Connect with us
Ad Widget

Politics

ಎಚ್. ವಿಶ್ವನಾಥ್ ಅವರಿಗೆ ಯಡಿಯೂರಪ್ಪ ಸೂಕ್ತ ಸ್ಥಾನಮಾನ ನೀಡುವ ವಿಶ್ವಾಸ; ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು

Published

on

ವಿಜಯಪುರ: ಮಾಜಿ ಸಚಿವರಾದ ಎಚ್ ವಿಶ್ವನಾಥ್ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಕ್ತವಾದ ಸ್ಥಾನಮಾನವನ್ನು ನೀಡುವ ವಿಶ್ವಾಸವನ್ನು ಸಚಿವರಾದ ಬೈರತಿ ಬಸವರಾಜು ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಎಚ್. ವಿಶ್ವನಾಥ ಅವರಿಗೆ ವಿಧಾನ ಪರಿಷತ್ ಗೆ ನಾಮಿನೇಟ್ ಮಾಡುವ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದೆ ವಿಶ್ವನಾಥ ಅವರಿಗೆ ಬೈ ಎಲೆಕ್ಷನ್ ಟಿಕೆಟ್ ನೀಡಲಾಗಿತ್ತು. ಆದರೆ, ಜನರ ತೀರ್ಪು ವಿರುದ್ಧವಾಗಿ ಬಂದಿದೆ. ಆದರೂ, ವಿಶ್ವನಾಥ ಅವರಿಗೆ ವಿಧಾನ ಪರಿಷತ್ ಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದೇವೆ ಎಂದರು. ಸಿಎಂ ಯಡಿಯೂರಪ್ಪ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ನಾಲ್ಕು ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಎಂ. ಟಿ. ಬಿ. ನಾಗರಾಜ, ಶಂಕರ್ ಅವರಿಗೆ ನೀಡಿದ್ದಾರೆ. ಇನ್ನೆರಡು ಸ್ಥಾನಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ. ಮುಂದೆ ನಾಮ ನಿರ್ದೇಶನ ಸಂದರ್ಭದಲ್ಲಿ ಎಚ್. ವಿಶ್ವನಾಥ ಅವರಿಗೆ ಅವಕಾಶ ನೀಡುವ ವಿಶ್ವಾಸವಿದೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.

ವರದಿ: ಕೆ. ವಿ. ಒಡೆಯರ್

Continue Reading
Advertisement
Click to comment

Leave a Reply

Your email address will not be published. Required fields are marked *

Politics

ಬಿಜೆಪಿ ರೈತ ಮೋರ್ಚಾ ಬೆಂಗಳೂರು ದಕ್ಷಿಣ ಜಿಲ್ಲೆ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿದ ಶಾಸಕ ಆರ್ ಅಶೋಕ್

Published

on

ಬೆಂಗಳೂರು : ಬಿಜೆಪಿ ರೈತ ಮೋರ್ಚಾ ಬೆಂಗಳೂರು ದಕ್ಷಿಣ ಜಿಲ್ಲೆ ವತಿಯಿಂದ ಇಂದು ಕಾರ್ಯಕಾರಿಣಿ ಸಭೆಯನ್ನು ಶಾಸಕ ಆರ್ ಅಶೋಕ್ ಅವರು ಉದ್ಘಾಟಿಸಿದರು.

ಕೃಷಿ ಮಸೂದೆಯಿಂದ ರೈತರಿಗೆ ಯಾವ ರೀತಿ ಉಪಯೋಗವಾಗುತ್ತದೆ ಹಾಗೂ ಆ ಮಸೂದೆಯಿಂದ ರೈತರಿಗೆ ಯಾವ ರೀತಿ ಪ್ರಯೋಜನವಾಗುತ್ತದೆ ಎಂದು ಸಭೆಯಲ್ಲಿ ರೈತರಿಗೆ ಸತ್ಯವನ್ನು ತಿಳಿಸಲಾಯಿತು.

ಈ ವೇಳೆ ನನ್ನೊಂದಿಗೆ ರಾಜ್ಯ ಮೋರ್ಚಾದ ಅಧ್ಯಕ್ಷರು ಹಾಗೂ ರಾಜ್ಯ ಸಭಾ ಸಂಸದರಾದ ಶ್ರೀ ಈರಣ್ಣ ಕಡಾಡಗಿ ಹಾಗೂ ರೈತ ಮುಖಂಡರು ಭಾಗಿಯಾಗಿದ್ದರು.

Continue Reading

Politics

ಕೆ.ಪಿ.ಸಿ.ಸಿ ಕಛೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆ

Published

on

ಬೆಂಗಳೂರು : ಕೆ.ಪಿ.ಸಿ.ಸಿ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರದ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಪಾಲಿಕೆಯ ಸದಸ್ಯರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆಯಲ್ಲಿ ದಿನೇಶ್ ಗುಂಡೂರಾವ್ ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಬಿ.ಜೆ.ಪಿಯ ಆಡಳಿತದ ವೈಪಲ್ಯಗಳ ಬಗ್ಗೆ ಪ್ರತಿಭಟನೆ ಮತ್ತು ಹೋರಾಟ ನಡೆಸುವ ಕಾರ್ಯ ತಂತ್ರಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕರಾದ ರಾಮಲಿಂಗಾರೆಡ್ಡಿರವರು ಸೇರಿದಂತೆ ಹಲವರು ಭಾಗವಹಿಸಿದ್ದರು.

Continue Reading

Politics

ಸಿದ್ದರಾಮಯ್ಯ ಯುವ ಬ್ರಿಗೇಡ್ ರಾಯಚೂರು ಜಿಲ್ಲಾಧ್ಯಕ್ಷರಾಗಿ ಅಯ್ಯಪ್ಪ ಗಬ್ಬೂರು ನೇಮಕ

Published

on

ರಾಯಚೂರು : ಅಖಿಲ ಕರ್ನಾಟಕ ಸಿದ್ದರಾಮಯ್ಯ ಯುವ ಬ್ರಿಗೇಡ್ ರಾಜ್ಯಧ್ಯಕ್ಷರಾದ ಮಹೇಶ ಡಿ.ಗೌಡ ರವರು ಆದೇಶದ ಮೇರೆಗೆ ರಾಯಚೂರು ಜಿಲ್ಲಾಧ್ಯಕ್ಷರಾಗಿ ಅಯ್ಯಪ್ಪ ಗಬ್ಬೂರು ರವರು ಕುರಿ ಮೇಕೆಗಳ ಪರಿಹಾರ ಸಲುವಾಗಿ ನಿರಂತರ ಹೋರಾಟ, ರೈತಪರ, ರಸ್ತೆ ಸುಧಾರಣೆ, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಪರ ಯುವ ಕುರುಬರ ಸಂಘ ಹಾಗೂ ಸಂಘಟನೆ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು,ಸಚಿವರು, ಶಾಸಕರು, ತನ್ನ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಹೋಗಿ ಹಲವಾರು ಬಾರಿ ಬೇಟಿ ನೀಡಿ ಮನವಿ ಪತ್ರ ಕೊಟ್ಟು ಜನ ಸೇವೆ ಮಾಡುವಲ್ಲಿ ನಿರಂತರ ಹೋರಾಟದ ಮನೋಭಾವ ವಿರುವ ಅವರ ನಿರಂತರ ಹೋರಾಟದ ಸೇವೆ ಗುರುತಿಸಿ ಸಿದ್ದರಾಮಯ್ಯ ಯುವ ಬ್ರಿಗೇಡ್ ರಾಯಚೂರು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದೆ.

ವರದಿ: ದುರ್ಗೇಶ್ ಬೋವಿ ಮಸ್ಕಿ

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್