Connect with us

ಸುದ್ದಿ

ಚಾಲಕರ ವೇತನದಿಂದ ದಂಡದ ಮೊತ್ತ ವಸೂಲಿ

Published

on


ಬೆಂಗಳೂರು : ಸಂಚಾರ ನಿಯಮ ಉಲ್ಲಂಘಿಸುವ ಬಸ್ ಚಾಲಕರ ವೇತನದಿಂದ ದಂಡದ ಮೊತ್ತವನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ವಿಭಾಗಿಯ ಸಂಚಾರ ಅಧಿಕಾರಿಗಳ ಸಭೆಯಲ್ಲಿ ದಂಡದ ಮೊತ್ತ ಪಾವತಿ ಕುರಿತು ಚರ್ಚೆ ಮಾಡಲಾಯಿತು.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಕುಷ್ಟಗಿ ತಾಲೂಕಿನ ನಿಲೋಗಲ್ ಅಚುನುರ್ ಮಲ್ಲಯ್ಯ ಗ್ರಾಮದ ಕೆರೆಗೆ ಬಾಗಿನ ಅರ್ಪಣೆ

Published

on

ಅಭಿನವ ಶ್ರೀ ಗವಿಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದ ಕುಷ್ಟಗಿ ತಾಲೂಕಿನ ನಿಲೋಗಲ್ ಅಚುನುರ್ ಮಲ್ಲಯ್ಯ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಲಾಯಿತು ಕಾರ್ಯಕ್ರಮದಲ್ಲಿ ನಮ್ಮ ಜನಪ್ರಿಯ ಶಾಸಕರಾದ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ್ ಹಾಗು ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಮುಖಂಡರಾದ ಮಹಾಂತೇಶ್ ಅಗಸಿಮುಂದಿನ್ ಹಾಗು ಸ್ಥಳೀಯ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

Continue Reading

ಸುದ್ದಿ

ಮಸ್ಕಿ ಚೆನ್ನಬಸವ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಿ- ವೆಂಕಟೇಶ್ ವಂದಾಲ

Published

on

ರಾಯಚೂರು ಅ.24- ಮಸ್ಕಿ ಹಳ್ಳಕ್ಕೆ ಕೊಚ್ಚಿ ಹೋದ ಚೆನ್ನಬಸವ ಮಡಿವಾಳ ಕುಟುಂಬಕ್ಕೆ ಕೂಡಲೇ ಸರಕಾರ 30 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಭೋವಿ ವಡ್ಡರ ಯುಕರ ಸಂಘ ಜಿಲ್ಲಾ ಅಧ್ಯಕ್ಷರು ವೆಂಕಟೇಶ್ ವಂದಾಲ ಒತ್ತಾಯಿಸಿದರು.

ಕಳೆದ ಕೆಲವು ದಿನಗಳ ಹಿಂದೆ ಮಸ್ಕಿಯ ಹಿರೇಹಳ್ಳದಲ್ಲಿ ಪ್ರವಾದ ಹೊಂಡತಕ್ಕೆ ಕೊಚ್ಚಿ ಹೋದ ಚೆನ್ನಬಸವ ಮಡಿವಾಳ ಅವರನ್ನು ಸಂಬಂಧಿಸಿದ, ಅಧಿಕಾರಿಗಳು ಹಾಗೂ ಸಮಾಜದ ಮುಖಂಡರಗಳು ಸೇರಿ ಸತತ ಶೋಧ ಕಾರ್ಯ ನಡೆಸಿದರು. ಇಲ್ಲವರಿಗೂ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಬರಸಿಡಿಲು ಬಡದಂತಾಗಿದೆ.ಅವರು ಇಲ್ಲದೇ ಕುಟುಂಬದಲ್ಲಿ ನೀರವೆ ಮೌನ ಅವರಿಸಿದ್ದು, ಕೂಡಲೆ ಸರ್ಕಾರ ಅವರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ನೀಡಬೇಕು ಹಾಗೂ ಚೆನ್ನಬಸವ ಮಡಿವಾಳ ಅವರ ಪತ್ತೆಗಾಗಿ ಜಿಲ್ಲಾ ಆಡಳಿತ ತೊರೆತಗತಿಯಲ್ಲಿ ಕಾರ್ಯಚರಣೆ ಮುಂದುವರಿಸಿ, ಅವರ ಪತ್ತೆಹಚ್ಚುವ ಮೂಲಕ ಅವರ ಕುಟುಂಬಕ್ಕೆ ನ್ಯಾಯಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ವರದಿ ದುರ್ಗೇಶ್ ಬೋವಿ ಮಸ್ಕಿ.

Continue Reading

ಸುದ್ದಿ

ದಸರಾ: ಕಳೆಗುಂದಿದ ಮಾರುಕಟ್ಟೆ- ಈರುಳ್ಳಿ ಗ್ರಾಹಕರಿಗೆ ಬೆಲೆ

Published

on

ರಾಯಚೂರು,ಅ.24– ಕಳೆದ ಆರುತಿಂಗಳಿಂದ ಕೊರೋನಾ ಮಹಾಮಾರಿ ದೇಶವ್ಯಾಪಿ ಹಬ್ಬಿದೆ. ಇದರಿಂದ ಸಾಕಷ್ಟು ಜನರು ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ನಿರುದ್ಯೋಗಿಗಳಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಿಂಧೂಗಳ ಪವಿತ್ರ ಹಬ್ಬಗಳಲ್ಲೊಂದಾದ ದಸರಾ ಹಬ್ಬವು, ಸಾರ್ವಜನಿಕರು ಸಣ್ಣ ಪುಟ್ಟ ಉದ್ಯೋಗಗಳನ್ನು ಮಾಡಿಕೊಂಡು ಈ ಬಾರಿ ಸರಳವಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳು ಸೇರಿದಂತೆ ಇನ್ನಿತರೆ ವಸ್ತುಗಳ ಬೆಲೆ ಗಗನ್ನಕ್ಕೇರಿದೆ. ಆದರೂ ದೃತಿಗೆಡದೆ ಸಾರ್ವಜನಿಕರು ಸಾಲ ಮಾಡಿ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮುಂದಾಗಿದ್ದಾರೆ.


ಪ್ರತಿವರ್ಷ ದಸರಾದಲ್ಲಿ ಜನರಿಂದ ತುಂಬಿ ಹೋಗುತ್ತಿದ್ದ ನಗರದ ಭಂಗಿ ಕುಂಟ, ಮಾರುಕಟ್ಟೆ ಬಜಾರ್‌ನಲ್ಲಿ ಕೊರೋನಾದಿಂದಾಗಿ ಜನತೆ ಕಳೆಗುಂದಿಂತಾಗಿದ್ದು, ನಿನ್ನೆಯೆ ದಸರಾ ಹಬ್ಬದ ಪೂಜಾ ಸಾಮಗ್ರಿ ಖರೀದಿಯಲ್ಲಿ ಕೊಂಚ ಹಿನ್ನಡೆಯಾದಂತಿದೆ.

ಮೂರು ದಿನಗಳಿಂದ ಖರೀದಿ ಕಾರ್ಯದಲ್ಲಿ ನಿರತರಾಗುತ್ತಿದ್ದ ಜನರು, ಕೊರೋನಾ ವೈರಸ್‌ನಿಂದ ಹೊರಬರಲು ಯೋಚಿಸುವಂತಾಗಿದ್ದು, ವ್ಯಾಪಾರ ಕಳೆಗುಂದಿದೆ. ಕಳೆದ ಬಾರಿಗಿಂತ ಈ ಬಾರಿ ಹಣ್ಣು ಹಂಪಲು, ಕುಂಭಳಕಾಯಿ, ಬಾಳೆದಿಂಬು, ಚೆಂಡು ಹೂ ಸೇರಿದಂತೆ ಇನ್ನಿತರ ಪೂಜಾ ಸಾಮಾಗ್ರಿಗಳ ದರ ಆಕಾಶಕ್ಕೆರಿದೆ.

ಕೊರೋನಾ ವೈರಸ್‌ನಿಂದ ಜನರು ಖರೀದಿಗೆ ಹೊರ ಬರುತ್ತಿಲ್ಲ. ಹಬ್ಬವನ್ನು ಸರಳವಾಗಿ ಆಚರಿಸಲು ಇಷ್ಟ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಭಾರಿ ಮಳೆಯಿಂದಾಗಿ ರೈತರ ಬೆಳೆಗಳೆಲ್ಲ ಸಂಪೂರ್ಣ ಜಲಾವೃತವಾಗಿ ನಾಶವಾಗಿವೆ. ಆದ್ದರಿಂದ ಉಳಿದ ಸ್ವಲ್ಪ ಪ್ರಮಾಣದ ತರಕಾರಿ, ಹಣ್ಣು ಹಂಪಲು, ಹೂ ಸೇರಿದಂತೆ ಇನ್ನಿತರ ವಸ್ತುಗಳು ಆಗಮಿಸಿವೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಪ್ರತಿನಿಧಿಯಿಂದ ಮಾತನಾಡಿಸಿದಾಗ ವ್ಯಾಪಾರಿಯೊಬ್ಬರು
ಈರುಳ್ಳಿಬೆಲೆ ಮಾತ್ರ ಗಗಕ್ಕೇರಿದೆ. 1 ಕೆಜಿ ಈರುಳ್ಳಿ 50 ರೂ. ರಿಂದ 100. ರೂ. ತನಕ ಇದೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ನಿರತರಾಗಿದ್ದ ಗ್ರಾಹಕರನ್ನು ವಿಚಾರಿಸಿದಾಗ ಕೊರೋನಾ ವೈರಸ್‌ನಿಂದ ಹೊರಬರಲು ಭಯವಾಗುತ್ತಿದೆ. ಆದರೆ ಕೆಲ ಜನರು ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ವ್ಯಾಪಾರದಲ್ಲಿ ನಿರತರಾಗಿದ್ದು, ಇವರಿಗೆ ಕೊರೋನಾ ಅರಿವಿದೆಯ ಎಂಬ ಪ್ರಶ್ನೆ ಮೂಡುತ್ತಿದೆ. ದರಗಳು ಹೆಚ್ಚು ಕಡಿಮೆಯಾದರೂ ಹಬ್ಬದಂಗವಾಗಿ ಖರೀದಿಸಬೇಕಾದ ಅನಿವಾರ್ಯತೆ ಮೂಡಿದೆ ಎಂದರು.

ವರದಿ ದುರ್ಗೇಶ್ ಬೋವಿ ಮಸ್ಕಿ.

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್

satta king gali