Connect with us
Ad Widget

ಮನರಂಜನೆ

ನಗರದ ಮಿರಾಜ್ ಸಿನಿಮಾ ಚಿತ್ರಮಂದಿರದಲ್ಲಿ ಗತ್ತು ಸಿನಿಮಾ ತಂಡ ಪ್ರೇಕ್ಷಕರೊಂದಿಗೆ ವೀಕ್ಷಣೆ

Published

on

ರಾಯಚೂರು ಫೆ.6-ಗತ್ತು ಚಲನಚಿತ್ರದ ತಂಡ ಇಂದು ರಾಯಚೂರು ನಗರದ ಮಿರಾಜ್ ಸಿನಿಮಾ ಚಿತ್ರಮಂದಿರದಲ್ಲಿ ಗತ್ತು ಸಿನಿಮಾ ಪ್ರೇಕ್ಷಕರೊಂದಿಗೆ ಚಿತ್ರದ ನಾಯಕ ನಟ ಗೋವಿಂದ್ ರಾಥೋಡ್ ,ಚಲನಚಿತ್ರ ನಿರ್ದೇಶಕರಾದ ಫೇರೋಜ್ ಖಾನ್ ಸಿಂಧನೂರು, ಸ್ತ್ರಿಪ್ ರೈಟರ್ ಅಲ್ಲಾಭಕ್ಷಿ,ಆಲಂ ಬಾಷಾ ಸಿಂಧನೂರು, ನಿಸಾರ್ ಖಾನ್, ಆದನಗೌಡ ಜವಳಗೇರಾ, ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಅಧ್ಯಕ್ಷ ಸಾಧಿಕ್ ಇವರೆಲ್ಲರೂ ವೀಕ್ಷಿಸಿದರು. ನಂತರ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಘಟಕ ರಾಯಚೂರು ವತಿಯಿಂದ ನಾಯಕರಿಗೆ, ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹೈದ್ರಾಬಾದ್-ಕರ್ನಾಟಕದ ಮತ್ತು ರಾಯಚೂರು ಜಿಲ್ಲಾಧ್ಯಕ್ಷರಾದ ಸಾದಿಕ್ ಖಾನ್, ಅಮರ್, ಚಿರು ಯಾದವ್,ವಂಶಿ, ವೆಂಕಟೇಶ ದಿನ್ನಿ, ಉಸ್ಮಾನ್,ರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ಮನರಂಜನೆ

13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ

Published

on

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ ಜರುಗಿತು. ಇದೇ ಸಂದರ್ಭದಲ್ಲಿ ಅವರು ಚಲನಚಿತ್ರೋತ್ಸವದ ಲಾಂಛನ ಬಿಡುಗಡೆ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶಕ ಡಿ.ಆರ್.ಜೈರಾಜ್, ಹಿರಿಯ ಕಲಾವಿದರಾದ ಶ್ರುತಿ, ತಾರಾ ಅನುರಾಧಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಆಯುಕ್ತ ಪಿ.ಎಸ್.ಹರ್ಷ ಉಪಸ್ಥಿತರಿದ್ದರು.

Continue Reading

ಮನರಂಜನೆ

ಹೀರೋ ಆಗಿ ಪ್ರೇಕ್ಷಕರ ಮುಂದೆ ಕುರಿ ಪ್ರತಾಪ್

Published

on

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ಈಗ ಪ್ರೇಕ್ಷಕರ ಮುಂದೆ ಹೀರೋ ಆಗಿ ಬರಲು ಸಜ್ಜಾಗಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಈಗಾಗಲೇ ಅನೇಕ ಹಾಸ್ಯ ಕಲಾವಿದರು ನಾಯಕರಾಗಿ ಮಿಂಚಿ ಸಕ್ಸಸ್ ಕಂಡಿದ್ದಾರೆ. ಕಾಮಿಡಿ ನಟರಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಅನೇಕ ಕಲಾವಿದರು ಖ್ಯಾತಿಗಳಿಸುತ್ತಿದ್ದಂತೆ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇದೀಗ ಅದೇ ಸಾಲಿಗೆ ಕುರಿ ಪ್ರತಾಪ್ ಸಹ ಸೇರಿಕೊಂಡಿದ್ದಾರೆ.

ಅಂದಹಾಗೆ ಕುರಿ ಪ್ರತಾಪ್ ಹೀರೋ ಆಗಿ ನಟಿಸುತ್ತಿರುವ ಮೊದಲ ಸಿನಿಮಾಗೆ ‘ಆರ್ ಸಿ ಬ್ರದರ್ಸ್’ ಎಂದು ಟೈಟಲ್ ಇಡಲಾಗಿದೆ. ಪ್ರಕಾಶ್ ಕುಮಾರ್ ಎನ್ನುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಹೋದರ ನಡುವಿನ ಸಂಬಂಧದ ಬಗ್ಗೆ ಇರುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ

Continue Reading

ಮನರಂಜನೆ

‘ಪೊಗರು’ ಆಡಿಯೋ ಲಾಂಚ್ ಗೆ ಸಿದ್ದ ರಾಮಯ್ಯ

Published

on

ದಾವಣಗೆರೆಯಲ್ಲಿ ನಾಳೆ ಅದ್ಧೂರಿಯಾಗಿ ನಡೆಯಲಿರುವ ಪೊಗರು ಆಡಿಯೋ ಲಾಂಚ್ ಗೆ ಮಾಜಿ ಸಿದ್ದರಾಮಯ್ಯ ಅವರನ್ನು ಧ್ರುವಸರ್ಜಾ, ನಿರ್ದೇಶಕ ನಂದ ಕಿಶೋರ್ ಭೇಟಿಯಾಗಿ ಸಮಾರಂಭಕ್ಕೆ ಆಹ್ವಾನಿಸಿದರು. ಈ ವೇಳೆ ಶಾಸಕ ಬೈರತಿ ಸುರೇಶ್, ನಟ ಪ್ರಥಮ್ ಜೊತೆಗಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್