ರಾಜ್ಯ
ಕಹಿಯಾದ ಬೇವು ಗ್ರಾಮೀಣ ಬಡವರ ಬದುಕಿಗೆ ಬೆಲ್ಲದಂತೆ ಸಿಹಿ ನೀಡುತ್ತಿದೆ
ವರದಿ: ನರಸಿಂಹಮೂರ್ತಿ ಎಂ.ಎಲ್. ಮಾಡಪ್ಪಲ್ಲಿ.
ಬಾಗೇಪಲ್ಲಿ: ಬೇವು ಎಂದರೇನೆ ಕಹಿ. ಸಾಮಾನ್ಯವಾಗಿ ಸಿಹಿಯನ್ನು ಇಷ್ಟಪಟ್ಟಷ್ಟು ಕಹಿಯನ್ನು ಸ್ವೀಕರಿಸುವುದಿಲ್ಲ. ಆದರೆ ಕಹಿಯೇ ಹೆಚ್ಚು ಪ್ರಯೋಜನಕಾರಿ. ಅಂತಹ ಪ್ರಯೋಜನಕಾರಿ ಕಹಿಯಾದ ಬೇವು ಬಹುಪಕಾರಿ ಸಸ್ಯ ಸಂಪತ್ತು. ಪರಿಸರ ಮಾಲಿನ್ಯ ತಡೆಯುವಲ್ಲಿ ಹಾಗೂ ಸ್ವಚ್ಚವಾದ ಆಮ್ಲಜನಕ ದೊರೆಯುವಂತೆ ಮಾಡುತ್ತದೆ.
ಇಂತಹ ಬೇವಿನ ಮರದ ಸಸ್ಯಶಾಸ್ತ್ರೀಯ ಹೆಸರು ಅಜಡಿರಕ್ಟ ಇಂಡಿಕ.
ಬರಗಾಲದಲ್ಲಿ ಬದುಕಿ ಉಳಿಯುವ ಮರವಾದುದರಿಂದ ಭಾರತದ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೆರಳಿನಾಶ್ರಯದ ಪ್ರಮುಖ ಮರ.ಸಾಲು ಮರಗಳಾಗಿ,ತೋಪುಗಳಾಗಿ ನೆಡಲ್ಪಟ್ಟಿದೆ.ಇದರ ದಾರುವು ಬಹು ಉಪಯೋಗಿ.ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ.ಗೃಹ ನಿರ್ಮಾಣ, ಪಿಠೋಪಕರಣ ಮುಂತಾದ ಕೆಲಸಗಳಿಗೆ ಉಪಯೋಗಿಸಲ್ಪಡುತ್ತದೆ. ತೊಗಟೆಯಿಂದ ಬರುವ ಅಂಟು,ಹೂವು,ಎಲೆಗಳು ಔಷಧಿಗಳಿಗೆ ಉಪಯೋಗವಾಗುತ್ತದೆ.ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರ. ಎಳೆಯ ಕಡ್ಡಿ ದಂತಮಾರ್ಜನಕ್ಕಾಗಿ ಉಪಯೋಗವಾಗುತ್ತದೆ.
ಹಲವು ಶತಮಾನಗಳಿಂದ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಬೇವು ಔಷಧಿಯಾಗಿ ಬಳಕೆಯಾಗುತ್ತಿದೆ.
ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬೇವು ಸಹಾಯಕ ಎಂದು ಭಾರತೀಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಬೇವಿನಮರದ ಎಲೆ , ತೊಗಟೆ, ಹೂ, ಹಣ್ಣು, ಕಡ್ಡಿ, ಬೀಜ, ಎಣ್ಣೆ ಹಾಗು ಬೇರುಗಳು ಔಷಧೀಯ ಗುಣಗಳನ್ನು ಮೈದುಂಬಿಕೊಂಡಿರುತ್ತವೆ. ವೈದ್ಯಕೀಯ ಲೋಕಕ್ಕೆ ಬೇವು ಒಂದು ಅದ್ಭುತ ಮರ.’ಕುಷ್ಠ, ತೂನ್ನು, ಕಣ್ಣಿನ, ತೂಂದರೆ , ಹೊಟ್ಟೆ ಹುಳು, ಕೆಮ್ಮು, ಉಬ್ಬಸ,ಪೈಲ್ಸ್, ಮದುಮೇಹ, ಕಾಮಾಲೆ, ಪ್ಲೇಗ್, ಇಸುಬು, ಅಲ್ಸರ್ ಜ್ವರ ದೋಷನಿವಾರಣೆಗೆ ಬಳಸಲ್ಪಡುತ್ತದೆ. ಬೇವು ಆರೋಗ್ಯ ಹೌದು ಅಷ್ಟೇ ಅಲ್ಲದೆ ಅನಾದಿ ಕಾಲದಿಂದಲೂ ಬೇವಿನ ಎಣ್ಣೆಯನ್ನು ಪರಿಣಾಮಕಾರಿ ಔಷಧ ಎಂದು ಸಾಬೀತಾಗಿದೆ.
ಇಂತಹ ಲಾಕ್ ಡೌನ್ನಿಂದಾಗಿ ಕೆಲಸವಿಲ್ಲದಿರುವುದು ಒಂದೆಡೆಯಾದರೆ, ಸರಿಯಾಗಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ರೈತ ಮಹಿಳೆಯರು ಸದ್ಯ ಜೀವನೋಪಾಯಕ್ಕಾಗಿ ಬೇವಿನ ಬೀಜ ಆರಿಸಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಿಂದ ಕೂಲಿ ಕೆಲವರಿಗೆ ಸಿಗುತ್ತಿದೆಯಾದರೂ, ಮಿಕ್ಕವರಿಗೆ ಸದ್ಯ ಬೇವಿನ ಬೀಜವೇ ಬದುಕಿನ ಆಸರೆಯಾಗಿದೆ.
ವೃದ್ದ ಮಹಿಳೆಯರು, ಹೊಲ, ಗದ್ದೆ ಸುತ್ತಾಡಿ ಗಾಳಿಗೆ ಬೇವಿನ ಮರದ ಕೆಳಗೆ ಬಿದ್ದಿರುವ ಬೇವಿನ ಬೀಜಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಒಂದು ಕಿಲೋ ಗ್ರಾಮ್ ಬೇವಿನ ಬೀಜಕ್ಕೆ 30 ರಿಂದ 40 ರೂ. ಸಿಗುತ್ತದೆ. ದಿನಕ್ಕೆ 2 ರಿಂದ 3 ಕಿಲೋ ಬೀಜ ಆಯ್ದು ಒಣಗಿಸಿ ಚೀಲದಲ್ಲಿ ಸಂಗ್ರಹಿಸಿಡಲಾಗುತ್ತಿದೆ. ಶಾಲೆಗೆ ರಜೆಯಾದ್ದರಿಂದ ಮಹಿಳೆಯರೊಂದಿಗೆ ಮಕ್ಕಳು ಬೇವಿನ ಬೀಜ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಮಹಿಳೆಯರ ಬದುಕಿಗೆ ಆಸರೆಯಾದ ಬೇವಿನ ಬೀಜಈ ಬಗ್ಗೆ ಮಾರ್ಗಾನುಕುಂಟೆ ,ಕೊತ್ತಕೋಟೆ, ಹೊನ್ನಂಪಲ್ಲಿ ಗ್ರಾಮಗಳ ಮಹಿಳೆ ಬೇವಿನ ಬೀಜ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಸ್ವಲ್ಪ ಮಟ್ಟಿಗೆ ಆರ್ಥಿಕ ಸಮಸ್ಯೆಗಳೂ ಬಗೆಹರಿಯುವಂತಾಗುತ್ತವೆ.
ಮಾರಗಾನಕುಂಟೆಯ ವಿಜಯಮ್ಮರವರು ಮಾತನಾಡಿ
ಮಳೆ ಸರಿಯಾಗಿ ಬರಲಿಲ್ಲ. ಹಾಗಾಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಮುಳ್ಳಿನ ಕಂಟೆ, ಪೊದೆ ಸೇರಿದಂತೆ ಬೇವಿನ ಬೀಜ ದೊರೆಯುವೆಡೆ ಬೀಜಗಳನ್ನು ಆರಿಸುತ್ತಿದ್ದೇವೆ. ಇಂತಹ ಕೊರೋನಾ ತುರ್ತು ಸಂದರ್ಭದಲ್ಲೂ ಸರ್ಕಾರ ನಮ್ಮಂತವರ ನೋವಿಗೆ ಸ್ಪಂದಿಸುವ ಕನಿಷ್ಠ ಕಾಳಜಿ ತೋರುತ್ತಿಲ್ಲ. ಹೊರಗಡೆ ದುಡಿಯಲು ಸರಿಯಾದ ಕೆಲಸಗಳು ಸಿಗುತ್ತಿಲ್ಲ. ವಿಪರೀತ ಬೆಲೆ ಏರಿಕೆಯಿಂದಾಗಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಲೂ ಆಗುತ್ತಿಲ್ಲ. ಹಾಗಾಗಿ ಸ್ವಲ್ಪ ಮಟ್ಟಿಗಾದರೂ ಆರ್ಥಿಕ ಸಂಕಷ್ಟಕ್ಕೆ ಒಂದಿಷ್ಟು ಆಸರೆಯಾಗಲಿ ಎಂದು ಬೇವಿನ ಬೀಜ ಆರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಏನೇ ಆಗಲಿ ಪಟ್ಟಣ,ನಗರ ಪ್ರದೇಶಗಳಲ್ಲಿ ಹುಟ್ಟಿಕೊಳ್ಳುವ ಸಮಾಜ ಸೇವಕರು ಗ್ರಾಮಗಳಲ್ಲಿ ಇರಲಾರರು ಎಂಬ ಅಂತರಾಳದ ಅಭಿಪ್ರಾಯವನ್ನು ಮಾರ್ಮಿಕವಾಗಿ ಬೇವಿನ ಬೀಜ ಆರಿಸುತ್ತಿದ್ದ ಮಹಿಳೆಯರು ವ್ಯಕ್ತಪಡಿಸಿದರು.
ರಾಜ್ಯ
“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ”
ಬೆಂಗಳೂರು : ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆ ಹಮ್ಮಿಕೊಂಡಿರುವ “ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು-ಶಿಕ್ಷಕರು ಉಳಿದರೆ, ಶಿಕ್ಷಣ” ಎಂಬ ಸಾಂಕೇತಿಕ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಆರ್. ಅಶೋಕ್ ರವರು, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ
ಶಾಲೆಯ ಸಭಾಂಗಣ ಮತ್ತು ಕೊಠಡಿಯ ಉದ್ಘಾಟನೆ : ಅರವಿಂದ ಲಿಂಬಾವಳಿ
ಬೆಂಗಳೂರು : ಇಂದು ಹಾಲನಾಯಕನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಶಾಲೆಯ ಒಂದು ಸಭಾಂಗಣ ಹಾಗೂ ಎರಡು ಕೊಠಡಿಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ, ಗ್ರಾಮದ ಮುಖಂಡರು, ಇಲಾಖೆಯ ಅಧಿಕಾರಿಗಳು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ರಾಜ್ಯ
ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿಗೆ ಅಧಿಸೂಚನೆ
ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ನೀಡಿದ್ದಾರೆ.
ಬೆಂಗಳೂರು: ಇತ್ತೀಚೆಗೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗೆ ಮೀಸಲಾತಿ ಪ್ರಕಟಗೊಂಡು ಹಲವಡೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಆಯ್ಕೆಯಾಗಿದ್ದಾರೆ. ಆದರೆ ಇದೀಗ ಹೈಕೋರ್ಟ್ ಈ ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ಮಾಡಿದ್ದಾರೆ.
ಮೀಸಲಾತಿ ಕುರಿತು ಹೈಕೋರ್ಟ್ ನಲ್ಲಿ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದ್ದು, ನ್ಯಾಯಧೀಶರು ಸಮರ್ಪಕ ಪರಾಮರ್ಶಿಸಿ ಮೀಸಲಾತಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ 4 ವಾರಗಳಲ್ಲಿ ಹೊಸ ಮೀಸಲಾತಿ ಪ್ರಕಟಿಸಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಕುರಿತು ಈಗಾಗಲೇ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರ ನೇಮಕಾತಿ ಅಸಿಂಧು ಆಗಲಿದೆ. ನ್ಯಾಯಾಲಯದ ಆದೇಶದಂತೆ ಹಳೇ ಮೀಸಲಾತಿ ರದ್ದುಗೊಳಿಸಿ ಇದೀಗ ಪ್ರಸಕ್ತ ಹೊಸ ಮೀಸಲಾತಿ ಜಾರಿಗೊಳಿಸುವಂತೆ ಆದೇಶ ನೀಡಿದನ್ವಯ ಮತ್ತೊಮ್ಮೆ ಹೊಸ ಮೀಸಲಾತಿ ಅನ್ವಯ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಸರ್ಕಾರ ಆಕ್ಷೇಪಣೆ ಸಲ್ಲಿಸಲು 10 ದಿನಗಳ ಅವಕಾಶ ನೀಡಿದೆ. ರಾಜ್ಯದ 277 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಿಸಲಾಗಿತ್ತು. ಹಲವಾರು ಕಡೆ ಚುನಾವಣೆಗಳು ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ನಡೆದಿದೆ. ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಹುಮತ ಪಡೆದಿದ್ದರೂ ಮೀಸಲಾತಿ ಪ್ರಕಾರ ಅಧ್ಯಕ್ಷ ಹುದ್ದೆ ಬಿಜೆಪಿ ಪಾಲಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭಿಸಲಾಗಿತ್ತು.