು ಕ್ಯಾಪ್, ಲೇಬಲ್ ಹಾಗು ತಯಾರಿಸಿಟ್ಟಿದ್ದ ೩೭.೮೦೦ ಲೀ ನಷ್ಟು ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇನ್ಸ್‌ಪೆಕ್ಟರ್ ವಿಶ್ವನಾಥಬಾಬು, ಫಿರೋಜ್‌ಖಾನ್, ಲಂಕೇ ಹನುಮಯ್ಯ, ಶಂಕರಪ್ರಸಾದ್, ಮಂಜುಳ, ಸಿಬ್ಬಂದಿಗಳಾದ ನಿತಿನ್, ರಾಘವೇಂದ್ರ, ಕರಿಲಿಂಗ, ಪ್ರಶಾಂತ್, ರಾಘವೇಂದ್ರ ಪಾಟೀಲ್ ಮುಂತಾದವರು ಹಾಜರಿದ್ದರು.
ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ
ಸುದ್ದಿ
ಬೆಂಕಿ ಅವಘಡದಿಂದ ಭತ್ತದ ಹುಲ್ಲು ಮತ್ತು ಜಾನುವಾರಗಳು ಸುಟ್ಟು ಭಸ್ಮ: ಶಾಸಕರಿಂದ ಸಾಂತ್ವಾನ
ಮಸ್ಕಿ: ಮಸ್ಕಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಅಗ್ನಿ ಅವಗಢ ಸಂಭವಿಸಿದ್ದು ರೈಮಾನ್ ಸಾಬ್ ಪಂಚರ್ ಶಾಪ್ ಅವರ ಬಣವೆ ಜಾನುವಾರುಗಳು ಸುಟ್ಟುಹೋಗಿದ್ದು. ಮಸ್ಕಿಯ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲರು ಭೇಟಿ ನೀಡಿ ವೈಯಕ್ತಿಕವಾಗಿ ರೂ.20,000 ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಹಂಚಿನಾಳ ಗ್ರಾಮದ ತಾಲೂಕ ಪಂಚಾಯತಿ ಸದಸ್ಯರಾದ ಶರಣಬಸವ ಆಶಾಳ್ , ಗ್ರಾಮದ ಹಿರಿಯರು ಸೋಮನಗೌಡ ಪಾಟೀಲ್ ದುರುಗನ್ ಗೌಡ ಪೊಲೀಸ್ ಪಾಟೀಲ್ ಚಿನ್ನ ನ ಗೌಡ ಗೋನಾಳ್ ನಾಗಪ್ಪ ಕೊಳಗಲ್ ಊರಿನ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
-
ಸುದ್ದಿ2 weeks ago
ಡಿಜಿಟಲ್ ಸ್ಮಾಟ್೯ ಕ್ಲಾಸ್ ನಲ್ಲಿ ಸಾವಿತ್ರಿ ಭಾಯಿ ಫುಲೆಯವರ ಜನ್ಮ ದಿನ ಆಚರಣೆ
-
ಮನರಂಜನೆ2 weeks ago
ಅಪ್ಪಿಕೊಂಡು ಪಪ್ಪಿಕೊಟ್ಟು ಮುದ್ದಾಡುವಾಗ ಸಿಕ್ಕಿ ಬಿದ್ದ ಅನುಶ್ರೀ
-
ಸುದ್ದಿ3 days ago
ಶ್ರೀಶ್ರೀಶ್ರೀ ಗುರು ಆದಿ ಜಾಂಬವಂತ ಸ್ವಾಮಿ ಜಯಂತಿ ಆಚರಣೆ
-
Politics7 days ago
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?