ಸುದ್ದಿ
ಅಣ್ಣನ ಮಗಳಿಗೆ ಮದ್ಯ ಕುಡಿಸಿ, ಅತ್ಯಾಚಾರ ಮಾಡಿ ಕೊಲೆಗೈದಿರುವ ಚಿಕ್ಕಪ್ಪ
ಬಾಗೇಪಲ್ಲಿ:- ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳಿಗೆ ಮದ್ಯ ಕುಡಿಸಿ, ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿರುವ ಅಮಾನವೀಯ ಘಟನೆ ನೆರೆಯ ಆಂಧ್ರ ಪ್ರದೇಶದದ ತಿರುಪತಿ ಬಳಿಯ ವಿಜೀಪುರ ಗ್ರಾಮದಲ್ಲಿ ನಡೆದಿದೆ.
30 ವರ್ಷದ ಮಹಿಳೆಯನ್ನು ಆಕೆಯ ಚಿಕ್ಕಪ್ಪ 50 ವರ್ಷದ ಬಾಬಾ ಫಕ್ರುದ್ದೀನ್ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಮೂಲತಃ ವಿಜೀಪುರ ಗ್ರಾಮದವಳಾದ ಮಹಿಳೆ, ಮನೆ ಕೆಲಸ ಮಾಡಿಕೊಂಡು ಕುವೈತ್ನಲ್ಲಿದ್ದಳು. ಕೊರೊನಾ ಹಿನ್ನೆಲೆ, ಕೆಲ ತಿಂಗಳ ಹಿಂದೆ ತವರಿಗೆ ಹಿಂದಿರುಗಿದ್ದಳು.
ಮತ್ತೆ ಕುವೈತ್ಗೆ ಕೆಲಸಕ್ಕೆ ಹೋಗಲು ಮುಂದಾಗಿದ್ದ ಮಹಿಳೆ, ಪಾಸ್ಪೋರ್ಟ್ ಸೇರಿದಂತೆ ದಾಖಲೆಗಳನ್ನು ಮಾಡಿಸಬೇಕು ಎಂದು ಚಿಕ್ಕಪ್ಪ ಬಾಬಾ ಫಕ್ರುದ್ದೀನ್ ಬಳಿ 5 ಸಾವಿರ ರೂ. ಹಣ ಕೇಳಿದ್ದಳು.ಆರೋಪಿ ಬಾಬಾ ಫಕ್ರುದ್ದೀನ್ ಟೊಮ್ಯಾಟೊ ವ್ಯಾಪಾರಿಯಾಗಿದ್ದು, ತಿರುಪತಿಯಲ್ಲಿ ವಾಸವಾಗಿದ್ದ. ಈತನಿಗೆ ಇಬ್ಬರು ಹೆಂಡತಿಯರಿದ್ದು, ವಿಜೀಪುರ ಗ್ರಾಮದ ಮಹಿಳೆಯ ಚಿಕ್ಕಮ್ಮಳನ್ನೇ ಈತ ಮದುವೆಯಾಗಿದ್ದ.
ಆಗಾಗ ವಿಜೀಪುರಕ್ಕೆ ಹೋಗಿ ಬರುತ್ತಿದ್ದ ಬಾಬಾ ಫಕ್ರುದ್ದೀನ್, ಕುವೈತ್ನಿಂದ ವಾಪಾಸ್ಸಾಗಿದ್ದ ಸುಂದರಿಯಾಗಿದ್ದ ತನ್ನ ಅಣ್ಣನ ಮಗಳ ಮೇಲೆಯೇ ಕಣ್ಣು ಹಾಕಿದ್ದ.ಮಹಿಳೆ 5 ಸಾವಿರ ರೂ. ಹಣ ಕೇಳಿದ ಕೂಡಲೇ, ಕೊಡುತ್ತೇನೆ ಬಾ ಅಂತಾ ಅಕ್ಟೋಬರ್ 4 ರಂದು ಆಕೆಯನ್ನು ತಿರುಪತಿಗೆ ಕರೆಸಿಕೊಂಡಿದ್ದ. ಅಲ್ಲಿ ನನ್ನ ಬಳಿ ಹಣ ಇಲ್ಲ. ಟೊಮ್ಯಾಟೊ ಮಾರಿದ ಹಣವನ್ನು ನನ್ನ ಸ್ನೇಹಿತ, ಅನಂತಪುರ ಜಿಲ್ಲೆಯ ಪೆನುಗೊಂಡದಲ್ಲಿ ಕೊಡುತ್ತಾನೆ.
ಬಾ ತಗೊಂಡು ಬರೋಣ ಎಂದು ಹೇಳಿ ಬಸ್ ಮೂಲಕ ಮಹಿಳೆಯನ್ನು ಪೆನುಗೊಂಡಾಗೆ ಕರೆದುಕೊಂಡು ಹೋಗಿದ್ದ. ಆದರೆ, ಅಲ್ಲಿಗೆ ಹೋದ ಮೇಲೆ ಸ್ನೇಹಿತ ಬರಲಿಲ್ಲ, ನಾಳೆ ಸಿಗುತ್ತಾನೆ. ದರ್ಗಾಗೆ ಹೋಗಿ ಬಂದು ಇವತ್ತು ಇಲ್ಲಿ ಲಾಡ್ಜ್ನಲ್ಲಿ ಉಳಿಯೋಣ ಎಂದು ರೂಮ್ ಮಾಡಿ ಇಬ್ಬರು ತಂಗಿದ್ದರು. ಆದರೆ, ಅಂದು ರಾತ್ರಿ ಮಗಳ ಸಮಾನಳಾದ ಮಹಿಳೆಗೆ ಮದ್ಯ ಕುಡಿಸಿ, ಆಕೆಯ ಮೇಲೆ ಬಾಬಾ ಫಕ್ರುದ್ದೀನ್ ಅತ್ಯಾಚಾರ ಮಾಡಿದ್ದಾನೆ.ಈ ವೇಳೆ ವಿರೋಧ ವ್ಯಕ್ತಪಡಿಸಿದ ಮಹಿಳೆ, ಗಲಾಟೆ ಮಾಡಿದ್ದಳು. ಆದರೆ, ಮತ್ತೊಂದು ಕಥೆ ಕಟ್ಟಿದ ಆರೋಪಿ ಬಾಬಾ ಫಕ್ರುದ್ದೀನ್, ಸ್ನೇಹಿತ ಹಿಂದೂಪುರದ ಪಾವಗಡದಲ್ಲಿ ಇದ್ದಾನೆ ಎಂದು ಹೇಳಿ, ಮರುದಿನ ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಮತ್ತೆ ಅತ್ಯಾಚಾರವೆಸಗಿದ್ದ. ಕೊನೆಗೆ ಅಕ್ಟೋಬರ್ 6 ರಂದು ಬಾಗೇಪಲ್ಲಿಯ ಕಾರಕೂರು ಬಳಿ ಬಂದು, ನಿರ್ಮಾಣ ಹಂತದ ಕಟ್ಟದಲ್ಲಿ ಮತ್ತೆ ಮದ್ಯ ಕುಡಿಸಿ ಅಕೆಯ ಮೇಲೆ ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.ಅಕ್ಟೋಬರ್ 7 ರಂದು ಬಾಗೇಪಲ್ಲಿ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಕೊಲೆಯಾದ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ, ಅದನ್ನು ಗಮನಿಸಿದ ಮಹಿಳೆಯ ಸಂಬಂಧಿಯೊಬ್ಬರು, ಆಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು, ಆಕೆಯ ಮೊಬೈಲ್ ಕರೆ ಮತ್ತು ಸಂಬಂಧಿಕರ ಮಾಹಿತಿ ಮೇರೆಗೆ ಮೃತಳ ಊರಲ್ಲೇ, ಎದುರು ಮನೆಯಲ್ಲಿದ್ದ ಆರೋಪಿ ಬಾಬಾ ಫಕ್ರುದ್ದೀನ್ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತನ್ನ ಕೃತ್ಯದ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಬಾಬಾ ಫಕ್ರುದ್ದೀನ್ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸುದ್ದಿ
ಚಾಲಕರ ವೇತನದಿಂದ ದಂಡದ ಮೊತ್ತ ವಸೂಲಿ
ಬೆಂಗಳೂರು : ಸಂಚಾರ ನಿಯಮ ಉಲ್ಲಂಘಿಸುವ ಬಸ್ ಚಾಲಕರ ವೇತನದಿಂದ ದಂಡದ ಮೊತ್ತವನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ವಿಭಾಗಿಯ ಸಂಚಾರ ಅಧಿಕಾರಿಗಳ ಸಭೆಯಲ್ಲಿ ದಂಡದ ಮೊತ್ತ ಪಾವತಿ ಕುರಿತು ಚರ್ಚೆ ಮಾಡಲಾಯಿತು.
ಸುದ್ದಿ
ಅತ್ಕೂರು ಗ್ರಾ.ಪಂ: ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನ ಮುಂದುವರೆಸಲು ಮನವಿ
ಅತ್ಕೂರು ಗ್ರಾ.ಪಂ: ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನ ಮುಂದುವರೆಸಲು- ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಮನವಿ.
ರಾಯಚೂರು.ಅ.23: ಅತ್ಕೂರು ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಸ್ಥಾನಗಳನ್ನು ಮುಂದುವರೆಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಅತ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಕೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಎರಡು ಮೀಸಲು ಸ್ಥಾನಗಳು ನಿಗದಿಗೊಳಿಸಲಾಗಿತ್ತು. ಆದರೆ ಒಂದು ಸ್ಥಾನವನ್ನು ಸರ್ಜಾಪುರು ಗ್ರಾಮಕ್ಕೆ ನಿಗದಿಗೊಳಿಸಲಾಗಿದೆ. ಸರ್ಜಾಪುರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದವರು 100 ಜನರಿಗಿಂತ ಕಡಿಮೆ. ಆದರೆ ಅತ್ಕೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದವರು 1400 ಕಿಂತ ಜಾಸ್ತಿ. ಆದಕಾರಣ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಸ್ಥಾನಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಅಬ್ರಹಾಂ ಕಮಲಾಪೂರು, ಆಂಜನೇಯ, ನರಸಿಂಹಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಕಲ್ಲು ಚಪ್ಪಡಿ ಬಿದ್ದು ತಂದೆ, ಮಗ ಸಾವು
ಕಲ್ಲು ಚಪ್ಪಡಿಯ ಮನೆಯೊಂದು ಕುಸಿದುಬಿದ್ದು ನಾಲ್ವರ ಪೈಕಿ ತಂದೆ ಮಗ ಸಾವನ್ನಪ್ಪಿದ್ದು, ತಾಯಿ ಮಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಚಿಂತಾಮಣಿ: ಬೆಂಗಳೂರು ರಸ್ತೆಯಲ್ಲಿರು ವೈಜಕೂರು ಗ್ರಾಮದಲ್ಲಿ ಕಲ್ಲು ಚಪ್ಪಡಿಯ ಮನೆಯೊಂದು ಕುಸಿದುಬಿದ್ದು ಮನೆಯಲ್ಲಿದ್ದ ನಾಲ್ವರ ಪೈಕಿ ತಂದೆ ಮಗ ಸಾವನ್ನಪ್ಪಿದ್ದು ಇನ್ನಿಬ್ಬರು ತಾಯಿ ಮಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗಿನ ಜಾವ ಸುಮಾರು ೬-೩೦ ಗಂಟೆ ಸಮಯದಲ್ಲಿ ನಡೆದಿದೆ.
ಕಲ್ಲುಚಪ್ಪಡಿ ಕೆಳೆಗೆ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪಿರುವವರನ್ನು ವೈಜಕೂರು ಗ್ರಾಮದ ನಿವಾಸಿ ಕೈವಾರದಲ್ಲಿ ಪೋಸ್ಟ್ ಮೆನ್ ಆಗಿ ಕೆಲಸ ನಿರ್ವಸುತ್ತಿದ್ದ ರವಿಕುಮಾರ್ (೪೦) ಮತ್ತು ಆತನ ಮಗ ರಾಹುಲ್ (೧೨) ಎಂದು ಗುರುತಿಲಾಗಿದ್ದು, ಗಾಯಗೊಂಡ ಮಹಿಳೆಯನ್ನು ರವಿಕುಮಾರ್ ಪತ್ನಿ ಅಂಗ ನವಾಡಿ ಶಿಕ್ಷಕಿ ರಾಧಮ್ಮ (೩೫) ಮತ್ತು ರುಚಿತಾ (೧೪) ವರ್ಷದ ಹುಡುಗಿ ಎಂದು ಗುರುತಿಸಲಾಗಿದೆ.
ಇನ್ನು ಗಾಯಗೊಂಡವರನ್ನು ಚಿಂತಾಮಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ಕೃಷ್ಣಾರೆಡ್ಡಿ ಮತ್ತು ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.
ವರದಿ : ಕೆ.ಮಂಜುನಾಥ್ ಶಿಡ್ಲಘಟ್ಟ