Connect with us
Ad Widget

ಸುದ್ದಿ

ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಗರಿ

Published

on

ಬಾಗೇಪಲ್ಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನ ಹಾಗೂ ಉತ್ತಮ ಕಾರ್ಯಪ್ರಗತಿಗೆ 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ಭಾಜನವಾಗಿದೆ.

ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 21 ಪೈಕಿ, 9338 ಜನರು ಇದ್ದಾರೆ. ಇದರಲ್ಲಿ ಗಂಡು 4781, ಹೆಣ್ಣು 4557 ಮಂದಿ ಇದ್ದಾರೆ. 2264 ಕುಟುಂಬಗಳು ಇದೆ. ಕಿರಿಯ ಪ್ರಾಥಮಿಕ ಶಾಲೆಗಳು 15, ಹಿರಿಯ 4, ಪ್ರೌಢಶಾಲೆ 1, ಅಂಗನವಾಡಿ ಕೇಂದ್ರಗಳು 18, ಖಾಸಗಿ ಶಾಲೆಗಳು 2, ಪ್ರಾಥಮಿಕ ಆರೋಗ್ಯಕೇಂದ್ರ 1, ನ್ಯಾಯಬೆಲೆ ಅಂಗಡಿ 6, ಕೊಳವೆಬಾವಿಗಳು 29 ಇದೆ. 2019-20ನೇ ಸಾಲಿನಲ್ಲಿ ಕಂದಾಯ ಬೇಡಿಕೆ ₹33,401. ಪ್ರಸಕ್ತ ವರ್ಷದ ವಸೂಲಿ ₹6,47,816 ಆಗಿದ್ದು, ಶೇ 100ರಷ್ಟು ಸಾಧಿಸಿದೆ.

ಶಾಲಾ, ಅಂಗನವಾಡಿ ಮಕ್ಕಳಿಗೆ ಲಸಿಕೆ ಹಾಕಿಸಲಾಗಿದೆ. ದೇವರಗುಡಿಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರವನ್ನು ನಮ್ಮೂರ ಶಾಲೆ ಎಂದು ಮಾಡಲಾಗಿದೆ. ಶಾಲಾ ಮಕ್ಕಳನ್ನು ಕೈಬೀಸಿ ಕರೆಯುವಂತೆ ಬಣ್ಣದ ಚಿತ್ರಗಳು, ಮಾಹಿತಿಗಳನ್ನು ಚಿತ್ರಿಸಲಾಗಿದೆ. 4 ಕೃಷಿ ಹೊಂಡಗಳನ್ನು, 4 ಕಡೆ ಮಳೆ ನೀರು ಸಂಗ್ರಹ ಮಾಡಲಾಗಿದೆ.

ಕಂದಾಯ, ಕರ ವಸೂಲಿಯಲ್ಲಿ ಶೇ 92ರಷ್ಟು ಪ್ರಗತಿ ಸಾಧಿಸಿದೆ. 14ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿದ್ದ, ₹60 ಲಕ್ಷ ಗಳನ್ನು ಕಾರ್ಯಪ್ರಗತಿ ಮಾಡಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 14 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದೆ. 2250 ಮನೆಗಳಲ್ಲಿ 1077 ಮನೆಗಳಿಗೆ ನಲ್ಲಿ ವ್ಯವಸ್ಥೆ ಮಾಡಲಾಗಿದೆ. 290 ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ಗುಂಡ್ಲಪಲ್ಲಿ, ಜಿಲಕರಪಲ್ಲಿ, ದೇವರಗುಡಿಪಲ್ಲಿ, ಕೊಂಡಂವಾರಿಪಲ್ಲಿ ಗ್ರಾಮಗಳ ಪಕ್ಕದಲ್ಲಿ 193 ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಗುರಿ ಇದೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಅನುಷ್ಠಾನ, ಕಂದಾಯ ವಸೂಲಿ, ಹಣಕಾಸು ಯೋಜನೆ ಸದ್ಬಳಕೆ, ಕೆರೆ, ಕುಂಟೆ, ಕಟ್ಟೆಗಳ ಅಭಿವೃದ್ಧಿಗೆ ಮಾನದಂಡ ಆಧಾರವಾಗಿರಿಸಿ, 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿಗೆ ಈ ಭಾರಿ ರಾಜ್ಯ ಗ್ರಾಮಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯ್ಕೆ ಮಾಡಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

‘ತನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಬರಬೇಕು’, ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ

Published

on

ಬೆಂಗಳೂರು: ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಆಟೋ ಚಾಲಕ ಜಯರಾಮು ಮೃತದೇಹದ ಅಂತಿಮ ದರ್ಶನವನ್ನು ಕುಮಾರಸ್ವಾಮಿಯವರು ಪಡೆದರು. ರಾಮನಗರ ಜಿಲ್ಲೆಯ ಬೊಮ್ಮಚ್ಚನ ಹಳ್ಳಿಗೆ ಇಂದು ಮಧ್ಯಾಹ್ನ ಭೇಟಿ ನೀಡಿದ ಮಾಜಿ‌ ಸಿಎಂ ಹೆಚ್.ಡಿ.ಕೆ. ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಧ್ಯಾಕ್ಷ ನಿಖಿಲ್ ಕುಮಾರಸ್ವಾಮಿ.ಆಟೋ ಚಾಲಕ ಜಯರಾಮು ಮೃತದೇಹದ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.

ನಿನ್ನೆ ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ ಜಯರಾಮು ಮೃತಪಟ್ಟಿದ್ದರು. ರಾಮನಗರ ತಾಲೂಕಿನ ಬೊಮ್ಮಚನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ಸಾವಿಗೂ ಮುನ್ನವೇ ತನ್ನ ಅಂಗಿಯಲ್ಲಿ ಡೆತ್ ನೋಟ್ ಬರೆದಿಟ್ಟುಕೊಂಡಿದ್ದ ಜಯರಾಮು. ನನ್ನ ಅಂತ್ಯಕ್ರಿಯೆಯಲ್ಲಿ‌ ಮಾಜಿ ಸಿಎಂ ಹೆಚ್.ಡಿ.ಕೆ ಭಾಗಿಯಾಗಬೇಕು ಎಂದು ಬರೆದುಕೊಂಡಿದ್ದರು.

ನನಗೆ ಬುದ್ಧಿಮಾಂದ್ಯ ಮಗನಿದ್ದಾನೆ. ನನ್ನ ಮಗನಿಗೆ ಕುಮಾರಸ್ವಾಮಿ ಧನ ಸಹಾಯ ಮಾಡಬೇಕು. ನಿಮ್ಮ ಋಣವನ್ನು ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ.ನನ್ನ ಮಗನಿಗೆ ಒಂದು ದಾರಿ ಮಾಡಿಕೊಡಿ ಕುಮಾರಣ್ಣ ಅಂತಾ ಭಾವನಾತ್ಮಕವಾಗಿ ಡೆತ್ ನೋಟ್ ಬರೆದಿಟ್ಟಿದ್ದ ಜಯರಾಮು. ಮೃತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಹೆಚ್.ಡಿ.ಕೆ ಹಾಗೂ ನಿಖಿಲ್ ಅವರು, ಕುಟುಂಬಸ್ಥರಿಗೆ ಪರಿಹಾರದ ಹಣ ನೀಡಿದರು.

ದಾರಿ ಮಧ್ಯದಲ್ಲಿ ಹೂ ಮಾರುತ್ತಿದ್ದಂತ ಬಾಲಕಿಯನ್ನು ಸಿಎಂ ಆಗಿದ್ದಂತಹ ಕುಮಾರಸ್ವಾಮಿ ಮಾತನಾಡಿಸಿ, ಕಷ್ಟ ಕೇಳಿ, ಆಕೆಗೆ ಮನೆ ಇಲ್ಲದೇ ಇರೋದನ್ನು ಗಮನಿಸಿ ಮನೆ ಕಟ್ಟಿಸಿಕೊಟ್ಟ ಘಟನೆಯಿಂದ ಗಮನ ಸೆಳೆದಿದ್ದರು. ಇದೀಗ ನನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಆಗಮಿಸಬೇಕು. ಇದೇ ನನ್ನ ಕೊನೆಯ ಆಸೆ ಎಂದು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದಂತ ಆಟೋ ಚಾಲಕನ ಆಸೆಯನ್ನು ಈಡೇರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಷ್ಟ ಆಗೋದು ಎಂಬುದನ್ನು ಸಾಬೀತುಪಡಿಸಿದ್ದಾರೆ.

Continue Reading

ಸುದ್ದಿ

ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮದ್ಯ : ದಾಳಿ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ

Published

on

ಶಿಡ್ಲಘಟ್ಟ : ತಾಲ್ಲೂಕಿನ ತಾದೂರು ಗ್ರಾಮದ ರೇಷ್ಮೆ ಸಾಕಾಣಿಕೆ ಮನೆಯೊಂದರಲ್ಲಿ ನಕಲಿ ಮದ್ಯ ತಯಾರಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಭಾನುವಾರ ಮುಂಜಾನೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಸಿಬ್ಬಂದಿ ಸುಮಾರು 10 ಲಕ್ಷ ಬೆಲೆ ಬಾಳುವ ನಕಲಿ ಮದ್ಯ, ಮಧ್ಯಸಾರ ಹಾಗು ಬಾಟಲಿ, ಮುಚ್ಚಳಗಳನ್ನು ವಶಪಡಿಸಿಕೊಂಡಿರುವ ಜೊತೆಗೆ ಆರೋಪಿ ಟಿ.ಎಂ.ಮಂಜುನಾಥ್ ನನ್ನು ಬಂಧಿಸಿದ್ದಾರೆ.

ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ್ ನೇತೃತ್ವದ ಅಬಕಾರಿ ಇಲಾಖೆ ಸಿಬ್ಬಂದಿ ಭಾನುವಾರ ಮುಂಜಾನೆ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ೧೨೯೦ ಲೀ ಸ್ಪಿರಿಟ್ ಸೇರಿದಂತೆ ೬೨ ಲೀ ಬ್ಲೆಂಡ್, ೩೨ ಕೆಜಿ ಯಷ್ಟು ಕ್ಯಾಪ್, ಲೇಬಲ್ ಹಾಗು ತಯಾರಿಸಿಟ್ಟಿದ್ದ ೩೭.೮೦೦ ಲೀ ನಷ್ಟು ನಕಲಿ ಮದ್ಯ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇನ್ಸ್‌ಪೆಕ್ಟರ್ ವಿಶ್ವನಾಥಬಾಬು, ಫಿರೋಜ್‌ಖಾನ್, ಲಂಕೇ ಹನುಮಯ್ಯ, ಶಂಕರಪ್ರಸಾದ್, ಮಂಜುಳ, ಸಿಬ್ಬಂದಿಗಳಾದ ನಿತಿನ್, ರಾಘವೇಂದ್ರ, ಕರಿಲಿಂಗ, ಪ್ರಶಾಂತ್, ರಾಘವೇಂದ್ರ ಪಾಟೀಲ್ ಮುಂತಾದವರು ಹಾಜರಿದ್ದರು.

ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ

Continue Reading

ಸುದ್ದಿ

ಬೆಂಕಿ ಅವಘಡದಿಂದ ಭತ್ತದ ಹುಲ್ಲು ಮತ್ತು ಜಾನುವಾರಗಳು ಸುಟ್ಟು ಭಸ್ಮ: ಶಾಸಕರಿಂದ ಸಾಂತ್ವಾನ

Published

on

ಮಸ್ಕಿ: ಮಸ್ಕಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಅಗ್ನಿ ಅವಗಢ ಸಂಭವಿಸಿದ್ದು ರೈಮಾನ್ ಸಾಬ್ ಪಂಚರ್ ಶಾಪ್ ಅವರ ಬಣವೆ ಜಾನುವಾರುಗಳು ಸುಟ್ಟುಹೋಗಿದ್ದು. ಮಸ್ಕಿಯ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲರು ಭೇಟಿ ನೀಡಿ ವೈಯಕ್ತಿಕವಾಗಿ ರೂ.20,000 ಧನಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಹಂಚಿನಾಳ ಗ್ರಾಮದ ತಾಲೂಕ ಪಂಚಾಯತಿ ಸದಸ್ಯರಾದ ಶರಣಬಸವ ಆಶಾಳ್ , ಗ್ರಾಮದ ಹಿರಿಯರು ಸೋಮನಗೌಡ ಪಾಟೀಲ್ ದುರುಗನ್ ಗೌಡ ಪೊಲೀಸ್ ಪಾಟೀಲ್ ಚಿನ್ನ ನ ಗೌಡ ಗೋನಾಳ್ ನಾಗಪ್ಪ ಕೊಳಗಲ್ ಊರಿನ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್