Connect with us
Ad Widget

ಮನರಂಜನೆ

ಆಸ್ತಿ ತೆರಿಗೆ ಪಾವತಿಸಿದ ರಜನಿಕಾಂತ್

Published

on


ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ರವರು ಗುರುವಾರ ಬಾಕಿ ತೆರಿಗೆಯನ್ನು ಮಹಾನಗರ ಪಾಲಿಕೆಗೆ ಪಾವತಿಸಿದ್ದಾರೆ. ತಮ್ಮ ಒಡೆತನದ ಕಲ್ಯಾಣ ಮಂಟಪಕ್ಕೆ ಕಟ್ಟಬೇಕಿದ್ದ ಆಸ್ತಿತೆರಿಗೆ ಕುರಿತು ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡ ಹಿನ್ನಲೆಯಲ್ಲಿ ಸೂಪರ್ ಸ್ಟಾರ್ ತೆರಿಗೆ ಪಾವತಿ ಮಾಡಿದ್ದಾರೆ.

ಇದನ್ನು ಕುರಿತು ಟ್ವೀಟ್ ಮಾಡಿದ ಸೂಪರ್ ಸ್ಟಾರ್, ರಾಘವೇಂದ್ರ ಮಂಟಪದ ಆಸ್ತಿತೆರಿಗೆ ಜೊತೆಗೆ ಕಡೆಯ ದಿನಾಂಕ ಮೀರಿದ ದಂಡ ಸೇರಿದಂತೆ, ಗ್ರೀಟರ್ ಚೆನ್ನೈ ಕಾರ್ಪೋರೇಶನ್ 6,56,000 ರೂ. ಮತದ ಚೆಕ್ ನೀಡಿದ್ದೇನೆ, ಆತುರದಲ್ಲಿ ಕೋರ್ಟ್ ಮೆಟ್ಟಿಲೇರಿ ತಪ್ಪು ಮಾಡಿರುವೆ, ಅನುಭವವೊಂದು ಪಾಠವಿದ್ದಂತೆ ಎಂದು ಪ್ರತಿಕ್ರಿಯಿಸಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಮನರಂಜನೆ

ಪ್ರಭಾಸ್ & ಟೀಂಗೆ ಶುಭಹಾರೈಸಿದ KGF ಕಿಂಗ್ ಯಶ್

Published

on

ಹೈದ್ರಾಬಾದ್ನಲ್ಲಿ ಸೆಟ್ಟೇರುತ್ತಿದೆ ಪ್ರಭಾಸ್ರ ಸಲಾರ್ ಸಿನಿಮಾ. ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾಗೆ ಡೈರೆಕ್ಷನ್ ಮಾಡಲಿದ್ದಾರೆ ಕೆಜಿಎಫ್ ಪ್ರಶಾಂತ್ ನೀಲ್. ಕೆಜಿಎಫ್ ಮೇಕರ್ ವಿಜಯ್ ಕಿರಗಂದೂರು ನಿರ್ಮಾಣದ ಬಹುಕೋಟಿ ಸಿನಿಮಾ ಇದಾಗಿದೆ. ಪ್ರಶಾಂತ್ ನೀಲ್-ಪ್ರಭಾಸ್ ಕಾಂಬೋನ ‘ಸಲಾರ್’ಗೆ ಇಂದು ಅದ್ಧೂರಿ ಮುಹೂರ್ತ..
ಮುಹೂರ್ತಕ್ಕೆ ಹಾಜಾರಾಗಿ ಪ್ರಭಾಸ್ & ಟೀಂಗೆ KGF ಕಿಂಗ್ ಯಶ್ ಶುಭ ಹಾರೈಸಿದ್ದಾರೆ

Continue Reading

ಮನರಂಜನೆ

ಸಾಯಿ ಪಲ್ಲವಿ ನಟಿಸಿರುವ ‘ಲವ್‌ಸ್ಟೋರಿ’ ಸಿನಿಮಾದ ಟೀಸರ್ ಬಿಡುಗಡೆ

Published

on

ನಟಿ ಸಾಯಿ ಪಲ್ಲವಿಗೆ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗವಿದೆ. ಆಕೆಯ ಸಿನಿಮಾಗಳಿಗಾಗಿ ಜನ ಕಾಯುತ್ತಾರೆ. ಸಾಯಿ ಪಲ್ಲವಿ ನಟಿಸಿರುವ ‘ಲವ್‌ಸ್ಟೋರಿ’ ಸಿನಿಮಾದ ಟೀಸರ್ ಪ್ರಸ್ತುತ ಬಿಡುಗಡೆ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾವನ್ನು ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ. ಸುಂದರ-ಸರಳ ಪ್ರೇಮಕತೆಯಾದ ‘ಲವ್ ಸ್ಟೋರಿ’ ಸಿನಿಮಾದ ಟೀಸರ್ ಸಹ ಅಷ್ಟೇ ಸುಂದರ ಹಾಗೂ ಸರಳವಾಗಿದೆ.

Continue Reading

ಮನರಂಜನೆ

ಕೆಜಿಎಫ್‌‌-2 ಟೀಸರ್ : ಆರೋಗ್ಯ ಇಲಾಖೆಯಿಂದ ನೋಟಿಸ್

Published

on

ಬೆಂಗಳೂರು : ರಾಕಿಂಗ್‌ ಸ್ಟಾರ್‌ ಯಶ್‌ ಬರ್ತಡೇಗೆ ಕೆಜಿಎಫ್‌ ಚಾಪ್ಟರ್‌-2 ಟೀಸರ್‌ ರಿಲೀಸ್‌ ಆಗಿದ್ದು, ಎಲ್ಲಾ ದಾಖಲೆಗಳನ್ನು ಮುರಿದು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸ್ತಿದೆ. ಎಲ್ಲಾ ಕಡೆಯಿಂದಲೂ ಟೀಸರ್‌ಗೆ ಪ್ರಶಂಸೆ ಸಿಕ್ಕಿದೆ. ಆದರೆ ಈಗ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಯಶ್‌ಗೆ ನೋಟಿಸ್‌ ಕೊಟ್ಟಿದೆ.

ಟೀಸರ್‌ನಲ್ಲಿ ಯಶ್‌ ಸಿಗರೇಟ್‌ ಹಚ್ಚುವ ದೃಶ್ಯವಿದ್ದು, ಇದಕ್ಕೆ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕಿರಲಿಲ್ಲ. ಇದು ಧೂಮಪಾನವನ್ನು ಪ್ರಚೋದಿಸುತ್ತದೆ ಹಾಗೂ ಸಿಗರೇಟ್​ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹೀಗಾಗಿ, ಸಿಗರೇಟ್‌ ಸೇದುವ ದೃಶ್ಯವನ್ನು ತೆಗೆದು ಹಾಕುವಂತೆ ಆರೋಗ್ಯ ಇಲಾಖೆ ನಟ ಯಶ್‌ಗೆ ನೋಟಿಸ್‌ ಕೊಟ್ಟಿದೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್