ವ್ಯಕ್ತಿ ವಿಶೇಷ
ಸಾಧನೆಗೆ ಅಂಗವಿಕಲತೆ ಅಡ್ಡಿಯಾಗುವುದಿಲ್ಲ
ಗೌರಿಬಿದನೂರು : ತಾಲೂಕಿನ ನಾಗಸಂದ್ರ ಗ್ರಾಮದವರಾದ ಅಂತರರಾಷ್ಟ್ರೀಯ ವೀಲ್‍ಛೇರ್ ಫೆನ್ಸಿಂಗ್ ಕ್ರೀಡೆಯ ಕ್ರೀಡಾ ಪಟು ವೆಂಕಟೇಶ ಬಾಬು ರವರನ್ನು ಬೆಂಗುಳೂರಿನಲ್ಲಿ ಕೆ.ಎನ್. ಪೌಂಡೇಷನ್ ಸಂಸ್ಥೆಯವರು ಅವರ ಸಾಧನೆಗಳನ್ನು ಮೆಚ್ಚಿ ಸನ್ಮಾನಿಸಿದರು.
ಈ ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡುತ್ತಾ, ಸಾಧನೆಗೆ ಅಂಗವಿಕಲತೆ ಅಡ್ಡಿ ಆಗುವುದಿಲ್ಲ. ಮಾನಸಿಕವಾದ ದೃಢತ್ವ, ಏಕಾಗ್ರತೆ, ಸಾಧಿಸಬೇಕೆಂಬ ಗುರಿ ಇರಬೇಕಾಗಿದೆ.ವೆಂಕಟೇಶ ಬಾಬು ಒಂದು ಕಾಲಿಲ್ಲದಿದ್ದರೂ ವೀಲ್ ಛೇರ್ ಮೇಲೆ ಕುಳಿತು ಕತ್ತಿ ಯುದ್ದ ಮಾಡುವ ವೀಲ್ ಛೇರ್ ಫೆನ್ಸಿಂಗ್ ಕ್ರೀಡೆಯಲ್ಲಿ ಅನೇಕ ದೇಶಗಳನ್ನು ಸುತ್ತಿ ವಿವಿಧ ಅಂತರರಾಷ್ಟ್ರೀ ಪಂದ್ಯಗಳಲ್ಲಿ ಭಾಗವಹಿಸಿ ಬೆಳ್ಳಿ ಪತಕಗಳನ್ನು ಪಡೆದಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿದ್ದರೂ ಇವರ ಸಾಧನೆಗೆ ಮೆಚ್ಚಿ ಅನೇಕ ಸಂಸ್ಥೆಗಳು ಸಹಾಯ ಹಸ್ತ ಚಾಚಿದೆ. ಇವರು ಚಿಕ್ಕವರಾಗಿದ್ದಾಗ ಎತ್ತಿನ ಗಾಡಿ ಇಂದ ಬಿದ್ದು ಕಾಲನ್ನು ಕಳದುಜೊಂಡಿದ್ದಾರೆ. ಇವರ ಸಾಧನೆಗೆ ಮೆಚ್ಚಿ ಕೆ.ಎನ್. ಸಂಸ್ಥೆ ಇವರನ್ನು ಸನ್ಮಾನಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಜ್ರಮುನಿ, ಶ್ರೀನಿವಾಸ್, ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.
ವ್ಯಕ್ತಿ ವಿಶೇಷ
ಮಗಳಿಗೆ ಸೆಲ್ಯೂಟ್ ಹೊಡೆದ ಅಪ್ಪ
ತಿರುಪತಿ: ಸ್ವಂತ ಮಗಳು ತನಗಿಂತ ಉನ್ನತ ಹುದ್ದೆಯಲ್ಲಿದ್ದು ಎದುರಾದಾಗ ಸೆಲ್ಯೂಟ್ ಹೊಡೆದು ತಂದೆಗೆ ಹೆಮ್ಮೆಯ ಕ್ಷಣ ಅವಿಸ್ಮರಣೀಯ. ಇದು ಸಿನಿಮಾ ಕಥೆಯಲ್ಲಿ ಬದಲಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ತನಗಿಂತ ಉನ್ನತ ಅಧಿಕಾರಿಯಾದ ಸ್ವಂತ ಮಗಳಿಗೇ ಸಲ್ಯೂಟ್ ಹೊಡೆಯುತ್ತಿರುವ ಒಂದು ಅಸ್ಮರಣೀಯ ಘಟನೆ ನಡೆದಿದೆ.
ಆಂಧ್ರ ಪ್ರದೇಶದ ಈ ಅಪ್ಪ, ಮಗಳು ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೊದಲ ಬಾರಿ ಕರ್ತವ್ಯದ ಮೇಲೆ ಇಬ್ಬರು ಎದುರಾದ ಸಂದರ್ಭ ಅಪ್ಪ ಮಗಳಿಗೆ ಸಲ್ಯೂಟ್ ಹೊಡೆದ ಹೃದಯಸ್ಪರ್ಶಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರದ ತಿರುಪತಿಯಲ್ಲಿ ಭಾನುವಾರ ಪೊಲೀಸ್ ಇಲಾಖೆ ಸಭೆ “ಇಗ್ನೈಟ್” ಅನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಅಪ್ಪ ಮಗಳು ಎದುರಾಗಿದ್ದಾರೆ. ಇದೇ ಮೊದಲ ಬಾರಿಗೆ ಕರ್ತವ್ಯದ ಮೇಲೆ ಇಬ್ಬರೂ ಭೇಟಿಯಾಗಿದ್ದು, ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಪ್ಪ ಯೆಂಡಲೂರು ಶ್ಯಾಮ್ ಸುಂದರ್ ಹಾಗೂ ಡಿವೈಎಸ್ ಪಿ ಆಗಿರುವ ಮಗಳು ವೈ ಜೆಸ್ಸಿ ಪ್ರಶಾಂತಿ ಅವರಿಗೆ ಸಲ್ಯೂಟ್ ಹೊಡೆದಿದ್ದಾರೆ.
ನನ್ನ ತಂದೆಯೇ ನನಗೆ ದೊಡ್ಡ ಸ್ಫೂರ್ತಿ. ಜನರ ಸೇವೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುತ್ತಾ ಬಂದ ತಂದೆಯನ್ನು ನೋಡಿ ಬೆಳೆದವಳು ನಾನು. ತನ್ನ ಕೈಯಿಂದ ಆಗುವ ಸಹಾಯವನ್ನು ಆಗಿನಿಂದ ಮಾಡುತ್ತಾ ಬಂದಿದ್ದಾರೆ. ಅದೇ ಕಾರಣ ನಾನು ಇಲಾಖೆಗೆ ಸೇರಲು ಸ್ಫೂರ್ತಿ 2018ರಲ್ಲಿ ಪೊಲೀಸ್ ಇಲಾಖೆ ಸೇರಿದೆ ಪ್ರಶಾಂತಿ ಖಾಸಗಿ ಪತ್ರಿಕೆಗೆ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೈ ಶ್ಯಾಮ್ ಸುಂದರ್ ಅವರು, “ನನ್ನ ಮಗಳು ಪ್ರಾಮಾಣಿಕವಾಗಿ ಇಲಾಖೆಗೆ ಸೇವೆ ಸಲ್ಲಿಸುತ್ತಾಳೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ.
ಒಟ್ಟಿನಲ್ಲಿ ಯಾವುದೇ ತಂದೆ ತಾಯಿಗೆ ತಮ್ಮ ಮಕ್ಕಳು ತಮಗಿಂತಲೂ ಉನ್ನತ ಮಟ್ಟಕ್ಕೆ ಏರಬೇಕು ಎನ್ನುತ್ತಾರೆ. ಅದರಂತೆ ಆದಾಗ ಆ ತಂದೆ ತಾಯಿಗಳ ಸಂತಸಕ್ಕೆ ಪಾರವೇ ಇರುವುದಿಲ್ಲ.
ವ್ಯಕ್ತಿ ವಿಶೇಷ
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿರುವ ಬಾಲಕ ಯಥಾರ್ಥ್ ಮೂರ್ತಿ ಇಂದು ಮುಖ್ಯಮಂತ್ರಿ ಭೇಟಿ
ಬೆಂಗಳೂರು : ಜಗತ್ತಿನ ಎಲ್ಲ ದೇಶಗಳ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಎರಡು ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿರುವ ಬಾಲಕ ಯಥಾರ್ಥ್ ಮೂರ್ತಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದರು.
ಜಗತ್ತಿನ ಎಲ್ಲ ದೇಶಗಳ ರಾಷ್ಟ್ರಗೀತೆಯನ್ನು ಹಾಡಿ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ, ಭ್ರಾತೃತ್ವಗಳ ಸಂದೇಶವನ್ನು ಸಾರಲು ಹೊರಟಿರುವ ಯಥಾರ್ಥ್ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿದ್ದಾನೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ವ್ಯಕ್ತಿ ವಿಶೇಷ
ಕುಲವೆನ್ನದೆ ಕಲಾವಿದನ ಕುಂಚದಲ್ಲಿ ಅರಳಿದ ಧಾರ್ಮಿಕ ಶಿಲೆಗಳು
ಮಸ್ಕಿ : ತಾಲೂಕಿನ ಬಳಗಾನೂರು ಪಟ್ಟಣದ ಮೇಗಡೆಪೇಟೆಯ ಚೌಡೇಶ್ವರಿ ದೇವಸ್ಥಾನದ ಚೌಡೇಶ್ವರಿ ದೇವಿಯ ಮೂಲವಿಗ್ರಹಕ್ಕೆ ಕುಂಚ ಹಿಡಿದು ನವ ಮೂರ್ತಿಯೂ ನಾಚುವಂತಹ ಮೆರುಗನ್ನು ನೀಡಿದ್ದಾನೆ.
ಕಲೆ ಎಂಬುದು ಕುಲಧರ್ಮ ಮೀರಿದ್ದು. ಎಂಬುವ ಸತ್ಯ ಕಾಲದಿಂದ ಕಾಲಕ್ಕೆ ತನ್ನ ಇರುವಿಕೆಯನ್ನು ಸಾರುತ್ತಲೇ ಬಂದಿರುವುದಕ್ಕೆ ನಿದರ್ಶನ.
ಕಲೆ ಕಲಾವಿದರು ಗಡಿ ಭಾಷೆ ಮೀರಿದವರೆಂಬುದನ್ನು ನಾವೆಲ್ಲ ಒಪ್ಪಲೇ ಬೇಕು. ಅದಕ್ಕೆ ಸಾಕ್ಷಿ ಎಂಬಂತೆ ಬೆಳಗಾಂವ್ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೋತಳಿ ಗ್ರಾಮದ
ರಮ್ಜಾನ್ ನಭಿಸಾಬ್ ಮುಜಾವರ್ ಎನ್ನುವ ಇಸ್ಲಾಮ್ ಧರ್ಮದ ಕಲಾವಿದ ಇಂದಿನ ವ್ಯಕ್ತಿ ವಿಶೇಷ.
ಇವರನ್ನು ದೇವಾಂಗಸಮಾಜದ ಅಮರೇಶ ಹೆಂಬಾ ಹಾಗೂ ಸಮಾಜಬಾಂಧವರು ಕರೆಯಿಸಿದ್ದಾರೆ. ಅವರ ಕೆಲಸಕ್ಕೆ ಕೂಲಿಯನ್ನು ಪಡೆಯುತ್ತಾರೆಯಾದರೂ ಅವರ ಕಲೆಗೆ ಬೆಲೆ ಕಟ್ಟಲಾಗದು.ಅಮರೇಶ ಹೆಂಬಾ ಅವರ ಸಹಕಾರವನ್ನು ನಭಿಸಾಬ್ ಮುಜಾವರ್ ರವರು ನೆನೆಯುವದಾ ಮರೆಯಲಿಲ್ಲ.
ದೇವಸ್ಥಾನದ ಗೋಡೆಗಳಿಗೆ ದೇವಿಯ ತೈಲವರ್ಣದ ಚಿತ್ರಗಳನ್ನು ಜೀವ ಒಂದನ್ನು ಬಿಟ್ಟು ಉಳಿದೆಲ್ಲವೂ ಸಜೀವ ಬೊಂಬೆ ಏನೋ ಎಂಬಂತಹ ಭಾವ ಮೂಡುವ, ರವಿವರ್ಮನನ್ನೇ ಚಕಿತಗೊಳಿಸುವಂತೆ ಕುಂಚಕ್ಕೆ ಕೆಲಸನೀಡುವ ಇವರ ಕಲಾಕೌಶಲ್ಯ ಕುಲ ಧರ್ಮ ಸೀಮೆಯನ್ನೇ ಮೀರಿ ನಿಂತಿದೆ. ಇವರು ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರ ರಾಜ್ಯಗಳ ಸುಮಾರು 150ಕ್ಕೂ ಹೆಚ್ಚು ದೇವಾಲಯಗಳಿಗೆ ತಮ್ಮ ತೈಲವರ್ಣ ಚಿತ್ರಗಳ ಕಲಾಸೇವೆಗೈದಿರುವದು ಅವರ ಕಲಾಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇಂತವರ ಕಲೆಯನ್ನು ಸರಕಾರವಾಗಲಿ ಕಲಾಪೋಷಕರಾಗಲಿ ಗುರುತಿಸಿ ಗೌರವ ಸನ್ಮಾನ ಪ್ರಶಸ್ತಿಗಳನ್ನು ನೀಡದಿರುವದು ವಿಪರ್ಯಾಸಕರ ಸಂಗತಿಯಾಗಿದೆ. ಇಂತಹ ಕಲಾವಿದರು ಇತ್ತೀಚಿನ ದಿನಗಳಲ್ಲಿ ಕಾಣಸಿಗುವದು ದುರ್ಲಭ. ಆ ಕಲಾ ದೇವತೆ ಯಾವ ಜಾತಿ ಧರ್ಮ ಕುಲ ವನ್ನು ನೋಡಿ ಒಲಿಯುವವಳಲ್ಲ, ಅವಳಿಗಿಷ್ಟವಾದ ರೀತಿ ಆರಾಧಿಸುವವರು ಯಾರಾದರೇನು ಅವರಿಗೆ ಒಲಿಯುವವಳು ಎಂಬ ನುಡಿ ಇಲ್ಲಿ ಕುಡಿಯೊಡೆದಿದೆ.
ಅಕ್ಷಯ್, ನಿಹಾಲ್, ಅಬುಸುಫಿಯಾನ್, ಹೃಷಿಕೇಶ್, ಅವರ ಸಹಾಯಕರು. ಇಂತಹ ನೂರಾರು ಸಹಾಯಕರಿಗೆ ತರಬೇತಿ ನೀಡಿ ಬದುಕು ಕಲ್ಪಿಸಿಕೊಡುವ ಕೆಲಸವೂ ಅವರು ಮಾಡಿರುವದು ಅವರ ಸಮಾಜಮುಖಿ ಕಾರ್ಯಕ್ಕೆ ಜೀವಂತ ನಿದರ್ಶನವಾಗಿದೆ. ಕಲಾವಿದನಿಗೆ ಎಲ್ಲಿದ್ದರೂ ಮರ್ಯಾದೆ ಇದ್ದೆ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ವರದಿ : ದುರ್ಗೇಶ್ ಬೋವಿ ಮಸ್ಕಿ
-
ಸುದ್ದಿ2 weeks ago
ಡಿಜಿಟಲ್ ಸ್ಮಾಟ್೯ ಕ್ಲಾಸ್ ನಲ್ಲಿ ಸಾವಿತ್ರಿ ಭಾಯಿ ಫುಲೆಯವರ ಜನ್ಮ ದಿನ ಆಚರಣೆ
-
ಮನರಂಜನೆ2 weeks ago
ಅಪ್ಪಿಕೊಂಡು ಪಪ್ಪಿಕೊಟ್ಟು ಮುದ್ದಾಡುವಾಗ ಸಿಕ್ಕಿ ಬಿದ್ದ ಅನುಶ್ರೀ
-
ಸುದ್ದಿ3 days ago
ಶ್ರೀಶ್ರೀಶ್ರೀ ಗುರು ಆದಿ ಜಾಂಬವಂತ ಸ್ವಾಮಿ ಜಯಂತಿ ಆಚರಣೆ
-
Politics7 days ago
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?