ರಾಜ್ಯ
ರಾಜ್ಯದಲ್ಲಿ ಮತ್ತೆ ಊಳಿಗಮಾನ್ಯ ಪದ್ಧತಿ! ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ
ಬಾಗೇಪಲ್ಲಿ: ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದ ಭೂಸುಧಾರಣಾ ಕಾಯ್ದೆಯಿಂದಾಗಿ ಮತ್ತೆ ಊಳಿಗ ಮಾನ್ಯ ಪದ್ಧತಿಯೆಡೆಗೆ ಕರ್ನಾಟಕ ರಾಜ್ಯ ತೆಗೆದುಕೊಂಡು ಹೋಗುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಇಡೀ ರೈತ ಸಮುದಾಯ ವಿರೋಧಿಸಬೇಕಿದೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.
ದೇವರಾಜ ಅರಸುರವರ ಸರ್ಕಾರವು 1974 ರಲ್ಲಿ ಭೂಸುಧಾರಣಾ ಕಾನೂನಿನ ತಿದ್ದುಪಡಿಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶದ ಚಟುವಟಿಕೆಗಳಿಗೆ ಬಳಸಬಾರದೆಂಬ ಬಲಿಷ್ಠವಾದ ಭೂಸುಧಾರಣಾ ಕಾನೂನು ತರಲಾಗಿತ್ತು. ಅದರಲ್ಲಿ ಐದು ಸದಸ್ಯರಿರುವ ಕುಟುಂಬಕ್ಕೆ 50 ಎಕರೆಗೂ ಮೀರಿದ ಜಮೀನು ಇರಬಾರದು ಎಂಬ ಅಂಶಗಳಿದ್ದವು. ಆದರೆ ಈಗಿನ ಸರ್ಕಾರವು ತಂದಿರುವ 79 ಎ,ಬಿ,ಸಿ,ಡಿಗಳ ತಿದ್ದುಪಡಿಗಳ ಮೂಲಕ ಐದು ಸದಸ್ಯರ ಒಂದು ಕಟುಂಬಕ್ಕೆ 432 ಎಕರೆಯಷ್ಟು ಜಮೀನು ಹೊಂದಬಹುದು ಎಂದು ತಿಳಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆ ತರಲು ಚರ್ಚಿಸಿದ ಅಂಶಗಳ ಬೇರೆ, ರಾಜ್ಯಪಾಲರಿಂದ ಸಹಿ ಪಡೆದ ಅಂಶಗಳೇ ಬೇರೆಯಾಗಿ ಬದಲಾಗಿವೆ. ಇಂತಹ ರೈತರ ಬದುಕಿಗೆ ಮಾರಕವಾದ ಕಾನೂನು ತರಲಾಗಿದೆ.
ದೇವರಾಜು ಅರಸುರವರ ಭೂಸುಧಾರಣಾ ಕಾನೂನನ್ನು ಮೊದಲು ಸಡಿಲಗೊಳಿಸಿದ್ದು ದೇವೆಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಆಗ ಅದನ್ನು ಶಾಸನ ಸಭೆಯಲ್ಲಿ ವಿರೋಧಿಸಿದ ಏಕೈಕ ಶಾಸಕ ನಾನು, ಅಂದೇ ಹೇಳಿದ್ದೆ ನೀವು ತರಲು ಹೊರಟಿರುವ ತಿದ್ದುಪಡಿಯಿಂದಾಗಿ ರಿಯಲ್ ಎಸ್ಟೇಟ್ ನಡೆಸುವವರಿಗೆ ಅನುಕೂಲವಾಗಲಿದ್ದು ರೈತರಿಗೆ ತೊಂದರೆಯಾಗಲಿದೆ ಎಂದಿದ್ದೆ. ಅದಾದ ಎರಡೇ ವರ್ಷಗಳಲ್ಲಿ ದೇವನಹಳ್ಳಿಯ ಸುತ್ತಲೂ ಲಕ್ಷಾಂತರ ಎಕರೆಗಳಷ್ಟು ರೈತರ ಜಮೀನು ರಿಯಲ್ ಎಸ್ಟೇಟ್ ನವರ ಪಾಲಾಯಿತು ಎಂದು ಮಾಜಿ ಶಾಸಕ ಹಳೆಯದನ್ನು ನೆನಪಿಸಿಕೊಂಡರು. ನಂತರ ಸಿದ್ದರಾಮಯ್ಯ ಸರ್ಕಾರವೂ ತಿದ್ದುಪಡಿಯನ್ನು ಸಡಿಲಗೊಳಿಸಿದೆ ಎಂದು ಪ್ರಸ್ತಾಪಿಸಿದರು.
ಈಗಿನ ರಾಜ್ಯ ಬಿಜೆಪಿ ಸರ್ಕಾರವು ಸುಗ್ರಿವಾಜ್ಞೆಯ ಮೂಲಕ ಭೂಸುಧಾರಣಾ ಕಾನೂನಿಗೆ ತಿದ್ದುಪಡಿ ತಂದಿದ್ದು ಮತ್ತೆ ಊಳಿಗಮಾನ್ಯ ಪದ್ದತಿಗೆ ರಾಜ್ಯವು ಮರಳುತ್ತಿದೆ.
ಇತ್ತೀಚೆಗೆ ಸಚಿವರೊಬ್ಬರು ಸ್ಪಷ್ಟೀಕರಣ ಕೊಡುತ್ತಾ ಇ ಕಾನೂನು ನೀರಾವರಿಯ ಅಚ್ಚುಕಟ್ಟಾದ ಜಮೀನಿಗೆ ಅನ್ವಯಿಸುವುದಿಲ್ಲ ಎಂದು ಹೇಳುತ್ತಿದ್ದರು. ಹಾಗಾಗಿದರೆ ಬಯಲು ಸೀಮೆಯ 14 ಜಿಲ್ಲೆಗಳ ರೈತರ ಜಮೀನುಗಳು ಸೇರಿ ಅರ್ಧ ಕರ್ನಾಟಕ ರಿಯಲ್ ಎಸ್ಟೇಟ್ ರವರ ಪಾಲಾಗುತ್ತದೆ. ಇದರಿಂದಾಗಿ ಕೃಷಿ ಭೂಮಿ ಸಂಪೂರ್ಣ ನಾಶವಾಗಲಿದೆ ಎಂದರು.
ಮಾನವ ಸಂಪನ್ಮೂಲವು ಕೃಷಿ ಭೂಮಿಯನ್ನು ಅವಲಂಬಿಸಿದ್ದು ಇದನ್ನು ಬೇರೆಯ ಚಟುವಟಿಕೆಗಳಿಗೆ ಉಪಯೋಗಿಸಿದರೆ ಆಹಾರಕ್ಕಾಗಿ ಹಾಹಾಕಾರ ಎದುರಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗಾಗಿ ಬಿಜೆಪಿ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳ ಪರವಾದದ್ದು ಎಂಬ ಅಂಶವನ್ನು ತಿಳಿದು ಸರ್ಕಾರದ ಈ ಭೂಸುಧಾರಣಾ ಕಾನೂನಿನ ವಿರುದ್ದ ರೈತ ಸಮುದಾಯ ಹೋರಾಡಬೇಕಿದೆ.
ಇಲ್ಲವಾದರೆ ದೇಶವು ಮತ್ತೊಂದು ಸೋಮಾಲಿಯವಾಗಿ ಪರಿವರ್ತನೆಯಾಗಿ ಆಹಾರವಿಲ್ಲದೆ ಅವರು ಅಂತರ್ಯುದ್ಧ ನಡೆಸಬೇಕಾಗುವ ಪರಿಸ್ಥಿತಿ ಎದುರಾಯಿತು, ಆಗ ಅದಕ್ಕೆ ಕಾರಣರಾದವರೇ ಆಹಾರ ಪೊಟ್ಟಣಗಳನ್ನು ವಿಮಾನಗಳ ಮೂಲಕ ಹಾಕಿದರು. ಇಂತಹ ಕಣ್ಣೆದುರಿಗೆ ಇದೆ.
ಇದೇ ದಾರಿಯಲ್ಲಿ ಭಾರತ ದೇಶವು ಸಾಗಲಿದ್ದು ಕೃಷಿಕರ ಭೂಮಿ ಬಹುರಾಷ್ಟ್ರೀಯ ಕಂಪನಿಗಳ, ಉದ್ಯಮಿಗಳ ಪಾಲಾಗಿ ರೈತರನ್ನು ಬಿಕಾರಿಗಳನ್ನಾಗಿಸುತ್ತದೆ. ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡು ಅದೇ ಜಮೀನುಗಳಲ್ಲಿ ಆಳುಗಳಾಗಿ ದುಡಿಯಬೇಕಾಗುತ್ತದೆ ಎಂದು ತಿಳಿಸಿದರು.
ಹಾಗಾಗಿ ಈ ಸುಗ್ರಿವಾಜ್ಞೆಯಲ್ಲಿರುವ ಅಂಶಗಳನ್ನು ತೆಗೆಯಲು ಇಡೀ ರಾಜ್ಯದ ರೈತರು ಹೋರಾಟ ಮಾಡಬೇಕಿದೆ ಎಂದು ಶ್ರೀರಾಮರೆಡ್ಡಿಯವರು ತಿಳಿಸಿದರು.
ವರದಿ: ನರಸಿಂಹಮೂರ್ತಿ ಎಂ.ಎಲ್. ಮಾಡಪ್ಪಲ್ಲಿ
ರಾಜ್ಯ
ಜನವರಿ ಒಂದರಿಂದ ಶಾಲೆ ಆರಂಭ : ವೇಳಾಪಟ್ಟಿ ಪ್ರಕಟ
ಬೆಂಗಳೂರು: ಜನವರಿ 1 ರಿಂದ ಶಾಲೆ ಆರಂಭದ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಾಲೆ ಆರಂಭಕ್ಕೆ ಮೂರು ದಿನ ಮೊದಲು ಸಿಬ್ಬಂದಿ, ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನೆಗೆಟಿವ್ ಕಡ್ಡಾಯವಾಗಿರುತ್ತದೆ. 10 ನೇ ತರಗತಿಗೆ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ವಾರದಲ್ಲಿ 6 ದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 30 ರವರೆಗೆ ತಲಾ 45 ನಿಮಿಷಗಳ ಮೂರು ಪಿರಿಯಡ್ ಗಳಲ್ಲಿ ಬೋಧನೆ ಮಾಡಲಾಗುತ್ತದೆ. ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿ ಪಾಠ ಮಾಡಲಾಗುವುದು.
ರಾಜ್ಯ
“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ”
ಬೆಂಗಳೂರು : ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆ ಹಮ್ಮಿಕೊಂಡಿರುವ “ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು-ಶಿಕ್ಷಕರು ಉಳಿದರೆ, ಶಿಕ್ಷಣ” ಎಂಬ ಸಾಂಕೇತಿಕ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಆರ್. ಅಶೋಕ್ ರವರು, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ
ಶಾಲೆಯ ಸಭಾಂಗಣ ಮತ್ತು ಕೊಠಡಿಯ ಉದ್ಘಾಟನೆ : ಅರವಿಂದ ಲಿಂಬಾವಳಿ
ಬೆಂಗಳೂರು : ಇಂದು ಹಾಲನಾಯಕನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಶಾಲೆಯ ಒಂದು ಸಭಾಂಗಣ ಹಾಗೂ ಎರಡು ಕೊಠಡಿಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ, ಗ್ರಾಮದ ಮುಖಂಡರು, ಇಲಾಖೆಯ ಅಧಿಕಾರಿಗಳು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.