ಮನರಂಜನೆ
ಮಹಾನಾಯಕ ಮತ್ತು ಮಾನವೀಯ ತತ್ವಗಳು
ಚನ್ನಪಟ್ಟಣ : ಮಹಾನಾಯಕನಿಂದಲೇ ಇಂದು ನಾವುಗಳು ಸ್ವಾಭಿಮಾನಿ ಬದುಕನ್ನು ನಡೆಸಲು ಕಾರಣ. ತಾಲೂಕಿನ ಬ್ರಹ್ಮಣಿಪುರ ಗ್ರಾಮದಲ್ಲಿ ಮಹಾ ನಾಯಕನಿಗೆ ಧಾರಾವಾಹಿಗೆ ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಡಾಕ್ಟರ್ ರವಿಕುಮಾರ್ ಅವರು ಮಾತನಾಡಿ, 2000 ವರ್ಷಗಳ ಕಗ್ಗತ್ತಲಲ್ಲಿ ಬದುಕುತ್ತಿದ್ದ ಜನತೆಗೆ ಸ್ವಾಭಿಮಾನ, ಸ್ವಾವಲಂಬನೆ ಬದುಕನ್ನು ನಡೆಸಲು ಸನ್ನಡತೆಯ ಮಾರ್ಗವನ್ನು ತೋರಿದ ನಮ್ಮೆಲ್ಲರ ಮಾರ್ಗದತ್ತ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ನಾಯಕ ಜೀ ವಾಹಿನಿಯಲ್ಲಿ ಮೂಡಿಬರುತ್ತಿರುವ ಧಾರಾವಾಹಿ ಹೆಚ್ಚು ಹೆಚ್ಚು ಯುವಕರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹೆಚ್ಚಿಸಲು ಸಾಧ್ಯವಾಗುತ್ತಿದೆ. ಜೊತೆಗೆ ನಾವುಗಳು ಬಾಬಾಸಾಹೇಬರ ತತ್ವ ಸಿದ್ದಾಂತ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಬೇಕಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಕರಾದ ಕುಮಾರ್ ಅವರು ನೆರವೇರಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜೈರಾಮ್ ಅಪ್ಪಗೆರೆ, ಶಿಕ್ಷಕರು ಪಾರ್ಥ, ಊರಿನ ಮುಖಂಡರು ಯುವ ಮುಖಂಡರು ಹಾಗೂ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಯುವ ಮುಖಂಡ ಮಹೇಶ್ ಮೌರ್ಯ ಅವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವರದಿ : ಸಿದ್ದರಾಮ ನೀಲಸಂದ್ರ
ಮನರಂಜನೆ
ಪ್ರಭಾಸ್ & ಟೀಂಗೆ ಶುಭಹಾರೈಸಿದ KGF ಕಿಂಗ್ ಯಶ್
ಹೈದ್ರಾಬಾದ್ನಲ್ಲಿ ಸೆಟ್ಟೇರುತ್ತಿದೆ ಪ್ರಭಾಸ್ರ ಸಲಾರ್ ಸಿನಿಮಾ. ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾಗೆ ಡೈರೆಕ್ಷನ್ ಮಾಡಲಿದ್ದಾರೆ ಕೆಜಿಎಫ್ ಪ್ರಶಾಂತ್ ನೀಲ್. ಕೆಜಿಎಫ್ ಮೇಕರ್ ವಿಜಯ್ ಕಿರಗಂದೂರು ನಿರ್ಮಾಣದ ಬಹುಕೋಟಿ ಸಿನಿಮಾ ಇದಾಗಿದೆ. ಪ್ರಶಾಂತ್ ನೀಲ್-ಪ್ರಭಾಸ್ ಕಾಂಬೋನ ‘ಸಲಾರ್’ಗೆ ಇಂದು ಅದ್ಧೂರಿ ಮುಹೂರ್ತ..
ಮುಹೂರ್ತಕ್ಕೆ ಹಾಜಾರಾಗಿ ಪ್ರಭಾಸ್ & ಟೀಂಗೆ KGF ಕಿಂಗ್ ಯಶ್ ಶುಭ ಹಾರೈಸಿದ್ದಾರೆ
ಮನರಂಜನೆ
ಸಾಯಿ ಪಲ್ಲವಿ ನಟಿಸಿರುವ ‘ಲವ್‌ಸ್ಟೋರಿ’ ಸಿನಿಮಾದ ಟೀಸರ್ ಬಿಡುಗಡೆ
ನಟಿ ಸಾಯಿ ಪಲ್ಲವಿಗೆ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗವಿದೆ. ಆಕೆಯ ಸಿನಿಮಾಗಳಿಗಾಗಿ ಜನ ಕಾಯುತ್ತಾರೆ. ಸಾಯಿ ಪಲ್ಲವಿ ನಟಿಸಿರುವ ‘ಲವ್‌ಸ್ಟೋರಿ’ ಸಿನಿಮಾದ ಟೀಸರ್ ಪ್ರಸ್ತುತ ಬಿಡುಗಡೆ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.
ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾವನ್ನು ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ. ಸುಂದರ-ಸರಳ ಪ್ರೇಮಕತೆಯಾದ ‘ಲವ್ ಸ್ಟೋರಿ’ ಸಿನಿಮಾದ ಟೀಸರ್ ಸಹ ಅಷ್ಟೇ ಸುಂದರ ಹಾಗೂ ಸರಳವಾಗಿದೆ.
ಮನರಂಜನೆ
ಕೆಜಿಎಫ್-2 ಟೀಸರ್ : ಆರೋಗ್ಯ ಇಲಾಖೆಯಿಂದ ನೋಟಿಸ್
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಬರ್ತಡೇಗೆ ಕೆಜಿಎಫ್ ಚಾಪ್ಟರ್-2 ಟೀಸರ್ ರಿಲೀಸ್ ಆಗಿದ್ದು, ಎಲ್ಲಾ ದಾಖಲೆಗಳನ್ನು ಮುರಿದು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸ್ತಿದೆ. ಎಲ್ಲಾ ಕಡೆಯಿಂದಲೂ ಟೀಸರ್‌ಗೆ ಪ್ರಶಂಸೆ ಸಿಕ್ಕಿದೆ. ಆದರೆ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಶ್‌ಗೆ ನೋಟಿಸ್ ಕೊಟ್ಟಿದೆ.
ಟೀಸರ್‌ನಲ್ಲಿ ಯಶ್ ಸಿಗರೇಟ್ ಹಚ್ಚುವ ದೃಶ್ಯವಿದ್ದು, ಇದಕ್ಕೆ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕಿರಲಿಲ್ಲ. ಇದು ಧೂಮಪಾನವನ್ನು ಪ್ರಚೋದಿಸುತ್ತದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹೀಗಾಗಿ, ಸಿಗರೇಟ್ ಸೇದುವ ದೃಶ್ಯವನ್ನು ತೆಗೆದು ಹಾಕುವಂತೆ ಆರೋಗ್ಯ ಇಲಾಖೆ ನಟ ಯಶ್‌ಗೆ ನೋಟಿಸ್ ಕೊಟ್ಟಿದೆ.
-
ಸುದ್ದಿ2 weeks ago
ಡಿಜಿಟಲ್ ಸ್ಮಾಟ್೯ ಕ್ಲಾಸ್ ನಲ್ಲಿ ಸಾವಿತ್ರಿ ಭಾಯಿ ಫುಲೆಯವರ ಜನ್ಮ ದಿನ ಆಚರಣೆ
-
ಮನರಂಜನೆ2 weeks ago
ಅಪ್ಪಿಕೊಂಡು ಪಪ್ಪಿಕೊಟ್ಟು ಮುದ್ದಾಡುವಾಗ ಸಿಕ್ಕಿ ಬಿದ್ದ ಅನುಶ್ರೀ
-
ಸುದ್ದಿ3 days ago
ಶ್ರೀಶ್ರೀಶ್ರೀ ಗುರು ಆದಿ ಜಾಂಬವಂತ ಸ್ವಾಮಿ ಜಯಂತಿ ಆಚರಣೆ
-
Politics7 days ago
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?