Connect with us

ಕೊರೊನಾ

ಶಾಸಕ ವಿ.ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗಾಗಿ ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ

Published

on

ಶಿಡ್ಲಘಟ್ಟ ; ವಿಧಾನಸಭಾ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗಾಗಿ ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಹೋಮ ಹವನವನ್ನ ನಡೆಸಲಾಯಿತು

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕರಾದ ವಿ ಮುನಿಯಪ್ಪನವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಬೇಗ ಗುಣಮುಖರಾಗಲು ಹಾರೈಸಿ.

ಶಿಡ್ಲಘಟ್ಟ ನಗರಸಭೆ ಸದಸ್ಯರಾದ ಚೈತ್ರ ಮನೋಹರ್ ಮಾತನಾಡಿ ಕೊರೊನಾ ಸೋಂಕಿಗೆ ಪೀಡಿತರಾಗಿರುವ ವಿ ಮುನಿಯಪ್ಪ ಅವರು ಬೇಗ ಗುಣಮುಖರಾಗಲಿ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಮೊರೆ ಹೋಗಿದ್ದೇವೆ ಆ ನಾಡ ದೇವತೆ ಆಶೀರ್ವಾದ ವಿ ಮುನಿಯಪ್ಪ ಅವರಿಗೆ ಶೀಘ್ರವಾಗಿ ಫಲಿಸಲಿದೆ.

ಹಾಗೂ ಕ್ಷೇತ್ರದ ಜನರ ಸೇವೆ ಮಾಡಲು ನನ್ನ ಇನ್ನಷ್ಟು ಶಕ್ತಿ ಬರಲಿದೆ ಎಂದು ಹೇಳಿದರು ಹಾಗೂ ಶಾಸಕರು ದೈವಾನುಗ್ರಹ ಉಳ್ಳವರು ಹಾಗಾಗಿ ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂಬ ಉದ್ದೇಶದಿಂದ ವಕೀಲ ಮುನಿರಾಜು ಹಾಗೂ ಅಬ್ಲೂಡು ಜೆಸಿಬಿ ಮಂಜುನಾಥ್ ಮತ್ತು ನಗರದ ಪುಡ್ ಮನೋಹರ್ ಮತ್ತಿತರರು ಉಡುಪಿಯ ಸುಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಸಿ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ವಕೀಲ ಮುನಿರಾಜು ಮಾತನಾಡಿ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಸಚಿವರಾಗಿ ಅವರ ಅವಧಿಯಲ್ಲಿ ಶಾಶ್ವತವಾದ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಸರ್ವ ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯ ಕಲ್ಪಿಸುವುದರಲ್ಲಿ ಜಿಲ್ಲೆಯ ಏಕೈಕ ನಾಯಕ ಎಂದರು

ಈಗಾಗಲೇ ಶಿಡ್ಲಘಟ್ಟ ಕ್ಷೇತ್ರಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ವಿ ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದೇವೆ.

ಅವರ ಅಧಿಕಾರ ಅವಧಿಯಲ್ಲಿ ವಿಶೇಷವಾಗಿ ದೇವಾಲಯಗಳ ಅಭಿವೃದ್ಧಿ ಪಡಿಸಲು ಸರಕಾರ ನೀಡಿದ್ದ ಕಾರಣದಿಂದ ಅವರ ಉತ್ತಮ ಆರೋಗ್ಯಕ್ಕಾಗಿ ದೈವಶಕ್ತಿಸದ್ಯ ಅನುಗ್ರಹ ಫಲಿಸುತ್ತದೆ ಎಂದು ಅಬ್ಲೂಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜೆಸಿಬಿ ಮಂಜುನಾಥ್ ಹೇಳಿದರು.

ಇದೇ ಸಂದರ್ಭದಲ್ಲಿ ದೇವಾಲಯದ ಉಪ ಪ್ರಧಾನ ಅರ್ಚಕರಾದ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಶಾಸಕ ವಿ ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗೆ ವಿಶೇಷ ಪೂಜೆ ಹೋಮ ಹವನ ಮಾಡಿಸಲಾಯಿತು.

ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ

Continue Reading
Advertisement
Click to comment

Leave a Reply

Your email address will not be published. Required fields are marked *

ಕೊರೊನಾ

ಸೇವೆ ಸಲ್ಲಿಸಲು ವೈದ್ಯರು ಹಿಂದೇಟು : ಶಾಶ್ವತವಾಗಿ ಮುಚ್ಚುತ್ತಿವೆ ಕ್ಲಿನಿಕ್ ಗಳು

Published

on

ಬೆಂಗಳೂರು : ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ 8 ತಿಂಗಳಿನಲ್ಲಿ 1,500ಕ್ಕೂ ಹೆಚ್ಚು ಕ್ಲೀನಿಂಗ್ ಗಳು ಬಂದ್ ಆಗಿವೆ. ಕೋವಿಡ್ ಕಾರಣದಿಂದ ನಗರದ ವೈದ್ಯರು ಕ್ಲಿನಿಕ್ ಗಳಲ್ಲಿ ಸೇವೆಯನ್ನು ಸಲ್ಲಿಸಲು ಹಿಂದೇಟು ಹಾಕುತ್ತಿರುವುದು ಇದಕ್ಕೆ ಬಹುದೊಡ್ಡ ಕಾರಣವಾಗಿದೆ.

Continue Reading

ಕೊರೊನಾ

ಶಾಲಾ ಕಾಲೇಜುಗಳನ್ನು ಪ್ರಾರಂಭಿಸುವುದು ಬೇಡ

Published

on

ಶಾಲಾ ಕಾಲೇಜುಗಳನ್ನು ಪ್ರಾರಂಭಿಸುವುದು ಬೇಡ ಲಿಂಗಸುಗೂರು ತಾಲೂಕಿನ ಕರ್ನಾಟಕ ನವನಿರ್ಮಾಣ ಸೇನೆಯ ಅಧ್ಯಕ್ಷರು ಜಗದೀಶ್ ಪಾಟೀಲ್ ವಿರೋಧ

ಲಿಂಗಸಗೂರು.9. ಮಹಾಮಾರಿ ಕೊರೊನಾ ಕಾರಣದಿಂದ ಮಕ್ಕಳ ಶಿಕ್ಷಣ ಸ್ಥಗಿತಗೊಂಡಿದೆ ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆಯಲು ಆದೇಶ ಕೊಟ್ಟಿರುತ್ತದೆ

“ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಆದ ಕಾರಣ ಈ ಸಮಯದಲ್ಲಿ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ತೆಗೆಯುವುದು ಬೇಡ

ಈಗಾಗಲೇ ಹೊರದೇಶ ಅಮೇರಿಕಾದಲ್ಲಿ ಶಾಲಾ ಕಾಲೇಜುಗಳನ್ನು ತೆರೆದ ಕಾರಣ ಬಹಳ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇತ್ತೀಚೆಗೆ ಕಲಬುರ್ಗಿ ಶಾಲೆಯಲ್ಲಿ 4 ಜನ ಮಕ್ಕಳಿಗೆ ಕೊರೊನಾ ದೃಢಪಟ್ಟಿರುತ್ತದೆ ಮಕ್ಕಳಿಗೆ ಸ್ಯಾನಿಟೈಸರ್ ಮಾಸ್ಕ್ ಸಾಮಾಜಿಕ ಅಂತರದ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಬೇರೆ ಬೇರೆ ಪ್ರದೇಶಗಳಿಂದ ಮಕ್ಕಳು ಬರುವ ಕಾರಣ ಸೋಂಕು ಹರಡುವ ಲಕ್ಷಣ ಬಹಳ ಇರುತ್ತದೆ. ನಮ್ಮ ದೇಶದಲ್ಲಿ ಶಾಲೆಗೆ ‌‌‌25 ಕೋಟಿ ಹಾಗೂ ರಾಜ್ಯದಲ್ಲಿ 9 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ದೊಡ್ಡ ಪ್ರಭಾವಿ ವ್ಯಕ್ತಿಗಳಿಗೆ ಬರುವ ಸೋಂಕು ಮಕ್ಕಳಿಗೆ ಬಿಡದು. ನಮ್ಮ ಕರ್ನಾಟಕದ ಎಲ್ಲ ಮಕ್ಕಳ ತಜ್ಞರು ಶಾಲಾ ಕಾಲೇಜುಗಳ ತರೆಯುವಿಕೆಗೆ ವಿರೋಧ ವ್ಯಕ್ತಪಡಿಸಿದ್ದು.

ಅವರ ಸಲಹೆ ಮೇರೆಗೆ ಶಾಲಾ ಕಾಲೇಜುಗಳನ್ನು ತೆರೆಯುವುದು ಬೇಡ

ರಾಜ್ಯದ ಎಲ್ಲಾ ಕೆಲ ನಾಯಕರು ಮತ್ತು ಮುಖಂಡರ ಜೊತೆ ಫೋನ್ ಮುಖಾಂತರ ಮಾತನಾಡಿ ಮನವಿ ಮಾಡಿದ್ದೇನೆ. ಅವರು ಎಲ್ಲರೂ ಭರವಸೆ ಕೊಟ್ಟಿರುತ್ತಾರೆ. ಆದಕಾರಣ ಯಾವುದೇ ಶಾಲಾ-ಕಾಲೇಜುಗಳನ್ನು ತೆರೆಯುವುದು ಬೇಡ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ಲಿಂಗಸೂರು ತಾಲೂಕು ಅಧ್ಯಕ್ಷರು ಜಗದೀಶ್ ಪಾಟೀಲ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading

ಕೊರೊನಾ

ಶಿಕ್ಷಕನಿಂದ ಮಕ್ಕಳಿಗೆ ಸೋಂಕು : ಶಾಲೆ ಆರಂಭಕ್ಕೂ ಮುನ್ನವೇ ಕೊರೊನಾ ಶಾಕ್

Published

on


ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾ.ಮಾಶಾಳ ಗ್ರಾಮದ ವಠಾರ ಶಾಲೆಯ ಶಿಕ್ಷಕನಿಗೆ ಕೊರೊನಾ ಸೋಂಕು ತಗುಲಿದೆ ಎಂಬುದಾಗಿ ತಿಳಿದುಬಂದಿದೆ. ಶಿಕ್ಷಕನಿಂದ 4 ಮಕ್ಕಳಿಗೆ ಸೋಂಕು ಹರಡಿದೆ ಎನ್ನಲಾಗಿದೆ. ಸೋಂಕು ಹಿನ್ನಲೆ 5 ವಟಾರ ಶಾಲೆ ಸೀಲ್ ಡೌನ್ ಮಾಡಲಾಗಿದೆ. ವಿದ್ಯಾಗಮ ಅಡಿಯಲ್ಲಿ ಶಾಲೆ ನಡೆಸಲಾಗುತ್ತಿತ್ತು. 20 ದಿನದ ಹಿಂದೆ ಮುಖ್ಯ ಶಿಕ್ಷಕನಿಗೆ ಸೋಂಕು ದೃಢಪಟ್ಟಿತ್ತು. ಅದೇ ಶಾಲೆಯ 20 ಶಿಕ್ಷಕರಿಗೆ ನೆಗೆಟಿವ್ ಬಂದಿತ್ತು.

ಆದರೆ ಇದೀಗ ಶಿಕ್ಷಕನಿಗೆ ಹಾಗೂ 207 ವಿದ್ಯಾರ್ಥಿಗಳ ಪೈಕಿ 4 ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ 24 ವಿದ್ಯಾರ್ಥಿಗಳ ವರದಿ ಬಾಕಿ ಇದೆ. ವಠಾರ ಶಾಲೆಯಲ್ಲಿ ಆತಂಕ ಮನೆಮಾಡಿದೆ ಎನ್ನಲಾಗಿದೆ.

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್