ಸುದ್ದಿ
ಕಲ್ಲೂರು ಶ್ರೀ ಇಂದಿರಾ ಗಾಂಧಿ ವಸತಿ ಶಾಲೆ ಸ್ಥಳಾಂತರಿಸಿರುವುದನ್ನು ರದ್ದುಪಡಿಸಿ
ರಾಯಚೂರು ಅ 12-ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಳೆದ 3-4 ವರ್ಷಗಳಿಂದ ನಡೆಯುತ್ತಿರುವ ಶ್ರೀ ಇಂದರಾ ಗಾಂಧಿ ವಸತಿ ನಿಲಯ ಶಾಲೆ ಕಲ್ಲೂರನ್ನು ಏಕಾಏಕಿಯಾಗಿ ಸಿರವಾರ ಪಟ್ಟಣಕ್ಕೆ ಸ್ಥಳಾಂತರಿಸುವುದನ್ನು ರದ್ದುಪಡಿಸಿ ಪುನಃ ಕಲ್ಲೂರಿನಲ್ಲಿಯೇ ಮುಂದುವರಿಸಲು ಭಾರತೀಯ ಜನತಾ ಪಾರ್ಟಿ ಒತ್ತಾಯಿಸಿದರು.
ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಯಚೂರು ನಗರ ಶಾಸಕ ಸನ್ಮಾನ್ಯ ಶ್ರೀ ಡಾ. ಶಿವರಾಜ್ ಪಟೇಲ್ ರವರಗೆ ಮನವಿ ಮಾಡಿದರು.
ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಶ್ರೀ ಇಂದರಾ ಗಾಂಧಿ ವಸತಿ ಶಾಲೆ ಕಲ್ಲೂರಿಗೆ ಮಂಜೂರಾಗಿದ್ದು ಸದ್ರಿ ಶಾಲೆಯನ್ನು ಕಲ್ಲೂರಿನ ಬಾಲಾಜಿ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿದ್ದು, ಸದ್ರಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕಲ್ಲೂರು ಹಾಗೂ ಸುತ್ತಮುತ್ತಲಿನ ಮಕ್ಕಳಿಗೆ ತುಂಬಾ ಅನುಕೂಲವಾಗಿತ್ತು. ಅಲ್ಲದೆ ತಾಲೂಕಿನಲ್ಲಿರುವ ಎಲ್ಲಾ ವಸತಿ ಶಾಲೆಗಳು ಖಾಸಗಿ ಕಟ್ಟಡಗಳಲ್ಲಿಯೇ ಮೂಲಭೂತ ಸೌಕರ್ಯಗಳೊಂದಿಗೆ ನಡೆಯುತ್ತಿದ್ದರೆ, ಇನ್ನು ಸ್ವಂತ ಕಟ್ಟಡಗಳು ಇಲ್ಲದೆ ಇರುವ ಶಾಲೆಗಳುನ್ನು ಖಾಸಾಗಿ ಮಾಲೀಕರಿಂದ ಬಾಡಿಗೆ ಪಡೆದುಕೊಂಡು ಅಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ವಸತಿ ಶಾಲೆಗಳನ್ನು ನಡೆಸುತ್ತಿರುವುದು ಸರಿಯಷ್ಟೇ, ಆದರೆ ಕಲ್ಲೂರುನಲ್ಲಿ ರುವ ಶ್ರೀ ಇಂದಿರಾ ಗಾಂಧಿ ವಸತಿ ಶಾಲೆ ಕಲ್ಲೂರು ಇದನ್ನು ಸಿರುವಾರ ಪಟ್ಟಣಕ್ಕೆ ಸ್ಥಳಾಂತರಿಸಿರುವುದರಿಂದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಎಂದು ದೂರಿದರು.
ಆದಕಾರಣ ಸದರಿ ಕಲ್ಲೂರು ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯನ್ನು ಸಿರವಾರ ಕ್ಕೆ ಸ್ಥಳಾಂತರಿಸಿರುವುದನ್ನು ಈ ಕೂಡಲೇ ರದ್ದುಪಡಿಸಿ ಪುನಃ ಕಲ್ಲೂರಿಗೆ ವರ್ಗಾವಣೆ ಮಾಡಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಳ್ಳಬೇಕುವೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಂಗಾಧರ ನಾಯಕ ಮಾಜಿ ಶಾಸಕರು ಮಾನ್ವಿ,ಕಾರ್ಯದರ್ಶಿ ಜಿಲ್ಲಾ ಎಸ್ ಟಿ ಮೋರ್ಚಾ ಲಕ್ಷ್ಮಣ್ ನಾಯಕ್ ಕುರ್ಡಿ, ಮಲ್ಲಿಕರ್ಜುನ್ ಜಕ್ಕಲದಿನ್ನಿ ಮಾನವಿ ಮಂಡಲ ಅಧ್ಯಕ್ಷರು, ಗ್ರಾಮದ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
‘ತನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಬರಬೇಕು’, ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ
ಬೆಂಗಳೂರು: ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಆಟೋ ಚಾಲಕ ಜಯರಾಮು ಮೃತದೇಹದ ಅಂತಿಮ ದರ್ಶನವನ್ನು ಕುಮಾರಸ್ವಾಮಿಯವರು ಪಡೆದರು. ರಾಮನಗರ ಜಿಲ್ಲೆಯ ಬೊಮ್ಮಚ್ಚನ ಹಳ್ಳಿಗೆ ಇಂದು ಮಧ್ಯಾಹ್ನ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ.ಕೆ. ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಧ್ಯಾಕ್ಷ ನಿಖಿಲ್ ಕುಮಾರಸ್ವಾಮಿ.ಆಟೋ ಚಾಲಕ ಜಯರಾಮು ಮೃತದೇಹದ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ನಿನ್ನೆ ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ ಜಯರಾಮು ಮೃತಪಟ್ಟಿದ್ದರು. ರಾಮನಗರ ತಾಲೂಕಿನ ಬೊಮ್ಮಚನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ಸಾವಿಗೂ ಮುನ್ನವೇ ತನ್ನ ಅಂಗಿಯಲ್ಲಿ ಡೆತ್ ನೋಟ್ ಬರೆದಿಟ್ಟುಕೊಂಡಿದ್ದ ಜಯರಾಮು. ನನ್ನ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕೆ ಭಾಗಿಯಾಗಬೇಕು ಎಂದು ಬರೆದುಕೊಂಡಿದ್ದರು.
ನನಗೆ ಬುದ್ಧಿಮಾಂದ್ಯ ಮಗನಿದ್ದಾನೆ. ನನ್ನ ಮಗನಿಗೆ ಕುಮಾರಸ್ವಾಮಿ ಧನ ಸಹಾಯ ಮಾಡಬೇಕು. ನಿಮ್ಮ ಋಣವನ್ನು ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ.ನನ್ನ ಮಗನಿಗೆ ಒಂದು ದಾರಿ ಮಾಡಿಕೊಡಿ ಕುಮಾರಣ್ಣ ಅಂತಾ ಭಾವನಾತ್ಮಕವಾಗಿ ಡೆತ್ ನೋಟ್ ಬರೆದಿಟ್ಟಿದ್ದ ಜಯರಾಮು. ಮೃತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಹೆಚ್.ಡಿ.ಕೆ ಹಾಗೂ ನಿಖಿಲ್ ಅವರು, ಕುಟುಂಬಸ್ಥರಿಗೆ ಪರಿಹಾರದ ಹಣ ನೀಡಿದರು.
ದಾರಿ ಮಧ್ಯದಲ್ಲಿ ಹೂ ಮಾರುತ್ತಿದ್ದಂತ ಬಾಲಕಿಯನ್ನು ಸಿಎಂ ಆಗಿದ್ದಂತಹ ಕುಮಾರಸ್ವಾಮಿ ಮಾತನಾಡಿಸಿ, ಕಷ್ಟ ಕೇಳಿ, ಆಕೆಗೆ ಮನೆ ಇಲ್ಲದೇ ಇರೋದನ್ನು ಗಮನಿಸಿ ಮನೆ ಕಟ್ಟಿಸಿಕೊಟ್ಟ ಘಟನೆಯಿಂದ ಗಮನ ಸೆಳೆದಿದ್ದರು. ಇದೀಗ ನನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಆಗಮಿಸಬೇಕು. ಇದೇ ನನ್ನ ಕೊನೆಯ ಆಸೆ ಎಂದು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದಂತ ಆಟೋ ಚಾಲಕನ ಆಸೆಯನ್ನು ಈಡೇರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಷ್ಟ ಆಗೋದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಸುದ್ದಿ
ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮದ್ಯ : ದಾಳಿ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ
ಶಿಡ್ಲಘಟ್ಟ : ತಾಲ್ಲೂಕಿನ ತಾದೂರು ಗ್ರಾಮದ ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮದ್ಯ ತಯಾರಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಭಾನುವಾರ ಮುಂಜಾನೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಸಿಬ್ಬಂದಿ ಸುಮಾರು 10 ಲಕ್ಷ ಬೆಲೆ ಬಾಳುವ ನಕಲಿ ಮದ್ಯ, ಮಧ್ಯಸಾರ ಹಾಗು ಬಾಟಲಿ, ಮುಚ್ಚಳಗಳನ್ನು ವಶಪಡಿಸಿಕೊಂಡಿರುವ ಜೊತೆಗೆ ಆರೋಪಿ ಟಿ.ಎಂ.ಮಂಜುನಾಥ್ ನನ್ನು ಬಂಧಿಸಿದ್ದಾರೆ.
ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ್ ನೇತೃತ್ವದ ಅಬಕಾರಿ ಇಲಾಖೆ ಸಿಬ್ಬಂದಿ ಭಾನುವಾರ ಮುಂಜಾನೆ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ೧೨೯೦ ಲೀ ಸ್ಪಿರಿಟ್ ಸೇರಿದಂತೆ ೬೨ ಲೀ ಬ್ಲೆಂಡ್, ೩೨ ಕೆಜಿ ಯಷ್ಟು ಕ್ಯಾಪ್, ಲೇಬಲ್ ಹಾಗು ತಯಾರಿಸಿಟ್ಟಿದ್ದ ೩೭.೮೦೦ ಲೀ ನಷ್ಟು ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇನ್ಸ್‌ಪೆಕ್ಟರ್ ವಿಶ್ವನಾಥಬಾಬು, ಫಿರೋಜ್‌ಖಾನ್, ಲಂಕೇ ಹನುಮಯ್ಯ, ಶಂಕರಪ್ರಸಾದ್, ಮಂಜುಳ, ಸಿಬ್ಬಂದಿಗಳಾದ ನಿತಿನ್, ರಾಘವೇಂದ್ರ, ಕರಿಲಿಂಗ, ಪ್ರಶಾಂತ್, ರಾಘವೇಂದ್ರ ಪಾಟೀಲ್ ಮುಂತಾದವರು ಹಾಜರಿದ್ದರು.
ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ
ಸುದ್ದಿ
ಬೆಂಕಿ ಅವಘಡದಿಂದ ಭತ್ತದ ಹುಲ್ಲು ಮತ್ತು ಜಾನುವಾರಗಳು ಸುಟ್ಟು ಭಸ್ಮ: ಶಾಸಕರಿಂದ ಸಾಂತ್ವಾನ
ಮಸ್ಕಿ: ಮಸ್ಕಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಅಗ್ನಿ ಅವಗಢ ಸಂಭವಿಸಿದ್ದು ರೈಮಾನ್ ಸಾಬ್ ಪಂಚರ್ ಶಾಪ್ ಅವರ ಬಣವೆ ಜಾನುವಾರುಗಳು ಸುಟ್ಟುಹೋಗಿದ್ದು. ಮಸ್ಕಿಯ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲರು ಭೇಟಿ ನೀಡಿ ವೈಯಕ್ತಿಕವಾಗಿ ರೂ.20,000 ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಹಂಚಿನಾಳ ಗ್ರಾಮದ ತಾಲೂಕ ಪಂಚಾಯತಿ ಸದಸ್ಯರಾದ ಶರಣಬಸವ ಆಶಾಳ್ , ಗ್ರಾಮದ ಹಿರಿಯರು ಸೋಮನಗೌಡ ಪಾಟೀಲ್ ದುರುಗನ್ ಗೌಡ ಪೊಲೀಸ್ ಪಾಟೀಲ್ ಚಿನ್ನ ನ ಗೌಡ ಗೋನಾಳ್ ನಾಗಪ್ಪ ಕೊಳಗಲ್ ಊರಿನ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
-
ಸುದ್ದಿ2 weeks ago
ಡಿಜಿಟಲ್ ಸ್ಮಾಟ್೯ ಕ್ಲಾಸ್ ನಲ್ಲಿ ಸಾವಿತ್ರಿ ಭಾಯಿ ಫುಲೆಯವರ ಜನ್ಮ ದಿನ ಆಚರಣೆ
-
ಮನರಂಜನೆ2 weeks ago
ಅಪ್ಪಿಕೊಂಡು ಪಪ್ಪಿಕೊಟ್ಟು ಮುದ್ದಾಡುವಾಗ ಸಿಕ್ಕಿ ಬಿದ್ದ ಅನುಶ್ರೀ
-
ಸುದ್ದಿ3 days ago
ಶ್ರೀಶ್ರೀಶ್ರೀ ಗುರು ಆದಿ ಜಾಂಬವಂತ ಸ್ವಾಮಿ ಜಯಂತಿ ಆಚರಣೆ
-
Politics7 days ago
ಶಾಸಕರ ಸ್ವಗ್ರಾಮದಲ್ಲಿ ಸರ್ಕಾರಿ ಸೌಲಭ್ಯಕ್ಕೂ ದ್ವೇಷದ ರಾಜಕಾರಣವೇ?