ಮನರಂಜನೆ
ಡೈನಾಮಿಕ್ ಪ್ರಿನ್ಸ್ ‘ಅಬ್ಬರ’ ಸಿನಿಮಾ ಚಿತ್ರಕ್ಕೆ ಮೂವರು ನಾಯಕಿಯರು
ಬೆಂಗಳೂರು : ಡೈನಾಮಿಕ್ ಪ್ರಿನ್ಸ್ ದೇವರಾಜ್ ನಟಿಸುತ್ತಿರುವ ‘ಅಬ್ಬರ’ ಸಿನಿಮಾ ಚಿತ್ರಕ್ಕೆ ಮೂವರು ನಾಯಕಿಯರು ಎಂಬ ವಿಚಾರ ಹೊರಬಿದ್ದಿದೆ. ಇತ್ತೀಚಿಗಷ್ಟೆ ಅಬ್ಬರ ಸಿನಿಮಾದ ಟೈಟಲ್ ಅನಾವರಣಗೊಂಡಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದರು.
ಇದೀಗ, ಪ್ರಜ್ವಲ್ ಗೆ ಜೋಡಿಯಾಗಿ ಮೂವರು ನಟಿಮಣಿಯರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಇಂಟರೆಸ್ಟಿಂಗ್ ವಿಷಯ ತಿಳಿದು ಬಂದಿದೆ.
ನಟಿ ಲೇಖ ಚಂದ್ರ, ನಿಮಿಕಾ ರತ್ನಾಕರ್ ಹಾಗೂ ರಾಜಶ್ರೀ ಪೊನ್ನಪ್ಪ ಈ ಚಿತ್ರದಲ್ಲಿ ಪ್ರಮುಖ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಮನರಂಜನೆ
‘ಪೊಗರು’ ಆಡಿಯೋ ಲಾಂಚ್ ಗೆ ಸಿದ್ದ ರಾಮಯ್ಯ
ದಾವಣಗೆರೆಯಲ್ಲಿ ನಾಳೆ ಅದ್ಧೂರಿಯಾಗಿ ನಡೆಯಲಿರುವ ಪೊಗರು ಆಡಿಯೋ ಲಾಂಚ್ ಗೆ ಮಾಜಿ ಸಿದ್ದರಾಮಯ್ಯ ಅವರನ್ನು ಧ್ರುವಸರ್ಜಾ, ನಿರ್ದೇಶಕ ನಂದ ಕಿಶೋರ್ ಭೇಟಿಯಾಗಿ ಸಮಾರಂಭಕ್ಕೆ ಆಹ್ವಾನಿಸಿದರು. ಈ ವೇಳೆ ಶಾಸಕ ಬೈರತಿ ಸುರೇಶ್, ನಟ ಪ್ರಥಮ್ ಜೊತೆಗಿದ್ದರು.
ಮನರಂಜನೆ
ಅಭಿಷೇಕ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್
ಬೆಂಗಳೂರು : ಅಭಿಷೇಕ್ ಅಂಬರೀಶ್ ನಟನೆಯ ಮ್ಯಾಡ್ ಮ್ಯಾನರ್ಸ್ ಸಿನಿಮಾ ಸೆಟ್ಟೇರಿ ಅನೇಕ ಸಮಯವಾಗಿದೆ. ಆದರೆ ಅಭಿಷೇಕ್ ಜೊತೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ.
ರೆಬಲ್ ಸ್ಟಾರ್ ಪುತ್ರನ ಎರಡನೇ ಸಿನಿಮಾಗೆ ಕನ್ನಡದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಭಿಷೇಕ್ ಅಂಬರೀಶ್ ಜೊತೆ ಕನ್ನಡತಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಈ ಮೊದಲು ರಚಿತಾ, ಅಭಿಷೇಕ್ ನಟನೆ ಚೊಚ್ಚಲ ಸಿನಿಮಾ ಅಮರ್ ನಲ್ಲಿ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದರು.
Politics
ದರ್ಶನ್ ಅವರ ಅಭಿನಯದ “ರಾಬರ್ಟ್” : ಯಶಸ್ವಿ ಕಾಣಲಿ ಎಂದು ಶುಭಕೋರಿದ ಬಿ.ಸಿ ಪಾಟೀಲ್
ಇದೇ ಮಾರ್ಚ್ 11ನೇ ತಾರೀಖಿನಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ “ರಾಬರ್ಟ್” ಚಿತ್ರ ಬಿಡುಗಡೆಯಾಗುತ್ತಿದ್ದು, ಇಂದು ಹಿರೇಕೆರೂರಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ(ರಿ) ದ ಸದಸ್ಯರ ವತಿಯಿಂದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ, ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಹಾಗೂ 100 ದಿನ ಪೂರೈಸಲಿ ಎಂದು ಬಿ.ಸಿ ಪಾಟೀಲ್ ಶುಭಕೋರಿದರು.
ಈ ಸಂದರ್ಭದಲ್ಲಿ ಆತ್ಮೀಯರು ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಶ್ರೀ ಯು.ಬಿ. ಬಣಕಾರ್ ಅವರು ಹಾಜರಿದ್ದರು.