ಮನರಂಜನೆ
ನೀಲಸಂದ್ರ ಗ್ರಾಮದಲ್ಲಿ ಮಹಾ ನಾಯಕನಿಗೆ ಪುಷ್ಪನಮನ
ಚನ್ನಪಟ್ಟಣ : ನೀಲಸಂದ್ರ ಗ್ರಾಮದಲ್ಲಿ ಮಹಾ ನಾಯಕನಿಗೆ ಪುಷ್ಪನಮನ, ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿ ಜೀ ವಾಹಿನಿಯಲ್ಲಿ ಮೂಡಿ ಬರುತ್ತಿರುವುದನ್ನು ನಿಲ್ಲಿಸುವಂತೆ ಕೆಲವು ಕಿಡಿಗೇಡಿಗಳು ಫೋನ್ ಕರೆಯ ಮೂಲಕ ಹುಣಸೂರು ರಾಘವೇಂದ್ರ ರವರಿಗೆ ಧಮ್ಕಿ ಹಾಕಿದ್ದಾರೆ.
ಇದರಿಂದ ರೊಚ್ಚಿಗೆದ್ದ ಬಾಬಾಸಾಹೇಬರ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಅತಿಹೆಚ್ಚು ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಬಾಬಾಸಾಹೇಬರ ಅಭಿಮಾನಿಗಳು ದೊಡ್ಡ ದೊಡ್ಡ ಬ್ಯಾನರ್ ಮತ್ತು ಎಲ್ಇಡಿ ಸ್ಕ್ರೀನ್ ಗಳ ಮೂಲಕ ಹಳ್ಳಿಗಳಲ್ಲಿ ಮಹಾ ನಾಯಕ ಡಾಕ್ಟರ್ ಅಂಬೇಡ್ಕರ್ ಧಾರಾವಾಹಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೀಲಸಂದ್ರ ಗ್ರಾಮದಲ್ಲಿ ಊರಿನ ಹಿರಿಯರು ಮತ್ತು ಯುವಕರು ಗ್ರಾಮವನ್ನು ಹಬ್ಬದ ರೀತಿಯಲ್ಲಿ ತೋರಣಗಳಿಂದ ಸಿಂಗರಿಸಿ ಸಿಡಿಮದ್ದು ಸಿಹಿ ಹಂಚುವುದರ ಮೂಲಕ ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ ಧಾರಾವಾಹಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಪಟೇಲ್ ವೀರಭದ್ರಯ್ಯ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸದಾನಂದ್ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ತಮಣ್ಣ, ಚಿಕ್ಕ ತಮ್ಮಣ್ಣ, ಎನ್ ಕೆ ನಾಗರಾಜು, ಪೂಜಾರಿ ಬೈರ ಲಿಂಗಯ್ಯ, ಯುವ ಮುಖಂಡರಾದ ರಘು, ಸೋಮಶೇಖರ್, ಮಹೇಶ್, ಗಂಗಾ ಬೈರ ಕುಮಾರ್, ಅಂದಾನಯ್ಯ , ಲೋಕೇಶ್, ಬಾಲು, ಶಿವಸ್ವಾಮಿ, ಲೋಕೇಶ್ ಬಾಬು, ಅಶೋಕ್ ಪಟೇಲ್, ಇನ್ನು ಅನೇಕ ಯುವ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ : ಸಿದ್ದರಾಮ ಚೆನ್ನಪಟ್ಟಣ
ಮನರಂಜನೆ
ಪ್ರಭಾಸ್ & ಟೀಂಗೆ ಶುಭಹಾರೈಸಿದ KGF ಕಿಂಗ್ ಯಶ್
ಹೈದ್ರಾಬಾದ್ನಲ್ಲಿ ಸೆಟ್ಟೇರುತ್ತಿದೆ ಪ್ರಭಾಸ್ರ ಸಲಾರ್ ಸಿನಿಮಾ. ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾಗೆ ಡೈರೆಕ್ಷನ್ ಮಾಡಲಿದ್ದಾರೆ ಕೆಜಿಎಫ್ ಪ್ರಶಾಂತ್ ನೀಲ್. ಕೆಜಿಎಫ್ ಮೇಕರ್ ವಿಜಯ್ ಕಿರಗಂದೂರು ನಿರ್ಮಾಣದ ಬಹುಕೋಟಿ ಸಿನಿಮಾ ಇದಾಗಿದೆ. ಪ್ರಶಾಂತ್ ನೀಲ್-ಪ್ರಭಾಸ್ ಕಾಂಬೋನ ‘ಸಲಾರ್’ಗೆ ಇಂದು ಅದ್ಧೂರಿ ಮುಹೂರ್ತ..
ಮುಹೂರ್ತಕ್ಕೆ ಹಾಜಾರಾಗಿ ಪ್ರಭಾಸ್ & ಟೀಂಗೆ KGF ಕಿಂಗ್ ಯಶ್ ಶುಭ ಹಾರೈಸಿದ್ದಾರೆ
ಮನರಂಜನೆ
ಸಾಯಿ ಪಲ್ಲವಿ ನಟಿಸಿರುವ ‘ಲವ್‌ಸ್ಟೋರಿ’ ಸಿನಿಮಾದ ಟೀಸರ್ ಬಿಡುಗಡೆ
ನಟಿ ಸಾಯಿ ಪಲ್ಲವಿಗೆ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗವಿದೆ. ಆಕೆಯ ಸಿನಿಮಾಗಳಿಗಾಗಿ ಜನ ಕಾಯುತ್ತಾರೆ. ಸಾಯಿ ಪಲ್ಲವಿ ನಟಿಸಿರುವ ‘ಲವ್‌ಸ್ಟೋರಿ’ ಸಿನಿಮಾದ ಟೀಸರ್ ಪ್ರಸ್ತುತ ಬಿಡುಗಡೆ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.
ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾವನ್ನು ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ. ಸುಂದರ-ಸರಳ ಪ್ರೇಮಕತೆಯಾದ ‘ಲವ್ ಸ್ಟೋರಿ’ ಸಿನಿಮಾದ ಟೀಸರ್ ಸಹ ಅಷ್ಟೇ ಸುಂದರ ಹಾಗೂ ಸರಳವಾಗಿದೆ.
ಮನರಂಜನೆ
ಕೆಜಿಎಫ್-2 ಟೀಸರ್ : ಆರೋಗ್ಯ ಇಲಾಖೆಯಿಂದ ನೋಟಿಸ್
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಬರ್ತಡೇಗೆ ಕೆಜಿಎಫ್ ಚಾಪ್ಟರ್-2 ಟೀಸರ್ ರಿಲೀಸ್ ಆಗಿದ್ದು, ಎಲ್ಲಾ ದಾಖಲೆಗಳನ್ನು ಮುರಿದು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸ್ತಿದೆ. ಎಲ್ಲಾ ಕಡೆಯಿಂದಲೂ ಟೀಸರ್‌ಗೆ ಪ್ರಶಂಸೆ ಸಿಕ್ಕಿದೆ. ಆದರೆ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಶ್‌ಗೆ ನೋಟಿಸ್ ಕೊಟ್ಟಿದೆ.
ಟೀಸರ್‌ನಲ್ಲಿ ಯಶ್ ಸಿಗರೇಟ್ ಹಚ್ಚುವ ದೃಶ್ಯವಿದ್ದು, ಇದಕ್ಕೆ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕಿರಲಿಲ್ಲ. ಇದು ಧೂಮಪಾನವನ್ನು ಪ್ರಚೋದಿಸುತ್ತದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹೀಗಾಗಿ, ಸಿಗರೇಟ್ ಸೇದುವ ದೃಶ್ಯವನ್ನು ತೆಗೆದು ಹಾಕುವಂತೆ ಆರೋಗ್ಯ ಇಲಾಖೆ ನಟ ಯಶ್‌ಗೆ ನೋಟಿಸ್ ಕೊಟ್ಟಿದೆ.
-
ಸುದ್ದಿ2 weeks ago
ಡಿಜಿಟಲ್ ಸ್ಮಾಟ್೯ ಕ್ಲಾಸ್ ನಲ್ಲಿ ಸಾವಿತ್ರಿ ಭಾಯಿ ಫುಲೆಯವರ ಜನ್ಮ ದಿನ ಆಚರಣೆ
-
ಮನರಂಜನೆ2 weeks ago
ಅಪ್ಪಿಕೊಂಡು ಪಪ್ಪಿಕೊಟ್ಟು ಮುದ್ದಾಡುವಾಗ ಸಿಕ್ಕಿ ಬಿದ್ದ ಅನುಶ್ರೀ
-
ಸುದ್ದಿ3 days ago
ಶ್ರೀಶ್ರೀಶ್ರೀ ಗುರು ಆದಿ ಜಾಂಬವಂತ ಸ್ವಾಮಿ ಜಯಂತಿ ಆಚರಣೆ
-
Politics7 days ago
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?