Politics
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪದವೀಧರರು; ಪ್ರಾಮಾಣಿಕ ಮತದಾರರಿಗೆ ಸತ್ವ ಪರೀಕ್ಷೆ
ಬಾಗೇಪಲ್ಲಿ: ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಬಹುತೇಕ ಗ್ರಾಮಗಳ ಅರಳಿ ಕಟ್ಟೆಗಳು ಪ್ರಸ್ತುತ ರಾಜಕೀಯ ಚರ್ಚಾ ವೇಧಿಕೆಗಳಾಗಿ ಮಾರ್ಪಟ್ಟಿವೆ.
ಈ ಗ್ರಾಮ ಪಂಚಾಯಿತಿ ಚುನಾವಣೆ ಬಹಳ ಕುತೂಹಲ ಕೇರಳಿಸಿದೆ. ಸುಮಾರು ವರ್ಷಗಳ ಕಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರಾಗಿ ಅಧಿಕಾರ ಹಿಡಿದಿದ್ದ ಮಾಜಿ ಅಧ್ಯಕ್ಷ ಮತ್ತು ಸದಸ್ಯರಿಗೆ ಈ ಬಾರಿ ಆತಂಕ ಸೃಷ್ಟಿಯಾಗಿದೆ. ಅಧಿಕಾರದ ಅವಧಿಯಲ್ಲಿ ನಡೆಸಿರುವ ಅಕ್ರಮ, ಭ್ರಷ್ಟಾಚಾರ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದ್ದು ಸೇರಿದಂತೆ ಹಲವಾರು ಲೋಪದೋಷಗಳಿಂದಾಗಿ ನುರಿತ ಗ್ರಾಮೀಣ ರಾಜಕಾರಣಿಗಳಿಗೂ ಕೆಲ ಪದವೀಧರ ಸ್ಪರ್ಧೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಬಾಗೇಪಲ್ಲಿ ತಾಲ್ಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯಿತಿಯ ವಿ. ಹರೀಶ್ ಎಂಬ ಯುವಕ ತನ್ನ ಪದವಿಯನ್ನು ಮುಗಿಸಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಹಾಗೂ ಗೂಳೂರು ಹೋಬಳಿ ಬಿಳ್ಳೂರು ಗ್ರಾಮ ಪಂಚಾಯಿತಿ ಪದವೀಧರ ಅನಿಲ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ.
ಹಾಗೆಯೇ ಗೊರ್ತಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಣಕೊಂಡ ಗ್ರಾಮದಲ್ಲಿ ನರೇಂದ್ರ ಎಂಬ ಪದವೀಧರ ಸ್ಪರ್ಧೆ ಮಾಡಿ ಉಳಿದ ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಡಪಲ್ಲಿ ಕ್ಷೇತ್ರದಿಂದ ಶ್ರಾವಣಿ ಎಂಬ ಪದವೀಧರ ಮಹಿಳೆಯೂ ಚುನಾವಣಾ ಅಖಾಡದಲ್ಲಿದ್ದಾರೆ.
ಬದಲಾವಣೆ ಬಯಸಿ ತಾಲೂಕಿನಲ್ಲಿ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಅಧಿಕಾರ ನಡೆಸಿಕೊಂಡು ಬಂದು ಜನರನ್ನು ಮರಳು ಮಾಡುತಿರುವ ಅಸಾಮಿಗಳನ್ನು ಸೋಲಿಸಲು ಜನರೇ ತೀರ್ಮಾನಿಸಿ ತಮ್ಮ ಪರವಾಗಿ ಪದವೀಧರರನ್ನು ಚುನಾವಣಾ ಕಣಕ್ಕೆ ಇಳಿಸಿದ್ದಾರೆ. ಇದರಿಂದಾಗಿ ಪ್ರಾಮಾಣಿಕ ಮತದಾರರು ತಮ್ಮ ಅಭ್ಯರ್ಥಿಯನ್ನು ಜಯಗೊಳಿಸಲು ಮುಂದಾಗಿದ್ದಾರೆ. ಇವರ ನಡುವೆ ಆಸೆ,ಆಮಿಷಗಳಿಗೆ ಬಲಿಯಾಗುವ ಮತದಾರರು ವಾಸ್ತವ ಅರಿತುಕೊಂಡು ತಮ್ಮ ಗ್ರಾಮಗಳ ಅಭಿವೃದ್ಧಿಗೆ ಈ ಚುನಾವಣೆಯ ಮೂಲಕ ಅಡಿಪಾಯ ಹಾಕಬೇಕಿದೆ ಎಂದು ದೇವಿಕುಂಟೆ ಗ್ರಾಮದ ಡಿ.ಜಿ.ಪವನ್ ಕಲ್ಯಾಣ ಅಭಿಪ್ರಾಯ ವ್ಯಕ್ತಪಡಿಸಿದರು.
Politics
ಉಗ್ರಾಣ ಭವನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ರಾಜ್ಯ ಉಗ್ರಾಣ ನಿಗಮದ ಆಡಳಿತ ಕಛೇರಿ ಕಟ್ಟಡ “ಉಗ್ರಾಣ ಭವನ”ವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೃಷಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Politics
ಸೈಬರ್ ಪೊಲೀಸ್ ಠಾಣೆಯ ಕಟ್ಟಡದ ಹೆಚ್ಚುವರಿ ಕೊಠಡಿಗಳ ಕಾಮಗಾರಿಯ ಉದ್ಘಾಟನೆ
ಬೆಂಗಳೂರು : ಬನಶಂಕರಿಯಲ್ಲಿ ಶಾಸಕ ಆರ್.ಅಶೋಕ್ ರವರು, ಕರ್ನಾಟಕ ರಾಜ್ಯ ಪೊಲೀಸ್ ಬೆಂಗಳೂರು ದಕ್ಷಿಣ ವಿಭಾಗ ಸೈಬರ್ ಪೊಲೀಸ್ ಠಾಣೆಯ ಕಟ್ಟಡದ ಹೆಚ್ಚುವರಿ ಕೊಠಡಿಗಳ ಕಾಮಗಾರಿಯ ಉದ್ಘಾಟನೆ ಮಾಡಿದರು.
ಈ ವೇಳೆ ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಶ್ರೀ ಸೌಮೆಂದು ಮುಖರ್ಜಿ, ಹಿರಣ್ಣಯ್ಯಸ್ ಆರ್ಟ್ ಫೌಂಡೇಷನ್ ಅಧ್ಯಕ್ಷರಾದ ಶ್ರೀಮತಿ ಶಾಂತ ಹಿರಣ್ಣಯ್ಯ ಹಾಗೂ ಬೆಂಗಳೂರು ನಗರ ದಕ್ಷಿಣ ವಿಭಾಗ ಉಪ ಪೊಲೀಸ್ ಆಯುಕ್ತರಾದ ಶ್ರೀ ಹರೀಶ್ ಪಾಂಡೆ ಉಪಸ್ಥಿತರಿದ್ದರು.
Politics
‘ಈಡಿಗರ ಭವನ’ವನ್ನು ಉದ್ಘಾಟಿಸಿದ ಸಿಎಂ ಯಡಿಯೂರಪ್ಪ
ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಮುದಾಯದ ವತಿಯಿಂದ ಶಿವಮೊಗ್ಗದಲ್ಲಿ ನಿರ್ಮಿಸಲಾಗಿರುವ ‘ಈಡಿಗರ ಭವನ’ವನ್ನು ಉದ್ಘಾಟಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಆರ್ಯ ಈಡಿಗರ ಸಮುದಾಯದ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ಉಪಸ್ಥಿತರಿದ್ದರು.