ಸುದ್ದಿ
ಮದುವೆ ಸಮಾರಂಭದಲ್ಲಿ ಹೆಮ್ಮೆಯ ಭಾರತೀಯ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ
ಅಪ್ಪು ಹುಬ್ಬಳ್ಳಿ CRPF ಯೋಧರು ಕೊತಬಾಳ ಮತ್ತು ಮಹೇಶ್ ಇಂಡಿಯನ್ ಆರ್ಮಿ ಹೂನೂರು ಅವರಿಗೆ ನೂತನ ದಂಪತಿಗಳಿಂದ ವಿಶೇಷವಾಗಿ ಮೊದಲ ಆದ್ಯತೆ ನೀಡುವ ಮೂಲಕ ಗೌರವ ಸನ್ಮಾನ ಕಾರ್ಯಕ್ರಮ.
ಇಂದು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ತುರಡಗಿ ಗ್ರಾಮದಲ್ಲಿ ಮಾಲಿ ಪಾಟೀಲ ಬಂಧುಗಳ ಮದುವೆ ಸಮಾರಂಭದಲ್ಲಿ ಹೆಮ್ಮೆಯ ಭಾರತೀಯ ನಿವೃತ್ತ ಯೋಧರಾದ ಅಪ್ಪು ಹುಬ್ಬಳ್ಳಿ CRPF ಯೋಧರು ಕೊತಬಾಳ ಮತ್ತು ಮಹೇಶ್ ಇಂಡಿಯನ್ ಆರ್ಮಿ ಹೂನೂರು ಅವರಿಗೆ ನೂತನ ದಂಪತಿಗಳಿಂದ ವಿಶೇಷವಾಗಿ ಮೊದಲ ಆದ್ಯತೆ ನೀಡುವ ಮೂಲಕ ಗೌರವ ಸನ್ಮಾನ ಕಾರ್ಯಕ್ರಮ
ರೈತರ ಮತ್ತು ಸೈನಿಕರ ಅಭಿಮಾನಿಗಳ ಸಂಘ(ರಿ) ರಾಯಚೂರು.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಬಿಳ್ಳೂರು ಶಾಲೆಯಲ್ಲಿ ಕೊರೊನಾ ಕುರಿತು ಪ್ರಬಂಧ ಸ್ಪರ್ಧೆ
ಬಾಗೇಪಲ್ಲಿ:(ಫೆ.18) :ಕೊರೋನಾ ಸೋಂಕಿನ ಲಕ್ಷಣಗಳನ್ನು ಇದ್ದವರು, ಇನ್ನೊಬ್ಬ ವ್ಯಕ್ತಿಗೆ ಹರಡದಂತೆ ಅವರಿಗೆ ಮನೆಯಲ್ಲಿಯೇ ಇರಲು ಸಂದೇಶವನ್ನು ನೀಡುವುದು ಅತ್ಯಗತ್ಯ ಎಂದು ಪ್ರೌಢಶಾಲಾ ಮುಖ್ಯ ಶಿಕ್ಷಕ ವಿ.ಮಲ್ಲಪ್ಪ ತಿಳಿಸಿದರು.
ಅವರು ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಕೋ ಕ್ಲಬ್ ಅಡಿಯಲ್ಲಿ ಇಲ್ಲಿನ ಪ್ರೌಢಶಾಲೆಯ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ‘ಕೊರೋನಾ ತಡೆಗಟ್ಟಲು ಮುನ್ನೆಚ್ಚರಿಕೆಯ ಕ್ರಮಗಳು’ ಕುರಿತು ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡುತ್ತಿದ್ದರು.ಇಂತಹ ಸಮಯದಲ್ಲಿ ನಿಮ್ಮ
ಸಹೋದ್ಯೋಗಿಗಳು ನಿಮ್ಮ ಆರೋಗ್ಯದ ಬಗ್ಗೆ ಪೋಸ್ಟ್ ಮಾಡುವುದು ಅತ್ಯಗತ್ಯ. ಇತರರು ಯಾವುದೇ ಸೋಂಕು ಅಥವಾ ರೋಗದಿಂದ ಸುರಕ್ಷಿತವಾಗಿರಲು ಇದು ಸುಲಭವಾಗಿಸುತ್ತದೆ ಎಂದು ಅವರು ಹೇಳಿದರು.
ಸ್ಯಾನಿಟೈಸರ್ ಅಥವಾ ಸಾಬೂನುಗಳಿಂದ ಕೈಗಳನ್ನು ನಿಯಮಿತವಾಗಿ ಶುಚಿಗೊಳಿಸುತ್ತಿರಿ.ಈ ರೀತಿ ಮಾಡುವುದರಿಂದ ಕೈ ಗಳಲ್ಲಿ ಕೋವಿಡ್ ವೈರಾಣು ಸೇರಿದ್ದಲ್ಲಿ,ಅವನ್ನು ನಾಶಪಡಿಸುತ್ತದೆ.ಕೆಮ್ಮು ಅಥವಾ ಸೀನುತ್ತಿರುವ ವ್ಯಕ್ತಿಯಿಂದ ಕನಿಷ್ಟ 1 ಮೀಟರ್ ಅಂತರವನ್ನು ಕಾಯ್ದುಕೊಳಿ.ಏಕೆಂದರೆ ಸೀನು ಹಾಗೂ ಕೆಮ್ಮುವ ವೇಳೆ ದ್ರವ ರೂಪದ ಕಣಗಳು ಹೊರಬರುತ್ತದೆ.ಇದರಲ್ಲಿ ವೈರಸ್ ಇರುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.
ಅನಾರೋಗ್ಯ ಕಂಡು ಬಂದಲ್ಲಿ ಮನೆಯಲ್ಲಿಯೇ ಇರಿ.ಉಸಿರಾಟದ ಸಮಸ್ಯೆಯ ಜತೆಗೆ ನಿಮಗೆ ಜ್ವರ,ಕೆಮ್ಮು ,ಶೀತ ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ,ಚಿಕಿತ್ಸೆ ಪಡೆದುಕೊಳ್ಳಿ.ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆಯನ್ನು ಪಾಲಿಸಿ ಎಂದು ತಿಳಿಸಿದರು.
ಈ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ 9 ನೇ ತರಗತಿಯ ವಿದ್ಯಾರ್ಥಿ ಪ್ರಿಯಾಂಕ,ದ್ವೀತಿಯ ಸ್ಥಾನ 10 ನೇ ತರಗತಿಯ ತೇಜಶ್ವಿನಿ ಹಾಗೂ ತೃತಿಯ ಸ್ಥಾನ ಪಡೆದ 9 ನೇ ತರಗತಿ ನಿಖಿತ ನಗದು ಬಹುಮಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕರಾದ ಎನ್.ಆರ್.ಕುಮಾರ್, ಹೆಚ್.ಪಿ.ಚಿಕ್ಕಣ್ಣ, ಕೆ.ಎಂ.ಕೃಷ್ಣಪ್ಪ, ಹೆಚ್.ಕೆ.ಕೃಷ್ಣಮೂರ್ತಿ, ಸಂಗಪ್ಪ ಹಡಗಿನಾಳ್ , ವೇಣಿಬಾಯಿ ಮತ್ತು ಆರೋಗ್ಯ ಕಾರ್ಯಕರ್ತೆ ಶ್ಯಾಮಲಮ್ಮ ಮತ್ತಿತರರು ಹಾಜರಿದ್ದರು.
ಸುದ್ದಿ
ತಾಲ್ಲೂಕಿನಲ್ಲಿ ‘ಕೈ’ ಬಲಪಡಿಸುತ್ತಿರುವುದು ಹರ್ಷದಾಯಕ : ಶಾಸಕ ಎಸ್.ಎನ್ ಸುಬ್ಬಾರೆಡ್ಡಿ
ಬಾಗೇಪಲ್ಲಿ: ಕಾಂಗ್ರೆಸ್ ಪಕ್ಷದ ಸಿದ್ದಾಂತಗಳು ದೇಶದ ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ ಸಾಮಾಜಿಕ ನ್ಯಾಯ ಒದಗಿಸುವ ಬದ್ಧತೆಯನ್ನು ನೆಚ್ಚಿ ವಿವಿಧ ಪಕ್ಷಗಳಿಂದ ತೊರೆದು ನೂರಾರು ಅಲ್ಪಸಂಖ್ಯಾತರು ಹಾಗೂ ಯುವ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸಂತಸ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಅವರು ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ನಿಜಾಮುದ್ದೀನ್ ಅವರ ಸ್ವ ಗೃಹದಲ್ಲಿ ಪಟ್ಟಣದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಪಿ.ಶಬೀರ್ ಭಾಷಾ,ಉಪಾಧ್ಯಕ್ಷರಾಗಿ ಷೇಕ್ ಮುಬಾರಕ್,ಪ್ರಧಾನ ಕಾರ್ಯದರ್ಶಿಯಾಗಿ ಖಯಾಮ್ ಪೀರ್ ರವರಿಗೆ
ನೇಮಕಾತಿ ಪತ್ರವನ್ನು ಹಸ್ತಂತರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರ ಇದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ದೇಶ ಕಟ್ಟುವ ಪಕ್ಷ ಎಂದರು. ಜಾತ್ಯತೀತ ನಿಲುವು ಹೊಂದಿರುವ ಹಾಗೂ ದೇಶದ ಜನಪರವಾದ ಪಕ್ಷ ಎಂದು ಹೇಳಿದರು. ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುತ್ತಿದ್ದು, ಎಲ್ಲರೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ
ಪಕ್ಷ ಮತ್ತು ಸಮ ಸಮಾಜಕ್ಕಾಗಿ ಇನ್ನಷ್ಟು ತೊಡಗಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ನಿಜಾಮುದ್ದೀನ್ ಮಾತನಾಡಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಸಲಹೆ ಸೂಚನೆಯಂತೆ ತಾನು ಪಕ್ಷದಲ್ಲಿ ಕಾರ್ಯನಿರ್ವಹಿಸಲಿದ್ದೇನೆ ನನಗೆ ಪಟ್ಟಣದ ಸಮಸ್ಯೆಗಳ ಬಗ್ಗೆ ಅರಿವು ಇದೆ. ಪಟ್ಟಣದ 23 ವಾರ್ಡ್ ಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಯೋಜನೆಯನ್ನು ಮನೆಮನೆಗೆ ತಿಳಿಸಿ ಕಾಂಗ್ರೆಸ್ ಪಕ್ಷದ ಗೆಲುವುಗಾಗಿ ಶ್ರಮಿಸುತ್ತನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ ಡಿ ಪಿ ಸದಸ್ಯರಾದ ಅಮರನಾಥ್ ರೆಡ್ಡಿ, 7 ನೇ ವಾರ್ಡ್ ಪುರಸಭೆ ಸದಸ್ಯರಾದ ನಂಜುಂಡಪ್ಪ, ಡಿ.ಸಿ
ಸಿ.ಅಲ್ಪಸಂಖ್ಯಾತ ಜಿಲ್ಲಾ ಕಾರ್ಯದರ್ಶಿ ಜೆ.ಎಂ.ಅನ್ಸರ್ ಪಾಷಾ,ಹಾಗೂ ನೂರಾರು ಅಲ್ಪಸಂಖ್ಯಾತ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸುದ್ದಿ
ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ
ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಭದ್ರಾವತಿಯಲ್ಲಿ ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಭಾರತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.