ಮಾಹಿತಿ
ಆಸ್ಪತ್ರೆಯಲ್ಲಾದರೂ ಕಣ್ಣಾಮುಚ್ಚಾಲೆ ಆಡದಿರಲಿ ವಿದ್ಯುತ್.!
ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲ ಕಡೆಯೂ ವಿದ್ಯುತ್ 24×7 ಎನ್ನಲಾಗಿದೆ. ಆದರೂ ಗ್ರಾಮೀಣ ಭಾಗಗಳಲ್ಲಿ ಕೆಲವೊಮ್ಮೆ ವಿದ್ಯುತ್ ಹೋಗಿ ಬರ್ತಿರುತ್ತದೆ. ಹಾಗೆಯೆ ಪಟ್ಟಣದಲ್ಲೂ ಅನಿಯಮಿತ ವಿದ್ಯುತ್ ಕಡಿತವಾಗುತ್ತಿದ್ದು ಜನತೆ ರೋಸಿ ಹೋಗಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಮೊದಲೇ ಬಿಸಿಲಿನಿಂದ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿರುವ ರೋಗಿಗಳು ಕೊಂಚ ಪರದಾಟ ನಡೆಸುವಂತಾಗುತ್ತಿದೆ.
ಸಣ್ಣಪುಟ್ಟ ಕಾರಣಕ್ಕೂ ವಿದ್ಯುತ್ ನಿಲ್ಲಿಸಲಾಗುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿರುವ ವೃದ್ಧರು, ಬಾಣಂತಿಯರು, ಗರ್ಭಿಣಿಯರು ಪರದಾಡುತ್ತಿದ್ದಾರೆ. ಚಿಕ್ಕ ಮಕ್ಕಳು ಬಿಸಿಗೆ ತಾಳಲಾರದೆ ಒಂದೇ ಸಮನೆ ಅಳಲು ಶುರುಮಾಡುತ್ತಿವೆ.
ಹಾಗಾಗಿ ವಿದ್ಯುತ್ ಇದ್ದರೆ ಫ್ಯಾನ್ ಗಾಳಿಗಾದರು ಹಾಯಾಗಿ ಇರಬಹುದು’ ಹಾಗೇ ರಾತ್ರಿ ಸಮಯದಲ್ಲಿ ಫ್ಯಾನ್ ಗಾಳಿಗಾದರೂ ಸೊಳ್ಳೆಗಳಿಂದ ಸ್ವಲ್ಪ ಮಟ್ಟಿಗೆ ಬಚಾವ್ ಆಗಬಹುದೆಂದು ಒಳ ರೋಗಿಗಳು ಹೇಳುತ್ತಾರೆ. ಹಾಗೇ ಕೆಲವು,ವಿದ್ಯುತ್ ದೀಪಗಳು ಫ್ಯಾನ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ ಅವುಗಳ ಕಡೆಯೂ ಗಮನ ಹರಿಸಬೇಕಾಗಿದೆ.
ಕೆಲವು ರೋಗಿಗಳ ಜೊತೆಯಲ್ಲಿ ಬರುವವರು ವಿವೇಚನಾರಹಿತವಾಗಿ ನಡೆದುಕೊಳ್ಳುತ್ತಿದ್ದು, ಸ್ವಚ್ಚತೆ ಹಾಗೂ ತಾಳ್ಮೆಯಿಂದ ನಡೆದುಕೊಂಡು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಸಹಕರಿಸಿದರೆ ಉತ್ತಮ ಎಂಬ ಅಭಿಪ್ರಾಯ ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.
ಮಾಹಿತಿ
ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ನೀಡಿದ ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು : ದೂರ ಶಿಕ್ಷಣ ವಿಭಾಗದ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದು ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪಾಸ್ ಮಾಡಿಕೊಳ್ಳಲು ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಂದು ಅವಕಾಶ ನೀಡಿದೆ. 2000-2001ನೇ ಸಾಲಿನ ನಂತರದಲ್ಲಿ ಕೋರ್ಸ್ ಗಳಿಗೆ ಪ್ರವೇಶ ಪಡೆದ ಅಭ್ಯರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಮಾಹಿತಿ
ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಸಾಧಾರಣ ಮಳೆ ಸಾಧ್ಯತೆ
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಸದ್ಯ ಮೋಡ ಕವಿದ ವಾತಾವರಣವಿದ್ದು, ಈ ಹಿನ್ನೆಲೆಯಲ್ಲಿ ಮಳೆ ಜೊತೆಗೆ ಚಳಿಯು ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮಾಹಿತಿ
ಇಂದಿನಿಂದ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಭಾರಿ ಮಳೆ
ಬೆಂಗಳೂರು : ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ನೀವು ಚಂಡಮಾರುತ ಉಂಟಾಗಿರುವುದರಿಂದ ರಾಜ್ಯದಲ್ಲಿ ನವೆಂಬರ್ 25ರಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.