Connect with us
Ad Widget

ಕೊರೊನಾ

ಸಿಲಿಕಾನ್ ಸಿಟಿಗೆ ಬೆಳ್ಳಂಬೆಳಗ್ಗೆ ಕೊರೋನಾ ಶಾಕ್; 4 ಸಾವು

Published

on

ಬೆಂಗಳೂರು: ರಾಜ್ಯದಲ್ಲಿ ಕರೋನಾ ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿದ್ದು, ಸಾವುಗಳ ಸಂಖ್ಯೆಯೂ ಏರಿಕೆಯಾಗಿತ್ತಿದೆ. ಇಂದು ಸಿಲಿಕಾನ್ ಸಿಟಿಗೆ ಬೆಳ್ಳಂಬೆಳಗ್ಗೆ ಕರೋನಾ ಶಾಕ್ ನೀಡಿದ್ದು, ಮಾಹಾಮಾರಿಗೆ ಬೆಂಗಳೂರಿನಲ್ಲಿ ನಾಲ್ವರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಈ ಮೂಲಕ ನಗರದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

1.ರೋಗಿ 4079 ಗದಗ ಮೂಲದ 54 ವರ್ಷ ವ್ಯಕ್ತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿರುವ ಟ್ರಾವೆಲ್ ಹಿಸ್ಟರಿಯಿದೆ.

2.ರೋಗಿ 4845- 61 ವರ್ಷದ ವ್ಯಕ್ತಿ,
3.ರೋಗಿ 5340 ಬಳ್ಳಾರಿ ಮೂಲದ 58 ವರ್ಷದ ವ್ಯಕ್ತಿ ಅಂತರ್ ಜಿಲ್ಲೆ ಪ್ರಯಾಣ ಬೆಳೆಸಿದ್ದು,

4.ರೋಗಿ 5336- 72 ವರ್ಷ ವ್ಯಕ್ತಿ ಮೃತರಾದವರು.

ಮೃತಪಟ್ಟ ನಾಲ್ವರಲ್ಲಿ ಇಬ್ಬರನ್ನು ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿತ್ತು. ಉಳಿದ ಇಬ್ಬರು ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಿಂದ ಶಿಫ್ಟ್ ಆಗಿದ್ದರು. ಅನೇಕ ದಿನಗಳಿಂದ ಬಹಳ ಸೂಕ್ಷ್ಮ ಆರೋಗ್ಯ ಪರಿಸ್ಥಿತಿ ಇದ್ದ ಈ ನಾಲ್ವರು ಕೂಡ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಇಂದು ಸಿಲಿಕಾನ್ ಸಿಟಿಯಲ್ಲಿ ನಾಲ್ವರು ಮೃತಪಡುವ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಕೊರೊನಾ

ಕೊರೊನಾ ಲಾಕ್ ಡೌನ್ ಪರಿಣಾಮದಿಂದ ವೃತ್ತಿಪರ ತಮಟೆ ಕಲಾವಿದರಿಗೆ ಧನಸಹಾಯ ನೀಡಲು ಒತ್ತಾಯ

Published

on

ಶಿಡ್ಲಘಟ್ಟ: ಕೊರೊನಾ ಲಾಕ್ ಡೌನ್ ಪರಿಣಾಮದಿಂದ ವೃತ್ತಿಪರ ತಮಟೆ ಕಲಾವಿದರಿಗೆ ಧನಸಹಾಯ ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ರವಿಶಂಕರ್ ರವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರವಿಶಂಕರ್ ರವರು ಪ್ರಪಂಚಕ್ಕೆ ತಿಳಿದಿರುವ ಹಾಗೆ ಕಳೆದ 07 ತಿಂಗಳಿನಿಂದ ಕೊರೊನಾ ಎಂಬ ಮಹಾಮಾರಿ ಎಲ್ಲರ ಬದುಕಿನ ಮೇಲೆ ಪರಿಣಾಮ ಬೀರಿದ್ದು
ಬಡ ಜನರ ಆರ್ಥಿಕ ಸ್ಥಿತಿ ತಂಬಾ ಕಷ್ಟಕರವಾಗಿರುವುದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಪಾರಂಪರಿಕ ತಮಟೆ ನುಡಿಸುವ ಕಲಾವಿದರಿಗೆ 8000 ದಿಂದ10000 ರೂಗಳ ವರೆಗೆ ಸಹಾಯ ಧನ ಘೋಷಿಸಬೇಕು.

ಹಾಗೂ ಎಲ್ಲಾ ರೀತಿಯ ಸಭೆ ಸಮಾರಂಭಗಳಿಗೆ ಮತ್ತು ವಿವಿಧೋದ್ದೇಶ ಕಾರ್ಯ ಕ್ರಮಗಳಿಗೆ ತಮಟೆ ನುಡಿಸಲು ಅವಕಾಶ ಕಲ್ಪಿಸಿ ಕೋಡಬೇಕು ಮತ್ತು ಪಾರಂಪರಿಕತೆಯಿಂದ ತಮಟೆ ನುಡಿಸಿ ವಯಸ್ಸಾಗಿರುವ ಹಿರಿಯ ಕಲಾವಿದರಿಗೆ ಮಾಸಿಕ ವೇತನ ನೀಡಬೇಕು ಎಂದು ಒತ್ತಾಯಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ ಇವರುಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಗೋವಿಂದ ರಾಜು, ಬೆಂಗಳೂರು ಜಿಲ್ಲಾಧ್ಯಕ್ಷ ಪೂಜಪ್ಪ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಕೆ.ಎಂ.ಆನಂದ್, ಪ್ರಧಾನ ಕಾರ್ಯದರ್ಶಿ ಸುನೀಲ್, ಉಪಾಧ್ಯಕ್ಷ ನರಸಿಂಹಮೂರ್ತಿ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮಂಜುನಾಥ್, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮಾರೇಶ್, ಗೌರವಾಧ್ಯಕ್ಷ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಉಪಾಧ್ಯಕ್ಷ ಮಂಜುನಾಥ್, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಗೌರಿಬಿದನೂರು ತಾಲೂಕು ಅಧ್ಯಕ್ಷ ಬಾಲಪ್ಪ, ಚಿಂತಾಮಣಿ ತಾಲೂಕು ಅಧ್ಯಕ್ಷ ಮಂಜೇಶ್, ಪ್ರಧಾನ ಕಾರ್ಯದರ್ಶಿ ಜಯಣ್ಣ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮುಂತಾದವರು ಹಾಜರಿದ್ದರು

ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ

Continue Reading

ಕೊರೊನಾ

ಏರಿಕೆಯಾಗುತ್ತಿರುವ ಚೇತರಿಕೆಯ ಪ್ರಮಾಣ : ಕೊರೊನಾ ಆತಂಕದಲ್ಲಿ ಇದ್ದವರಿಗೆ ಗುಡ್ ನ್ಯೂಸ್

Published

on

ಪ್ರಸ್ತುತ ದಿನಮಾನದಲ್ಲಿ ಏರಿಕೆಯಾಗುತ್ತಲೇ ಬರುತ್ತಿರುವ ಕೊರೊನಾ ಸೋಂಕು ಪೀಡಿತರ ಚೇತರಿಕೆಯ ಪ್ರಮಾಣವು ಶೇಕಡ 90ರಷ್ಟು ದಾಟಿದೆ.

ಮತ್ತೊಂದು ಸ್ವಾಗತಾರ್ಹ ಬೆಳವಣಿಗೆಯೊಂದರಲ್ಲಿ, ಕಳೆದ 24 ಗಂಟೆಗಳ ಅವಧಿಯಲ್ಲಿ 50,129 ಮಂದಿ ಕೋವಿಡ್-19 ಸೋಂಕಿತರಾಗಿ ಕಂಡುಬಂದಿದ್ದರೆ, 62,077 ಮಂದಿ ಸೋಂಕಿತರು ಇದೇ ಅವಧಿಯಲ್ಲಿ ಚೇತರಿಕೆ ಕಂಡಿದ್ದಾರೆ.

ಸದ್ಯ ದೇಶದಲ್ಲಿ ಕೇವಲ 6,68,154 ಸಕ್ರಿಯ ಕೋವಿಡ್-19 ಪ್ರಕರಣಗಳು ಮಾತ್ರ ಇದ್ದು, ಒಟ್ಟಾರೆ ಸೋಂಕಿತರ ಪೈಕಿ ಕೇವಲ 8.5%ನಷ್ಟು ಜನ ಮಾತ್ರವೇ ಸಕ್ರಿಯವಾಗಿ ಸೋಂಕಿತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

Continue Reading

ಕೊರೊನಾ

ಶಾಸಕ ವಿ.ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗಾಗಿ ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ

Published

on

ಶಿಡ್ಲಘಟ್ಟ ; ವಿಧಾನಸಭಾ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗಾಗಿ ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಹೋಮ ಹವನವನ್ನ ನಡೆಸಲಾಯಿತು

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕರಾದ ವಿ ಮುನಿಯಪ್ಪನವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಬೇಗ ಗುಣಮುಖರಾಗಲು ಹಾರೈಸಿ.

ಶಿಡ್ಲಘಟ್ಟ ನಗರಸಭೆ ಸದಸ್ಯರಾದ ಚೈತ್ರ ಮನೋಹರ್ ಮಾತನಾಡಿ ಕೊರೊನಾ ಸೋಂಕಿಗೆ ಪೀಡಿತರಾಗಿರುವ ವಿ ಮುನಿಯಪ್ಪ ಅವರು ಬೇಗ ಗುಣಮುಖರಾಗಲಿ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಮೊರೆ ಹೋಗಿದ್ದೇವೆ ಆ ನಾಡ ದೇವತೆ ಆಶೀರ್ವಾದ ವಿ ಮುನಿಯಪ್ಪ ಅವರಿಗೆ ಶೀಘ್ರವಾಗಿ ಫಲಿಸಲಿದೆ.

ಹಾಗೂ ಕ್ಷೇತ್ರದ ಜನರ ಸೇವೆ ಮಾಡಲು ನನ್ನ ಇನ್ನಷ್ಟು ಶಕ್ತಿ ಬರಲಿದೆ ಎಂದು ಹೇಳಿದರು ಹಾಗೂ ಶಾಸಕರು ದೈವಾನುಗ್ರಹ ಉಳ್ಳವರು ಹಾಗಾಗಿ ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂಬ ಉದ್ದೇಶದಿಂದ ವಕೀಲ ಮುನಿರಾಜು ಹಾಗೂ ಅಬ್ಲೂಡು ಜೆಸಿಬಿ ಮಂಜುನಾಥ್ ಮತ್ತು ನಗರದ ಪುಡ್ ಮನೋಹರ್ ಮತ್ತಿತರರು ಉಡುಪಿಯ ಸುಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಸಿ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ವಕೀಲ ಮುನಿರಾಜು ಮಾತನಾಡಿ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಸಚಿವರಾಗಿ ಅವರ ಅವಧಿಯಲ್ಲಿ ಶಾಶ್ವತವಾದ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಸರ್ವ ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯ ಕಲ್ಪಿಸುವುದರಲ್ಲಿ ಜಿಲ್ಲೆಯ ಏಕೈಕ ನಾಯಕ ಎಂದರು

ಈಗಾಗಲೇ ಶಿಡ್ಲಘಟ್ಟ ಕ್ಷೇತ್ರಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ವಿ ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದೇವೆ.

ಅವರ ಅಧಿಕಾರ ಅವಧಿಯಲ್ಲಿ ವಿಶೇಷವಾಗಿ ದೇವಾಲಯಗಳ ಅಭಿವೃದ್ಧಿ ಪಡಿಸಲು ಸರಕಾರ ನೀಡಿದ್ದ ಕಾರಣದಿಂದ ಅವರ ಉತ್ತಮ ಆರೋಗ್ಯಕ್ಕಾಗಿ ದೈವಶಕ್ತಿಸದ್ಯ ಅನುಗ್ರಹ ಫಲಿಸುತ್ತದೆ ಎಂದು ಅಬ್ಲೂಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜೆಸಿಬಿ ಮಂಜುನಾಥ್ ಹೇಳಿದರು.

ಇದೇ ಸಂದರ್ಭದಲ್ಲಿ ದೇವಾಲಯದ ಉಪ ಪ್ರಧಾನ ಅರ್ಚಕರಾದ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಶಾಸಕ ವಿ ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗೆ ವಿಶೇಷ ಪೂಜೆ ಹೋಮ ಹವನ ಮಾಡಿಸಲಾಯಿತು.

ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್