Connect with us
Ad Widget

ವ್ಯಕ್ತಿ ವಿಶೇಷ

‘ಜನಸೇವೆಯೇ ಜನಾರ್ದನನ ಸೇವೆ’ ಮಾದರಿಯಂತೆ ಬಾಯಿದೊಡ್ಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಿಟ್ಟಿ ನರಸಣ್ಣ -ರಂಗಸ್ವಾಮಿ

Published

on

ರಾಯಚೂರು ಅ. 12- ತಾಲೂಕು ವ್ಯಾಪ್ತಿಯಲ್ಲಿ ಬರುವ
ಬಾಯಿದೊಡ್ಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಿಟ್ಟಿ ನರಸಣ್ಣ ರವರ ತಮ್ಮ ಅಧ್ಯಕ್ಷ ಅವಧಿಯಲ್ಲಿ ಹಲವಾರು ಒಳ್ಳೆಯ ಕೆಲಸಗಳನ್ನು ನಮ್ಮ ವಡವಾಟಿ ಗ್ರಾಮದಲ್ಲಿ ನೀವು ಮಾಡಿದ್ದೀರಿ ವೆಂದು ರಂಗಸ್ವಾಮಿ ಹೇಳಿದರು.

ಸಮಾಜ ಕಾರ್ಯ ಹಿಂದೆಂದೂ ಕಾಣದ ಅಭಿವೃದ್ದಿಯನ್ನು ನಮ್ಮ ಬಾಯಿದೊಡ್ಡಿ ಗ್ರಾಮ ಪಂಚಾಯತ್ ಖಂಡಿದೆ.
ಊರಿನ ಪ್ರತಿಯೊಂದು ಮನೆಯಲ್ಲಿ ಸಹಜ ಮರಣ ಹೊಂದಿದರೆ ಹಾಗೂ ಮನೆಯಲ್ಲಿ ಜನಿಸಿದ ಕೂಸಿಗೆ ಐದು ಸಾವಿರ ರೂಪಾಯಿಗಳನ್ನು ಕೊಡುವ ಮಹಾಧಾನಿಯಾಗಿ ನೀವು ಆಗಿದ್ದೀರಿ.

ಇಷ್ಟು ವರ್ಷಗಳಾದರೂ ವಡವಾಟಿ ಗ್ರಾಮದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳನ್ನು ನೀನು ಪ್ರತಿಯೊಂದು ಓಣಿಯಲ್ಲಿ ಚರಂಡಿ ಮತ್ತು ಸಿಸಿ ರಸ್ತೆಯನ್ನು ನಿರ್ಮಿಸಿ ಒಂದು ಲೆಕ್ಕದಲ್ಲಿ ಮಾದರಿ ಗ್ರಾಮವನ್ನು ನಿರ್ಮಾಣ ಮಾಡುವಲ್ಲಿ ನಿನ್ನ ಪರಿಶ್ರಮ ಶ್ಲಾಘನೀಯ.ನೀನು ಮಾಡಿದ ಶೌಚಾಲಯ ಅಭಿಯಾನ ಕಾರ್ಯಕ್ರಮವು ಇಡೀ ನಮ್ಮ ರಾಯಚೂರು ಜಿಲ್ಲೆಗೆ ವಡವಾಟಿ ಗ್ರಾಮ ಮಾದರಿಯಾಯಿತು.

ನೀನು ವಯಸಿನಲ್ಲಿ ಚಿಕ್ಕವನಾದರೂ ಕೂಡ ನಿನ್ನಲ್ಲಿ ಹಿರಿತರವಾದ ಗುಣ ಸಂಪನ್ನ ಹೊಂದಿದ ವ್ಯಕ್ತಿತ್ವ ನಿನ್ನದು.ಹೊಸ ಶಾಲೆ ನಿರ್ಮಾಣದ ಹಾಗೂ ಅದಕ್ಕೆ ಜಾಗವನ್ನು ಆಕ್ರಮಿಸಿಕೊಂಡ ಕಾರ್ಯದಲ್ಲಿ ನೀನು ಮಾಡಿದ ಕಾರ್ಯವು ವರ್ಣಿಸಲು ಅಸಾಧ್ಯ ವಾಗಿದೆ . ಬಡವರ ಅರಿತು ಪ್ರತಿಯೊಬ್ಬರಿಗೆ ಆರ್ಥಿಕ ಸಹಾಯ ಹಸ್ತ ನೀಡಿ ಅವರನ್ನು ಬಂಧುಗಳ ಹಾಗೆ ನೋಡಿಕೊಂಡು ಅವರಿಗೆ ನೀನು ಯಜಮಾನ ಆದೆ.ಹಿಡಿದ ಕೆಲಸ ಎಂತಹುದೇ ಇರಲಿ ಕಷ್ಟ ನಷ್ಟ ಬಂದರೂ ನಿಮ್ಮೊಂದಿಗೆ ನಾನಿದ್ದೀನಿ ಎಂದು ಧೈರ್ಯ ತುಂಬುವ ಜನ ನಾಯಕ ನೀನು. ನಿನ್ನಂತಹ ಕ್ರಿಯಾಶೀಲ ಜನನಾಯಕ ನಮ್ಮ ಗ್ರಾಮದಲ್ಲಿ ಹುಟ್ಟಿರುವುದಕ್ಕೆ ಇದು ಹೆಮ್ಮೆಯ ಸಂಗತಿ.ನೀನು ಅಧಿಕಾರದಲ್ಲಿರುವ ಗ್ರಾಮ ಪಂಚಾಯತ್ ಇಷ್ಟೊಂದು ಅಭಿವೃದ್ಧಿಯಾಗಬೇಕಾದರೆ ನಿನಗೆ ನೀನು ಎಷ್ಟು ನಿಷ್ಠಾವಂತ ನಾಯಕ ಎಂದು ಕಾಣುತ್ತದೆ ಹಾಗೆ ನನ್ನ ಆಸೆಯಂತೇಯೆ ನಿನಗೆ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಅಧಿಕಾರ ಲಭಿಸಿ ಎಂದು ಮಾತನಾಡಿದರು.

ಬಡವರ ಕಣ್ಣೀರನ್ನು ಒರೆಸುವ ನಮ್ಮ ನಗರ ಶಾಸಕ ಡಾ. ಎಸ್. ಶ್ರೀ ಶಿವರಾಜ್ ಪಾಟೀಲ್ ರವರಂತೆ ನೀನು ಬೆಳೆಯಬೇಕೆಂದು ನಮ್ಮ ಎಲ್ಲರ ಆಸೆ ಎಂದು ರಂಗಸ್ವಾಮಿ ಸಂತೋಷ ವ್ಯಕ್ತಪಡಿಸಿದರು.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ವ್ಯಕ್ತಿ ವಿಶೇಷ

ಮಗಳಿಗೆ ಸೆಲ್ಯೂಟ್ ಹೊಡೆದ ಅಪ್ಪ

Published

on

ತಿರುಪತಿ: ಸ್ವಂತ ಮಗಳು ತನಗಿಂತ ಉನ್ನತ ಹುದ್ದೆಯಲ್ಲಿದ್ದು ಎದುರಾದಾಗ ಸೆಲ್ಯೂಟ್ ಹೊಡೆದು ತಂದೆಗೆ ಹೆಮ್ಮೆಯ ಕ್ಷಣ ಅವಿಸ್ಮರಣೀಯ. ಇದು ಸಿನಿಮಾ ಕಥೆಯಲ್ಲಿ ಬದಲಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ತನಗಿಂತ ಉನ್ನತ ಅಧಿಕಾರಿಯಾದ ಸ್ವಂತ ಮಗಳಿಗೇ ಸಲ್ಯೂಟ್ ಹೊಡೆಯುತ್ತಿರುವ ಒಂದು ಅಸ್ಮರಣೀಯ ಘಟನೆ ನಡೆದಿದೆ.

ಆಂಧ್ರ ಪ್ರದೇಶದ ಈ ಅಪ್ಪ, ಮಗಳು ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೊದಲ ಬಾರಿ ಕರ್ತವ್ಯದ ಮೇಲೆ ಇಬ್ಬರು ಎದುರಾದ ಸಂದರ್ಭ ಅಪ್ಪ ಮಗಳಿಗೆ ಸಲ್ಯೂಟ್ ಹೊಡೆದ ಹೃದಯಸ್ಪರ್ಶಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಂಧ್ರದ ತಿರುಪತಿಯಲ್ಲಿ ಭಾನುವಾರ ಪೊಲೀಸ್ ಇಲಾಖೆ ಸಭೆ “ಇಗ್ನೈಟ್” ಅನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಅಪ್ಪ ಮಗಳು ಎದುರಾಗಿದ್ದಾರೆ. ಇದೇ ಮೊದಲ ಬಾರಿಗೆ ಕರ್ತವ್ಯದ ಮೇಲೆ ಇಬ್ಬರೂ ಭೇಟಿಯಾಗಿದ್ದು, ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಪ್ಪ ಯೆಂಡಲೂರು ಶ್ಯಾಮ್ ಸುಂದರ್ ಹಾಗೂ ಡಿವೈಎಸ್ ಪಿ ಆಗಿರುವ ಮಗಳು ವೈ ಜೆಸ್ಸಿ ಪ್ರಶಾಂತಿ ಅವರಿಗೆ ಸಲ್ಯೂಟ್ ಹೊಡೆದಿದ್ದಾರೆ.

ನನ್ನ ತಂದೆಯೇ ನನಗೆ ದೊಡ್ಡ ಸ್ಫೂರ್ತಿ. ಜನರ ಸೇವೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುತ್ತಾ ಬಂದ ತಂದೆಯನ್ನು ನೋಡಿ ಬೆಳೆದವಳು ನಾನು. ತನ್ನ ಕೈಯಿಂದ ಆಗುವ ಸಹಾಯವನ್ನು ಆಗಿನಿಂದ ಮಾಡುತ್ತಾ ಬಂದಿದ್ದಾರೆ. ಅದೇ ಕಾರಣ ನಾನು ಇಲಾಖೆಗೆ ಸೇರಲು ಸ್ಫೂರ್ತಿ 2018ರಲ್ಲಿ ಪೊಲೀಸ್ ಇಲಾಖೆ ಸೇರಿದೆ ಪ್ರಶಾಂತಿ ಖಾಸಗಿ ಪತ್ರಿಕೆಗೆ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೈ ಶ್ಯಾಮ್ ಸುಂದರ್ ಅವರು, “ನನ್ನ ಮಗಳು ಪ್ರಾಮಾಣಿಕವಾಗಿ ಇಲಾಖೆಗೆ ಸೇವೆ ಸಲ್ಲಿಸುತ್ತಾಳೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ.

ಒಟ್ಟಿನಲ್ಲಿ ಯಾವುದೇ ತಂದೆ ತಾಯಿಗೆ ತಮ್ಮ ಮಕ್ಕಳು ತಮಗಿಂತಲೂ ಉನ್ನತ ಮಟ್ಟಕ್ಕೆ ಏರಬೇಕು ಎನ್ನುತ್ತಾರೆ. ಅದರಂತೆ ಆದಾಗ ಆ ತಂದೆ ತಾಯಿಗಳ ಸಂತಸಕ್ಕೆ ಪಾರವೇ ಇರುವುದಿಲ್ಲ.

Continue Reading

ವ್ಯಕ್ತಿ ವಿಶೇಷ

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿರುವ ಬಾಲಕ ಯಥಾರ್ಥ್ ಮೂರ್ತಿ ಇಂದು ಮುಖ್ಯಮಂತ್ರಿ ಭೇಟಿ

Published

on

ಬೆಂಗಳೂರು : ಜಗತ್ತಿನ ಎಲ್ಲ ದೇಶಗಳ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಎರಡು ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿರುವ ಬಾಲಕ ಯಥಾರ್ಥ್ ಮೂರ್ತಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದರು.

ಜಗತ್ತಿನ ಎಲ್ಲ ದೇಶಗಳ ರಾಷ್ಟ್ರಗೀತೆಯನ್ನು ಹಾಡಿ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ, ಭ್ರಾತೃತ್ವಗಳ ಸಂದೇಶವನ್ನು ಸಾರಲು ಹೊರಟಿರುವ ಯಥಾರ್ಥ್ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿದ್ದಾನೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.

Continue Reading

ವ್ಯಕ್ತಿ ವಿಶೇಷ

ಕುಲವೆನ್ನದೆ ಕಲಾವಿದನ ಕುಂಚದಲ್ಲಿ ಅರಳಿದ ಧಾರ್ಮಿಕ ಶಿಲೆಗಳು

Published

on

ಮಸ್ಕಿ : ತಾಲೂಕಿನ ಬಳಗಾನೂರು ಪಟ್ಟಣದ ಮೇಗಡೆಪೇಟೆಯ ಚೌಡೇಶ್ವರಿ ದೇವಸ್ಥಾನದ ಚೌಡೇಶ್ವರಿ ದೇವಿಯ ಮೂಲವಿಗ್ರಹಕ್ಕೆ ಕುಂಚ ಹಿಡಿದು ನವ ಮೂರ್ತಿಯೂ ನಾಚುವಂತಹ ಮೆರುಗನ್ನು ನೀಡಿದ್ದಾನೆ.

ಕಲೆ ಎಂಬುದು ಕುಲಧರ್ಮ ಮೀರಿದ್ದು. ಎಂಬುವ ಸತ್ಯ ಕಾಲದಿಂದ ಕಾಲಕ್ಕೆ ತನ್ನ ಇರುವಿಕೆಯನ್ನು ಸಾರುತ್ತಲೇ ಬಂದಿರುವುದಕ್ಕೆ ನಿದರ್ಶನ.

ಕಲೆ ಕಲಾವಿದರು ಗಡಿ ಭಾಷೆ ಮೀರಿದವರೆಂಬುದನ್ನು ನಾವೆಲ್ಲ ಒಪ್ಪಲೇ ಬೇಕು. ಅದಕ್ಕೆ ಸಾಕ್ಷಿ ಎಂಬಂತೆ ಬೆಳಗಾಂವ್ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೋತಳಿ ಗ್ರಾಮದ
ರಮ್ಜಾನ್ ನಭಿಸಾಬ್ ಮುಜಾವರ್ ಎನ್ನುವ ಇಸ್ಲಾಮ್ ಧರ್ಮದ ಕಲಾವಿದ ಇಂದಿನ ವ್ಯಕ್ತಿ ವಿಶೇಷ.

ಇವರನ್ನು ದೇವಾಂಗಸಮಾಜದ ಅಮರೇಶ ಹೆಂಬಾ ಹಾಗೂ ಸಮಾಜಬಾಂಧವರು ಕರೆಯಿಸಿದ್ದಾರೆ. ಅವರ ಕೆಲಸಕ್ಕೆ ಕೂಲಿಯನ್ನು ಪಡೆಯುತ್ತಾರೆಯಾದರೂ ಅವರ ಕಲೆಗೆ ಬೆಲೆ ಕಟ್ಟಲಾಗದು.ಅಮರೇಶ ಹೆಂಬಾ ಅವರ ಸಹಕಾರವನ್ನು ನಭಿಸಾಬ್ ಮುಜಾವರ್ ರವರು ನೆನೆಯುವದಾ ಮರೆಯಲಿಲ್ಲ.

ದೇವಸ್ಥಾನದ ಗೋಡೆಗಳಿಗೆ ದೇವಿಯ ತೈಲವರ್ಣದ ಚಿತ್ರಗಳನ್ನು ಜೀವ ಒಂದನ್ನು ಬಿಟ್ಟು ಉಳಿದೆಲ್ಲವೂ ಸಜೀವ ಬೊಂಬೆ ಏನೋ ಎಂಬಂತಹ ಭಾವ ಮೂಡುವ, ರವಿವರ್ಮನನ್ನೇ ಚಕಿತಗೊಳಿಸುವಂತೆ ಕುಂಚಕ್ಕೆ ಕೆಲಸನೀಡುವ ಇವರ ಕಲಾಕೌಶಲ್ಯ ಕುಲ ಧರ್ಮ ಸೀಮೆಯನ್ನೇ ಮೀರಿ ನಿಂತಿದೆ. ಇವರು ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರ ರಾಜ್ಯಗಳ ಸುಮಾರು 150ಕ್ಕೂ ಹೆಚ್ಚು ದೇವಾಲಯಗಳಿಗೆ ತಮ್ಮ ತೈಲವರ್ಣ ಚಿತ್ರಗಳ ಕಲಾಸೇವೆಗೈದಿರುವದು ಅವರ ಕಲಾಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇಂತವರ ಕಲೆಯನ್ನು ಸರಕಾರವಾಗಲಿ ಕಲಾಪೋಷಕರಾಗಲಿ ಗುರುತಿಸಿ ಗೌರವ ಸನ್ಮಾನ ಪ್ರಶಸ್ತಿಗಳನ್ನು ನೀಡದಿರುವದು ವಿಪರ್ಯಾಸಕರ ಸಂಗತಿಯಾಗಿದೆ. ಇಂತಹ ಕಲಾವಿದರು ಇತ್ತೀಚಿನ ದಿನಗಳಲ್ಲಿ ಕಾಣಸಿಗುವದು ದುರ್ಲಭ. ಆ ಕಲಾ ದೇವತೆ ಯಾವ ಜಾತಿ ಧರ್ಮ ಕುಲ ವನ್ನು ನೋಡಿ ಒಲಿಯುವವಳಲ್ಲ, ಅವಳಿಗಿಷ್ಟವಾದ ರೀತಿ ಆರಾಧಿಸುವವರು ಯಾರಾದರೇನು ಅವರಿಗೆ ಒಲಿಯುವವಳು ಎಂಬ ನುಡಿ ಇಲ್ಲಿ ಕುಡಿಯೊಡೆದಿದೆ.

ಅಕ್ಷಯ್, ನಿಹಾಲ್, ಅಬುಸುಫಿಯಾನ್, ಹೃಷಿಕೇಶ್, ಅವರ ಸಹಾಯಕರು. ಇಂತಹ ನೂರಾರು ಸಹಾಯಕರಿಗೆ ತರಬೇತಿ ನೀಡಿ ಬದುಕು ಕಲ್ಪಿಸಿಕೊಡುವ ಕೆಲಸವೂ ಅವರು ಮಾಡಿರುವದು ಅವರ ಸಮಾಜಮುಖಿ ಕಾರ್ಯಕ್ಕೆ ಜೀವಂತ ನಿದರ್ಶನವಾಗಿದೆ. ಕಲಾವಿದನಿಗೆ ಎಲ್ಲಿದ್ದರೂ ಮರ್ಯಾದೆ ಇದ್ದೆ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್