ಸುದ್ದಿ
ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರ ಒತ್ತಾಯ
ಬಾಗೇಪಲ್ಲಿ: ತಾಲ್ಲೂಕುಗಳ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಯೆಂದರೆ, ಲೋಡುಗಟ್ಟಲೇ ಮಣ್ಣು ಸುರಿಯುವುದು. ಲಕ್ಷಾಂತರ ರೂಪಾಯಿ ಖರ್ಚಾದರೂ ರಸ್ತೆಗಳು ಮಣ್ಣು, ದೂಳಿನಿಂದ ಕೂಡಿರುತ್ತವೆಯೇ ಹೊರತು ಡಾಂಬರು ಮಾತ್ರ ಕಾಣಸಿಗುವುದಿಲ್ಲ.
ಹೌದು ಇದು ಬಾಗೇಪಲ್ಲಿ ತಾಲ್ಲೂಕಿನ ಸ್ಥಿತಿ. ಕೊತ್ತಕೋಟೆ ಚಾಕವೇಲು, ಬಿಳ್ಳೂರು, ಗೊರ್ತಪಲ್ಲಿ, ಪಾತಪಾಳ್ಯ, ಜೂಲಪಾಳ್ಯ, ಚೇಳೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಬಹುತೇಕ ಗ್ರಾಮಗಳ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳು ಮಣ್ಣಿನಿಂದ ಕೂಡಿದ್ದು, ಡಾಂಬರು ಕಾಣದೆ ವರ್ಷಗಳೇ ಕಳೆದಿವೆ.
ಅದರಂತೆ ಚೇಳೂರು ಹೋಬಳಿಯ ನಲ್ಲಗುಟ್ಲಪಲ್ಲಿ ಗ್ರಾಮದ ಪಂಚಾಯತಿ ವ್ಯಾಪ್ತಿಯ ಗುಂತೂರಪಲ್ಲಿ ಗ್ರಾಮಸ್ಥರು ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರುಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಮ್ಮೂರಿನ ರಸ್ತೆಯನ್ನು ದುರಸ್ತಿ ಪಡಿಸದೇ ನಿರ್ಲಕ್ಷಿಸಿದ್ದನ್ನು ಖಂಡಿಸಿದರು.
ಮಳೆ ಬಂದು ಮಣ್ಣಿನ ರಸ್ತೆ ಕೆಸರುಗದ್ದೆಯಂತಾಗಿ ಜನರ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಚುನಾವಣಾ ಸಂಧರ್ಭದಲ್ಲಿ ಬಣ್ಣಬಣ್ಣದ ಮಾತುಗಳನ್ನು ಹೇಳಿ ಮತಗಳನ್ನು ಹಾಕಿಸಿಕೊಂಡು ಹೋಗುತ್ತಾರೆ. ಆದರೆ ಕೊಟ್ಟ ಭರವಸೆಗಳನ್ನು ಸಂಪೂರ್ಣ ನಿರ್ಲಕ್ಷಿಸುತ್ತಾರೆ ಎಂಬ ಗ್ರಾಮಸ್ಥರಿಂದ ಅಭಿಪ್ರಾಯಗಳು ಕೇಳಿ ಬಂದವು.
ವರ್ಷಗಳು ಕಳೆದರೂ ಡಾಂಬರು ಕಾಣದೇ ರಸ್ತೆ ಸಂಪೂರ್ಣ ದೂಳುಮಯವಾಗುತ್ತದೆ. ಅಲ್ಲದೇ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಓಡಾಡಲು ಆಗುವುದಿಲ್ಲ. ದೂಳಿನ ವಾತಾವರಣದಲ್ಲಿ ನಡೆಯುವುದರಿಂದ ಪರಿಸರ ಗಲೀಜಾಗುತ್ತದೆ ಅಲ್ಲದೇ ಜನರು ಅನಾರೋಗ್ಯಕ್ಕೀಡಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ದಿನಂಪ್ರತಿ ಮಣ್ಣಿನ ರಸ್ತೆಯಲ್ಲಿ ಓಡಾಡಬೇಕು. ರಸ್ತೆ ಗುಣಿಗಳಿಂದ ಕೂಡಿದೆ. ಆದಷ್ಟು ಬೇಗ ನಮ್ಮೂರಿಗೆ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಗ್ರಾಮದ ನಿವಾಸಿ ಅಂಜಿ ತಿಳಿಸಿದರು.
ಸುಮಾರು ಇನ್ನೂರು ಕುಟುಂಬಗಳಿರುವ ಈ ಗ್ರಾಮದಲ್ಲಿ ಶಾಲೆ,ಪಟ್ಟಣ ಎಲ್ಲಿಗೆ ಹೋಗಬೇಕಾದರೂ ಅದ್ವಾನ ರಸ್ತೆಯೇ ಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಯಿಂದ ಭರವಸೆ ಸಿಗುತ್ತದೆ ಹೊರತು ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿ ನಡೆಯುವುದಿಲ್ಲ. ಅದರಲ್ಲೂ ಗಡಿ ಗ್ರಾಮಗಳಲ್ಲಿ ರಸ್ತೆಗಳು ಇನ್ನಷ್ಟು ಹದಗೆಡುತ್ತವೆ ಹೊರತು ಸುಧಾರಿಸುವುದಿಲ್ಲ. ಡಾಂಬರು ಹಾಕುವ ಲಕ್ಷಣಗಳು ಸಹ ಕಾಣಸಿಗುವುದಿಲ್ಲ. ಗ್ರಾಮಸ್ಥರು ಓಡಾಡುವುದೇ ದುಸ್ತರವಾಗುತ್ತದೆ.
ಬಾಗೇಪಲ್ಲಿ ತಾಲ್ಲೂಕು ಸಂಪೂರ್ಣ ಹಿಂದುಳಿದ ಪ್ರದೇಶವಾಗಿದ್ದು, ಎಲ್ಲ ದೃಷ್ಟಿಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮಗಳಲ್ಲಿ ಸಮರ್ಪಕವಾದ ವಸತಿ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ಸಮಸ್ಯೆಯಲ್ಲದೇ ರಸ್ತೆಗಳ ಸಮಸ್ಯೆಯೂ ಗಂಭೀರವಾಗಿದೆ. ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವ ಗ್ರಾಮಸ್ಥರು ಪದೇ ಪದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮತ್ತು ವಾಹನ ದುರಸ್ತಿಗೊಳಿಸಲು ಹಣ ವ್ಯಯ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಡಾಂಬರೀಕರಣ ನಡೆದಿಲ್ಲ. ಅಧಿಕಾರಿ, ಜನಪ್ರತಿನಿಧಿಗಳು ಆಸಕ್ತಿ ತೋರಿದರೆ, ಪರಿಸ್ಥಿತಿ ಸುಧಾರಿಸುತ್ತದೆ ಎಂದು ಗ್ರಾಮಸ್ಥ ರಮೇಶ್ ತಿಳಿಸಿದರು.
ಸುದ್ದಿ
ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಂದರವಾದ ಅಂಗನವಾಡಿಯ ನಿರ್ಮಾಣ
ರಾಮನಗರ : ಅಜ್ಜನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಸ್ವಚ್ಛ ಸುಂದರ ಚಿತ್ರಗಳನ್ನು ಒಳಗೊಂಡ ಅಂಗನವಾಡಿ ನಿರ್ಮಾಣ, ಜ್ಞಾನದೀವಿಗೆ ಯೋಜನೆಯ ಯಡಿ ಮಕ್ಕಳಿಗೆ ಉಚಿತ ಗ್ರಂಥಾಲಯ ಕಾರ್ಡ್ ವಿತರಣೆ ಮಾಡಲಾಯಿತು.
ಹಾಗೂ ವಿಶೇಷ ಮಕ್ಕಳ ಗ್ರಾಮ ಸಭೆಯನ್ನು ನೆಡೆಸಲಾಯಿತು.
ಮಕ್ಕಳಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ವರದಿ : ದಿನೇಶ್ ಕುಮಾರ್
ಸುದ್ದಿ
ಭಾಜಪ ಗೆ ದುಡಿದರೂ ಪ್ರಯೋಜನವಿಲ್ಲ
ಭಾರತೀಯ ಜನತಾ ಪಕ್ಷದ ಸಲುವಾಗಿ ಹಗಲು-ರಾತ್ರಿಯೆನ್ನದೆ ದುಡಿದರು ಪ್ರಯೋಜನವಿಲ್ಲವೆಂದು ಸದಸ್ಯತ್ವಕ್ಕೆ ಕೃಷ್ಣ ಡಿ. ಚಿಗರಿ ರಾಜೀನಾಮೆ
ಮಸ್ಕಿ.14. ಕೃಷ್ಣ ಡಿ.ಚಿಗರಿ ಮಸ್ಕಿ
ಕೆಳದ ಹತ್ತು ವರ್ಷಗಳ ಕಾಲ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಸಾಮಾನ್ಯ
ಕಾರ್ಯಕರ್ತನ್ನಾಗಿ ಕೆಲಸ ಕಾರ್ಯ ಮಾಡಿದ್ದೇನೆ..
ಮತ್ತು ಬಿಜೆಪಿ ಪಕ್ಷ ಕೊಟ್ಟು ಜವಾಬ್ದಾರಿ ಮಸ್ಕಿ ಬಿಜೆಪಿ ನಗರ ಎಸ್ಸಿ ಮೋರ್ಚಾ ಅಧ್ಯಕ್ಷನಾಗಿ, ಬಿಜೆಪಿ ಮಂಡಲ ಕಾರ್ಯದರ್ಶಿ ಯಾಗಿ ಮತ್ತು ಜಿಲ್ಲಾ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ನಿಷ್ಠೆಯಿಂದ ಶ್ರದ್ಧೆ ಸಂಘಟನೆ ಮೂಲಕ ಕೆಲಸ ಮಾಡಿದ್ದೇನೆ.
ಹಾಗೂ ಮಸ್ಕಿ ಪುರಸಭೆ ಚುನಾವಣೆಯಲ್ಲಿ ಸಕ್ರೀಯವಾಗಿ ಅಭ್ಯರ್ಥಿ ಪರ ಮತಯಾಚನೆ ಮಾಡಿ ಕೆಲಸ ಮಾಡಿದ್ದೇನೆ. ಮತ್ತು ಲೋಕಸಭೆ ಚುನಾವಣೆಯಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಮತ್ತು ಮೊನ್ನೆ ನಡೆದ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ಪರವಾಗಿ ಹಗಲುರಾತ್ರಿ ಅನ್ನದೆ ನಾನು ಕೆಲಸ ಮಾಡಿದ್ದೇನೆ.
ಹಿರಿಯ ಮುಖಂಡರು ಜೊತೆಯಲ್ಲಿ ಸೇರಿಕೊಂಡು ಹಲವಾರು ಪಕ್ಷದ ಕೆಲಸ ಮತ್ತು ಹೋರಾಟ ಮಾಡಿದ್ದೇನೆ..
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಶ್ರೀ ಪ್ರತಾಪಗೌಡ ಪಾಟೀಲ್ ರವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಗೆ ಬಂದಾ ಮೇಲೆ ಮೂಲ ಬಿಜೆಪಿ ಕಾರ್ಯಕರ್ತರಿಗೆ ಸರಿಯಾದ ರೀತಿಯಲ್ಲಿ ಗೌರವ ಸಿಗಲಿಲ್ಲ.
ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ ಮೂಲ ಬಿಜೆಪಿಗರಿಗೆ ಮನಸ್ಸಿಗೆ ತುಂಬಾ ನೋವು ಆಗಿದೆ ಆದರಿಂದ ನಾನು ಇದೇ ದಿನಾಂಕ 20-11-2020 ರಂದು ಭಾರತೀಯ ಜನತಾ ಪಕ್ಷಕ್ಕೆ ಮತ್ತು ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಮಸ್ಕಿ ವಿಧಾನಸಭಾ ಕ್ಷೇತ್ರ ಸದಸ್ಯರಾದ
ಕೃಷ್ಣ ಡಿ.ಚಿಗರಿ ಅವರು ತಿಳಿಸಿದ್ದಾರೆ.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
17ರಿಂದ ಕಾಲೇಜುಗಳು ಆರಂಭ : ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ
ಬೆಂಗಳೂರು : ರಾಜ್ಯಾದ್ಯಂತ ನವೆಂಬರ್ 17 ರಿಂದ ಪದವಿ, ಸ್ನಾತಕೋತ್ತರ ಮತ್ತು ವೈದ್ಯಕೀಯ ಕಾಲೇಜುಗಳು ಆರಂಭಗೊಳ್ಳಲಿವೆ. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಾಲೇಜಿನ ಐಡಿ ಕಾರ್ಡ್ ಅಥವಾ ಶುಲ್ಕ ರಸೀದಿ ತೋರಿಸಿ ಉಚಿತ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಾಲೇಜಿಗೆ ದಾಖಲಾಗಿರುವ ಶುಲ್ಕ ರಸೀದಿ ಅಥವಾ ಗುರುತಿನ ಚೀಟಿಯೊಂದಿಗೆ BMTC ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ವಿದ್ಯಾರ್ಥಿಗಳು ವಾಸಸ್ಥಳದಿಂದ ಕಾಲೇಜಿನವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.