ಸುದ್ದಿ
28 ರ ಕರ್ನಾಟಕ ಬಂದ್‍ಗೆ ಪ್ರಜಾ ಸಂಘರ್ಷ ಸಮಿತಿ ಸಂಘಟನೆ ಬೆಂಬಲ; ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ
ಗೌರಿಬಿದನೂರು;- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕ ನೀತಿ ಮತ್ತು ಮುಖ್ಯ ಮೂರು ಕಾಯ್ದೆಗಳ ಮಸೂದೆ ಅನುಮೋದನೆ ವಿರುಧ್ದ ಇದೇ 28 ರಂದು ನಡೆಯಲಿರುವ ಕರ್ನಾಟಕ ಬಂದ್ ಗೆ ಪ್ರಜಾ ಸಂಘರ್ಷ ಸಮಿತಿ ಸಂಘಟನೆ ಬೆಂಬಲವಿದೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು.
ಇಂದು ಅವರು ಪ್ರವಾಸ ನಿರೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೊಷ್ಥಿಯಲ್ಲಿ ಬಾಗವಹಿಸಿ ಮಾತನಾಡಿ ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಚುಕ್ಕಾಣಿ ಹಿಡಿದಾಗಿನಿಂದ ಆರ್ಥಿಕ ವ್ಯವಸ್ಥೆ ತೀವ್ರವಾಗಿ ಹದೆಗಟ್ಟಿದೆ, ಇದಕ್ಕೆ ಕಾರಣ ಅವರ ದಿಕ್ಕು ದಸೆ ಇಲ್ಲದ ನೀತಿಗಳು, ಕಾಯ್ದೆಗಳು ಜಾರಿ ಮಾಡಿದ್ದರಿಂದ. ಪ್ರಜಾಪ್ರಭತ್ವದ ಅಡಿಯಲ್ಲಿ ದೇಶದಲ್ಲಿ ಆಡಳಿತ ನಡೆಸುವಂತೆ ಕಾಣುತ್ತಿಲ್ಲ. ಇದಕ್ಕೆ ಉದಾ; ಮೊನ್ನೆ ರಾಜ್ಯಸಭೆಯಲ್ಲಿ ನಡೆದ ಕೆಲವು ಮುಖ್ಯವಾದ ಕಾಯ್ದೆಗಳನ್ನೂ ವಿರೋಧ ಪಕ್ಷಗಳ ಗೈರು ಹಾಜರಿಯಲ್ಲಿ ಮಸೂದೆ ಅನುಮೋದನೆ ಮಾಡಿ ಸಂವಿಧಾನ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ.
ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಕೃಷಿ ಭೂಮಿ ಕೃಷಿಯೇತರ ಬಳಕೆಗೆ ಮುಂದಾಗಲಿದೆ ಇದರಿಂದ ಆಹಾರ ಉತ್ಪನ್ನಗಳ ಕೊರತೆ ಕಂಡು ಬರವುದು. ದೇಶಕ್ಕೆ ವಾರ್ಷಿಕ 350 ಮಿಲಿಯನ್ ಟನ್ ಅಹಾರ ಬೇಕಾಗಿದೆ, ಸದ್ಯಕ್ಕೆ 260 ಮಿಲಿಯನ್ ಟನ್ ಲಭ್ಯವಿದೆ ಈ ಕಾಯ್ದೆಗಳ ತಿದ್ದುಪಡಿಯಿಂದ ಆಹಾರ ಉತ್ಪನ್ನಗಳು ಇನ್ನಷ್ಟು ಕೊರತೆಯುಂಟಾಗಿ, ಜನರಿಗೆ ಆಹಾರಕ್ಕೆ ಹಾಹಾಕಾರ ಉಂಟಾಗಿ ದೇಶದ ಪರಿಸ್ಥಿತಿ ದುಃಸ್ಥಿತಿಗೆ ಬರುವುದರಲ್ಲಿ ಸಂಶಯವಿಲ್ಲ . ಮೋದಿ ಆಡಳಿತ ಕೊನೆಗಾಣಿಸಲು ದೇಶದ ಮತದಾರ ಮುಂದಾಗಬೇಕು ಆಗ ಮಾತ್ರ ಈ ದೇಶಕ್ಕೆ ಉಳಿಗಾಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸರ್ಕಾರ ಕೊರೊನಾ ಭ್ರಷ್ಟಚಾರ ಮುಚ್ಚಿಕೊಳ್ಳಲು ಡ್ರಗ್ಸ್ ದಂಧೆಯನ್ನೂ ಮುಖ್ಯವಾಹಿನಿಗೆ ತಂದಿದ್ದಾರೆ ಜೊತೆಗೆ ವಿಧಾನ ಸಭೆ ಕಲಾಪಗಳಲ್ಲಿ ರೈತ ವಿರೋದಿ ನೀತಿಗಳಿಗೆ ಅನುಮೋದನೆ ನೀಡಿ ಜನರಿಗೆ ಕಂಟಕರಾಗಿದ್ದಾರೆ. ಇವರ ಆಡಳಿತ ವಿರೋಧಿಸಿ ಇದೇ 28 ರಂದು ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸುತ್ತವೆ ಎಂದರು.
ಸುದ್ದಿಗೊಷ್ಥಿಯಲ್ಲಿ ಸಂಘಟನೆಯ ಜಿಲ್ಲಾ ಸಹ ಸಂಚಾಲಕ ಅರ್.ಎನ್.ರಾಜು, ಭರತ್ ರೈತ ಚಿಗಟಗೇರೆ ಶ್ರೀನಿವಾಸ್ ಮುಂತಾದವರು ಹಾಜರಿದ್ದರು.
ವರದಿ: ಸಿದ್ದಪ್ಪ ಗೌರಿಬಿದನೂರು
ಸುದ್ದಿ
ಮಲ್ಲಸಂದ್ರದಲ್ಲಿ ಸರ್ಕಾರಿ ವೈದ್ಯೆಗೆ ಮೊದಲ ಲಸಿಕೆ
ಪೀಣ್ಯ ದಾಸರಹಳ್ಳಿ : ರಾಷ್ಟ್ರವ್ಯಾಪಿ ಬೃಹತ್ ಕೊರೊನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡುತ್ತಿದ್ದಂತೆ ಕ್ಷೇತ್ರದ ಮಲ್ಲಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಮುಂಜಾಗ್ರತಾ ಕ್ರಮಗಳೊಂದಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಸರ್ಕಾರಿ ವೈದ್ಯೆ ಡಾ.ಕೋಮಲ ಅವರು ಮೊದಲ ಲಸಿಕೆ ಪಡೆದರು.
ಈ ವೇಳೆ ಪ್ರತಿಕ್ರಿಯಿಸಿದ ಡಾ. ಕೋಮಲ
ಮಹಾಮಾರಿ ಕೊರೊನಾದಿಂದ ಮುಕ್ತಿ ಪಡೆಯಲು ಲಸಿಕೆ ಅತ್ಯಗತ್ಯವಾಗಿರುವುದನ್ನು ಮನಗಂಡು ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆದು ಕ್ಷೇಮವಾಗಿದ್ದೇನೆ. ನಾಗರಿಕರು ಭಯಪಡದೆ ಲಸಿಕೆ ಪಡೆಯಲು ಮುಂದಾಗಿ ಎಂದರು.
ಮಲ್ಲಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಯಾನಂದ್ ಮಾತನಾಡಿ ಆರೋಗ್ಯ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಒಳಗೊಂಡ ಸುಮಾರು ಐವತ್ತು ಜನ ಕೊರೊನಾ ವಾರಿಯರ್ಸ್ ಗೆ
ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದವರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ ಆರಾಮವಾಗಿದ್ದೇವೆ. ಸರ್ಕಾರ ಹಾಗೂ ಬಿಬಿಎಂಪಿ ಲಸಿಕೆ ನೀಡುವ ಕಾರ್ಯಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿತ್ತು ಮುಂದಿನ ಹಂತಗಳಲ್ಲಿ ಲಸಿಕೆ ಜನಸಾಮಾನ್ಯರಿಗೂ ಲಭ್ಯವಾಗಲಿದ್ದು ನಿರಾಂತಕವಾಗಿ ಪಡೆಯಬಹುದು ಎಂದರು
ದಾಸರಹಳ್ಳಿ ವಲಯದ ಆರೋಗ್ಯಾಧಿಕಾರಿ ಡಾ.ಲೋಕೇಶ್, ಜಂಟಿ ಆಯುಕ್ತ ನರಸಿಂಹಮೂರ್ತಿ ಶಾಸಕ ಆರ್. ಮಂಜುನಾಥ್ ಮೊದಲಾದವರಿದ್ದರು.
Politics
ರಾಜ್ಯದಲ್ಲಿ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಚಾಲನೆ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ರಾಜ್ಯದಲ್ಲಿ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಶ್ರೀಮತಿ ನಾಗರತ್ನ ಅವರಿಗೆ ಮೊದಲ ಲಸಿಕೆ ನೀಡುವ ಮೂಲಕ ರಾಜ್ಯಾದ್ಯಂತ ಲಸಿಕೆ ವಿತರಣೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳು ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕೆ ಅಭಿಯಾನಕ್ಕೆ ರಾಜ್ಯದಲ್ಲಿ ಚಾಲನೆ ನೀಡಿದ ನಂತರ ಈ ಕುರಿತ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.
ಸುದ್ದಿ
ಜಿಲ್ಲೆಯಲ್ಲಿ ಇಂದು ಕೊರೊನಾ ಲಸಿಕೆ ವಿತರಣೆ
ಚಿಕ್ಕಬಳ್ಳಾಪುರ: ಇಂದು ಜಿಲ್ಲಾಧಿಕಾರಿ ಶ್ರೀಮತಿ ಆರ್.ಲತಾರವರು ಜಿಲ್ಲೆಯಲ್ಲಿ ಕೊರೊನಾ ಲಸಿಕೆ ವಿತರಣೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮೊದಲ ಲಸಿಕೆಯನ್ನು ಆರೋಗ್ಯ ಇಲಾಖೆಯ ನೌಕರರಿಗೆ ನೀಡುವ ಮೂಲಕ ಚಾಲನೆಯನ್ನು ನೀಡಿದರು. ಹಾಗೂ ಜಿಲ್ಲೆಯಾದ್ಯಂತ ಲಸಿಕೆ ವಿತರಣೆ ಆರಂಭವಾಗಿದ್ದು ಜಿಲ್ಲೆಯ ವಿವಿಧ ಲಸಿಕಾ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀಮತಿ ಇಂದಿರಾ ಕಬಾಡೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರು ಉಪಸ್ಥಿತರಿದ್ದರು.
-
ಸುದ್ದಿ2 weeks ago
ಡಿಜಿಟಲ್ ಸ್ಮಾಟ್೯ ಕ್ಲಾಸ್ ನಲ್ಲಿ ಸಾವಿತ್ರಿ ಭಾಯಿ ಫುಲೆಯವರ ಜನ್ಮ ದಿನ ಆಚರಣೆ
-
ಮನರಂಜನೆ2 weeks ago
ಅಪ್ಪಿಕೊಂಡು ಪಪ್ಪಿಕೊಟ್ಟು ಮುದ್ದಾಡುವಾಗ ಸಿಕ್ಕಿ ಬಿದ್ದ ಅನುಶ್ರೀ
-
ಸುದ್ದಿ3 days ago
ಶ್ರೀಶ್ರೀಶ್ರೀ ಗುರು ಆದಿ ಜಾಂಬವಂತ ಸ್ವಾಮಿ ಜಯಂತಿ ಆಚರಣೆ
-
Politics7 days ago
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?