ಸುದ್ದಿ
ಮೇಲ್ಸೇತುವೆಯಲ್ಲಿ ವಿದ್ಯುತ್ ದೀಪ ಅಳವಡಿಸಿ : ಪಾದಾಚಾರಿ ಗಳಿಂದ ಒತ್ತಾಯ
ಕೆ.ಆರ್.ಪುರಂ : ಪಾದಚಾರಿ ಮೇಲ್ಸೇತುವೆಯಲ್ಲಿ ವಿದ್ಯುತ್ ದೀಪಗಳಿಲ್ಲದೆ ಮೊಬೈಲ್ ಟರ್ಚ್ ಬಳಸಿ ಮೇಲ್ಸೇತುವೆ ಉಪಯೋಗಿಸುವ ಸ್ಥಿತಿ ನಿರ್ಮಾವಾಗಿದೆ. ಕೆ.ಆರ್. ಪುರಂ ಹೃದಯ ಭಾಗದಲ್ಲಿರುವ ವಿನಾಯಕ ದೇವಸ್ಥಾನದ ಬಳಿಯಿರುವ ಪಾದಚಾರಿ ಮೇಲ್ಸೇತುವೆಯಲ್ಲಿ ಎಲ್ಲಾ ವಿದ್ಯುತ್ ದೀಪಗಳು ಕೆಟ್ಟಿರುವ ಕಾರಣ ಪಾದಚಾರಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಪಾದಚಾರಿ ಮೇಲ್ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ.
ಪ್ರತಿದಿನ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಸಂಚಾರ ದಟ್ಟಣೆಯಿಂದ ರಸ್ತೆ ದಾಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗೊಂಡು ಸ್ಥಳೀಯ ಆಡಳಿತ ಪ್ರಯಾಣಿಕರ ಅನುಕೂಲಕ್ಕೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಪ್ರತಿದಿನ ನೂರಾರು ಜನ ಮೇಲ್ಸೇತುವೆ ಬಳಸುತ್ತಿದ್ದರೂ ನಿರ್ವಹಣೆ ಇಲ್ಲದೆ ಕಾರಣ ಸುರಕ್ಷತೆ ಇಲ್ಲದಂತಾಗಿದೆ. ಒಂದೆಡೆ ಕಳ್ಳಕಾಕರ ಭಯ ಮತ್ತೊಂದೆಡೆ ಪುಂಡರ ಭೀತಿ ಎದುರಾಗಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಯೋವೃದ್ಧರು ಮೆಟ್ಟಿಲುಗಳು ಹತ್ತಿ ಇಳಿಯುವ ಆಗುತ್ತಿಲ್ಲ ಸಂಬಂಧಿಸಿಪಟ್ಟ ಅಧಿಕಾರಿಗಳು ಗಮನಹರಿಸಿ ಲಿಫ್ಟ್ ವ್ಯವಸ್ಥೆ ಮಾಡಿಸುವಂತೆ ಸ್ಥಳೀಯ ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ. ಮೇಲ್ಸೇತುವೆ ಮೇಲೆ ಹಗಲಲ್ಲಿ ಜನಜಂಗುಳಿಯಿದ್ದು ರಾತ್ರಿ 10 ಗಂಟೆ ಬಳಿಕ ವಾಹನಗಳ ಹಾಗೂ ಜನರ ಓಡಾಟ ಇರುವುದಿಲ್ಲ ಯಾವುದೇ ವಿದ್ಯುತ್ ದ್ವೀಪಗಳು ಉರಿಯುವುದಿಲ್ಲ ಕತ್ತಲೆಯಲ್ಲಿ ನಡೆದು ಹೋಗಲು ಭಯವಾಗುತ್ತದೆ. ಮೊಬೈಲ್ ಟಾರ್ಚ್ ಬಳಸಿ ಸೇತುವೆಯಲ್ಲಿ ಸಂಚರಿಸಬೇಕಿದೆ ಎಂದು ವಿದ್ಯುತ್ ದ್ವೀಪಗಳನ್ನು ಅಧಿಕಾರಿಗಳು ಅಳವಡಿಸಬೇಕು ಎಂದು ಪಾದಚಾರಿಗಳು ಒತ್ತಾಯಿಸಿದ್ದಾರೆ.
ಸುದ್ದಿ
‘ತನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಬರಬೇಕು’, ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ
ಬೆಂಗಳೂರು: ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಆಟೋ ಚಾಲಕ ಜಯರಾಮು ಮೃತದೇಹದ ಅಂತಿಮ ದರ್ಶನವನ್ನು ಕುಮಾರಸ್ವಾಮಿಯವರು ಪಡೆದರು. ರಾಮನಗರ ಜಿಲ್ಲೆಯ ಬೊಮ್ಮಚ್ಚನ ಹಳ್ಳಿಗೆ ಇಂದು ಮಧ್ಯಾಹ್ನ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ.ಕೆ. ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಧ್ಯಾಕ್ಷ ನಿಖಿಲ್ ಕುಮಾರಸ್ವಾಮಿ.ಆಟೋ ಚಾಲಕ ಜಯರಾಮು ಮೃತದೇಹದ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ನಿನ್ನೆ ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ ಜಯರಾಮು ಮೃತಪಟ್ಟಿದ್ದರು. ರಾಮನಗರ ತಾಲೂಕಿನ ಬೊಮ್ಮಚನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ಸಾವಿಗೂ ಮುನ್ನವೇ ತನ್ನ ಅಂಗಿಯಲ್ಲಿ ಡೆತ್ ನೋಟ್ ಬರೆದಿಟ್ಟುಕೊಂಡಿದ್ದ ಜಯರಾಮು. ನನ್ನ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕೆ ಭಾಗಿಯಾಗಬೇಕು ಎಂದು ಬರೆದುಕೊಂಡಿದ್ದರು.
ನನಗೆ ಬುದ್ಧಿಮಾಂದ್ಯ ಮಗನಿದ್ದಾನೆ. ನನ್ನ ಮಗನಿಗೆ ಕುಮಾರಸ್ವಾಮಿ ಧನ ಸಹಾಯ ಮಾಡಬೇಕು. ನಿಮ್ಮ ಋಣವನ್ನು ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ.ನನ್ನ ಮಗನಿಗೆ ಒಂದು ದಾರಿ ಮಾಡಿಕೊಡಿ ಕುಮಾರಣ್ಣ ಅಂತಾ ಭಾವನಾತ್ಮಕವಾಗಿ ಡೆತ್ ನೋಟ್ ಬರೆದಿಟ್ಟಿದ್ದ ಜಯರಾಮು. ಮೃತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಹೆಚ್.ಡಿ.ಕೆ ಹಾಗೂ ನಿಖಿಲ್ ಅವರು, ಕುಟುಂಬಸ್ಥರಿಗೆ ಪರಿಹಾರದ ಹಣ ನೀಡಿದರು.
ದಾರಿ ಮಧ್ಯದಲ್ಲಿ ಹೂ ಮಾರುತ್ತಿದ್ದಂತ ಬಾಲಕಿಯನ್ನು ಸಿಎಂ ಆಗಿದ್ದಂತಹ ಕುಮಾರಸ್ವಾಮಿ ಮಾತನಾಡಿಸಿ, ಕಷ್ಟ ಕೇಳಿ, ಆಕೆಗೆ ಮನೆ ಇಲ್ಲದೇ ಇರೋದನ್ನು ಗಮನಿಸಿ ಮನೆ ಕಟ್ಟಿಸಿಕೊಟ್ಟ ಘಟನೆಯಿಂದ ಗಮನ ಸೆಳೆದಿದ್ದರು. ಇದೀಗ ನನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಆಗಮಿಸಬೇಕು. ಇದೇ ನನ್ನ ಕೊನೆಯ ಆಸೆ ಎಂದು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದಂತ ಆಟೋ ಚಾಲಕನ ಆಸೆಯನ್ನು ಈಡೇರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಷ್ಟ ಆಗೋದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಸುದ್ದಿ
ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮದ್ಯ : ದಾಳಿ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ
ಶಿಡ್ಲಘಟ್ಟ : ತಾಲ್ಲೂಕಿನ ತಾದೂರು ಗ್ರಾಮದ ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮದ್ಯ ತಯಾರಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಭಾನುವಾರ ಮುಂಜಾನೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಸಿಬ್ಬಂದಿ ಸುಮಾರು 10 ಲಕ್ಷ ಬೆಲೆ ಬಾಳುವ ನಕಲಿ ಮದ್ಯ, ಮಧ್ಯಸಾರ ಹಾಗು ಬಾಟಲಿ, ಮುಚ್ಚಳಗಳನ್ನು ವಶಪಡಿಸಿಕೊಂಡಿರುವ ಜೊತೆಗೆ ಆರೋಪಿ ಟಿ.ಎಂ.ಮಂಜುನಾಥ್ ನನ್ನು ಬಂಧಿಸಿದ್ದಾರೆ.
ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ್ ನೇತೃತ್ವದ ಅಬಕಾರಿ ಇಲಾಖೆ ಸಿಬ್ಬಂದಿ ಭಾನುವಾರ ಮುಂಜಾನೆ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ೧೨೯೦ ಲೀ ಸ್ಪಿರಿಟ್ ಸೇರಿದಂತೆ ೬೨ ಲೀ ಬ್ಲೆಂಡ್, ೩೨ ಕೆಜಿ ಯಷ್ಟು ಕ್ಯಾಪ್, ಲೇಬಲ್ ಹಾಗು ತಯಾರಿಸಿಟ್ಟಿದ್ದ ೩೭.೮೦೦ ಲೀ ನಷ್ಟು ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇನ್ಸ್‌ಪೆಕ್ಟರ್ ವಿಶ್ವನಾಥಬಾಬು, ಫಿರೋಜ್‌ಖಾನ್, ಲಂಕೇ ಹನುಮಯ್ಯ, ಶಂಕರಪ್ರಸಾದ್, ಮಂಜುಳ, ಸಿಬ್ಬಂದಿಗಳಾದ ನಿತಿನ್, ರಾಘವೇಂದ್ರ, ಕರಿಲಿಂಗ, ಪ್ರಶಾಂತ್, ರಾಘವೇಂದ್ರ ಪಾಟೀಲ್ ಮುಂತಾದವರು ಹಾಜರಿದ್ದರು.
ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ
ಸುದ್ದಿ
ಬೆಂಕಿ ಅವಘಡದಿಂದ ಭತ್ತದ ಹುಲ್ಲು ಮತ್ತು ಜಾನುವಾರಗಳು ಸುಟ್ಟು ಭಸ್ಮ: ಶಾಸಕರಿಂದ ಸಾಂತ್ವಾನ
ಮಸ್ಕಿ: ಮಸ್ಕಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಅಗ್ನಿ ಅವಗಢ ಸಂಭವಿಸಿದ್ದು ರೈಮಾನ್ ಸಾಬ್ ಪಂಚರ್ ಶಾಪ್ ಅವರ ಬಣವೆ ಜಾನುವಾರುಗಳು ಸುಟ್ಟುಹೋಗಿದ್ದು. ಮಸ್ಕಿಯ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲರು ಭೇಟಿ ನೀಡಿ ವೈಯಕ್ತಿಕವಾಗಿ ರೂ.20,000 ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಹಂಚಿನಾಳ ಗ್ರಾಮದ ತಾಲೂಕ ಪಂಚಾಯತಿ ಸದಸ್ಯರಾದ ಶರಣಬಸವ ಆಶಾಳ್ , ಗ್ರಾಮದ ಹಿರಿಯರು ಸೋಮನಗೌಡ ಪಾಟೀಲ್ ದುರುಗನ್ ಗೌಡ ಪೊಲೀಸ್ ಪಾಟೀಲ್ ಚಿನ್ನ ನ ಗೌಡ ಗೋನಾಳ್ ನಾಗಪ್ಪ ಕೊಳಗಲ್ ಊರಿನ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
-
ಸುದ್ದಿ2 weeks ago
ಡಿಜಿಟಲ್ ಸ್ಮಾಟ್೯ ಕ್ಲಾಸ್ ನಲ್ಲಿ ಸಾವಿತ್ರಿ ಭಾಯಿ ಫುಲೆಯವರ ಜನ್ಮ ದಿನ ಆಚರಣೆ
-
ಮನರಂಜನೆ2 weeks ago
ಅಪ್ಪಿಕೊಂಡು ಪಪ್ಪಿಕೊಟ್ಟು ಮುದ್ದಾಡುವಾಗ ಸಿಕ್ಕಿ ಬಿದ್ದ ಅನುಶ್ರೀ
-
ಸುದ್ದಿ3 days ago
ಶ್ರೀಶ್ರೀಶ್ರೀ ಗುರು ಆದಿ ಜಾಂಬವಂತ ಸ್ವಾಮಿ ಜಯಂತಿ ಆಚರಣೆ
-
Politics7 days ago
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?