ಕೊರೊನಾ
ಚರಂಡಿ ನೀರಿನಲ್ಲೂ ಕೊರೋನಾ ವೈರಸ್ ಪತ್ತೆ? ಮತ್ತಷ್ಟು ಆತಂಕವನ್ನು ಸೃಷ್ಟಿಸಲಿದೆ ಸಂಶೋಧನಾ ವರದಿ
ಕೊರೋನಾ ವೈರಸ್ ಸೋಂಕು ಬಹಳಷ್ಟು ಜನರಿಗೆ ರೋಗ ಲಕ್ಷಣಗಳು ಕಾಣಿಸದೆ ತಗುಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಾಗರೂಕತೆಯಿಂದ ಇರಬೇಕು.ಏಕೆಂದರೆ ಇದು ವಿವಿಧ ಮಾಧ್ಯಮಗಳ ಮೂಲಕ ಹರಡುತ್ತಿದೆ.
ನೀರಿನ ಮೂಲಕವೂ ಕೊರೋನಾ ವೈರಸ್ ಹರಡುತ್ತಿದೆಯೇ? ಇಂತಹುದೊಂದು ಪ್ರಶ್ನೆಗೆ ಸಂಶೋಧನಾ ವರದಿಯೊಂದು ಪುಷ್ಟಿ ನೀಡಿದ್ದು, ಚರಂಡಿ ನೀರಿನಲ್ಲಿ ಕೊರೋನಾ ವೈರಸ್ ಕಂಡುಬಂದಿದೆ ಎಂದು ಹೇಳಲಾಗಿದೆ.
ಕೊರೋನಾ ವೈರಸ್ ಗೆ ಈಗಾಗಲೇ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ತುತ್ತಾಗಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಚರಂಡಿ ಹರಿಯುವ ಮೋರಿ ನೀರಿನಲ್ಲೂ ಕೊರೋನಾ ವೈರಸ್ ಸೋಂಕು ಕಂಡುಬಂದಿದೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ.
ಐಐಟಿ ಗಾಂಧಿನಗರದ ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ (ಜಿಬಿಆರ್‌ಸಿ) ಮತ್ತು ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ (ಜಿಪಿಸಿಬಿ) ನಡೆಸಿದ ಜಂಟಿ ಸಂಶೋಧನೆಯಲ್ಲಿ ಇಂತಹುದೊಂದು ಬೆಚ್ಚಿ ಬೀಳಿಸುವ ಮಾಹಿತಿ ತಿಳಿದುಬಂದಿದೆ.
ಇದೇ ಮೇ 8 ಮತ್ತು 27ರಂದು ಅಹಮದಾಬಾದ್‌ನಲ್ಲಿರುವ ಹಳೆಯ ಪಿರಾನಾ ತ್ಯಾಜ್ಯನೀರಿನ ಸಂಸ್ಕರಣಾ ಘಟಕ (ಡಬ್ಲ್ಯುಡಬ್ಲ್ಯುಟಿಪಿ)ದಲ್ಲಿನ ನೀರನ್ನು ವಿಜ್ಞಾನಿಗಳು ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ಕೊರೋನಾ ವೈರಾಣುವಿನಲ್ಲಿನ viral RNA ಪತ್ತೆಯಾಗಿದೆ. ಇಲ್ಲಿನ ಕಲುಷಿತ ನೀರು ಮತ್ತು ವೈರಲ್ ಆರ್ಎನ್ಎಯ ಆರ್ಟಿ-ಪಿಸಿಆರ್ ವಿಶ್ಲೇಷಣೆ ಮಾಡಲಾಗಿದ್ದು, ಇದರಲ್ಲಿ SARS-CoV-2 ವೈರಸ್ ಅಂಶಗಳು ಕಂಡುಬಂದಿದೆ. ಇದರಲ್ಲಿ ORF1ab, N ಪ್ರೋಟೀನ್ ಜೀನ್‌ಗಳು ಮತ್ತು S ಪ್ರೋಟೀನ್ ಜೀನ್‌ಗಳು SARS-CoV-2 ವೈರಸ್ ಜೀನ್‌ಗಳಾಗಿವೆ ಎಂದು ವಿಜ್ಞಾನಿಗಳು ಅನ್ವೇಷಿಸಿದ್ದಾರೆ.
ಈ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿರುವ ವಿಜ್ಞಾನಿಗಳು ಭಾರತದಲ್ಲಿನ ಮೋರಿ ನೀರು ಅಥವಾ ಒಳಚರಂಡಿ ನೀರಿನಲ್ಲಿ SARS-CoV-2 ಜೀನ್ ಗಳು ಕಂಡುಬಂದಿವೆ. ಬಹುಶಃ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಂದ ಬಿಡಲಾಗುತ್ತಿದುವ ತ್ಯಾಜ್ಯದ ನೀರು ಮೋರಿಗೆ ಸೇರುತ್ತಿರುವುದರಿಂದ ಮೋರಿ ನೀರಿನಲ್ಲಿ ಈ SARS-CoV-2 ಜೀನ್ ಗಳು ಕಂಡುಬಂದಿರುವ ಸಾಧ್ಯತೆ ಇದೆ ಎಂದು ಗಾಂಧಿನಗರದ ಭಾರತೀಯ ತಂತ್ರಜ್ಞಾನ ಸಂಸ್ಥೆ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥ ಮನೀಶ್ ಕುಮಾರ್ ಹೇಳಿದ್ದಾರೆ.
ಇಂತಹ ಕೋವಿಡ್ ಬಗ್ಗೆ ಜನಸಾಮಾನ್ಯರು ನಿರ್ಲಕ್ಷ್ಯ ಮಾಡುವುದು ಸಲ್ಲದು. ಅದರಲ್ಲೂ 60 ವರ್ಷ ದಾಟಿದ ವಯಸ್ಸಾದವರು, ದುಷ್ಚಟಗಳಿಗೆ ತುತ್ತಾಗಿರುವವರು, ಹೃದಯ,ಮೂತ್ರಪಿಂಡ, ಸಕ್ಕರೆ ಖಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಕೊರೋನಾ ಸೋಂಕಿನ ಬಗ್ಗೆ ಎಚ್ಚರವಾಗಿರಬೇಕು.
ಕೊರೊನಾ
ಕೊರೊನಾ ಲಾಕ್ ಡೌನ್ ಪರಿಣಾಮದಿಂದ ವೃತ್ತಿಪರ ತಮಟೆ ಕಲಾವಿದರಿಗೆ ಧನಸಹಾಯ ನೀಡಲು ಒತ್ತಾಯ
ಶಿಡ್ಲಘಟ್ಟ: ಕೊರೊನಾ ಲಾಕ್ ಡೌನ್ ಪರಿಣಾಮದಿಂದ ವೃತ್ತಿಪರ ತಮಟೆ ಕಲಾವಿದರಿಗೆ ಧನಸಹಾಯ ನೀಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ರವಿಶಂಕರ್ ರವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರವಿಶಂಕರ್ ರವರು ಪ್ರಪಂಚಕ್ಕೆ ತಿಳಿದಿರುವ ಹಾಗೆ ಕಳೆದ 07 ತಿಂಗಳಿನಿಂದ ಕೊರೊನಾ ಎಂಬ ಮಹಾಮಾರಿ ಎಲ್ಲರ ಬದುಕಿನ ಮೇಲೆ ಪರಿಣಾಮ ಬೀರಿದ್ದು
ಬಡ ಜನರ ಆರ್ಥಿಕ ಸ್ಥಿತಿ ತಂಬಾ ಕಷ್ಟಕರವಾಗಿರುವುದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಪಾರಂಪರಿಕ ತಮಟೆ ನುಡಿಸುವ ಕಲಾವಿದರಿಗೆ 8000 ದಿಂದ10000 ರೂಗಳ ವರೆಗೆ ಸಹಾಯ ಧನ ಘೋಷಿಸಬೇಕು.
ಹಾಗೂ ಎಲ್ಲಾ ರೀತಿಯ ಸಭೆ ಸಮಾರಂಭಗಳಿಗೆ ಮತ್ತು ವಿವಿಧೋದ್ದೇಶ ಕಾರ್ಯ ಕ್ರಮಗಳಿಗೆ ತಮಟೆ ನುಡಿಸಲು ಅವಕಾಶ ಕಲ್ಪಿಸಿ ಕೋಡಬೇಕು ಮತ್ತು ಪಾರಂಪರಿಕತೆಯಿಂದ ತಮಟೆ ನುಡಿಸಿ ವಯಸ್ಸಾಗಿರುವ ಹಿರಿಯ ಕಲಾವಿದರಿಗೆ ಮಾಸಿಕ ವೇತನ ನೀಡಬೇಕು ಎಂದು ಒತ್ತಾಯಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ ಇವರುಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಗೋವಿಂದ ರಾಜು, ಬೆಂಗಳೂರು ಜಿಲ್ಲಾಧ್ಯಕ್ಷ ಪೂಜಪ್ಪ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಕೆ.ಎಂ.ಆನಂದ್, ಪ್ರಧಾನ ಕಾರ್ಯದರ್ಶಿ ಸುನೀಲ್, ಉಪಾಧ್ಯಕ್ಷ ನರಸಿಂಹಮೂರ್ತಿ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮಂಜುನಾಥ್, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮಾರೇಶ್, ಗೌರವಾಧ್ಯಕ್ಷ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಉಪಾಧ್ಯಕ್ಷ ಮಂಜುನಾಥ್, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಗೌರಿಬಿದನೂರು ತಾಲೂಕು ಅಧ್ಯಕ್ಷ ಬಾಲಪ್ಪ, ಚಿಂತಾಮಣಿ ತಾಲೂಕು ಅಧ್ಯಕ್ಷ ಮಂಜೇಶ್, ಪ್ರಧಾನ ಕಾರ್ಯದರ್ಶಿ ಜಯಣ್ಣ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮುಂತಾದವರು ಹಾಜರಿದ್ದರು
ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ
ಕೊರೊನಾ
ಏರಿಕೆಯಾಗುತ್ತಿರುವ ಚೇತರಿಕೆಯ ಪ್ರಮಾಣ : ಕೊರೊನಾ ಆತಂಕದಲ್ಲಿ ಇದ್ದವರಿಗೆ ಗುಡ್ ನ್ಯೂಸ್
ಪ್ರಸ್ತುತ ದಿನಮಾನದಲ್ಲಿ ಏರಿಕೆಯಾಗುತ್ತಲೇ ಬರುತ್ತಿರುವ ಕೊರೊನಾ ಸೋಂಕು ಪೀಡಿತರ ಚೇತರಿಕೆಯ ಪ್ರಮಾಣವು ಶೇಕಡ 90ರಷ್ಟು ದಾಟಿದೆ.
ಮತ್ತೊಂದು ಸ್ವಾಗತಾರ್ಹ ಬೆಳವಣಿಗೆಯೊಂದರಲ್ಲಿ, ಕಳೆದ 24 ಗಂಟೆಗಳ ಅವಧಿಯಲ್ಲಿ 50,129 ಮಂದಿ ಕೋವಿಡ್-19 ಸೋಂಕಿತರಾಗಿ ಕಂಡುಬಂದಿದ್ದರೆ, 62,077 ಮಂದಿ ಸೋಂಕಿತರು ಇದೇ ಅವಧಿಯಲ್ಲಿ ಚೇತರಿಕೆ ಕಂಡಿದ್ದಾರೆ.
ಸದ್ಯ ದೇಶದಲ್ಲಿ ಕೇವಲ 6,68,154 ಸಕ್ರಿಯ ಕೋವಿಡ್-19 ಪ್ರಕರಣಗಳು ಮಾತ್ರ ಇದ್ದು, ಒಟ್ಟಾರೆ ಸೋಂಕಿತರ ಪೈಕಿ ಕೇವಲ 8.5%ನಷ್ಟು ಜನ ಮಾತ್ರವೇ ಸಕ್ರಿಯವಾಗಿ ಸೋಂಕಿತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕೊರೊನಾ
ಶಾಸಕ ವಿ.ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗಾಗಿ ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ
ಶಿಡ್ಲಘಟ್ಟ ; ವಿಧಾನಸಭಾ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗಾಗಿ ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಹೋಮ ಹವನವನ್ನ ನಡೆಸಲಾಯಿತು
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕರಾದ ವಿ ಮುನಿಯಪ್ಪನವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಬೇಗ ಗುಣಮುಖರಾಗಲು ಹಾರೈಸಿ.
ಶಿಡ್ಲಘಟ್ಟ ನಗರಸಭೆ ಸದಸ್ಯರಾದ ಚೈತ್ರ ಮನೋಹರ್ ಮಾತನಾಡಿ ಕೊರೊನಾ ಸೋಂಕಿಗೆ ಪೀಡಿತರಾಗಿರುವ ವಿ ಮುನಿಯಪ್ಪ ಅವರು ಬೇಗ ಗುಣಮುಖರಾಗಲಿ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಮೊರೆ ಹೋಗಿದ್ದೇವೆ ಆ ನಾಡ ದೇವತೆ ಆಶೀರ್ವಾದ ವಿ ಮುನಿಯಪ್ಪ ಅವರಿಗೆ ಶೀಘ್ರವಾಗಿ ಫಲಿಸಲಿದೆ.
ಹಾಗೂ ಕ್ಷೇತ್ರದ ಜನರ ಸೇವೆ ಮಾಡಲು ನನ್ನ ಇನ್ನಷ್ಟು ಶಕ್ತಿ ಬರಲಿದೆ ಎಂದು ಹೇಳಿದರು ಹಾಗೂ ಶಾಸಕರು ದೈವಾನುಗ್ರಹ ಉಳ್ಳವರು ಹಾಗಾಗಿ ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂಬ ಉದ್ದೇಶದಿಂದ ವಕೀಲ ಮುನಿರಾಜು ಹಾಗೂ ಅಬ್ಲೂಡು ಜೆಸಿಬಿ ಮಂಜುನಾಥ್ ಮತ್ತು ನಗರದ ಪುಡ್ ಮನೋಹರ್ ಮತ್ತಿತರರು ಉಡುಪಿಯ ಸುಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಸಿ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ವಕೀಲ ಮುನಿರಾಜು ಮಾತನಾಡಿ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಸಚಿವರಾಗಿ ಅವರ ಅವಧಿಯಲ್ಲಿ ಶಾಶ್ವತವಾದ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಸರ್ವ ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯ ಕಲ್ಪಿಸುವುದರಲ್ಲಿ ಜಿಲ್ಲೆಯ ಏಕೈಕ ನಾಯಕ ಎಂದರು
ಈಗಾಗಲೇ ಶಿಡ್ಲಘಟ್ಟ ಕ್ಷೇತ್ರಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ವಿ ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದೇವೆ.
ಅವರ ಅಧಿಕಾರ ಅವಧಿಯಲ್ಲಿ ವಿಶೇಷವಾಗಿ ದೇವಾಲಯಗಳ ಅಭಿವೃದ್ಧಿ ಪಡಿಸಲು ಸರಕಾರ ನೀಡಿದ್ದ ಕಾರಣದಿಂದ ಅವರ ಉತ್ತಮ ಆರೋಗ್ಯಕ್ಕಾಗಿ ದೈವಶಕ್ತಿಸದ್ಯ ಅನುಗ್ರಹ ಫಲಿಸುತ್ತದೆ ಎಂದು ಅಬ್ಲೂಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜೆಸಿಬಿ ಮಂಜುನಾಥ್ ಹೇಳಿದರು.
ಇದೇ ಸಂದರ್ಭದಲ್ಲಿ ದೇವಾಲಯದ ಉಪ ಪ್ರಧಾನ ಅರ್ಚಕರಾದ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಶಾಸಕ ವಿ ಮುನಿಯಪ್ಪ ಅವರ ಆರೋಗ್ಯ ಚೇತರಿಕೆಗೆ ವಿಶೇಷ ಪೂಜೆ ಹೋಮ ಹವನ ಮಾಡಿಸಲಾಯಿತು.
ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ