ಸುದ್ದಿ
ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಪರ್ವ ಆರಂಭ: ಆಗ್ನೇಯ ಪದವೀಧರ ಕ್ಷೇತ್ರ ಅಭ್ಯರ್ಥಿ ಗೆಲವು ಖಚಿತ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಭಿಮತ
ಗೌರಿಬಿದನೂರು : ನಗರದ ಸೂರ್ಯ ಕಲ್ಯಾಣ ಮಂಟಪದಲ್ಲಿ ಉಸ್ತುವಾರಿ ಸಚಿವ ಹಾಗೂ ಅರೋಗ್ಯ ಸಚಿವರಿಂದ ಅಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿ ಪದವೀಧರರ ಕ್ಷೇತ್ರದಲ್ಲಿ ಮತದಾರ ಬಹಳ ಪ್ರಬುಧ್ದರಾಗಿದ್ದು ಜಾತಿ ನೋಡದೆ ಕೇವಲ ಅಭಿವೃದ್ದಿ ಮಾತ್ರ ನೋಡಿ ಮತ ಹಾಕುವುದು ಎಂಬುದು ಮೇಲ್ಕೋಟಕ್ಕೆ ಕಂಡು ಬಂದಿದೆ.ಕಳೆದ ಬಾರಿ ಜೆಡಿಎಸ್ ಆಬ್ಯರ್ಥಿಯಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ದಿ ಶೂನ್ಯವಾಗಿದೆ.
ಈ ನಿಟ್ಟಿನಲ್ಲಿ ಬಿಜೆಪಿ ಸರಕಾರದ ಮುಖ್ಯಮಂತ್ರಿ ಯಡಿಯ್ಯೂರಪ್ಪ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಅದರಲ್ಲಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಗುರಿ ಹೊಂದಿದ್ದಾರೆ.ನಿರುದ್ಯೋಗ ಪದವೀಧರರಲ್ಲಿ ಅನೇಕ ಸಮಸ್ಯೆಗಳು ಇದ್ದು ಅವುಗಳನ್ನು ಹಂತ ಹಂತವಾಗಿ ಬಗೆಹರಿಸಿ ಮುಂದಾಗುತ್ತವೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಪರ್ವ ಅರಂಭ;ಲೋಕಸಭಾ ಚುನಾವಣೆಯಲ್ಲಿ ಮತದಾರ ಬಿಜೆಪಿ ಪಕ್ಷವನ್ನೂ ಗೆಲ್ಲಿಸಿ ನಂತರ ಚಿಕ್ಕಬಳ್ಳಾಪುರದಲ್ಲಿ ನನ್ನ ಅಯ್ಕೆಯಿಂದ ಮತ್ತೊಂದು ಮೈಲಿಗಲ್ಲೂ ಅರಂಭವಾಗಿದೆ ಇನ್ನೂ ಪದವೀಧರರ ಕ್ಷೇತ್ರದಲ್ಲಿ ಪ್ರಬುದ್ಧ ಮತದಾರರಿದ್ದು ಅವರು ಬಿಜೆಪಿ ಅಯ್ಕೆ ಮಾಡುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.
ನಮ್ಮ ಪಕ್ಷದ ಅಭ್ಯರ್ಥಿ ಚಿದಾನಂದ ಅಯ್ಕದೆ ಖಚಿತವಾಗಿದೆ ಎಂದರು. ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಖಚಿತ;ಉಪ ಸಮರ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಖಚಿತವಾಗಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಮುಖಂಡರ ಗೊಂದಲ ಮತ್ತು ಅವರಲ್ಲಿರುವ ಅರೋಪ ಪ್ರತ್ಯೇರೋಪದಲ್ಲಿ ಮುಳಗಿದ್ದು .ರಾಜ್ಯ ಸರಕಾರವು ಅಭಿವೃದ್ದಿಗೆ ಹೆಚ್ಚು ಗಮನ ಹರಿಸಿದ್ದು ಇದನ್ನೂ ಸಹಿಸ ವಿರೋಧ ಪಕ್ಷಗಳು ಕೇವಲ ಅರೋಪದಲ್ಲಿ ಮುಳಗಿದ್ದಾರೆ,ನಮ್ಮ ಸರ್ಕಾರದ ಅಭಿವೃದ್ದಿ ಸಹಿಸದ ಮುಖಂಡರುಗಳು ಇನ್ನೀಲ್ಲದ ಪೊಳ್ಳು ಅರೋಪ ಮಾಡುತ್ತಿರುವ ನಿಜಕ್ಕೂ ಹಾಸ್ಯಾಸ್ಪದವಾಗಿದೆ.
ವಿಧಾನ ಪರಿಷತ್ ಸದಸ್ಯ ವೈ,ನಾರಾಯಣಸ್ವಾಮಿ ಮಾತನಾಡಿ ಪದವೀಧರ ಶಿಕ್ಷರರಲ್ಲಿ ಅನೇಕ ಸಮಸ್ಯೆಗಳಿದ್ದು ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡರಾದ ಎನ್.ಎಮ್.ರವಿನಾರಾಯಣರೆಡ್ಡಿ ಮಾತನಾಡಿ ಚಿದಾನಂದ ಗೌಡ ಅವರು ಮೂಲತಃ ಶಿಕ್ಷಣ ಸಂಸ್ಥೆಯಿಂದ ಬಂದ ವಿದ್ಯಾವಂತ ಅಭ್ಯರ್ಥಿಯಾಗಿದ್ದು ಅವರನ್ನೂ ಈ ಬಾಗದ ಪದವೀಧರರು ಖಂಡಿತವಾಗಿ ಅಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ.ಎನ್.ಜ್ಯೋತಿರೆಡ್ಡಿ , ಎಂ.ತಾಲ್ಲೂಕು ಅಧ್ಯಕ್ಷ ರಮೇಶ್‍ರಾವು ಶಿಳ್ಕೆ,ನಗರಘಟಕದ ಅಧ್ಯಕ್ಷ ಮಾರ್ಕಟ್ ಮೋಹನ್.ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ.ಕೇಶವಪ್ರಸಾದ್,ರಾಜ್ಯ ಕಾರ್ಯದರ್ಶಿಗಳು.ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕಾಂತರಾಜು,ಭವ್ಯರಂಗನಾಥ್.ಕೃಷ್ಣರೆಡ್ಡಿ.ಜಿಲ್ಲೆ ಸಂಘಟನಾ ಕಾರ್ಯದರ್ಶಿ ಮುರಳೀದರ.ವಕ್ತಾರ ಜಯಣ್ಣ.ಮುನಿಲಕ್ಷಮ್ಮ. ಚಂದ್ರಮೋಹನ್ ಮುಂತಾದವರು ಹಾಜರಿದ್ದರು.
ಸುದ್ದಿ
ಚಾಲಕರ ವೇತನದಿಂದ ದಂಡದ ಮೊತ್ತ ವಸೂಲಿ
ಬೆಂಗಳೂರು : ಸಂಚಾರ ನಿಯಮ ಉಲ್ಲಂಘಿಸುವ ಬಸ್ ಚಾಲಕರ ವೇತನದಿಂದ ದಂಡದ ಮೊತ್ತವನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ವಿಭಾಗಿಯ ಸಂಚಾರ ಅಧಿಕಾರಿಗಳ ಸಭೆಯಲ್ಲಿ ದಂಡದ ಮೊತ್ತ ಪಾವತಿ ಕುರಿತು ಚರ್ಚೆ ಮಾಡಲಾಯಿತು.
ಸುದ್ದಿ
ಅತ್ಕೂರು ಗ್ರಾ.ಪಂ: ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನ ಮುಂದುವರೆಸಲು ಮನವಿ
ಅತ್ಕೂರು ಗ್ರಾ.ಪಂ: ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನ ಮುಂದುವರೆಸಲು- ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಮನವಿ.
ರಾಯಚೂರು.ಅ.23: ಅತ್ಕೂರು ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಸ್ಥಾನಗಳನ್ನು ಮುಂದುವರೆಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಅತ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಕೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಎರಡು ಮೀಸಲು ಸ್ಥಾನಗಳು ನಿಗದಿಗೊಳಿಸಲಾಗಿತ್ತು. ಆದರೆ ಒಂದು ಸ್ಥಾನವನ್ನು ಸರ್ಜಾಪುರು ಗ್ರಾಮಕ್ಕೆ ನಿಗದಿಗೊಳಿಸಲಾಗಿದೆ. ಸರ್ಜಾಪುರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದವರು 100 ಜನರಿಗಿಂತ ಕಡಿಮೆ. ಆದರೆ ಅತ್ಕೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದವರು 1400 ಕಿಂತ ಜಾಸ್ತಿ. ಆದಕಾರಣ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಸ್ಥಾನಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಅಬ್ರಹಾಂ ಕಮಲಾಪೂರು, ಆಂಜನೇಯ, ನರಸಿಂಹಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಕಲ್ಲು ಚಪ್ಪಡಿ ಬಿದ್ದು ತಂದೆ, ಮಗ ಸಾವು
ಕಲ್ಲು ಚಪ್ಪಡಿಯ ಮನೆಯೊಂದು ಕುಸಿದುಬಿದ್ದು ನಾಲ್ವರ ಪೈಕಿ ತಂದೆ ಮಗ ಸಾವನ್ನಪ್ಪಿದ್ದು, ತಾಯಿ ಮಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಚಿಂತಾಮಣಿ: ಬೆಂಗಳೂರು ರಸ್ತೆಯಲ್ಲಿರು ವೈಜಕೂರು ಗ್ರಾಮದಲ್ಲಿ ಕಲ್ಲು ಚಪ್ಪಡಿಯ ಮನೆಯೊಂದು ಕುಸಿದುಬಿದ್ದು ಮನೆಯಲ್ಲಿದ್ದ ನಾಲ್ವರ ಪೈಕಿ ತಂದೆ ಮಗ ಸಾವನ್ನಪ್ಪಿದ್ದು ಇನ್ನಿಬ್ಬರು ತಾಯಿ ಮಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗಿನ ಜಾವ ಸುಮಾರು ೬-೩೦ ಗಂಟೆ ಸಮಯದಲ್ಲಿ ನಡೆದಿದೆ.
ಕಲ್ಲುಚಪ್ಪಡಿ ಕೆಳೆಗೆ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪಿರುವವರನ್ನು ವೈಜಕೂರು ಗ್ರಾಮದ ನಿವಾಸಿ ಕೈವಾರದಲ್ಲಿ ಪೋಸ್ಟ್ ಮೆನ್ ಆಗಿ ಕೆಲಸ ನಿರ್ವಸುತ್ತಿದ್ದ ರವಿಕುಮಾರ್ (೪೦) ಮತ್ತು ಆತನ ಮಗ ರಾಹುಲ್ (೧೨) ಎಂದು ಗುರುತಿಲಾಗಿದ್ದು, ಗಾಯಗೊಂಡ ಮಹಿಳೆಯನ್ನು ರವಿಕುಮಾರ್ ಪತ್ನಿ ಅಂಗ ನವಾಡಿ ಶಿಕ್ಷಕಿ ರಾಧಮ್ಮ (೩೫) ಮತ್ತು ರುಚಿತಾ (೧೪) ವರ್ಷದ ಹುಡುಗಿ ಎಂದು ಗುರುತಿಸಲಾಗಿದೆ.
ಇನ್ನು ಗಾಯಗೊಂಡವರನ್ನು ಚಿಂತಾಮಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ಕೃಷ್ಣಾರೆಡ್ಡಿ ಮತ್ತು ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.
ವರದಿ : ಕೆ.ಮಂಜುನಾಥ್ ಶಿಡ್ಲಘಟ್ಟ