ರಾಜ್ಯ
ಮಸ್ಕಿ ತಾಲೂಕಿನ ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಯುವಕನಿಗೆ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ 50,000 ರೂಪಾಯಿ ಧನಸಹಾಯ
ಮಸ್ಕಿ 14. ಮಸ್ಕಿ ತಾಲೂಕು ಪಟ್ಟಣದಲ್ಲಿ ರವಿವಾರ ಬೆಳ್ಳಂಬೆಳಗ್ಗೆ ಹಳ್ಳದಲ್ಲಿ ಮಾರಲದಿನ್ನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಆರಿಸಿದ್ದು, ಮಸ್ಕಿ ಪಟ್ಟಣದ ಇಬ್ಬರು ವ್ಯಕ್ತಿಗಳು ಬೆಳಗಿನಜಾವ ಎಂದಿನಂತೆ ಬಹಿರ್ದೆಸೆಗೆ ಹಳ್ಳದ ಕಡೆ ಹೋಗಿದ್ದರು ಹೋದ ಸಂದರ್ಭದಲ್ಲಿ ಏಕಾಏಕಿ ಹಳ್ಳದಿಂದ ನೀರು ಹರಿದು ಬಂದ ಸಂದರ್ಭದಲ್ಲಿ ಯುವಕರಿಬ್ಬರು ಹಳ್ಳದಿಂದ ಬರುವ ಸಂದರ್ಭದಲ್ಲಿ ನೀರಿನ ನಡುವೆ ಸಿಲುಕಿ ಕೊಂಡಿರುವ ಘಟನೆ ಈ 4 ದಿನಗಳ ಹಿಂದೆ ನಡೆದಿತ್ತು. ಆ ಸಂದರ್ಭದಲ್ಲಿ ಮಸ್ಕಿ ತಾಲೂಕಿನ ಸ್ಥಳೀಯ ವ್ಯಕ್ತಿ ಚನ್ನಬಸವ ಮಡಿವಾಳ (34) ಎಂಬ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿದ್ದು ಆತನ ಶೋಧ ಕಾರ್ಯ ಕಳೆದ 3 ದಿನಗಳ ಹಿಂದ ನಡೆಯುತ್ತಿದ್ದು ಇನ್ನೂ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ಇದಕ್ಕೆಲ್ಲ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ .
ಇದನ್ನು ಅರಿತ ಮಸ್ಕಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ್ ಪಾಟೀಲ್ ಯದಲ ದಿನ್ನಿ ನೇತೃತ್ವದಲ್ಲಿ ಇಂದು 50,000 ರೂಪಾಯಿ ಧನಸಹಾಯವನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಸ್ಕಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ್ ಪಾಟೀಲ್ ಯದಲ ದಿನ್ನಿ ಯವರು ತಾಲೂಕು ಆಡಳಿತ ಮತ್ತು ಜಿಲ್ಲಾ ಆಡಳಿತದವರು ಆದಷ್ಟು ಬೇಗ ಯುವಕನನ್ನು ಹುಡುಕಿಕೊಡಿ ಮತ್ತು ಅವರ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದರು. ಮತ್ತು ಆ ದೇವರು ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಸ್ಕಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಮುಂತಾದ ಯುವ ಮುಖಂಡರು ಇದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
ರಾಜ್ಯ
ಜನವರಿ ಒಂದರಿಂದ ಶಾಲೆ ಆರಂಭ : ವೇಳಾಪಟ್ಟಿ ಪ್ರಕಟ
ಬೆಂಗಳೂರು: ಜನವರಿ 1 ರಿಂದ ಶಾಲೆ ಆರಂಭದ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಾಲೆ ಆರಂಭಕ್ಕೆ ಮೂರು ದಿನ ಮೊದಲು ಸಿಬ್ಬಂದಿ, ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನೆಗೆಟಿವ್ ಕಡ್ಡಾಯವಾಗಿರುತ್ತದೆ. 10 ನೇ ತರಗತಿಗೆ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ವಾರದಲ್ಲಿ 6 ದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 30 ರವರೆಗೆ ತಲಾ 45 ನಿಮಿಷಗಳ ಮೂರು ಪಿರಿಯಡ್ ಗಳಲ್ಲಿ ಬೋಧನೆ ಮಾಡಲಾಗುತ್ತದೆ. ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿ ಪಾಠ ಮಾಡಲಾಗುವುದು.
ರಾಜ್ಯ
“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ”
ಬೆಂಗಳೂರು : ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆ ಹಮ್ಮಿಕೊಂಡಿರುವ “ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು-ಶಿಕ್ಷಕರು ಉಳಿದರೆ, ಶಿಕ್ಷಣ” ಎಂಬ ಸಾಂಕೇತಿಕ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಆರ್. ಅಶೋಕ್ ರವರು, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ
ಶಾಲೆಯ ಸಭಾಂಗಣ ಮತ್ತು ಕೊಠಡಿಯ ಉದ್ಘಾಟನೆ : ಅರವಿಂದ ಲಿಂಬಾವಳಿ
ಬೆಂಗಳೂರು : ಇಂದು ಹಾಲನಾಯಕನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಶಾಲೆಯ ಒಂದು ಸಭಾಂಗಣ ಹಾಗೂ ಎರಡು ಕೊಠಡಿಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ, ಗ್ರಾಮದ ಮುಖಂಡರು, ಇಲಾಖೆಯ ಅಧಿಕಾರಿಗಳು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
-
ಸುದ್ದಿ2 weeks ago
ಡಿಜಿಟಲ್ ಸ್ಮಾಟ್೯ ಕ್ಲಾಸ್ ನಲ್ಲಿ ಸಾವಿತ್ರಿ ಭಾಯಿ ಫುಲೆಯವರ ಜನ್ಮ ದಿನ ಆಚರಣೆ
-
ಮನರಂಜನೆ2 weeks ago
ಅಪ್ಪಿಕೊಂಡು ಪಪ್ಪಿಕೊಟ್ಟು ಮುದ್ದಾಡುವಾಗ ಸಿಕ್ಕಿ ಬಿದ್ದ ಅನುಶ್ರೀ
-
ಸುದ್ದಿ3 days ago
ಶ್ರೀಶ್ರೀಶ್ರೀ ಗುರು ಆದಿ ಜಾಂಬವಂತ ಸ್ವಾಮಿ ಜಯಂತಿ ಆಚರಣೆ
-
Politics1 week ago
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?