Politics
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಕುರಿತಂತೆ ಕರ್ನಾಟಕ ಉನ್ನತ ಪರಿಷತ್ತು ಹಾಗೂ ಬ್ರಿಟಿಷ್ ಕೌನ್ಸಿಲ್ ನಡುವೆ ಒಡಂಬಡಿಕೆಗೆ ಸಹಿ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಮ್ಮುಖದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಕುರಿತಂತೆ ಕರ್ನಾಟಕ ಉನ್ನತ ಪರಿಷತ್ತು ಹಾಗೂ ಬ್ರಿಟಿಷ್ ಕೌನ್ಸಿಲ್ ನಡುವೆ ಒಡಂಬಡಿಕೆಗೆ ಇಂದು ಸಹಿ ಮಾಡಲಾಯಿತು.
ಉಪಮುಖ್ಯಮಂತ್ರಿ ಡಾ ಸಿ.ಎನ್.ಅಶ್ವತ್ಥನಾರಾಯಣ, ಯು.ಕೆ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್ ರಾಬ್, ಬ್ರಿಟಿಷ್ ಕೌನ್ಸಿಲ್ ನ ಅಧಿಕಾರಿಗಳು, ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Politics
ಸೈಬರ್ ಪೊಲೀಸ್ ಠಾಣೆಯ ಕಟ್ಟಡದ ಹೆಚ್ಚುವರಿ ಕೊಠಡಿಗಳ ಕಾಮಗಾರಿಯ ಉದ್ಘಾಟನೆ
ಬೆಂಗಳೂರು : ಬನಶಂಕರಿಯಲ್ಲಿ ಶಾಸಕ ಆರ್.ಅಶೋಕ್ ರವರು, ಕರ್ನಾಟಕ ರಾಜ್ಯ ಪೊಲೀಸ್ ಬೆಂಗಳೂರು ದಕ್ಷಿಣ ವಿಭಾಗ ಸೈಬರ್ ಪೊಲೀಸ್ ಠಾಣೆಯ ಕಟ್ಟಡದ ಹೆಚ್ಚುವರಿ ಕೊಠಡಿಗಳ ಕಾಮಗಾರಿಯ ಉದ್ಘಾಟನೆ ಮಾಡಿದರು.
ಈ ವೇಳೆ ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಶ್ರೀ ಸೌಮೆಂದು ಮುಖರ್ಜಿ, ಹಿರಣ್ಣಯ್ಯಸ್ ಆರ್ಟ್ ಫೌಂಡೇಷನ್ ಅಧ್ಯಕ್ಷರಾದ ಶ್ರೀಮತಿ ಶಾಂತ ಹಿರಣ್ಣಯ್ಯ ಹಾಗೂ ಬೆಂಗಳೂರು ನಗರ ದಕ್ಷಿಣ ವಿಭಾಗ ಉಪ ಪೊಲೀಸ್ ಆಯುಕ್ತರಾದ ಶ್ರೀ ಹರೀಶ್ ಪಾಂಡೆ ಉಪಸ್ಥಿತರಿದ್ದರು.
Politics
‘ಈಡಿಗರ ಭವನ’ವನ್ನು ಉದ್ಘಾಟಿಸಿದ ಸಿಎಂ ಯಡಿಯೂರಪ್ಪ
ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಮುದಾಯದ ವತಿಯಿಂದ ಶಿವಮೊಗ್ಗದಲ್ಲಿ ನಿರ್ಮಿಸಲಾಗಿರುವ ‘ಈಡಿಗರ ಭವನ’ವನ್ನು ಉದ್ಘಾಟಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಆರ್ಯ ಈಡಿಗರ ಸಮುದಾಯದ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ಉಪಸ್ಥಿತರಿದ್ದರು.
Politics
ಶಾಲಾಭಿವೃದ್ಧಿಗೆ ಗ್ರಾಮಸ್ಥರ ಸಹಭಾಗಿತ್ವ ಮುಖ್ಯ : ಶರಣಗೌಡ ಹಂದ್ರಾಳ
ಮಸ್ಕಿ .ಫೆ.17 ;- ಶಾಲೆ ಮತ್ತು ಗ್ರಾಮಗಳ ಅಭಿವೃದ್ಧಿಗೆ
ಗ್ರಾಮಸ್ಥರ ಸಹಭಾಗಿತ್ವ ಅಗತ್ಯವೆಂದು ಅಂಕುಶದೊಡ್ಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶರಣಗೌಡ ಹಂದ್ರಾಳ ಅಭಿಪ್ರಾಯ ಪಟ್ಟರು
ಸಮೀಪದ ಬುದ್ದಿನ್ನಿ ಎಸ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಸ್,ಡಿ,ಎಂ, ಸಿ ತರಬೇತಿ ಶಿಬಿರದಲ್ಲಿ ಉದ್ಘಾಟಕರಾಗಿ ಮಾತನಾಡಿದರು ಶಾಲೆ ಮತ್ತು ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ಗ್ರಾಮಸ್ಥರು ಒಗ್ಗಟ್ಟಿನಿಂದ ಅಭಿವೃದ್ಧಿಪಡಿಸುವುದು ಶ್ಲಾಘನೀಯವಾಗಿದ್ದು ಗ್ರಾಪಂನಿಂದ ಬರುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಶಾಲೆ ಮತ್ತು ಗ್ರಾಮದ ಅಭಿವೃದ್ಧಿಗಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂತೆಕಲ್ಲೂರು ಸಿ ಆರ್ ಪಿ ಅಧಿಕಾರಿ ಪರಶುರಾಮ ಮಾತನಾಡಿ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮವನ್ನು ರಾಜ್ಯಮಟ್ಟಕ್ಕೆ ಹೆಸರಾಗಿದ್ದು ಅದಕ್ಕೆ ಸರ್ವ ಗ್ರಾಮಸ್ಥರು ಮತ್ತು ಶಾಲೆಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದ್ದು ಶಾಲಾಭಿವೃದ್ಧಿ ವಿಷಯದಲ್ಲಿ ಎಸ್,ಡಿಎಂಸಿ ಮತ್ತು ಶಾಲಾ ಸಿಬ್ಬಂದಿಗಳು ಮತ್ತು ಗ್ರಾಮಸ್ಥರ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು,
ಆರೋಗ್ಯದ ವಿಷಯಗಳ ಬಗ್ಗೆ ಸಂತೆಕಲ್ಲೂರು ಆರೋಗ್ಯ ಕೇಂದ್ರದ ಹಿರಿಯ ಅಧಿಕಾರಿ ನಾಮದೇವ್ ಸ್ವ ವಿವರವಾಗಿ ಮಾತನಾಡಿದರು.
ಶಾಲೆಯ ಮುಖ್ಯಗುರುಗಳಾದ ದುರುಗಣ್ಣ ಹೂವಿನಭಾವಿ ಮಾತನಾಡಿ ಸೋಮವಾರದಿಂದ ಶಾಲೆಗಳು ಪೂರ್ಣವಾಗಿ ಆರಂಭಗೊಳ್ಳುವುದರಿಂದ ಬೆಂಗಳೂರಿಗೆ ಗುಳೆಹೋದ ಮಕ್ಕಳನ್ನು ಊರಿಗೆ ಮರಳಿ ಕರೆತಂದು ಶಾಲೆಗೆ ಬರುವಂತೆ ನೋಡಿ ಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಎಸ್, ಡಿ,ಎಂ,ಸಿ ಅಧ್ಯಕ್ಷ ನಾಗರಡ್ಡೆಪ್ಪ ದೇವರಮನಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಅಳವಡಿಸಿಕೊಳ್ಳುವಂತೆ ಪಿಡಿಒ ಶರಣಗೌಡ ರಿಗೆ ಮನವಿ ಮಾಡಿದರು ಮತ್ತು ಶಾಲೆ ಅಭಿವೃದ್ಧಿ ವಿಷಯಗಳಲ್ಲಿ ಬುದ್ದಿನ್ನಿ ಎಸ್ ಗ್ರಾಮಸ್ಥರ ಪ್ರೀತಿಯ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಪ್ರೌಢಶಾಲೆ ಮಂಜೂರಾತಿಗಾಗಿ ಹೋರಾಟದ ವಿಷಯದಲ್ಲಿ ಸ್ವಯಂ ಪ್ರೇರಿತರಾಗಿ ಮುಂದಾಳತ್ವದಲ್ಲಿ ಶಿಕ್ಷಣ ಇಲಾಖೆ ಮತ್ತು ಸರ್ಕಾರದ ಧೋರಣೆಯನ್ನು ಖಂಡಿಸಿ ಹೋರಾಡಿದರು ಇನ್ನೂ ಮಂಜೂರಾತಿ ಸಿಗದಿರುವುದರಿಂದ ಮತ್ತೊಮ್ಮೆ ಮಕ್ಕಳು ಗ್ರಾಮಸ್ಥರು ಹೋರಾಟಕ್ಕೆ ಸಜ್ಜಾಗಬೇಕೆಂದರು .
ಈ ಭಾಗದಲ್ಲಿ 58 ಹಳ್ಳಿಗಳ ರೈತರು 5ಎ ಕಾಲುವೆ ಯೋಜನೆ ಜಾರಿಗಾಗಿ 90 ದಿನಗಳಿಂದ ಪಾಮನಕಲ್ಲೂರಿನ ಆದಿಬಸವೇಶ್ವರ ದೇವಸ್ಥಾನದಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ಮಾಡುತ್ತಿದ್ದಾರೆ ಆ ಯೋಜನೆ ಜಾರಿಯಾದರೆ ಉದ್ಯೋಗ ಸಮಸ್ಯೆ ಮತ್ತು ಗುಳೆ ಸಮಸ್ಯೆ ನೀಗಲಿದೆಯೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಕಳಕಪ್ಪ ಶಾಲೆಯ ಹಿರಿಯ ಶೀಕ್ಷಕರಾದ ಕಳಕಪ್ಪ ಹಾದಿಮನಿ ಸ್ವಾಗತಿಸಿದರು. ಹಾಗೂ ಈರಪ್ಪ ನಾರಬಂಡಿ ನಿರೂಪಿಸಿದರು. ಮತ್ತು ಆದೇಶ ಸಾನಬಾಳ ವಂದಿಸಿದರು.
ಈ ಸಂದರ್ಭದಲ್ಲಿ ಸಂತೆಕಲ್ಲೂರು ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಅಧಿಕಾರಿ ಶಂಕ್ರಮ್ಮ ನಾಗರಾಳ ಮಾತನಾಡಿದರು, ಸಂತೆಕಲ್ಲೂರು ಆರೋಗ್ಯ ಕೇಂದ್ರದ ಕಿರಿಯ ಪುರುಷ ಅಧಿಕಾರಿ , ಶೃತಿ ಪಟ್ಟಣಶೆಟ್ಟಿ, ಆಶಾ ಕಾರ್ಯಕರ್ತೆ ನೀಲಮ್ಮ ಬಡಿಗೇರ, ಅಂಗನವಾಡಿ ಸಹಾಯಕಿ ಸವಿತಾ ಮರಕಲದಿನ್ನಿ, ಶಾಲೆಯ ಅಡುಗೆ ಸಹಾಯಕಿ ಲಕ್ಷ್ಮೀಬಾಯಿ ಇಳಿಗೇರ ,ಎಸ್ ಡಿಎಂಸಿ ಸದಸ್ಯರಾದ ಗೋಪಣ್ಣ ಧಣಿ,ಪಕೀರಸಾಬ ಪಿಂಜಾರ ಸಂಗೀತಾ,ಬಸವರಾಜ ಇಳಿಗೇರ, ಅಂಬಣ್ಣ ಮರಕಲದಿನ್ನಿ,ಶರಣಪ್ಪ ಆಮದಿಹಾಳ,ರಾಜಸಾಬ ಪಿಂಜಾರ,ಅಮರೇಶ ಶೇಕ್ಷಂದಿ ಮಲ್ಲಪ್ಪ ಬೊಂಬಾಯಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು .
ವರದಿ : ದುರ್ಗೇಶ್ ಬೋವಿ ಮಸ್ಕಿ