Connect with us
Ad Widget

ರಾಜ್ಯ

ರಾಜ್ಯದ ವಿವಿಧೆಡೆ ಸಿಪಿಐಎಂ ಪಕ್ಷದ ವತಿಯಿಂದ ಪ್ರತಿಭಟನೆ

Published

on

ವರದಿ: ನರಸಿಂಹಮೂರ್ತಿ ಎಂ.ಎಲ್. ಮಾಡಪ್ಪಲ್ಲಿ.

ಬೆಂಗಳೂರು: ರಾಜ್ಯದ ವಿವಿಧ ಗ್ರಾಮ ಪಂಚಾಯತಿ, ಜಿಲ್ಲಾಡಳಿತ ಕಚೇರಿಗಳ ಮುಂದೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಲಾಕ್ ಡೌನ್ ಸಂಧರ್ಭದಲ್ಲಿ ಕೇಂದ್ರ ಸರಕಾರದ ಸಂಪೂರ್ಣ ವೈಫಲ್ಯವನ್ನು ಖಂಡಿಸಿ ಇಂದು ಸಿಪಿಐಎಂ ದೇಶಾದ್ಯಾಂತ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಬೆಂಬಲಿಸಿ ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನಸಾಮಾನ್ಯರ ಬದುಕಿಗೆ ಕಿಂಚಿತ್ತೂ ಕಾಳಜಿ ವಹಿಸದೆ,ಕಾರ್ಪೊರೇಟ್ ಕಂಪೆನಿಗಳಿಗೆ ಮಣೆ ಹಾಕಿದ ನರೇಂದ್ರ ಮೋದಿ ಸರಕಾರದ ಜನ ವಿರೋಧಿ ನೀತಿಗಳು ಜನರನ್ನು ಸಂಕಷ್ಟಕ್ಕೆ ತಳ್ಳಿವೆ. ಲಾಕ್ಡೌನ್ ನಿಂದ ಅನೇಕರು ಜೀವನ ಸಾಗಿಸುವುದೂ ಕಷ್ಟಕರವಾಗಿದೆ.

ಕೊರೊನಾ ವಿರುದ್ಧ ನಿರ್ಣಾಯಕ ಹೋರಾಟ ನಡೆಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಮನೆಗೆ ರೇಷನ್ ತಲುಪಿಸಿದ್ದಕ್ಕಿಂತ ಭಾಷಣ ತಲುಪಿಸಿದ್ದೆ ಹೆಚ್ಚು.

ಇನ್ನಾದರೂ ರಾಜ್ಯದ ಬಡಜನತೆ 6 ತಿಂಗಳುಕಾಲ ಪ್ರತಿ ವ್ಯಕ್ತಿಗೆ 10 KG ಅಕ್ಕಿ, ಹಾಗೂ ಅಗತ್ಯ ವಸ್ತುಗಳು ಮತ್ತು ಮೂರು ತಿಂಗಳವರೆಗೆ 7500 ರೂಪಾಯಿಗಳ ಪರಿಹಾರ ಧನ ಸೇರಿದಂತೆ ಪ್ರಮುಖ ಐದು ಬೇಡಿಕೆಗಳನ್ನು ಕೇಂದ್ರ ಸರಕಾರ ಜಾರಿ ಮಾಡಿಬೇಕು ಎಂದು CPIM ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.

ಕೊರೋನಾ ಸೋಂಕಿನ ಆತಂಕದಿಂದ ಲಾಕ್ಡೌನ್ ನಲ್ಲಿ ಹಲವಾರು ವಲಸೆ ಕಾರ್ಮಿಕರು ತಮ್ಮ ಸ್ವಂತ ನೆಲೆಗಳನ್ನು ಸೇರಲು ನರಕಯಾತನೆ ಪಟ್ಟಿದ್ದಾರೆ. ಕೆಲವರು ದಾರಿ ಮದ್ಯದಲ್ಲಿಯೇ ಹಸಿವಿನಿಂದ ಜೀವ ಕಳೆದುಕೊಂಡಿದ್ದಾರೆ. ಇಂತಹ ಕುಟುಂಬಗಳಿಗೆ ಸರ್ಕಾರಗಳು ಆಸರೆಯಾಗಬೇಕು. ಯಾವುದೇ ರೀತಿ ಕ್ರಮ ಕೈಗೊಳ್ಳುವ ಮುನ್ನ ಅದರಿಂದ ಎದುರಾಗುವ ಸಮಸ್ಯೆಗಳ ಪರಿಹಾರ ಕ್ರಮಗಳನ್ನು ಮುಂಚಿತವಾಗಿಯೇ ಸಿದ್ದಗೊಳಿಸಿಕೊಂಡಿರಬೇಕಿತ್ತು ಎಂದು ಮುಖಂಡ ಮುನಿವೆಂಕಟಪ್ಪ ತಿಳಿಸಿದರು.

Continue Reading
Advertisement
Click to comment

Leave a Reply

Your email address will not be published. Required fields are marked *

ರಾಜ್ಯ

“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ”

Published

on

ಬೆಂಗಳೂರು : ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆ ಹಮ್ಮಿಕೊಂಡಿರುವ “ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು-ಶಿಕ್ಷಕರು ಉಳಿದರೆ, ಶಿಕ್ಷಣ” ಎಂಬ ಸಾಂಕೇತಿಕ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಆರ್. ಅಶೋಕ್ ರವರು, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತ್ತೇವೆ ಎಂದು ಭರವಸೆ ನೀಡಿದರು.

Continue Reading

ರಾಜ್ಯ

ಶಾಲೆಯ ಸಭಾಂಗಣ ಮತ್ತು ಕೊಠಡಿಯ ಉದ್ಘಾಟನೆ : ಅರವಿಂದ ಲಿಂಬಾವಳಿ

Published

on

ಬೆಂಗಳೂರು : ಇಂದು ಹಾಲನಾಯಕನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಶಾಲೆಯ ಒಂದು ಸಭಾಂಗಣ ಹಾಗೂ ಎರಡು ಕೊಠಡಿಗಳನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ, ಗ್ರಾಮದ ಮುಖಂಡರು, ಇಲಾಖೆಯ ಅಧಿಕಾರಿಗಳು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Continue Reading

ರಾಜ್ಯ

ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿಗೆ ಅಧಿಸೂಚನೆ

Published

on

ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ನೀಡಿದ್ದಾರೆ.

ಬೆಂಗಳೂರು: ಇತ್ತೀಚೆಗೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗೆ ಮೀಸಲಾತಿ ಪ್ರಕಟಗೊಂಡು ಹಲವಡೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಆಯ್ಕೆಯಾಗಿದ್ದಾರೆ.‌ ಆದರೆ ಇದೀಗ ಹೈಕೋರ್ಟ್ ಈ ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ಮಾಡಿದ್ದಾರೆ.

ಮೀಸಲಾತಿ ಕುರಿತು ಹೈಕೋರ್ಟ್ ನಲ್ಲಿ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದ್ದು, ನ್ಯಾಯಧೀಶರು ಸಮರ್ಪಕ ಪರಾಮರ್ಶಿಸಿ ಮೀಸಲಾತಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ 4 ವಾರಗಳಲ್ಲಿ ಹೊಸ ಮೀಸಲಾತಿ ಪ್ರಕಟಿಸಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಕುರಿತು ಈಗಾಗಲೇ ನೂತನ ಅಧ್ಯಕ್ಷ,‌ ಉಪಾಧ್ಯಕ್ಷ‌ರಾಗಿ ಆಯ್ಕೆಯಾದವರ ನೇಮಕಾತಿ ಅಸಿಂಧು ಆಗಲಿದೆ. ನ್ಯಾಯಾಲಯದ ಆದೇಶದಂತೆ ಹಳೇ ಮೀಸಲಾತಿ ರದ್ದುಗೊಳಿಸಿ ಇದೀಗ ಪ್ರಸಕ್ತ ಹೊಸ ಮೀಸಲಾತಿ ಜಾರಿಗೊಳಿಸುವಂತೆ ಆದೇಶ ನೀಡಿದನ್ವಯ‌ ಮತ್ತೊಮ್ಮೆ ಹೊಸ ಮೀಸಲಾತಿ ಅನ್ವಯ ಅಧ್ಯಕ್ಷ,‌ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ ಸರ್ಕಾರ ಆಕ್ಷೇಪಣೆ ಸಲ್ಲಿಸಲು 10 ದಿನಗಳ ಅವಕಾಶ ನೀಡಿದೆ. ರಾಜ್ಯದ 277 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಿಸಲಾಗಿತ್ತು. ಹಲವಾರು ಕಡೆ ಚುನಾವಣೆಗಳು ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ನಡೆದಿದೆ. ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಹುಮತ ಪಡೆದಿದ್ದರೂ ಮೀಸಲಾತಿ ಪ್ರಕಾರ ಅಧ್ಯಕ್ಷ ಹುದ್ದೆ ಬಿಜೆಪಿ ಪಾಲಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭಿಸಲಾಗಿತ್ತು.

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್